
ʼಬಿಗ್ ಬಾಸ್ʼ ಮನೆಯಲ್ಲಿ ರಜತ್ ಹಾಗೂ ಚೈತ್ರಾ ಕುಂದಾಪುರ ಅವರು ʼಕೇಡಿ ಜೋಡಿʼ ಎಂಬ ಬಿರುದು ಪಡೆದಿದ್ದಾರೆ. ರಜತ್ ಅವರು ಚೈತ್ರಾಗೆ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡಿದ್ದರು. ಚೈತ್ರಾ ಆಲೋಚನೆಗಳು, ನಡೆ ರಜತ್‌ಗೆ ಇಷ್ಟ ಆಗ್ತಿರಲಿಲ್ಲ. ಹೀಗಾಗಿ ಇವರು ಅವಕಾಶ ಸಿಕ್ಕಿದಾಗೆಲ್ಲ ಚೈತ್ರಾ ಕಾಲೆಳೆಯುತ್ತಿದ್ದರು, ಜಗಳ ಆಡುತ್ತಿದ್ದರು. ಬಾಸ್ ಬಾಸ್ ಅಂತ ಕರೆದು ತಮಗಿಂತ ಮೊದಲೇ ಚೈತ್ರಾರನ್ನು ಅವರು ಹೊರಗಡೆ ಕಳಿಸಿದ್ದರು. ಇವರಿಬ್ಬರ ಜಗಳ ಅನೇಕರಿಗೆ ಭರ್ಜರಿ ಮನರಂಜನೆ ಬಾಡೂಟ ಕೊಟ್ಟಿತ್ತು. ಈಗ ಈ ಜಗಳ ಮತ್ತೆ ಮುಂದುವರೆಯುವ ಹಾಗೆ ಕಾಣ್ತಿದೆ.
ಈ ಶೋನಲ್ಲಿ ಯಾರು ಯಾರಿದ್ದಾರೆ?
ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ Boys v/s Girls ರಿಯಾಲಿಟಿ ಶೋ ಪ್ರಸಾರ ಆಗುತ್ತಿದೆ. ಈ ಶೋನಲ್ಲಿ ರಜತ್ ಜೊತೆಗೆ ಚೈತ್ರಾ ಕುಂದಾಪುರ ಕೂಡ ಸ್ಪರ್ಧಿಯಂತೆ. ಹೊರಗಡೆ ಸಮಾಜದಲ್ಲಿ ಭಾಷಣಗಳಲ್ಲಿ ಮುಳುಗಿ ಹೋಗಿದ್ದ ಚೈತ್ರಾ ʼಬಿಗ್ ಬಾಸ್ʼ ಮನೆಗೆ ಬಂದಿದ್ದೇ ದೊಡ್ಡ ಅಚ್ಚರಿ. ಈಗ ಅವರು ಇನ್ನೊಂದು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಈ ಶೋಗೆ ಅನುಪಮಾ ಗೌಡ ಅವರು ನಿರೂಪಕಿ. ಎರಡು ತಂಡಗಳ ಮಧ್ಯೆ ಆಟ ನಡೆಯಲಿದೆ. ವಿನಯ್ ಗೌಡ, ಶುಭಾ ಪೂಂಜ ಅವರು ಈ ಟೀಂನ ಲೀಡರ್‌ಗಳು. ತಾರಾ, ಶ್ರುತಿ ಅವರು ನಿರ್ಣಾಯಕರು. ಈ ಶೋ ಹೇಗೆ ಮೂಡಿ ಬರಲಿದೆ ಎಂಬ ಕುತೂಹಲ ಇದೆ.
Bigg Boss ಮುಗಿದ್ಮೇಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟ ಮೋಕ್ಷಿತಾ ಪೈ; ಸುಂದರ ಫೋಟೋಗಳಿವು!
ಧನರಾಜ್ ಆಚಾರ್, ಐಶ್ವರ್ಯಾ ಸಿಂಧೋಗಿ, ಐಶ್ವರ್ಯಾ ಸಾಲೀಮಠ, ಸ್ಫೂರ್ತಿ ಗೌಡ, ಚಂದನಾ ಗೌಡ, ನಿವೇದಿತಾ ಗೌಡ, ಕೋಳಿ ರಮ್ಯಾ, ಪ್ರಿಯಾ ಸವದಿ, ಸ್ನೇಹಿತ್ ಗೌಡ, ಸೂರಜ್, ಮಂಜು ಪಾವಗಡ ಮುಂತಾದವರು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ.
ಶೋನಲ್ಲಿ ಮತ್ತೆ ಜಗಳ ಶುರು!
ಅನುಪಮಾ ಗೌಡ ಅವರು ಚೈತ್ರಾ ಕುಂದಾಪುರ ಕೂಡ ಸ್ಪರ್ಧಿ ಅಂತ ಘೋಷಣೆ ಮಾಡಿದಕೂಡಲೇ ರಜತ್ ಅವರು “ಅಯ್ಯೋ ಏನ್ ಟ್ವಿಸ್ಟ್ ಗುರು!” ಎಂದು ಹೇಳಿದ್ದಾರೆ. ಆಗ ಅನುಪಮಾ ಗೌಡ ಅವರು “ಈಗ ಆಟ ಶುರು” ಎಂದು ಹೇಳಿದ್ದಾರೆ.
ಸುದೀಪ್ ಗಿಫ್ಟ್ ಕೊಟ್ಟ ಜಾಕೆಟ್ ಬೆಲೆ ಕೇಳಿ ಶಾಕ್ ಆದ ಬಿಗ್ ಬಾಸ್ ರಜತ್ ಕಿಶನ್!
ರಜತ್”: ದೊಡ್ಮನೆಯಲ್ಲಿ ಆಟ ಆಡಿಸಿದೀನಿ, ಇಲ್ಲಿ ಬಿಡ್ತೀನಾ? ಗೊತ್ತಲ್ವಾ ಡಾರ್ಲಿಂಗ್?
ಚೈತ್ರಾ ಕುಂದಾಪುರ: ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲವಂತೆ. ನಿಮ್ಮನ್ನು ನೋಡಿದ್ರೆ ಎಲ್ಲರಿಗೂ ಗೊತ್ತಾಗ್ತಿದೆ.
ಚಂದನಾ ಗೌಡ: ಅಲ್ಲಿ ಅವರೊಬ್ಬರೇ ಇದ್ರು, ಇಲ್ಲಿ ಎಲ್ಲರೂ ಇದೀವಿ
ರಜತ್: ಗಜಪಡೆ ನೋಡಿದ್ರು ಈ ಮಾತು ಹೇಳ್ತಿದೀರಾ? ಏನ್ ಗುರು ಇವರು? ನಿಮಗೆ ಜಾಸ್ತಿ ಅನಿಸಲ್ವಾ? ಅಲ್ಲಿರೋ ಒಬ್ಬೊಬ್ಬರು ನಿಮ್ಮನ್ನು ಬಗೆದು ತಿಂದುಕೊಳ್ತೀವಿ
ಶ್ರುತಿ: ಆ ಗೂಳಿಗೆ ಮೂಗುದಾರ ಹಾಕೋಕೆ ಚೈತ್ರಾ ಬಂದಿದ್ದಾರೆ
ರಜತ್: ಹೇಳಿದಷ್ಟು ಕೇಳಿದ್ದೇವೆ, ನೋಡಿದಷ್ಟು ನೋಡಿದ್ದೇವೆ, ಆಚೆ ಕಳಿಸುವಷ್ಟು ಎಲ್ಲ ಕಳಿಸಿದ್ದೇವೆ, ಇಲ್ಲಿಂದಲೂ ಕಳಿಸುತ್ತೇವೆ, ಹೋಗ್ ನಡಿ
ಚೈತ್ರಾ ಕುಂದಾಪುರ: ಆಯ್ತಪಾ ಶಿಷ್ಯ
ʼಬಿಗ್ ಬಾಸ್ʼ ಮನೆಯಲ್ಲಿ ಬಾಸ್, ಶಿಷ್ಯ ಅಂತೆಲ್ಲ ಹೇಳಿಕೊಂಡು ರಜತ್, ಚೈತ್ರಾ ಕುಂದಾಪುರ ಅವರು ಸಿಕ್ಕಾಪಟ್ಟೆ ಜಗಳ ಆಡಿದ್ದರು. ಈ ಜಗಳ ಮತ್ತೆ ಮುಂದುವರೆಯುವ ಹಾಗೆ ಕಾಣ್ತಿದೆ. ಈಗಾಗಲೇ ಹುಡುಗ, ಹುಡುಗಿ ಎಂದು ಎರಡು ತಂಡಗಳು ಸೃಷ್ಟಿ ಆಗಿದ್ದು, ಕೆಲ ರಿಯಾಲಿಟಿ ಶೋ ಬಂದಿದೆ. ಈಗ ಈ ರಿಯಾಲಿಟಿ ಶೋ ಹೇಗೆ ಮೂಡಿ ಬರಲಿದೆ ಎಂಬ ಕುತೂಹಲ ಕಾಡ್ತಿದೆ. ನಿಮ್ಮ ಪ್ರಕಾರ ಶೋ ಹೇಗಿರಲಿದೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.