ಡ್ಯಾನ್ಸಿಂಗ್ ಬ್ಯೂಟಿ ಬಾಲಿವುಡ್ ಬ್ಯೂಟಿ ರಾಖಿ ಸಾವಂತ್ ಆಹಾರಕ್ಕಾಗಿ ಅಂಗಲಾಚಿದ ಪ್ರೋಮೋ ವೈರಲ್ ಆದ ಬೆನ್ನಲ್ಲೇ ಇದೀಗ ನಟಿ ಇನ್ನೊಂದು ಅವಾಂತರ ಮಾಡಿದ್ದಾರೆ. ಬಿಗ್‌ಬಾಸ್ ಮನೆಗೆ ಗೆಸ್ಟ್ ಕಂಟೆಸ್ಟೆಂಟ್ ಆಗಿ ಬಂದ ರಾಖಿ ಪ್ಯಾಂಟ್‌ನಲ್ಲೇ ಸುಸ್ಸೂ ಮಾಡಿದ್ದಾರೆ.

ಬಿಗ್‌ಬಾಸ್‌ 14ನೇ ಸೀಸನ್‌ನಲ್ಲಿ ಸ್ಪರ್ಧಿಗಳನ್ನು ರೆಡ್ ಮತ್ತು ಯೆಲ್ಲೋ ಟೀಂ ಮಾಡಿ ರುಬೀನಾ ದಿಲಾಯಕ್ ಹಾಗೂ ರಾಹುಲ್ ವೈದ್ಯರನ್ನು ಟೀಂ ಲೀಡರ್ಸ್ ಮಾಡಲಾಗಿದೆ. ಸ್ಪರ್ಧಿ ಅರ್ಶಿ ಖಾನ್ ಸ್ಮೋಕಿಂಗ್ ರೂಂ ಸಮೀಪದ ಟಾಯ್ಲೆಟ್‌ ಒಳಗೆ ಹೋಗಿ ಹೊರಗೆ ಬರದೆ ಹಠ ಮಾಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಆಹಾರಕ್ಕಾಗಿ ಅಳ್ತಿದ್ದಾರೆ ಹಾಟ್ ಹುಡುಗಿ

ಸುಸ್ಸೂ ತಡೆಯೋಕಾದರೆ ರಾಖಿ ಸಾವಂತ್ ಪ್ಯಾಂಡ್‌ನಲ್ಲೇ ಮೂತ್ರ ಮಾಡಿದ್ದಾರೆ. ಕೂಡಲೇ ತಂಡದ ನಾಯಕಿ ರುಬೀನಾಳನ್ನು ಕರೆದು, ನಾನು ಪ್ಯಾಂಟ್‌ನಲ್ಲೇ ಸುಸ್ಸೂ ಮಾಡಿದೆ, ಯಾರಿಗೂ ಹೇಳಬೇಡಿ ಎಂದಿದ್ದಾರೆ.

ನಂತರ ರುಬೀನಾ ರಾಖಿಯನ್ನು ಮೆಲ್ಲಗೆ ಮನೆಯೊಳಗೆ ಕಳುಹಿಸಿ ಒಳಉಡುಪು ಬದಲಾಯಿಸಿಕೊಂಡು ಬರುವಂತೆ ಹೇಳಿದ್ದಾರೆ. ಈ ರೀತಿ ಮಾಡುವುದರಿಂದ ತಮಗೆ ಸಮಸ್ಯೆಯಾಗಬಹುದೆಂದು ಅರಿತೂ ರುಬೀನಾ ರಾಖಿಯ ವೈಯಕ್ತಿಕ ಹಿತ ದೃಷ್ಟಿಯಿಂದ ನೆರವಾಗಿದ್ದಾರೆ.