ಕಿರುತೆರೆಯಿಂದ ಬಿಗ್ ಬಾಸ್ ವರೆಗೆ ಶೋಭಾ ಶೆಟ್ಟಿ ಬಿಚ್ಚಿಟ್ಟ ಸಂಭಾವನೆ ರಹಸ್ಯ

Published : Jul 30, 2025, 07:15 PM ISTUpdated : Jul 30, 2025, 07:17 PM IST
Shobha shetty

ಸಾರಾಂಶ

ಕಾರ್ತಿಕ ದೀಪಂ ಮತ್ತು ಬಿಗ್ ಬಾಸ್ ಖ್ಯಾತಿಯ ಶೋಭಾ ಶೆಟ್ಟಿ ತಮ್ಮ ಜೀವನದ ಹಲವು ಹಂತಗಳನ್ನು ಬಹಿರಂಗಪಡಿಸಿದ್ದಾರೆ. ಕಾಲೇಜಿನ ದಿನಗಳಿಂದ ಕಿರುತೆರೆಗೆ ಪಾದಾರ್ಪಣೆ ಮಾಡಿದ ಬಗೆ, ಬಿಗ್ ಬಾಸ್ ಅನುಭವ, ಮತ್ತು ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ.

ಕಾರ್ತಿಕ ದೀಪಂ ಮತ್ತು ಬಿಗ್ ಬಾಸ್ ಖ್ಯಾತಿಯ ಜನಪ್ರಿಯ ನಟಿ ಶೋಭಾ ಶೆಟ್ಟಿ, ಪ್ರಸ್ತುತ ಕನ್ನಡ ಹಾಗೂ ತೆಲುಗು ಭಾಷೆಗಳ ಧಾರಾವಾಹಿಗಳು ಮತ್ತು ವಿವಿಧ ಟಿವಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗೆ ನೀಡಿದ ಒಂದು ಯೂಟ್ಯೂಬ್ ಸಂದರ್ಶನದಲ್ಲಿ, ಅವರು ತಮ್ಮ ಜೀವನದ ಹಲವು ಹಂತಗಳನ್ನು ಬಹಿರಂಗಪಡಿಸಿದರು.

ನಾನು ಕಲಾವಿದೆಯಾಗದಿದ್ದರೆ, ಫ್ಯಾಷನ್ ಡಿಸೈನರ್ ಆಗಿರುತ್ತಿದ್ದೆ

ಕಾಲೇಜಿನಲ್ಲಿ ಓದುತ್ತಿದ್ದ ಸಮಯದಲ್ಲಿ, ಅವರ ಕಲಾತ್ಮಕತೆಯು ನಿರ್ದೇಶಕರೊಬ್ಬರ ಗಮನ ಸೆಳೆದಿತು. ಕಾಲೇಜಿನಲ್ಲಿ ನಡೆದ ಒಂದು ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ, ಶೋಭಾ ಶೆಟ್ಟಿಯನ್ನು ಗಮನಿಸಿದ ನಿರ್ದೇಶಕರು ಅವರನ್ನು ಧಾರಾವಾಹಿಯಲ್ಲಿ ನಟಿಸಲು ಪ್ರಯತ್ನಿಸಿ ಎಂದು ಕೇಳಿದರು. ಬಳಿಕ ಅವರ ಮ್ಯಾನೇಜರ್ ಶೋಭಾ ಅವರ ಸಂಪರ್ಕ ವಿವರಗಳನ್ನು ಪಡೆದು, ಆಡಿಷನ್‌ಗೆ ಆಹ್ವಾನಿಸಿದರು. ಅವರು ಫೋಟೋ ಕೇಳಿದಾಗ, ನನ್ನ ಬಳಿ ಯಾವುದೇ ಪ್ರೊಫೆಷನಲ್ ಫೋಟೋ ಇರಲಿಲ್ಲ. ನಾನು ನನ್ನ ಕಾಲೇಜಿನ ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ಅವರಿಗೆ ಕೊಟ್ಟೆ ಅವರು ನೋಡಿ ನಕ್ಕರು. ನಾನು ಅವು ನನ್ನ ಮೊದಲ ಪ್ರಯತ್ನ ಎಂಬುದನ್ನು ಹೇಳಿದರು.

ಆ ಬಳಿಕ ಫೋಟೋಶೂಟ್ ನಡೆಸಿದ ತಂಡ, ಶೋಭಾ ಶೆಟ್ಟಿಯನ್ನು ಮೊದಲ ಬಾರಿಗೆ ಕನ್ನಡ ಧಾರಾವಾಹಿಯಲ್ಲಿ ನಾಯಕಿಯಾಗಿ ಆಯ್ಕೆ ಮಾಡಿತು. ಆ ಧಾರಾವಾಹಿಯಲ್ಲಿ ನಟನೆಯ ಆರಂಭದ ದಿನಗಳಲ್ಲಿ, ಅವರಿಗೆ ಪ್ರತಿದಿನ ₹750 ರೂಪಾಯಿ ನೀಡಲಾಗುತ್ತಿತ್ತು.

ಇಂದು, ತಮ್ಮ ಪ್ರತಿಭೆಯಿಂದ ಎತ್ತರಕ್ಕೇರಿದ ಶೋಭಾ ಶೆಟ್ಟಿ, ಹೊಸತನ್ನು ಕಲಿಯುವ ತವಕ ಹಾಗೂ ನಿಷ್ಠೆಯ ಮೂಲಕ ಇಂಡಸ್ಟ್ರಿಯಲ್ಲಿ ಪ್ರಭಾವ ಮೂಡಿಸಿರುವ ಕಲಾವಿದೆಯಾಗಿದ್ದಾರೆ.

ಕಾರ್ತಿಕ ದೀಪಂ ಧಾರಾವಾಹಿಯಲ್ಲಿ ಮೌನಿತಾ ಪಾತ್ರದ ಮೂಲಕ ಶೋಭಾ ಜನಪ್ರಿಯತೆ ಗಳಿಸಿದರು. ತೆಲುಗು ಮಾಧ್ಯಮಗಳು ಸುದ್ದಿ ಮಾಡಿದಂತೆ ಬಿಗ್ ಬಾಸ್ ತೆಲುಗು 7 ರಲ್ಲಿ ಭಾಗವಹಿಸಿದ್ದಕ್ಕಾಗಿ ಅವರಿಗೆ ವಾರಕ್ಕೆ 1.25 ರಿಂದ 1.5 ಲಕ್ಷ ರೂ.ಗಳವರೆಗೆ ಆಫರ್ ನೀಡಲಾಗಿತ್ತಂತೆ. ಸೀಸನ್ 6ರವರೆಗಿನ ಎಲ್ಲಾ ಸ್ಪರ್ಧಿಗಳಲ್ಲಿ ಶೋಭಾಗೆ ಅತಿ ಹೆಚ್ಚು ಸಂಭಾವನೆ ನೀಡಲಾಗಿದೆ ಎಂದು ಆ ಸಮಯದಲ್ಲಿ ಸುದ್ದಿಯಾಗಿತ್ತು.

ಇನ್ನು ಬಿಗ್ ಬಾಸ್ ಕನ್ನಡ 11 ನೇ ಸೀಸನ್‌ಗೆ ಪ್ರವೇಶ ನೀಡಿದ ವೈಲ್ಡ್‌ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ, ಆರೋಗ್ಯದ ಕಾರಣ ಕಾರ್ಯಕ್ರಮದಿಂದ ಹೊರ ನಡೆದಿದ್ದರು. ತೆಲುಗು ನಟ ಯಶವಂತ್ ರೆಡ್ಡಿ ಜೊತೆ ಶೋಭಾ ಶೆಟ್ಟಿ ವಿವಾಹ ನಿಶ್ಚಿತಾರ್ಥವಾಗಿದೆ. ನೆಗೆಟಿವ್ ಪಾತ್ರಗಳಿಗೆ ಇವರು ಹೆಚ್ಚು ಫೇಮಸ್ ಆಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12 : ಬಿಗ್ ಬಾಸ್‌ನಲ್ಲಿ ಗಿಲ್ಲಿ ಗಿಮಿಕ್, ದಾಖಲೆಯಾಯ್ತು ಇನ್ಸ್ಟಾ ಫಾಲೋವರ್ಸ್‌
ಚೈತ್ರಾ ಕುಂದಾಪುರ, ಸ್ಪಂದನಾ ಸೋಮಣ್ಣ ನಡುವೆ ತಂದಿಟ್ಟು ನಕ್ಕ ವಿಲನ್‌ Bigg Boss; ಯಾಕ್ರೀ ಹೀಗ್‌ ಮಾಡ್ತೀರಾ?