ನಟ ಶಿವರಾಜ್‌ಕುಮಾರ್ ಅವರು ಶಾಸಕ ಭೀಮಣ್ಣ ನಾಯ್ಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾದ ಪೋಸ್ಟ್ ಹಂಚಿಕೊಂಡಿದ್ದಾರೆ. ಏನದು?
ನಟ ಶಿವರಾಜ್‌ಕುಮಾರ್ ಅವರು ಅಮೆರಿಕದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದು ಆಗಮಿಸಿದ್ದಾರೆ. ಶಿವಣ್ಣನ ಆಗಮನಕ್ಕೆ ಇಡೀ ಕರುನಾಡು ಕಾಯುತ್ತಿತ್ತು. ವಯಸ್ಸು 60 ದಾಟಿದರೂ 20ರಂತೆ ಎನರ್ಜಿ ಹೊಂದಿರುವ ಶಿವರಾಜ್‌ಕುಮಾರ್ ನಿಮ್ಮ ಎನರ್ಜಿ ಸಿಕ್ರೇಟ್ ಏನು ಅಂತ ಅನೇಕರು ಪ್ರಶ್ನೆ ಮಾಡುತ್ತಿರುತ್ತಾರೆ. ಹೀಗಿರುವಾಗ ದೊಡ್ಮನೆಯ ಕುಡಿಗೆ ಕ್ಯಾನ್ಸರ್ ಕಾಯಿಲೆ ತಗುಲಿತ್ತು. ಆದರೆ ಶಿವರಾಜ್‌ಕುಮಾರ್ ಎಲ್ಲರ ಪ್ರೀತಿಯಿಂದ ಈ ಕಾಯಿಲೆ ಗೆದ್ದು ಬಂದಿದ್ದಾರೆ. ತಿಂಗಳುಗಟ್ಟಲೇ ಅವರು ಅಮೆರಿಕದಲ್ಲಿದ್ದಾಗ ಪತ್ನಿ ಗೀತಾ, ಮಗಳು ನಿವೇದಿತಾ, ಮಧು ಬಂಗಾರಪ್ಪ ಮುಂತಾದವರು ಜೊತೆಗಿದ್ದು ಸಾಥ್ ನೀಡಿದ್ದರು. ಅವರ ಜೊತೆ ಶಾಸಕ ಭೀಮಣ್ಣ ಟಿ ನಾಯ್ಕ್ ಕೂಡ ಇದ್ದರಂತೆ. ಈ ಬಗ್ಗೆ ಗೀತಾ ಶಿವರಾಜ್‌ಕುಮಾರ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಶಿವರಾಜ್‌ಕುಮಾರ್ ಪೋಸ್ಟ್ ಹೀಗಿದೆ..!
ಅಲ್ಲಿಯೂ ಸೈ
ಇಲ್ಲಿಯೂ ಸೈ
ನಿಮ್ಮೆಲ್ಲರ ಪ್ರೀತಿಯ ಭೀಮಣ್ಣ ನನಗೆ ಭೀಮ್ ಮಾಮ. ಅಂದಿನಿಂದ ಇಲ್ಲಿಯವರೆಗೆ ಸ್ವಲ್ಪ ಕೂಡ ಬದಲಾಗದ ವ್ಯಕ್ತಿತ್ವ. ಮಾತು, ಕೋಪ ತುಂಬಾ ಕಡಿಮೆ, ಆದರೆ ಕೆಲಸ ಎಲ್ಲರಿಗಿಂತ ಜಾಸ್ತಿ. ಯಾವತ್ತು ಕಡಿಮೆ ಆಗದ ಪ್ರೀತಿ ವಿಶ್ವಾಸ. ಅವರಿಗೆ ಕುಟುಂಬದವರಾಗಲಿ, ಊರಿನ ಜನರಾಗಲಿ ಎಲ್ಲರು ಒಂದೇ.
ಮಾಮ ಅಮೆರಿಕಾದ ಮಿಯಾಮಿ ಅಲ್ಲಿ ಶಿವಣ್ಣ ಅವರ ಟ್ರೀಟ್ಮೆಂಟ್ ಸಮಯದಲ್ಲಿ ಎರಡು ವಾರ ನಮ್ಮ ಜೊತೆಗೆ ಇದ್ದರು. ನನ್ನ ಕೆಲಸಗಳಿಗೆ ಸಹಾಯ, ಶಿವಣ್ಣ ಜೊತೆಗೆ ವಾಕಿಂಗ್, ಕಾಫಿ, ಹಾಸ್ಪಿಟಲ್ ಭೇಟಿಗೆ ಜೊತೆಗೆ ಇರುತ್ತಿದ್ದರು. ಕತ್ತಲಾದಾಗ ಅವರ ಮೊಬೈಲ್ ಫೋನಿಗೆ ಮುಂಜಾವು. ಅವರ ಕ್ಷೇತ್ರದ ಜನರ ಕರೆಗಳು ಬರುತ್ತಿದ್ದವು. ಎಲ್ಲರ ಜೊತೆ ಸ್ವಲ್ಪವೂ ಬೇಜಾರಿಲ್ಲದೆ ಮಾತನಾಡುತಿದ್ದರು. ದೂರದ ಊರಿನಲ್ಲಿದರು, ಕ್ಷೇತ್ರ ಹಾಗು ಕ್ಷೇತ್ರದ ಜವಾಬ್ದಾರಿಯನ್ನು ಎಂದಿಗೂ ನಿರ್ಲಕ್ಷ್ಯ ಮಾಡಲಿಲ್ಲ.
ನಮ್ಮ ಪ್ರೀತಿಯ ಭೀಮ್ ಮಾಮ, ನಿಮಗೆ ಶಾಸಕರು. ನಮ್ಮ ಕುಟುಂಬದ ಸುಖ ದುಃಖ ಎರಡರಲ್ಲೂ ಸದಾ ಜೊತೆಗೆ ನಿಂತವರು. ನಿಮ್ಮ ಶಾಸಕರಾಗಿ ಅವರು ಸದಾ ನಿಮ್ಮ ಜೊತೆಯಲ್ಲಿ ನಿಂತಿರಲಿ, ಹಾಗು ಅವರ ಮತ್ತು ನಿಮ್ಮ ಮುಗುಳ್ನಗೆ ಎಂದಿಗೂ ಮಾಸದಿರಲಿ ಎಂದು ಎಂದು ದೇವರಲ್ಲಿ ನಾನು ಹಾಗು ಶಿವರಾಜಕುಮಾರ್ ಅವರು ಕೇಳಿಕೊಳ್ಳುತೇವೆ.
ಇಂತಿ,
ಗೀತಾ ಶಿವರಾಜಕುಮಾರ್ ಹಾಗು ಶಿವರಾಜಕುಮಾರ್
ನಾನು ಸಿನಿಮಾ ಶೂಟಿಂಗ್ ಮಾಡೋದು ಬೇಡ್ವಾ? ಶಿವಣ್ಣ ಕೋಪಕ್ಕೆ 'ಗಡಗಡ' ಆಗೋದ್ರಾ?
ಶಿವರಾಜ್‌ಕುಮಾರ್ ಅವರು ಅಮೆರಿಕದಿಂದ ಬೆಂಗಳೂರಿಗೆ ಬರುತ್ತಿದ್ದಂತೆ ಅವರಿಗೆ ಅದ್ದೂರಿಯಾಗಿ ಸ್ವಾಗತ ಮಾಡಲಾಯ್ತು. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಅವರ ನಿವಾಸದಲ್ಲಿ ಗೇಟ್‌ನಿಂದ ಬಾಗಿಲಿನವರೆಗೆ ನೆಲದ ಮೇಲೆ ಹೂವಿನ ಅಲಂಕಾರ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಚಿತ್ರರಂಗದ ಗಣ್ಯರು ಶಿವಣ್ಣನವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ. ಅಂದಹಾಗೆ ಜೀ ಕನ್ನಡದ ʼಸರಿಗಮಪʼ ಶೋನಲ್ಲಿ ಶಿವರಾಜ್‌ಕುಮಾರ್ ಅವರು ಭಾಗಿಯಾಗಿದ್ದಾರೆ. “ಸರ್ಜರಿ ಟೈಮ್‌ನಲ್ಲಿ ನನಗೆ ಭಯ ಇತ್ತು. ನಿಮ್ಮನ್ನೆಲ್ಲ ನಾನು ನೋಡ್ತೀನೋ ಇಲ್ಲವೋ ಅಂತ ಭಯ ಇತ್ತು. ಎಲ್ಲರ ಹಾರೈಕೆಯಿಂದ ನಾನು ಇಂದು ಇಲ್ಲಿದ್ದೇನೆ. ನನಗಾಗಿ ಗೀತಾ ತುಂಬ ತ್ಯಾಗ ಮಾಡಿದ್ದಾಳೆ. ಅವಳಿಗೆ ಎಷ್ಟು ಥ್ಯಾಂಕ್ಸ್ ಹೇಳಬೇಕು ಗೊತ್ತಿಲ್ಲ” ಎಂದು ಶಿವರಾಜ್‌ಕುಮಾರ್ ಹೇಳಿದ್ದರು.
ಗೀತಕ್ಕ..: ಆಪರೇಷನ್ ನಂತ್ರ ಎಲ್ಲಾ ಸರಿಹೋಗಿದೆ ಅಂತ ಹೇಳಿ ಮತ್ತೆ ಹಾರ್ಟ್ ಸಮಸ್ಯೆ ಇದೆ ಅಂದ್ರು!
ಶಾಸಕ ಭೀಮಣ್ಣ ನಾಯ್ಕ್
ಅಂದಹಾಗೆ ಭೀಮಣ್ಣ ನಾಯ್ಕ್ ಅವರು ಶಿರಸಿಯ ಮಳಲಗಾಂವದವರು. ಬಂಗಾರಪ್ಪ ಹಾಗೂ ಭೀಮಣ್ಣ ಸಂಬಂಧಿಕರು. ಬೀಮಣ್ಣ ಈ ಬಾರಿ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾಗಿದ್ದಾರೆ. ಭೀಮಣ್ಣ ಮನೆಗೆ ಶಿವರಾಜ್‌ಕುಮಾರ್ ಕುಟುಂಬಸ್ಥರು ಆಗಾಗ ಆಗಮಿಸುವುದುಂಟು. ಇನ್ನು ಶಿವರಾಜ್‌ಕುಮಾರ್ ಕುಟುಂಬದ ಕಷ್ಟ-ಸುಖಗಳಲ್ಲಿ ಭೀಮಣ್ಣ ಅವರ ನೆರವು ಇದ್ದೇ ಇರುತ್ತದೆ.