Ramachari Serial: ರಾಮಾಚಾರಿ ಇನ್ನಿಲ್ಲ, ಪತಿಯ ಹಿಂದೆ ಹೋಗಲು ರೆಡಿಯಾದ ಚಾರುಲತಾ! ಮುಂದೇನಾಗತ್ತೆ?

Published : Aug 01, 2025, 01:20 PM ISTUpdated : Aug 01, 2025, 01:22 PM IST
ramachari serial

ಸಾರಾಂಶ

Ramachari Kannada Serial Episode: 'ರಾಮಾಚಾರಿ' ಧಾರಾವಾಹಿಯಲ್ಲಿ ರಾಮಾಚಾರಿ ಇನ್ನಿಲ್ಲ. ಈಗ ಚಾರುಲತಾ ಕೂಡ ಅವನ ಹಾದಿ ಹಿಡಿದಳಾ? 

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುವ ರಾಮಾಚಾರಿ ಧಾರಾವಾಹಿಯಲ್ಲಿ ( ( Ramachari Serial ) ರಾಮಾಚಾರಿ ಅಂತ್ಯಕ್ರಿಯೆ ಕೂಡ ಆಗೋಯ್ತು. ರಾಮಾಚಾರಿ ಸಾವು ನೋಡಿ ಈಗ ಚಾರುಲತಾಗೆ ಬದುಕೋಕೆ ಇಷ್ಟವೇ ಇಲ್ಲ. ಇದು ಪುರುಷ ಪ್ರಧಾನಕಥೆಯಾಗಿದ್ದು, ಈಗ ಹೀರೋನನ್ನೇ ಸಾಯಿಸಿದ್ದಾರೆ. ಹಾಗಾದರೆ ಹೀರೋಯಿನ್‌ ಕಥೆ ಏನು?

ಚಾರುಲತಾ ಸಾಯುತ್ತಾಳಾ?

ರಾಮಾಚಾರಿ ಇಲ್ಲದ ಚಾರುಲತಾ ಬದುಕೋಕೆ ಇಷ್ಟಪಡುತ್ತಿಲ್ಲ. ಹೀಗಾಗಿ ಅವಳು ಆತ್ಮ*ಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಅವಳೀಗ ಸಾ*ಯುತ್ತಾಳಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಚಾರು ಏನಾದರೂ ಹೆಚ್ಚು ಕಮ್ಮಿ ಮಾಡಿಕೊಳ್ಳಬಹುದಾ ಎಂದು ಮನೆಯವರು ಕೂಡ ತಲೆಬಿಸಿ ಮಾಡಿಕೊಂಡಿದ್ದಾರೆ.

ಚಾರು ಇಲ್ಲದೆ ರಾಮಾಚಾರಿ ಇಲ್ಲ, ರಾಮಾಚಾರಿ ಇಲ್ಲದೆ ಚಾರು ಇಲ್ಲ. ಈಗ ರಾಮಾಚಾರಿ ಸತ್ತಿರೋದು ಎಲ್ಲರಿಗೂ ಆಶ್ಚರ್ಯವಾಗಿದೆ. ಇದೆಲ್ಲವೂ ಕನಸು ಅಂತ ತೋರಿಸಿ ಇಲ್ಲವೇ ಹೇಗಾದರೂ ಮಾಡಿ ರಾಮಾಚಾರಿಯನ್ನು ಬದುಕಿಸಿ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.

ಮುಂದೆ ಏನಾಗಬಹುದು?

ರಾಮಾಚಾರಿ ಸತ್ತರೆ, ಅದಕ್ಕೆ ತನ್ನ ತಾಯಿ ಮಾನ್ಯತಾನೇ ಕಾರಣ ಅಂತ ಚಾರುಲತಾಗೆ ಗೊತ್ತಾದರೆ ಅವಳಂತೂ ಸುಮ್ಮನೆ ಕೂರೋದಿಲ್ಲ. ಏಕಾಂಗಿಯಾಗಿ ಅವಳು ಹೋರಾಟ ಮಾಡಿ ರಾಮಾಚಾರಿ ಸಾವಿಗೆ ನ್ಯಾಯ ಕೊಡಿಸುತ್ತಾಳಾ ಇಲ್ಲವಾ ಎಂಬ ಪ್ರಶ್ನೆಯಿದೆ.

ರಾಮಾಚಾರಿಯನ್ನು ಸಾಯಿಸಿದ್ದು ಹೇಗೆ?

'ರಾಮಾಚಾರಿ' ಧಾರಾವಾಹಿಯಲ್ಲಿ ವಿಲನ್‌ಗಳ ಗ್ಯಾಂಗ್ ಇದೆ. ಮಾನ್ಯತಾ, ನವದೀಪ್, ರುಕ್ಕು, ಜಿಕೆ ಸೇರಿಕೊಂಡು ರಾಮಾಚಾರಿಯನ್ನು ಕೊಂಡಿದ್ದಾರೆ. ಅವನನ್ನು ಕಟ್ಟಡವೊಂದಕ್ಕೆ ಕರೆಸಿಕೊಂಡು ಸಾಯಿಸುತ್ತಾರೆ. ಇದರಲ್ಲಿ ಕೃಷ್ಣನ ಹೆಂಡ್ತಿಯದ್ದು ಮೇಲುಗೈ ಇದೆ. ವಿಲನ್‌ಗಳ ಗ್ಯಾಂಗ್ ಸೇರಿಕೊಂಡು ರಾಮಾಚಾರಿಯನ್ನು ಕೊಲ್ಲುತ್ತಾರೆ. ರಾಮಾಚಾರಿ ಸಾವನ್ನು ಅವರು ಸಂಭ್ರಮಿಸುತ್ತಾರೆ.

ಈ ಧಾರಾವಾಹಿ ಕಥೆ ಏನು?

ನಾರಾಯಣ್‌ ಆಚಾರ್‌ ಮಗ ರಾಮಾಚಾರಿ ಪೌರೋಹಿತ್ಯ ಕೆಲಸವನ್ನು ಮಾಡ್ತಾನೆ, ದೇವರನ್ನು ನಂಬುವ ಈ ಕಂಪೆನಿಯಲ್ಲಿಯೂ ಕೆಲಸ ಮಾಡ್ತಾನೆ. ಹೀಗಿರುವಾಗ ಕಂಪೆನಿಯಲ್ಲಿ ಅವನಿಗೆ ಚಾರುಲತಾಳ ಪರಿಚಯ ಆಗುವುದು. ಚಾರುಲತಾಗೆ ದುಡ್ಡಿನ ಮೋಹ, ಅಹಂಕಾರವೇ ಅವಳ ಆಭರಣ. ರಾಮಾಚಾರಿ ನಿಜವಾದ ಗುಣ ತಿಳಿದ ಅವಳು ಅವನಿಗೋಸ್ಕರ ಬದಲಾಗ್ತಾಳೆ, ಅವನನ್ನು ಮದುವೆಯಾಗಿ ಮನೆಗೆ ತಕ್ಕ ಸೊಸೆ ಆಗ್ತಾಳೆ. ತನ್ನ ಮಗಳು ಚಾರುಲತಾ, ರಾಮಾಚಾರಿಯನ್ನು ಮದುವೆ ಆಗಿರೋ ತಾಯಿ ಮಾನ್ಯತಾಗೆ ಇಷ್ಟವೇ ಇರೋದಿಲ್ಲ. ಸಾಕಷ್ಟು ಸಲ ರಾಮಾಚಾರಿ, ಚಾರುಲತಾರನ್ನು ಬೇರೆ ಬೇರೆ ಮಾಡಲು ಮಾನ್ಯತಾ ಪ್ಲ್ಯಾನ್‌ ಮಾಡಿದ್ದಳು. ಅದೆಲ್ಲವೂ ಉಲ್ಟಾ ಹೊಡೆದಿತ್ತು. ಕೊನೆಗೂ ಮಾನ್ಯತಾ ರಾಮಾಚಾರಿಯನ್ನು ಕೊಲ್ಲಲು ಯಶಸ್ವಿಯಾಗಿದ್ದಾಳೆ. ರಾಮಾಚಾರಿಯು ಸತ್ತೋದ ಎಂದು ಪಕ್ಕಾ ಹೇಳಲು ಸಾಧ್ಯವಿಲ್ಲ. ಕಥೆಗಾರರು ಈ ಧಾರಾವಾಹಿಗೆ ಯಾವ ರೀತಿ ಟ್ವಿಸ್ಟ್‌ ಕೊಟ್ಟರೂ ಕೊಡಬಹುದು.

ಪಾತ್ರಧಾರಿಗಳು

ರಾಮಾಚಾರಿ - ರಿತ್ವಿಕ್‌ ಕೃಪಾಕರ್‌

ಚಾರುಲತಾ - ಮೌನಾ ಗುಡ್ಡೇಮನೆ

ಗುರುದತ್‌, ಝಾನ್ಸಿ, ಅಂಜಲಿ, ಐಶ್ವರ್ಯಾ ಸಾಲೀಮಠ, ಶಂಕರ್‌ ಅಶ್ವತ್ಥ್‌ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

 

ವಿಶೇಷ ಮನವಿ: ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ... ಬದಲಾಗಿ ಯಾವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ್ರೋ ಅದೇ ನಿಮ್ಮ ಐಡೆಂಟಿಟಿಯಾಗಿ ಬಿಡುತ್ತೆ. ಮುಂದೆ, ಆತ್ಮ8ತ್ಯೆ ಮಾಡಿಕೊಂಡವರನ್ನು ಆ 'ಕಾರಣ'ಕ್ಕಾಗಿಯೇ ನೆನಪಿಟ್ಟುಕೊಳ್ಳಲಾಗುತ್ತೆ.

ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:

Sahai Helpline - 080 2549 7777

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ನಟನಿಗೆ ಶಾಕ್​: ಒಂದ್​ ಸಲ ನೋಡ್ತೀನಿ, 2 ಸಲ ನೋಡ್ತೀನಿ ಆಮೇಲೆ ನನ್​ ಭಾಷೆ ಬರತ್ತೆ!
'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!