ದುಬೈನಿಂದ ಬುರ್ಖಾದಲ್ಲಿ ಬಂದು 'ಅಯ್ಯೋ ರಾಮ' ಎನ್ನೋದಾ? ಪಾಪ.. ಸಿಕ್ಕಾಕ್ಕೊಂಡೇಬಿಟ್ರು!

By Suchethana D  |  First Published Nov 22, 2024, 6:20 PM IST

ಅಪಹರಣಕ್ಕೆ ಒಳಗಾದವರನ್ನು ಬಿಡಿಸಲು ಬುರ್ಖಾದಲ್ಲಿ ಬಂದ ಹೀರೋಗಳು ಹೀಗೆ ಎಡವೋದಾ? ಅಯ್ಯೋ ರಾಮ ಹೇಳಿ ಸಿಕ್ಕಿಬಿದ್ದೇಬಿಟ್ಟರು. ಏನಿದು?
 


ಸಿಹಿ ಮತ್ತು ಶ್ರಾವಣಿ ಕಿಡ್‌ನ್ಯಾಪ್‌ ಆಗಿದ್ದಾರೆ. ಇತ್ತ  ಕಾನೂನು ಸಮರದಲ್ಲಿ ಸೀತಾ-ರಾಮ ಗೆದ್ದಿರೋ ಬೆನ್ನಲ್ಲೇ ಅವಳನ್ನು ಮತ್ತೆ ಅಪಹರಿಸಲಾಗಿದೆ. ಅವಳನ್ನು ಹುಡುಕಿ ಹೊರಟ ಶ್ರಾವಣಿಗೂ ಕಿಡ್ನಾಪ್‌ ಆಗಿದ್ದಾಳೆ. ಇತ್ತ ಶ್ರಾವಣಿಯನ್ನು ಮುಗಿಸಲು ಮನೆಯಲ್ಲಿ ವಿಜಯಾಂಬಿಕಾ ಪ್ಲ್ಯಾನ ಮಾಡುತ್ತಿದ್ರೆ, ಅತ್ತ ಸಿಹಿಯನ್ನು ಮುಗಿಸಲು ಸಂಚು ರೂಪಿಸ್ತಾ ಇದ್ದಾಳೆ ಭಾರ್ಗವಿ. ಸಿಹಿಯನ್ನು ದೂರ ಮಾಡಲು ಶಾಲಿನಿ ಜೊತೆ ಕೈಜೋಡಿಸಿ ಸಾಕಷ್ಟು ಕಿತಾಪತಿ ಮಾಡಿದ್ದಳು ಭಾರ್ಗವಿ. ಆದರೆ ಅದ್ಯಾವುದೂ ಯಶಸ್ವಿ ಆಗಲಿಲ್ಲ.  ನ್ಯಾಯಾಲಯದಲ್ಲಿಯೂ ಸೀತಾಳಿಗೇ ಜಯ ಆಗಿದ್ದನ್ನು ಸಹಿಸಲು ಭಾರ್ಗವಿಗೆ ಸಾಧ್ಯವಾಗ್ತಿಲ್ಲ. 

ಇದೀಗ ವಿಜಯಾಂಬಿಕಾ ಮತ್ತು ಭಾರ್ಗವಿ ಸೇರಿ ಸಿಹಿ ಮತ್ತು ಶ್ರಾವಣಿಯನ್ನು ಅಪಹರಣ ಮಾಡಿಸಿದ್ದಾರೆ. ಸಿಹಿಗೆ ಕಿಡ್ನಾಪ್‌ ಏನೂ ಹೊಸತು ಅಲ್ಲ. ಅವಳು ಇದಾಗಲೇ ಸಾಕಷ್ಟು ಬಾರಿ ಅಪಹರಣಕ್ಕೆ ಒಳಗಾಗಿದ್ದು, ವೀಕ್ಷಕರಿಗೂ ತಲೆಚಿಟ್ಟು ಹಿಡಿದು ಹೋಗಿದೆ. ಅತ್ತ ಶ್ರಾವಣಿ ಭಯದಿಂದ ನಲುಗುತ್ತಿದ್ದರೆ, ಸಿಹಿಯೇ ಅವಳಿಗೆ ಧೈರ್‍ಯ ಹೇಳುತ್ತಿದ್ದಾಳೆ. ನನ್ನ ಅಪ್ಪ-ಅಮ್ಮ ಬಂದು ಕರೆದುಕೊಂಡು ಹೋಗ್ತಾರೆ ಅನ್ನುತ್ತಿದ್ದಾಳೆ. ಕೊನೆಗೆ ಪ್ಲ್ಯಾನ್‌ ಮಾಡುವ ಸಿಹಿ ಹಸಿವೆ ಎಂದಿದ್ದಾಳೆ. ಅದಕ್ಕೆ ಅಪಹರಣಕಾರರು ಏನು ಬೇಕು ಎಂದಾಗ, ಆನ್‌ಲೈನ್‌ನಲ್ಲಿ ಆರ್ಡರ್‍‌ ಮಾಡಿದ್ರೆ ಬರುತ್ತೆ ಎಂದಿದ್ದಾರೆ. ಹೀಗೆ ಹೇಳ್ತಿದ್ದಂತೆಯೇ ಅಪಹರಣಕಾರರು ಫೋನ್ ಕೊಟ್ಟಿದ್ದಾರೆ.

Tap to resize

Latest Videos

undefined

ಸ್ನಾನ ಮಾಡದ ಹನುಮಂತುಗೆ 3 ಸಾವಿರದ ಚಡ್ಡಿ ಜೊತೆ ಭರ್ಜರಿ ಗಿಫ್ಟ್! ಕುಣಿದು ಕುಪ್ಪಳಿಸಿದ ಬಿಗ್‌ಬಾಸ್ ಸ್ಪರ್ಧಿಗಳು

 
ಆಗ ಶ್ರಾವಣಿ ಸುಬ್ರಹ್ಮಣ್ಯನಿಗೆ ಕರೆ ಮಾಡಿದ್ದಾಳೆ. ಯಾವುದೋ ನಂಬರ್‍‌ನಿಂದ ಕರೆ ಬಂದಿರುವುದನ್ನು ನೋಡಿ ಸುಬ್ಬು ವಾಪಸ್‌ ಮಾಡಿದಾಗ ರಿಸೀವ್‌ ಮಾಡಲಿಲ್ಲ. ಇದರಿಂದ ರಾಮ್ ಮತ್ತು ಸುಬ್ಬುಗೆ ಡೌಟ್‌ ಬಂದು ಇಬ್ಬರೂ ಸಿಹಿ ಮತ್ತು ಶ್ರಾವಣಿಯನ್ನುಹುಡುಕುವ ಪ್ರಯತ್ನದಲ್ಲಿದ್ದಾರೆ. ಸುಬ್ಬು ನವಾಬ್‌ನಂತೆ ವೇಷ ಧರಿಸಿದ್ರೆ, ರಾಮ್ ಬುರ್ಖಾ ಹಾಕಿದ್ದಾನೆ. ಇಬ್ಬರೂ ಬೇಟೆಗೆ ಹೊರಟಿದ್ದಾರೆ.  ಕೊನೆಗೂ ಅಪಹರಣ ಮಾಡಿರುವ ಜಾಗಕ್ಕೆ ಬಂದಿದ್ದಾರೆ ಇಬ್ಬರೂ. ಅಪಹರಣಕಾರರ ಕಣ್‌ ತಪ್ಪಿಸಿ ಒಳಗೆ ಬರುವಲ್ಲಿ ಯಶಸ್ವಿಯಾಗಿದ್ದಾರೆ. ಸುಬ್ರಹ್ಮಣ್ಯ ಅಪಹರಣಕಾರರ ಕೈಗೆ ದುಡ್ಡು ಕೊಟ್ಟಿದ್ದಾನೆ. ಅಷ್ಟರಲ್ಲಿಯೇ ರಾಮ್‌ ಎಡವಿ ಬಿದ್ದಿದ್ದಾನೆ. ಬಾಯಲ್ಲಿ ಅಯ್ಯೋ ರಾಮ ಎಂದು ಹೇಳಿಬಿಟ್ಟಿದ್ದಾನೆ. ದುಬೈ ಲೇಡಿ ಅಯ್ಯೋ ರಾಮಾ ಹೇಳಿದ್ದು ಕೇಳಿ ಕಿಡ್ನಾಪರ್‍‌ಗಳಿಗೆ ಡೌಟ್‌ ಬಂದಿದೆ. ದುಬೈನಲ್ಲಿ ಎಡವಿ ಬಿದ್ರೆ ಅಯ್ಯೋ ರಾಮ ಹೇಳಲ್ಲ ಎಂದು ಇಬ್ಬರ ಮೇಲೂ ಸಂದೇಹ ಪಟ್ಟಿದ್ದಾರೆ.

ಅಷ್ಟರಲ್ಲಿ ಫೈಟಿಂಗ್‌ ನಡೆದಿದೆ. ಕೊನೆಗೂ ಸಹಜವಾಗಿ ಫೈಟಿಂಗ್‌ನಲ್ಲಿ ವಿಲನ್‌ಗಳು ಸೋತಿದ್ದಾರೆ. ನಿನ್ನೆಯಷ್ಟೇ ಅಪಹರಣಕಾರರು  ಅಪಹರಣ ಮಾಡಿದವರಿಗೆ ಮೊಬೈಲ್‌ ಕೊಟ್ಟು ನೆಟ್ಟಿಗರಿಂದ ಅಪಹಾಸ್ಯಕ್ಕೆ ಒಳಗಾಗಿದ್ದರು. ಯಾರಾದ್ರೂ ಹೀಗೆಮಾಡ್ತಾರಾ? ಫೋನ್  ಕೊಡ್ತಾರಾ? ಅಷ್ಟೂ ಗೊತ್ತಾಗಲ್ವಾ ಎಂದು ತಮಾಷೆ ಮಾಡ್ತಿರೋನೆಟ್ಟಿಗರು, ಇಷ್ಟೆಲ್ಲಾ ದುಡ್ಡು ಕೊಟ್ಟು ಇಂಥ ಪೆದ್ದು ಕಿಡ್ನಾಪರ್‍‌ಗಳನ್ನು ಇಟ್ಟುಕೊಳ್ತಾರೆ ಎಂದು ಪ್ರಶ್ನಿಸಿದ್ದರು.  ಒಳ್ಳೆಯ ಸೀರಿಯಲ್‌ಗಳನ್ನು ರಬ್ಬರ್‍‌ನಂತೆ ಎಳೆಯುವ ಸಲುವಾಗಿ ಅನಗತ್ಯ ಇಂಥ ದೃಶ್ಯಗಳನ್ನು, ಹಾಸ್ಯಾಸ್ಪದ ಎನ್ನುವ ಪ್ರಸಂಗಗಳನ್ನು ತುರುಕುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. 

ಕನ್ನಡದ 'ಕೂಲ್' ನಟಿ ಮತ್ತೆ ಗರ್ಭಿಣಿ: ಯಾ ಅಲ್ಲಾ.. ಎನ್ನುತ್ತಲೇ ಭಾವುಕ ಪೋಸ್ಟ್‌ ಮಾಡಿದ ಸನಾ

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!