ಬಿಗ್​ಬಾಸ್​ಗೆ ಕ್ಷಣಗಣನೆ... ಸೀಸನ್​ 11ರ ಕುರಿತು ನಟ ವಿಜಯ ರಾಘವೇಂದ್ರ ಮನದಾಳದ ಮಾತೇನು?

Published : Sep 26, 2024, 01:20 PM ISTUpdated : Sep 26, 2024, 03:14 PM IST
ಬಿಗ್​ಬಾಸ್​ಗೆ ಕ್ಷಣಗಣನೆ... ಸೀಸನ್​ 11ರ  ಕುರಿತು  ನಟ ವಿಜಯ ರಾಘವೇಂದ್ರ ಮನದಾಳದ ಮಾತೇನು?

ಸಾರಾಂಶ

ಬಿಗ್​ಬಾಸ್​ ಸೀಸನ್​-11 ಇನ್ನೇನು ಆರಂಭವಾಗಲಿದೆ. ಇದಕ್ಕೂ ಮುನ್ನ ಸೀಸನ್​-1ರ ವಿಜೇತ, ನಟ ವಿಜಯ ರಾಘವೇಂದ್ರ ಅವರು ತಮ್ಮ ಮನದಾಳದ ಮಾತುಗಳನ್ನು ಆಡಿದ್ದಾರೆ. ಅವರು ಹೇಳಿದ್ದೇನು?  

ಬಿಗ್​ಬಾಸ್​ ಕನ್ನಡದ 11ನೇ ಸೀಸನ್​ ಯಾವಾಗ ಶುರುವಾಗುತ್ತೆ ಎಂದು ತುದಿಗಾಲಿನಲ್ಲಿ ನಿಂತಿರೋ ವೀಕ್ಷಕರು ಇನ್ನು 10 ದಿನವಷ್ಟೇ ಕಾಯಬೇಕಿದೆ.  ಬಿಗ್​ಬಾಸ್​ ಪ್ರೇಮಿಗಳಿಗೆ ಇದಾಗಲೇ ತಿಳಿದಿರುವಂತೆ ಇದೇ ಸೆಪ್ಟೆಂಬರ್ 29 ರಂದು  11ನೇ ಸೀಸನ್​ ಆರಂಭವಾಗಲಿದೆ. ಇದರ ಹೋಸ್ಟ್​ ಆಗಿ ಅವರು ಬರ್ತಾರೆ, ಇವರು ಬರ್ತಾರೆ ಎಂದು ಹಲವಾರು ಗಾಳಿಸುದ್ದಿಗಳು ಕೆಲ ತಿಂಗಳುಗಳಿಂದ ಹರಿದಾಡುತ್ತಲೇ ಇದೆ. ಆದರೆ,  ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಫುಲ್​ ಖುಷ್​ ಆಗುವ ರೀತಿಯಲ್ಲಿ ಬಿಗ್​ಬಾಸ್​ ಪ್ರೊಮೋದಲ್ಲಿ ಅವರೇ ಕಾಣಿಸಿಕೊಂಡು ಹಿರಿಹಿರಿ ಹಿಗ್ಗುವಂತೆ ಮಾಡಿದ್ದಾರೆ.  10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೇ ಲೆಕ್ಕ ಎಂದ ಕಿಚ್ಚ ಸುದೀಪ್: ಸೆ.29 ರಿಂದ ಬಿಗ್‌ಬಾಸ್‌ ಹೊಸ ಅಧ್ಯಾಯ ಶುರು ಎಂದು ಇದಾಗಲೇ ಸುದೀಪ್​ ಪ್ರೊಮೋದಲ್ಲಿ ಹೇಳಿರುವ ಕಾರಣ, ಈ ಬಾರಿಯ ವಿಶೇಷತೆ ಏನು ಎಂಬ ಬಗ್ಗೆ ಫ್ಯಾನ್ಸ್​ ಬಿಟ್ಟ ಕಣ್ಣುಗಳಿಂದ ಕಾಯುತ್ತಿದ್ದಾರೆ.
 
ಅದರ ನಡುವೆಯೇ, ಇದೀಗ ಬಿಗ್​ಬಾಸ್​ನ ಮೊದಲ ಸೀಸನ್​ ವಿಜೇತ, ಸ್ಟಾರ್​ ನಟ, ಚಿನ್ನಾರಿ ಮುತ್ತ ವಿಜಯ್​ ರಾಘವೇಂದ್ರ ಅವರು ಹೊಸ ಸೀಸನ್​ ಬಗ್ಗೆ ಒಂದಿಷ್ಟು ಮಾತನಾಡಿದ್ದಾರೆ. ಬಿಗ್​ಬಾಸ್​ 1ರಲ್ಲಿ ಸುಮಾರು ನೂರು ದಿನಗಳ ಕಾಲ ನನ್ನನ್ನು  ನೀವು ಆಶೀರ್ವಾದ ಮಾಡಿದ್ದೀರಿ. ಅಲ್ಲಿ ದೀರ್ಘ ಅವಧಿಯವರೆಗೆ  ಇದ್ದು ಜೀವಿಸಿ, ಅನುಭವಿಸಿ ಬಂದಿದ್ದೇನೆ.  ನನ್ನ ಪ್ರಕಾರ ನನ್ನ ಜೀವನದಕ್ಕೆ ಮತ್ತು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡುವ ನನ್ನ ಸ್ನೇಹಿತರೆಲ್ಲಾ ಇದರಿಂದ ಆಗಿರುವ ದೊಡ್ಡ ಅನುಭವ ಎಂದರೆ,  ಅವರವರ ಜೀವನ, ಅವರ ವ್ಯಕ್ತಿತ್ವ,  ಅವರ ಅಪ್ಸ್​ ಆ್ಯಂಡ್​ ಡೌನ್ಸ್​, ಅವರಲ್ಲಿ ಇರುವ ಕೆಟ್ಟತನ-ಒಳ್ಳೆಯತನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲು ಅವಕಾಶ ಸಿಕ್ಕಿದೆ. ನಮ್ಮ ನಡವಳಿಕೆಯ ಬಗ್ಗೆ, ತಪ್ಪುಗಳು ಇದ್ದರೆ ಅದನ್ನು ಸರಿಪಡಿಸಿ  ಕರೆಕ್ಷನ್​ ಮಾಡುವ ಅವಕಾಶ ಸಿಕ್ಕಿದೆ ಎಂದಿದ್ದಾರೆ ವಿಜಯ ರಾಘವೇಂದ್ರ.

ಬಿಗ್​ಬಾಸ್​ಗೆ ಕ್ಷಣಗಣನೆ: ಇವರೇ ನೋಡಿ ದೊಡ್ಮನೆ ಹೋಗ್ತಿರೋ ಸಂಭಾವ್ಯ ಸ್ಪರ್ಧಿಗಳು- ನಿಮ್ಮ ನೆಚ್ಚಿನ ಸ್ಟಾರ್ ಯಾರು?

ಪ್ರತಿವಾರವೂ ಸುದೀಪಣ್ಣ ಬಂದು ಸ್ಪರ್ಧಿಗಳ ತಪ್ಪು-ಒಪ್ಪುಗಳನ್ನು ಹೇಳಿ ಹೋಗ್ತಾರೆ. ನನ್ನ ಜೀವನದ ಸುಂದರ ಅನುಭವಗಳನ್ನು ಆ ನೂರು ದಿನಗಳು ಅನುಭವಿಸಿದ್ದೇನೆ. ಇದನ್ನೇ ಪ್ರತಿ ಸ್ಪರ್ಧಿಯೂ ಅನುಭವಿಸುತ್ತಾರೆ. ಎಲ್ಲರಿಗೂ ಅವರ ಜೀವನದ ಕನ್ನಡಿ ಹಿಡಿದಂತೆ ಇದೆ ಈ ವೇದಿಕೆ ಎನ್ನುತ್ತಲೇ ಸೀಸನ್​-11ರ ಎಲ್ಲಾ ಸ್ಪರ್ಧಿಗಳಿಗೆ ಗುಡ್​ಲಕ್​ ಹೇಳುವ ಮೂಲಕ ಶುಭಾಶಯ ಕೋರಿದ್ದಾರೆ ನಟ ವಿಜಯ ರಾಘವೇಂದ್ರ.   

ಅಂದಹಾಗೆ, ಬಿಗ್​ಬಾಸ್​ನಲ್ಲಿ ಈ ಬಾರಿ ಒಳ ಹೋಗುವವರು ಯಾರು ಎಂಬ ಬಗ್ಗೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ರಿಲೀಸ್​ ಆಗಿದ್ದರೂ ಅವರೇ ಫೈನಲ್​ ಎಂದು ಇದುವರೆಗೆ ತಿಳಿದಿಲ್ಲ. ರಾಜಾ ರಾಣಿ ಗ್ರ್ಯಾಂಡ್​ ಫಿನಾಲೆ ನೋಡಿ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ. ಸ್ಯಾಂಡಲ್​ವುಡ್​ ಬ್ಯೂಟಿ, ಎವರ್​ಗ್ರೀನ್​ ತಾರೆ  ಪ್ರೇಮಾ, ಜನಪ್ರಿಯ ಟಿ.ವಿ ನಿರೂಪಕ ಹರೀಶ್ ನಾಗರಾಜು, 'ದಾಸ ಪುರಂದರ' ಮತ್ತು 'ಬೃಂದಾವನ'ದಲ್ಲಿ ನಟಿಸಿರುವ ನಟಿ ಅಮೂಲ್ಯ ಭಾರದ್ವಾಜ್,  'ಗಿಚ್ಚಿ ಗಿಲಿಗಿಲಿ ಸೀಸನ್​ 3' ರ ರನ್ನರ್ ಅಪ್ ಮಾನಸಾ ತುಕಾಲಿ ಸಂತೋಷ್,  ಹಾಸ್ಯನಟ ಹುಲಿ ಕಾರ್ತಿಕ್, 'ಮಗಳು ಜಾನಕಿ' ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ಗಾಯಕಿ ಮತ್ತು ನಟಿ ಐಶ್ವರ್ಯಾ ರಂಗರಾಜನ್, ನಟಿ ಭವ್ಯಾ ಗೌಡ, ನಟ ದೀಪಕ್​ ಗೌಡ, ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಂಗಳೂರಿನ ಪ್ರಖ್ಯಾತ ಅವಳಿ ಸಹೋದರಿಯರಾದ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ , ರೀಲ್ಸ್ ರೇಷ್ಮಾ, ಚಂದ್ರಪ್ರಭಾ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ತ್ರಿವಿಕ್ರಮ್, ಸುಕೃತಾ ನಾಗ್, ಗೌತಮಿ ಜಾಧವ್, ಮತ್ತು ಶರತ್ ಕುಮಾರ್ ಹೀಗೆ ಹಲವಾರು ಹೆಸರುಗಳು ಸಂಭಾವ್ಯ ಪಟ್ಟಿಯಲ್ಲಿ ಇವೆ.  ಆ್ಯಂಕರ್ ಸುಕನ್ಯಾ, ಒಲವಿನ ನಿಲ್ದಾಣದ ನಾಯಕ ಅಕ್ಷಯ್ ನಾಯಕ್, ಕನ್ನಡತಿ ಸೀರಿಯಲ್​ನಲ್ಲಿ ಹರ್ಷನ ತಂಗಿ ಸುಚಿಯಾಗಿದ್ದ ನಟಿ ಅಮೃತಾ ಮೂರ್ತಿ, ಭೀಮಾ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿರುವ ಪ್ರಿಯಾ ಶಠಮರ್ಷಣ ಹೆಸರುಗಳೂ ಕೇಳಿ ಬರುತ್ತಿವೆ. ಆದರೆ ಅಂತಿಮ ಹೆಸರು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ಬಿಗ್​ಬಾಸ್​ಗೆ ಹೊಸ ಚೀಫ್​ ನೇಮಕ: 'ಮನೆಯೇ ಮಂತ್ರಾಲಯ’ ನಟ ನಿಖಿಲ್​ಗೆ ಒಲಿಯಿತು ಪಟ್ಟ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?
Bigg Boss ಗಿಲ್ಲಿ ನಟನಿಗೆ ಶಾಕ್​: ಒಂದ್​ ಸಲ ನೋಡ್ತೀನಿ, 2 ಸಲ ನೋಡ್ತೀನಿ ಆಮೇಲೆ ನನ್​ ಭಾಷೆ ಬರತ್ತೆ!