ಬಿಗ್​ಬಾಸ್​ ಮನೆಗೆ ರಾಖಿ ಸಾವಂತ್ ಎಂಟ್ರಿ! ದೊಡ್ಮನೆಯ ಮೂಡು ಹೇಗೆ ಚೇಂಜ್​ ಆಗೋಯ್ತು ನೋಡಿ...

Published : Sep 29, 2024, 11:44 AM IST
ಬಿಗ್​ಬಾಸ್​ ಮನೆಗೆ ರಾಖಿ ಸಾವಂತ್ ಎಂಟ್ರಿ! ದೊಡ್ಮನೆಯ ಮೂಡು ಹೇಗೆ ಚೇಂಜ್​ ಆಗೋಯ್ತು ನೋಡಿ...

ಸಾರಾಂಶ

ಡ್ರಾಮಾ ಕ್ವೀನ್​ ಎಂದೇ ಫೇಮಸ್​ ಆಗಿರೋ ಬಾಲಿವುಡ್​ ನಟಿ ರಾಖಿ ಸಾವಂತ್​ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಎಂಟ್ರಿ ಹೇಗಿತ್ತು ಎನ್ನುವುದನ್ನು ವಿಡಿಯೋದಲ್ಲಿ ನೋಡಿ!  

ಬಾಲಿವುಡ್​ನ ಡ್ರಾಮಾ ಕ್ವೀನ್‌, ಕಾಂಟ್ರವರ್ಸಿ ಲೇಡಿ ರಾಖಿ ಸಾವಂತ್​ ಪರಿಚಯ ಯಾರಿಗೂ ಬೇಡ ಎನ್ನಿಸತ್ತೆ. ನಾಟಕ ಮಾಡುವುದರದಲ್ಲಿ ಘಟಾನುಘಟಿ ರಾಜಕಾರಣಿಗಳನ್ನೂ, ನಟ-ನಟಿಯರನ್ನೂ ಮೀರಿಸೋ ಟ್ಯಾಲೆಂಟ್​ ಈಕೆಯದ್ದು!  ಕೆಲ ತಿಂಗಳ ಹಿಂದೆ ರಾಖಿ ಸಾವಂತ್‌ ಮತ್ತು ಮೈಸೂರಿನ ಆದಿಲ್‌ ಖಾನ್‌ ದುರ್‍ರಾನಿ ಮದ್ವೆ ವಿಷಯ ಸಕತ್‌ ಚರ್ಚೆಯಲ್ಲಿತ್ತು. ಇನ್ನು ರಾಖಿ ಬಗ್ಗೆಯಂತೂ ಎಲ್ಲರಿಗೂ ತಿಳಿದದ್ದೇ. ರಾಖಿ ಸಾವಂತ್ ಇತ್ತೀಚೆಗಷ್ಟೇ ಧರ್ಮ ಬದಲಿಸಿ ಫಾತಿಮಾ ಆಗಿದ್ದಾರೆ. ನಿಜವಾಗಿ ರಾಖಿ ತಾನು ಆದಿಲ್ ನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದರು. ಆದರೆ, ನಂತರ ಆದಿಲ್ ಮತ್ತು ರಾಖಿ ನಡುವೆ ಜಗಳ ಪ್ರಾರಂಭವಾಗಿತ್ತು. ರಾಖಿ ಆದಿಲ್‌ ಖಾನ್​ರನ್ನುಜೈಲಿಗೆ ತಳ್ಳಿದ್ದು, ಅವರೀಗ  ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಇದರ ನಡುವೆಯೇ, ರಾಖಿ ಮೆಕ್ಕಾಕ್ಕೆ ಹೋಗಿ ಉಮ್ರಾ  ನೆರವೇರಿಸಿದ್ದಾರೆ. ತಾವೀಗ ರಾಖಿ ಅಲ್ಲ, ಫಾತೀಮಾ (Phatima) ಎಂದು ಕರೆಯಿರಿ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದರು. ಅದಾದ ಬಳಿಕ ಇವರಿಬ್ಬರ ಡಿವೋರ್ಸ್ ಕೂಡ ಆಯಿತು ಎನ್ನಲಾಗಿತ್ತು. 

ಇದಾದ ಬಳಿಕ ಸೋಷಿಯಲ್​ ಮೀಡಿಯಾದಲ್ಲಿ ದಿನಕ್ಕೊಂದು ವೇಷದಲ್ಲಿ ಕಾಣಿಸಿಕೊಳ್ತಿದ್ದ ರಾಖಿ ಇದ್ದಕ್ಕಿದ್ದಂತೆಯೇ ಕಣ್ಮರೆಯಾದರು. ಇದೀಗ ಮತ್ತೆ ಪ್ರತ್ಯಕ್ಷ ಆಗಿದ್ದಾರೆ. ಎಲ್ಲಿ ಅಂತೀರಾ? ಬಿಗ್​ಬಾಸ್​ ಮನೆಯಲ್ಲಿ! ಹೌದು. ಬಿಗ್​ಬಾಸ್​ ಮನೆಯಲ್ಲಿ ರಾಖಿ ಸಾವಂತ್​ ಗ್ರ್ಯಾಂಡ್​ ಎಂಟ್ರಿ ಆಗಿದೆ. ಈ ಹಿಂದೆ ಹಿಂದಿ ಬಿಗ್​ಬಾಸ್​ನ ಓಟಿಟಿಯಲ್ಲಿಯೂ ಈಕೆ ಭಾಗವಹಿಸಿದ್ದರು. ಈಗ ಮರಾಠಿಯ ದೊಡ್ಮನೆಗೆ ಈಕೆ ನಾಟಕ ಮಾಡುತ್ತ ಎಂಟ್ರಿ ಕೊಡುತ್ತಿದ್ದಂತೆಯೇ ಬಿಗ್​ಬಾಸ್​ ಮನೆಯ ಮೂಡೇ ಚೇಂಜ್​ ಆಗಿ ಹೋಗಿದೆ. ಅಂದಹಾಗೆ ಇತ್ತ ಬಿಗ್​ಬಾಸ್​ ಕನ್ನಡದ 11ನೇ ಸೀಸನ್​ ಇಂದಿನಿಂದ ಶುರುವಾಗಲಿದ್ದರೆ, ಅತ್ತ ಮರಾಠಿ ಬಿಗ್​ಬಾಸ್​ ಕೂಡ ಶುರುವಾಗಿದ್ದು, ರಾಖಿ ಸಾವಂತ್​ ಮರಾಠಿಯ ಬಿಗ್​ಬಾಸ್​ಗೆ ಗ್ರ್ಯಾಂಡ್​ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಎಂದಿನ ನಾಟಕೀಯ ಶೈಲಿಯಲ್ಲಿ, ಎಲ್ಲರ ಕಾಲೆಳೆದಿದ್ದಾರೆ. ತಮ್ಮನ್ನು ಮೀರಿಸುವವರು ಯಾರೂ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಆದರೆ ಈಕೆಯ ಎಂಟ್ರಿ ಆಗುತ್ತಿದ್ದಂತೆಯೇ ಅಲ್ಲಿರುವ ಕೆಲವು ಸ್ಪರ್ಧಿಗಳಿಗೆ ಅದರಲ್ಲಿಯೂ ಮುಖ್ಯವಾಗಿ, ಹಿಂದಿ, ತೆಲಗು, ತಮಿಳು ನಟಿ ನಿಕ್ಕಿ ತಂಬೋಲಿ ಅವರಿಗೆ ಕಿರಿಕಿರಿ ಆಗಿದೆ. ರಾಖಿಯ ಮಾತು ಅವರಿಗೆ ಅಸಹ್ಯ ಮೂಡಿಸಿದೆ ಎನ್ನುವುದು ವಿಡಿಯೋ ನೋಡಿದರೆ ತಿಳಿಯುತ್ತದೆ.

ಮಗುವಾದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ರಾಖಿ ಸಾವಂತ್​! ಮಾಲ್​ ಒಳಗೆ ಲಗ್ಗೆ ಇಟ್ಟ ನಟಿ...

ಅಂದಹಾಗೆ, ರಾಖಿ ಸಾವಂತ್​ ಈಚೆಗಷ್ಟೇ ತಾನು ಚಿಕ್ಕಮ್ಮ ಆಗಿರೋ ವಿಷಯ ಕೇಳಿ ಕುಣಿದು ಕುಪ್ಪಳಿಸಿದ್ದರು.  ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್​ ಅವರಿಗೆ ಮಗು ಆಗಿದ್ದರಿಂದ ಖುಷಿ ಪಟ್ಟುಕೊಂಡಿದ್ದರು. ನಾವಿಬ್ಬರೂ ಜೊತೆಯಲ್ಲಿಯೇ ಕೆಲ್ಸ ಮಾಡಿದ್ವಿ, ಜೊತೆಯಲ್ಲಿಯೇ ಬೆಳೆದ್ವಿ. ಈಗ ನೀನು ಮದ್ವೆಯಾದೆ, ಮಗುವಿಗೆ ಅಮ್ಮನೂ ಆದೆ ಎನ್ನುತ್ತಲೇ ಕುಣಿದು ಕುಪ್ಪಳಿಸಿದ್ದಾರೆ ರಾಖಿ. ಜೊತೆಯಲ್ಲಿಯೇ ಮಾಲ್​ ಒಂದಕ್ಕೆ ಲಗ್ಗೆ ಇಟ್ಟಿದ್ದು, ಅಲ್ಲಿ ಗೊಂಬೆ ಸೇರಿದಂತೆ ಮಗುವಿಗೆ ಬಗೆಬಗೆ ಗಿಫ್ಟ್​ ತೆಗೆದುಕೊಂಡಿದ್ದರು. ಮಾಲ್​ನಲ್ಲಿಯೂ ಹೋಗಿ ನಾಟಕ ಮಾಡಿ ಟ್ರೋಲ್​ಗೂ ಒಳಗಾಗಿದ್ದರು. 
 
ಇದಕ್ಕೂ ಮುನ್ನ, ಏಕಾಏಕಿ ಆಸ್ಪತ್ರೆಗೆ ಅಡ್ಮಿಟ್​ ಆಗಿ ಟ್ರೋಲ್​ಗೆ ಒಳಗಾಗಿದ್ದರು. ಆದರೆ ಇವರ ನೆರವಿಗೆ ಬಂದದ್ದು ಮಾಜಿ ಪತಿ ರಿತೇಶ್​.  ಎದೆ ಮತ್ತು ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಹಲವಾರು ಪರೀಕ್ಷೆಗಳನ್ನು ನಡೆಸಿದ ನಂತರ ವೈದ್ಯರು ರಾಖಿಯ ಗರ್ಭಾಶಯದಲ್ಲಿ ಗಡ್ಡೆಯನ್ನು ಪತ್ತೆ ಮಾಡಿದ್ದಾರೆ. ಇದು ಕ್ಯಾನ್ಸರ್ ಇರಬಹುದೆಂಬ ಶಂಕೆಗಳಿವೆ, ಆದರೆ ದೃಢೀಕರಿಸಲು ಹೆಚ್ಚಿನ ಪರೀಕ್ಷೆಯ ಫಲಿತಾಂಶಗಳು ಕಾಯುತ್ತಿವೆ. ರಾಖಿ ಶೀಘ್ರ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುವಂತೆ ರಿತೇಶ್ ಈ ಹಿಂದೆ ಕೋರಿದ್ದರು. ಇದರ ಹೊರತಾಗಿಯೂ ರಾಖಿ ಸಕತ್​ ಟ್ರೋಲ್​ಗೆ ಒಳಗಾಗಿದ್ದರು. ಈಗ ರಿತೇಶ್​ ಪುನಃ ಫೋಟೋ ತೋರಿಸುತ್ತಾ, ಇನ್ನಾದರೂ ಟ್ರೋಲ್​ ಮಾಡುವುದನ್ನು ನಿಲ್ಲಿಸಿ, ಡ್ರಾಮಾ ಎಂದು ಹೇಳಬೇಡಿ ಎಂದಿದ್ದರು.  

ಯಾರಿಗೆ ಸ್ವರ್ಗ, ಯಾರಿಗೆ ನರಕ? ಬಿಗ್‌​ಬಾಸ್​ ಸ್ಪರ್ಧಿಗಳ ಹಣೆಬರಹ ವೀಕ್ಷಕರ ಕೈಯಲ್ಲಿ! ಹೊಸ ಪ್ರೊಮೋ ರಿಲೀಸ್...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?
ಗಂಡ-ಹೆಂಡ್ತಿ ಮಲಗಿದ್ರೂ ಬೆಡ್​ರೂಂ ಯಾವಾಗ್ಲೂ ಯಾಕೆ ಓಪನ್​ ಇರ್ಬೇಕು ಗೊತ್ತಾ? ಸೀರಿಯಲ್​ ಪ್ರೇಮಿಗಳು ಉತ್ತರಿಸ್ತಾರೆ ಕೇಳಿ!