'ಎಕ್ಸ್ ಕ್ಯೂಸ್ ಮಿ' ಸಿನಿಮಾ ಮಾಡಲು ಇಷ್ಟ ಇರ್ಲಿಲ್ಲ, ಗೌಡ್ರು ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ; ನಟಿ ರಮ್ಯಾ
'ಎಕ್ಸ್ ಕ್ಯೂಸ್ ಮಿ' ಸಿನಿಮಾ ಮಾಡಲು ಇಷ್ಟ ಇರ್ರಿಲ್ಲ ಆದರೆ ಗೌಡ್ರು ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ ಎಂದು ನಟಿ ರಮ್ಯಾ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ಶೋಗಳಲ್ಲಿ ಒಂದಾಗಿರುವ ವೀಕೆಂಡ್ ವಿತ್ ರಮೇಶ್ ಮತ್ತೆ ಬಂದಿದೆ. ಈಗಾಗಲೇ ನಾಲ್ಕು ಯಶಸ್ವಿ ಸೀಸನ್‌ಗಳನ್ನು ಮುಗಿಸಿರುವ ವೀಕೆಂಡ್ ವಿತ್ ರಮೇಶ್ ಇದೀಗ 5ನೇ ಸೀಸನ್ ಮೂಲಕ ವಾಪಾಸ್ ಆಗಿದೆ. ಈ ಬಾರಿಯ ವೀಕೆಂಡ್ ಕುರ್ಚಿಯಲ್ಲಿ ಮೊದಲ ಅತಿಥಿಯಾಗಿ ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ಕುಳಿತಿದ್ದಾರೆ. ಸಾಧಕರ ಕುರ್ಚಿಯಲ್ಲಿ ರಮ್ಯಾ ಅವರನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ರಮ್ಯಾ ಅವರ ಸಂಚಿಕೆ ಹೇಗಿರಲಿದೆ ಎಂದು ಪ್ರೇಕ್ಷಕರು ಕಾತರರಾಗಿದ್ದರು. ಕೊನೆಗೂ ರಮ್ಯಾ ಸಂಚಿಕೆ ಪ್ರಸಾರವಾಗಿದೆ. ಸ್ಯಾಂಡಲ್‌ವುಡ್ ಕ್ವೀನ್ ಬಗ್ಗೆ ಅನೇಕ ವಿಚಾರಗಳು ಅನಾವರಣವಾಗಿದೆ. ಬಾಲ್ಯ, ಶಾಲಾದಿನಗಳು, ಸಿನಿಮಾ ಎಂಟ್ರಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಮೊದಲು ಆಡಿಷನ್ ಕೊಟ್ಟಿದ್ದು 'ಅಪ್ಪು' ಸಿನಿಮಾಗೆ
ರಮ್ಯಾ ಮೊದಲು ಆಡಿಷನ್ ಕೊಟ್ಟಿದ್ದು ಪುನೀತ್ ರಾಜ್ ಕುಮಾರ್ ನಟನೆಯ ಅಪ್ಪು ಸಿನಿಮಾಗೆ. ಆದರೆ ಅಪ್ಪು ಸಿನಿಮಾಗೆ ರಮ್ಯಾ ರಿಜೆಕ್ಟ್ ಆದರು. ಬಳಿಕ ಮತ್ತೆ ವಜ್ರೇಶ್ವರಿ ಕಂಬೈನ್ಸ್ ರಮ್ಯಾ ಅವರನ್ನು ಸಂಪರ್ಕ ಮಾಡಿ ಸಿನಿಮಾ ಆಫರ್ ನೀಡಿದರು. ಆಡಿಷನ್ ಮಾಡದೆ ಅಭಿ ಸಿನಿಮಾಗೆ ಆಯ್ಕೆ ಮಾಡಿದರು. ಆ ಮೂಲಕ ರಮ್ಯಾ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಮೊದಲ ಬಾರಿಗೆ ತೆರೆಹಂಚಿಕೊಂಡರು.
ಅಪ್ಪು ನಿಧನರಾದಾಗ ರಮ್ಯಾ ಎಲ್ಲಿದ್ರು? ಪುನೀತ್ ಜೊತೆಗಿನ ನೆನೆಪು ಬಿಚ್ಚಿಟ್ಟು ಭಾವುಕರಾದ ಮೋಹಕತಾರೆ
ಎಕ್ಸ್ ಕ್ಯೂಸ್ ಮಿ ಸಿನಿಮಾ ಮಾಡಲು ಇಷ್ಟವಿರ್ಲಿಲ್ಲ
ಅಭಿ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಮೊದಲ ಸಿನಿಮಾದಲ್ಲೇ ರಮ್ಯಾ ಅಭಿಮಾನಿಗಳ ಹೃದಯ ಗೆದ್ದರು. ಈ ಸಿನಿಮಾ ರಿಲೀಸ್‌ಗೂ ಮೊದಲೇ ರಮ್ಯಾಗೆ ಎಕ್ಸ್ ಕ್ಯೂಸ್ ಮಿ ಸಿನಿಮಾಗೆ ಆಫರ್ ಬಂತು. ನಿರ್ದೇಶಕ ಪ್ರೇಮ್ ಸಾರಥ್ಯದಲ್ಲಿ ಬಂದ ಈ ಸಿನಿಮಾಗೆ ರಮ್ಯಾ ನಾಯಕಿಯಗಿ ಮಿಂಚಿದರು. ಆದರೆ ಈ ಸಿನಿಮಾದಲ್ಲಿ ನಟಿಸಲು ಇಷ್ಟವಿರಲಿಲ್ಲ ಎಂದು ರಮ್ಯಾ ಬಹಿರಂಗ ಪಡಿಸಿದ್ದಾರೆ. ಪ್ರೇಮ್ ಅವರು ಈ ಸಿನಿಮಾದ ಆಫರ್ ಮಾಡಿದಾಗ ನನಗೆ ಇಷ್ಟವಿರಲಿಲ್ಲ. ಆದರೆ ಅಮ್ಮ ನಮ್ಮ ಗೌಡ್ರು ಒಪ್ಪಿಕೊ ಎಂದು ಹೇಳಿದರು. ಗೌಡ್ರು ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ ಎಂದು ಹೇಳಿದರು. ಮೊದಲು ಈ ಸಿನಿಮಾದ ಅರ್ಧ ಭಾಗದ ಕಥೆ ಮಾತ್ರ ಹೇಳಿದ್ರು ಎಂದರು.
ಮೋಹಕ ತಾರೆ ರಮ್ಯಾಗೆ ಪ್ರಾಣ ಕಂಟಕ ಎದುರಾಗಿತ್ತಾ? ಏನದು ಘಟನೆ?
ಸೆಟ್‌ನಲ್ಲಿ ಕುಳಿತು ಕ್ಲೈಮ್ಯಾಕ್ಸ್ ಬರೆದ ಪ್ರೇಮ್
ನಿರ್ದೇಶಕ ಪ್ರೇಮ್ ಸಿನಿಮಾ ಸೆಟ್ ನಲ್ಲಿ ಕುಳಿತು ಕ್ಲೈಮ್ಯಾಕ್ಸ್ ಬರೆದರು ಎಂದು ಬಹಿರಂಗ ಪಡಿಸಿದ್ದಾರೆ. ಕ್ಲೈಮ್ಯಾಕ್ಸ್ ಬಗ್ಗೆ ಎಲ್ಲರಿಗೂ ಕ್ಯೂರಿಯಾಸಿಟಿ ಇತ್ತು. ಏನಾಗಲಿದೆ ಎಂದು ಎಲ್ಲರೂ ಕಾಯುತ್ತಿದ್ವೆ. ಪ್ರೇಮ್ ಕ್ಲೈಮ್ಯಾಕ್ಸ್ ಬರ್ದಿರಿಲ್ಲ. ಸೆಟ್‌ನಲ್ಲೇ ಕುಳಿತು ಬರೆದರು. ಅವರು ಕ್ಲೈಮ್ಯಾಕ್ಸ್ ಬರೆಯುವಾಗ ನಾವೆಲ್ಲಾ ಕುಳಿತು ಏನು ಬರಿತಾರೆ ಎಂದು ನೋಡುತ್ತಿದ್ವಿ. ಬಳಿಕ ಸಿನಿಮಾ ಮುಗಿಸಿ ರಿಲೀಸ್ ಆಯ್ತು. ಸಕ್ಸಸ್ ಆಯ್ತು ಎಂದು ಎಕ್ಸ್ ಕ್ಯೂಸ್ ಮಿ ಸಿನಿಮಾದ ಬಗ್ಗೆ ವಿವರಿಸಿದರು.