ರಾಖಿ ಸಾವಂತ್ ಗಂಡ ಯಾರು ಎಲ್ಲಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ, ಆದರೆ ಈಗ ರಾಖಿ ನನ್ನ ಲೈಫ್‌ನಲ್ಲಿ ಗಂಡಸರಿಲ್ಲ, ನನಗೆ ಅಭಿನವ್ ಶುಕ್ಲಾನ ವೀರ್ಯ ಬೇಕು ಎಂದಿದ್ದಾರೆ
ರಾಖಿ ಸಾವಂತ್ ಹೇಳೋದೆಲ್ಲವೂ ವಿಚಿತ್ರವಾಗಿರುತ್ತೆ. ಇದೀಗ ಬಿಗ್‌ಬಾಸ್ ಮನೆಗೆ ಮರಳಿದ ಮೇಲಂತೂ ಸಿಕ್ಕಾಪಟ್ಟೆ ಸುದ್ದಿಯಾಗ್ತಿದ್ದಾರೆ. ಆಹಾರಕ್ಕಾಗಿ ಅಳೋದು, ಪ್ಯಾಂಟ್‌ನಲ್ಲಿ ಸುಸ್ಸೂ ಮಾಡೋದು.. ಒಂದಾ ಎರಡಾ.. ಬಿಗ್‌ಬಾಸ್ ಮನೆಯಲ್ಲಿ ರಾಖಿ ಭಾರೀ ಸೌಂಡ್ ಮಾಡುತ್ತಿದ್ದಾರೆ.
ಇದೀಗ ಇನ್ನೊಂದು ಬೋಲ್ಡ್ ಹೇಳಿಕೆ ಕೊಟ್ಟಿದ್ದಾರೆ ಈಕೆ. ರಾಖಿ ಪತಿ ರಿತೇಶ್ ಮತ್ತು ಅಭಿನವ್ ಶುಕ್ಲಾ ಮೇಲೆ ಲವ್ ಆಗಿರೋ ಬಗ್ಗೆ ಹೇಳಿದ್ದಾರೆ. ಅಭಿನವ್ ಶುಕ್ಲಾನನ್ನು ಆತನ ಪತ್ನಿ ಸಮೇತ ಸ್ವೀಕರಿಸೋಕೆ ಸಿದ್ಧ ಎಂದಿದ್ದಾರೆ ರಾಖಿ.
ಟಾಯ್ಲೆಟ್ ಬ್ಲಾಕ್: ಪ್ಯಾಂಟ್‌ನಲ್ಲೇ ಸುಸ್ಸೂ ಮಾಡಿದ ಹಾಟ್ ಹುಡುಗಿ
ಆಕೆ ಆತನ ಪತ್ನಿಯಾಗಿರಲಿ, ನಾನು ಆತನ ಮಿಸ್ಟ್ರೆಸ್ ಆಗಿರುತ್ತೇನೆ ಎಂದಿದ್ದಾರೆ ರಾಖಿ. ಸದ್ಯ ಶುಕ್ಲಾ ಪತ್ನಿ ರುಬಿನಾ ದಿಲಾಯಕ್ ರಿಯಾಕ್ಷನ್ ಹೇಗಿತ್ತು ಅನ್ನೋದನ್ನು ನೋಡಬೇಕು.
ನನ್ನ ಜೀವನದಲ್ಲಿ ಯಾವ ಗಂಡಸೂ ರಲಿಲ್ಲ. ಬಾಯ್‌ಫ್ರೆಂಡ್ ಅಭಿಷೇಕ್ ಇದ್ದ, ಅವನು ಹೋದ ಮೇಲೆ ಯಾರೂ ಬರಲಿಲ್ಲ. ನನಗೆ ಅಭಿನವ್ ಪ್ರೀತಿಯ ಸ್ವಲ್ಪ ಭಾಗವಾದರೂ ಬೇಕು ಎಂದಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಆಹಾರಕ್ಕಾಗಿ ಅಳ್ತಿದ್ದಾರೆ ಹಾಟ್ ಹುಡುಗಿ
ನಾನ್ಯಾವತ್ತೂ ಅಭಿನವ್ ಮತ್ತು ರುಬಿನಾ ಮಧ್ಯೆ ಬರಲ್ಲ, ನನಗೆ ಕೆನ್ನೆಗೊಂದು ಕಿಸ್, ಹಗ್, ಕಾಫಿ ಡೇಟ್ಸ್ ಸಿಕ್ಕಿದರೂ ಸಾಕು ಎಂದಿದ್ದಾರೆ. ನನ್ನ ಗಂಡನಂತೂ ಎಲ್ಲಿದ್ದಾನೆಂದೇ ಗೊತ್ತಿಲ್ಲ, ಆತನ ಬಗ್ಗೆ ಏನೂ ಮಾಹಿತಿ ಇಲ್ಲ ಎಂದಿದ್ದಾರೆ.
ನಾನು ನನ್ನ ಅಂಡಾಣುಗಳನ್ನು ಫ್ರೋಝ್ ಮಾಡಿದ್ದೇನೆ. ನನಗೆ ಅಭಿನವ್ ಶುಕ್ಲಾನ ವೀರ್ಯ ಬೇಕು. ನಾನು ರುಬೀನಾ ಮತ್ತು ಅವರ ಫ್ಯಾಮಿಲಿಯನ್ನು ಕೇಳುತ್ತೇನೆ. ಯಾವುದೇ ತಪ್ಪು ಮಾಡದೆ ನನ್ನ ಮಗುವನ್ನು ನಾನು ಪಡೆಯುತ್ತೇನೆ ಎಂದಿದ್ದಾರೆ.