ಅಪ್ಪ ನಿಧನರಾದಾಗ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದೆ ಎನ್ನುವ ಶಾಕಿಂಗ್ ವಿಚಾರವನ್ನು ರಮ್ಯಾ ಬಿಚ್ಚಿಟ್ಟಿದ್ದಾರೆ.
ವೀಕೆಂಡ್ ವಿತ್ ರಮೇಶ್ ಸೀಸನ್-5ನ ಮೊದಲ ದಿನ ರಮ್ಯಾ ಕಾಣಿಸಿಕೊಂಡಿದ್ದರು. ಸಾಧಕರ ಸೀಟಿನಲ್ಲಿ ಸ್ಯಾಂಡಲ್ ವುಡ್ ಕ್ವೀನ್ ಕುಳಿತಿದ್ದರು. ರಮ್ಯಾ ಅವರನ್ನು ಕೆಂಪು ಕುರ್ಚಿಯಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಅಭಿಮಾನಿಗಳ ಆಸೆ ಈಡೇರಿದೆ. ರಮ್ಯಾ ತನ್ನ ಜೀವನದ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಸಿನಿಮಾ, ರಾಜಕೀಯ ಸೇರಿದಂತೆ ಅನೇಕ ಗೊತ್ತಿರದ ಸಂಗತಿಯಗಳು ವೀಕೆಂಡ್ ಟೆಂಟ್‌ನಲ್ಲಿ ಬಹಿರಂಗವಾಗಿದೆ. ಭಾನುವಾರ (ಮಾರ್ಚ್ 26) ಸಂಚಿಕೆ ಭಾವುಕವಾಗಿತ್ತು. ರಮ್ಯಾ ತನ್ನ ತಂದೆಯನ್ನು ನೆನೆದು ಕಣ್ಣೀರಾಕಿದ್ರು. ಅಷ್ಟೆಯಲ್ಲ ಅಪ್ಪ ನಿಧನರಾದಾಗ ಜೀವನವನ್ನೇ ಕೊನೆಗೊಳಿಸಲು ನಿರ್ಧರಿಸಿದ್ದೆ ಎನ್ನುವ ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ. ಸಂಕಷ್ಟದ ಸಮಯದಲ್ಲಿ ರಾಹುಲ್ ಗಾಂಧಿ ಸಹಾಯ ನೆನಪಿಸಿಕೊಂಡಿದ್ದಾರೆ ರಮ್ಯಾ.
ರಮ್ಯಾ ಸಿನಿಮಾರಂಗದಲ್ಲಿ ಖ್ಯಾತಿಗಳಿದ ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. 2013ರಲ್ಲಿ ರಮ್ಯಾ ರಾಜಕೀಯ ಪ್ರವೇಶ ಪಡೆದರು. ರಾಜಕೀಯ ಜೀವನದ ಬಗ್ಗೆ ರಮ್ಯಾ ವೀಕೆಂಡ್ ವಿತ್ ರಮೇಶ್ ನಲ್ಲಿ ಮಾತನಾಡಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸಮಯದಲ್ಲಿ ತಂದೆಯನ್ನು ಕಳೆದಕೊಂಡೆ ಎಂದು ರಮ್ಯಾ ಹೇಳಿದ್ದಾರೆ. ಅಪ್ಪ ನಿಧನ ಹೊಂದಿದ 10 ದಿನಗಳಲ್ಲೇ ಪಾರ್ಲಿಮೆಂಟ್‌ಗೆ ಎಂಟ್ರಿ ಕೊಟ್ಟಿದ್ದೆ ಎಂದು ಹೇಳಿದರು. ಅದೇ ಸಮಕ್ಕೆ ಮಂಡ್ಯ ಜನರ ಪ್ರೀತಿ ಮತ್ತು ಅವರು ನೀಡಿದ ಧೈರ್ಯ ಮರೆಯುವಂತಿಲ್ಲ ಎಂದರು. ತಂದೆ ನಿಧನರಾದ ಬಳಿಕ ಕುಗ್ಗಿಹೋಗಿದ್ದೆ ಆಗ ರಾಹುಲ್ ಗಾಂಧಿ ಧೈರ್ಯ ತುಂಬಿದರು ಎಂದು ಹೇಳಿದ್ದಾರೆ.
'ಎಕ್ಸ್ ಕ್ಯೂಸ್ ಮಿ' ಸಿನಿಮಾ ಮಾಡಲು ಇಷ್ಟ ಇರ್ಲಿಲ್ಲ, ಗೌಡ್ರು ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ; ನಟಿ ರಮ್ಯಾ
ನನ್ನ ಜೀವನದ ಮೊದಲ ಪ್ರಭಾವಶಾಲಿ ವ್ಯಕ್ತಿ ನನ್ನ ತಾಯಿ, ಎರಡನೇಯವರು ನನ್ನ ತಂದೆ, ಮೂರನೇ ಅವರು ರಾಹುಲ್ ಗಾಂಧಿ ಎಂದು ಭಾವುಕರಾದರು. ನಾನು ಸುಳ್ಳು ಹೇಳಲ್ಲ. ನನ್ನ ತಂದೆ ನಿಧನ ಹೊಂದಿದಾಗ ನನ್ನ ಜೀವನ ಕೊನೆ ಮಾಡಿಕೊಳ್ಳಬೇಕು ಅಂದ್ಕೊಂಡಿದ್ದೆ. ಆಗ ನನಗೆ ರಾಹುಲ್ ಗಾಂಧಿ ಸಹಾಯ ಮಾಡಿದ್ರು. ಸಾವು ಅಂದ್ರೇನು, ಬದುಕು ಅಂದ್ರೇನು ನಾವು ಏನಕ್ಕೆ ಬಂದಿದ್ದೇವೆ ಅಂತಾ ಧೈರ್ಯ ತುಂಬಿದರು ಎಂದು ರಾಹುಲ್ ಗಾಂಧಿ ಬಗ್ಗೆ ರಮ್ಯಾ ಹೇಳಿದರು.
ಅಪ್ಪು ನಿಧನರಾದಾಗ ರಮ್ಯಾ ಎಲ್ಲಿದ್ರು? ಪುನೀತ್ ಜೊತೆಗಿನ ನೆನೆಪು ಬಿಚ್ಚಿಟ್ಟು ಭಾವುಕರಾದ ಮೋಹಕತಾರೆ
ರಮ್ಯಾ ತನ್ನ ಸಿನಿಮಾ ಜರ್ನಿಯನ್ನು ನೆನೆದು ಭಾವುಕರಾದರು. 20 ವರ್ಷ ಆಗಿದಿಯಾ ತನ್ನ ಸಿನಿಮಾ ಜರ್ನಿಗೆ ಎಂದು ಅಚ್ಚರಿ ಪಟ್ಟರು. ತನ್ನದೇ ಸಿನಿಮಾಗಳ ಹಾಡುಗಳನ್ನು ಕೇಳಿ ಕಣ್ಣೀರಾಕಿದರು. ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ರಮ್ಯಾ ಮತ್ತೆ ಸಿನಿಮಾಗೆ ವಾಪಾಸ್ ಆಗಿದ್ದಾರೆ. ಮತ್ತೆ ನಟಿಸುತ್ತಿದ್ದಾರೆ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ರಮ್ಯಾ ಅವರನ್ನು ಆದಷ್ಟು ಬೇಗ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರಾಗಿದ್ದಾರೆ.