ಬಿಗ್‌ಬಾಸ್ ಎಂಟ್ರಿ ಪ್ರೋಮೋದಲ್ಲಿ ಕನಸು ಬಿಚ್ಚಿಟ್ಟ ಲಾಯರ್ ಜಗದೀಶ್; ಟ್ರೋಫಿ ಗೆಲ್ಲೋ ಆಸೆ ಇಲ್ವಾ ಎಂದ ನೆಟ್ಟಿಗರು!

By Mahmad Rafik  |  First Published Sep 29, 2024, 11:04 AM IST

ಬಿಗ್‌ಬಾಸ್ ತನ್ನ ಮನೆಗೆ ಬರುತ್ತಿರುವ ಸದಸ್ಯರನ್ನು ಪರಿಚಯ ಮಾಡಿಸುತ್ತಿದ್ದಾರೆ. ಇದೀಗ ಲಾಯರ್‌ ಜಗದೀಶ್ ಮತ್ತು ಗೋಲ್ಡ್ ಸುರೇಶ್ ಪರಿಚಯದ ಪ್ರೋಮೋಗಳು ಹೊರ ಬಂದಿವೆ.


ಬೆಂಗಳೂರು: ಈ ಬಾರಿಯ ಕನ್ನಡ ಬಿಗ್‌ಬಾಸ್ - 11ಕ್ಕೆ ಹೋಗುವ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಶನಿವಾರ ಪ್ರಸಾರವಾದ ರಾಜಾ-ರಾಣಿ ಶೋನಲ್ಲಿ ರಿವೀಲ್ ಮಾಡಲಾಗಿತ್ತು. ಇಂದು ಬೆಳಗ್ಗೆ ನಾಲ್ಕು ಅಭ್ಯರ್ಥಿಗಳ ಪ್ರೋಮೋ ಬಿಡುಗಡೆ ಮಾಡಲಾಗುತ್ತಿದೆ. ಸ್ಪರ್ಧಿಗಳಾದ ನಟಿ ಗೌತಮಿ ಜಾಧವ್, ಹಿಂದೂ ಸಂಘಟನೆ ನಾಯಕಿ ಚೈತ್ರಾ ಕುಂದಾಪುರ, ಲಾಯರ್ ಜಗದೀಶ್ ಮತ್ತು ಉತ್ತರ ಕರ್ನಾಟಕದ ಗೋಲ್ಡ್ ಸುರೇಶ್ ಪರಿಚಯದ ಪ್ರೋಮೋ ಹೊರಗೆ ಬಂದಿದೆ. ಬಿಗ್‌ಬಾಸ್ ಎಂಟ್ರಿ ಪ್ರೋಮೋದಲ್ಲಿ ಲಾಯರ್ ಜಗದೀಶ್ ತಮ್ಮ ಕನಸು ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ. ಪ್ರೋಮೋ ನೋಡಿದ ನೆಟ್ಟಿಗರು, ಹಾಗಾದ್ರೆ ಬಿಗ್‌ಬಾಸ್ ಟ್ರೋಫಿ ಗೆಲ್ಲುವುದು ನಿಮ್ಮ ಕನಸು ಅಲ್ಲವೇ ಎಂದು ಪ್ರಶ್ನಿಸಿ ಕಮೆಂಟ್ ಮಾಡುತ್ತಿದ್ದಾರೆ.

ಲಾಯರ್ ಜಗದೀಶ್ ಪ್ರೋಮೋ
ನಾನು ಅಡ್ವೇಕೇಟ್ ಜಗದೀಶ್. ಯಾರಿಗೆ ಧ್ವನಿ ಇರಲ್ಲವೋ ಅವರಿಗೆ ನ್ಯಾಯವನ್ನು ಹುಡುಕಿಕೊಡುವುದೇ ನನ್ನ ಕೆಲಸ. ನಾನೇ ಅಂದಂತಹ ರಾಜಕಾರಣಿ, ಪುಡಾರಿ, ದಾನವರಿಗೆ ಅವರ ಯೋಗ್ಯತೆಯನ್ನು ತೋರಿಸಿಕೊಟ್ಟಿದ್ದೀನಿ. ಒಂದು ದಿನ ನಾನು ಖಂಡಿತ ಸಿಎಂ ಆಗ್ತೀನಿ ಎಂದು ಹೇಳಿಕೊಂಡಿದ್ದಾರೆ. ಆದ್ರೆ ಲಾಯರ್ ಜಗದೀಶ್ ಸ್ವರ್ಗ ಸೇರ್ತಾರಾ ಅಥವಾ ನರಕಕ್ಕೆ ಹೋಗ್ತಾರಾ ಅನ್ನೋದು ಇಂದು ಸಂಜೆ ಗೊತ್ತಾಗಲಿದೆ. 

Tap to resize

Latest Videos

undefined

ಸತ್ಯ ಸ್ಟೈಲ್‌ನಲ್ಲಿ ಬಿಗ್‌ಬಾಸ್ ಮನೆಗೆ ಬಂದ ಕೋಟೆ ಕುಟುಂಬದ ಸೊಸೆ; ಸ್ವರ್ಗ ಸೇರ್ತಾರಾ? ನರಕಕ್ಕೆ ಹೋಗ್ತಾರಾ?

ಇನ್ನು ಒಂದು ದಿನ ಸಿಎಂ ಆಗ್ತೀನಿ ಅಂತ ಜಗದೀಶ್ ಹೇಳಿಕೊಂಡಿದ್ದು, ಹಾಗಾದ್ರೆ ಬಿಗ್‌ಬಾಸ್ ಟ್ರೋಫಿ ಗೆಲ್ಲುವುದು ನಿಮ್ಮ ಕನಸು ಅಲ್ಲವಾ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ವಕೀಲ ಜಗದೀಶ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ತಮ್ಮ ಪಂಚಿಂಗ್ ಡೈಲಾಗ್‌ಗಳಿಂದಲೇ ಸದ್ದು ಮಾಡುತ್ತಿದ್ದರು. ಇದೀಗ ಬಿಗ್‌ಬಾಸ್ ಮನೆಯಲ್ಲಿ ಜಗದೀಶ್ ಹೇಗೆ ಇರ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ

ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಲಾಯರ್ ಜಗದೀಶ್ ಎಲ್ಲಿಗೆ ಹೋಗ್ತಾರೆ? ಸ್ವರ್ಗಕ್ಕಾ ಅಥವಾ ನರಕಕ್ಕಾ?

ಬಿಗ್ ಬಾಸ್ ಕನ್ನಡ ಸೀಸನ್ 11 | GRAND OPENING ಇಂದು ಸಂಜೆ 6, ಪ್ರತಿರಾತ್ರಿ 9:30 pic.twitter.com/U54TXt84zZ

— Colors Kannada (@ColorsKannada)

ಗೋಲ್ಡ್ ಸುರೇಶ್ ಪ್ರೋಮೋ 
ಉತ್ತರ ಕರ್ನಾಟಕದ ಚಿನ್ನದ ವ್ಯಕ್ತಿ ಎಂದು ಫೇಮಸ್ ಆಗಿರುವ ಗೋಲ್ಡ ಸುರೇಶ್ ಸಹ ಕನ್ನಡ ಬಿಗ್‌ಬಾಸ್-11ರ ಸ್ಪರ್ಧಿಯಾಗಿದ್ದಾರೆ. 2 ಕೋಟಿ ಮೌಲ್ಯದ ಚಿನ್ನ ಧರಿಸುವ ಸುರೇಶ್ ತಮ್ಮನ್ನು ರೈತ ಎಂದು ಹೇಳಿಕೊಂಡಿದ್ದಾರೆ. ಒಬ್ಬ ವ್ಯಕ್ತಿಗೆ ಚಾಲೆಂಜ್ ಮಾಡಿದ್ದರಿಂದ ಕೋಟಿಗಟ್ಟಲೇ ಚಿನ್ನಾಭರಣ ಧರಿಸುತ್ತಿದ್ದೇನೆ. ಹೊರಗಡೆ ಇರೋ ಸಾವಿರಾರು ಜನರ ಮಧ್ಯೆ ಫೈಟ್ ಮಾಡಿ ಗೆದ್ದಿದ್ದೇನೆ. ಒಳಗಡೆ ಯಾಕೆ ನಾನು ಗೆಲ್ಲಲು ಆಗಲ್ಲ ಎಂಬ ಆತ್ಮವಿಶ್ವಾಸದಿಂದ ಗೋಲ್ಡ್ ಸುರೇಶ್ ಬಿಗ್‌ಬಾಸ್ ಮನೆಗೆ ಬರುತ್ತಿದ್ದಾರೆ.

ಬಿಗ್‌ಬಾಸ್ ಎಂಟ್ರಿ ಪ್ರೋಮೋದಲ್ಲಿಯೇ ಅಚ್ಚರಿ ವಿಷಯ ಹಂಚಿಕೊಂಡ ಚೈತ್ರಾ ಕುಂದಾಪುರ!

ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಗೋಲ್ಡ್ ಸುರೇಶ್ ಸ್ವರ್ಗಕ್ಕಾ ಅಥವಾ ನರಕಕ್ಕಾ?

ಬಿಗ್ ಬಾಸ್ ಕನ್ನಡ ಸೀಸನ್ 11 | GRAND OPENING ಇಂದು ಸಂಜೆ 6, ಪ್ರತಿರಾತ್ರಿ 9:30 pic.twitter.com/x6hXReaPo5

— Colors Kannada (@ColorsKannada)
click me!