Bigg Boss ಮುಗಿದ್ಮೇಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟ ಮೋಕ್ಷಿತಾ ಪೈ; ಸುಂದರ ಫೋಟೋಗಳಿವು!

‘ಬಿಗ್‌ ಬಾಸ್‌ ಕನ್ನಡ 11’ ಶೋ ಸ್ಪರ್ಧಿ ಮೋಕ್ಷಿತಾ ಪೈ ಅವರು ಮೈಸೂರಿನ ಚಾಮುಂಡಿ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಸುಂದರ ಫೋಟೋಗಳು ಇಲ್ಲಿವೆ..! 
 

bigg boss kannada 11 actress mokshitha pai visit mysuru chamundi temple

‘ಬಿಗ್‌ ಬಾಸ್‌ ಕನ್ನಡ 11’ ಶೋ ಅಂತ್ಯವಾಗಿದೆ. ಗ್ರ್ಯಾಂಡ್‌ ಫಿನಾಲೆ ಸ್ಪರ್ಧಿಗಳು ಸಂದರ್ಶನಗಳನ್ನು ಕೊಡೋದರಲ್ಲಿ ಬ್ಯುಸಿಯಾಗಿದ್ದಾರೆ, ತ್ರಿವಿಕ್ರಮ್‌, ಹನುಮಂತ ಅವರು ಈಗಾಗಲೇ ಬೇರೆ ಬೇರೆ ಊರುಗಳಿಗೆ ಭೇಟಿ ಕೊಡುತ್ತಿದ್ದಾರೆ. ಈಗ ಮೋಕ್ಷಿತಾ ಪೈ ಅವರು ಚಾಮುಂಡಿ ದೇವರ ಆಶೀರ್ವಾದ ಪಡೆದಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಮೋಕ್ಷಿತಾ ಪೈ
ಹೌದು, ಮೋಕ್ಷಿತಾ ಪೈ ಅವರು ʼಪಾರುʼ ಧಾರಾವಾಹಿ ಖ್ಯಾತಿಯ ಸಹನಟ ಗಣಿ ಜೊತೆಗೆ ಮೈಸೂರಿನ ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Latest Videos

BBK 11: ಮೋಕ್ಷಿತಾ ಪೈ ಯಾಕೆ ಹೆಸರು ಬದಲಿಸಿಕೊಂಡ್ರು? ಐಶ್ವರ್ಯಾ ಹೆಸರಿಗೆ ಏನಾಗಿತ್ತು?

ʼಬಿಗ್‌ ಬಾಸ್‌ʼ ವೀಕ್ಷಕರ ಮನಸ್ಸು ಗೆದ್ದರು! 
ಬಿಗ್‌ ಬಾಸ್‌ ಮನೆಯಲ್ಲಿ ಮೋಕ್ಷಿತಾ ಪೈ ಅವರ ಆಟವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಸ್ವಾಭಿಮಾನಿಯಾಗಿ ಮೋಕ್ಷಿತಾ ಪೈ ಅವರು ಸಾಕಷ್ಟು ವಿಷಯದಲ್ಲಿ ಪ್ರಾಮಾಣಿಕತೆ ಮೆರೆದಿದ್ದರು. ದೊಡ್ಮನೆಯಲ್ಲಿ ಇರಬೇಕು ಅಂತ ಅವರು ಡ್ರಾಮಾ ಮಾಡಲಿಲ್ಲ, ಅಷ್ಟಾಗಿ ಜಗಳವನ್ನು ಆಡಲಿಲ್ಲ. ತುಂಬ ಸರಳವಾಗಿದ್ದ ಮೋಕ್ಷಿತಾ ಅವರು ಇದೇ ನನ್ನ ವ್ಯಕ್ತಿತ್ವ, ನಾನು ಹೀಗೆ ಇರೋದು ಅಂತ ಸಾಬೀತುಪಡಿಸಿದ್ದರು. 

 

 
 
 
 
 
 
 
 
 
 
 
 
 
 
 

A post shared by Mokshitha Pai (@mokshitha22)

ಏನಿದು ಪ್ರಕರಣ?
ಮೋಕ್ಷಿತಾ ಪೈ ಅವರು ಬಿಗ್‌ ಬಾಸ್‌ ಮನೆಯೊಳಗಡೆ ಹೋದಾಗ ಅವರ ಈ ಹಿಂದಿನ ವಿಚಾರವೊಂದು ಟ್ರೋಲ್‌ ಆಗಿತ್ತು. ಐಶ್ವರ್ಯಾ ಪೈ ಆಗಿದ್ದ ಅವರು ಟ್ಯೂಷನ್‌ ಹೇಳಿಕೊಡುತ್ತಿದ್ದರು. ಆ ವೇಳೆ ಅವರು ಪ್ರಿಯಕರನ ಜೊತೆ ಸೇರಿ ವಿದ್ಯಾರ್ಥಿನಿಯೋರ್ವರನ್ನು ಕಿಡ್ನ್ಯಾಪ್‌ ಮಾಡಿದ್ದರು. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಮೇಲೆ ಈ ಪ್ರಕರಣ ಮುಚ್ಚಿ ಹೋಗಿತ್ತು. ಐಶ್ವರ್ಯಾ ಅವರು ನಿರಪರಾಧಿ ಎಂಬ ಸೆರ್ಟಿಫಿಕೇಟ್‌ ಸಿಕ್ಕಿತ್ತು. ಇದು 2014ರಲ್ಲಿ ನಡೆದಿತ್ತು. ಇದಾದ ಬಳಿಕ 2019ರಲ್ಲಿ ಮೋಕ್ಷಿತಾ ಪೈ ಅವರು ʼಪಾರುʼ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು.

ಯಾಕೆ ಹೆಸರು ಬದಲಾಯಿಸಿಕೊಂಡರು? 
ʼಪಾರುʼ ಧಾರಾವಾಹಿಯಲ್ಲಿ ನಟಿಸುವಾಗ ಐಶ್ವರ್ಯಾ ಅವರು ಹೆಸರು ಬದಲಾಯಿಸಿಕೊಂಡರು. ಆರಂಭದಲ್ಲಿ ಅವರಿಗೆ ನ್ಯುಮರಾಲಜಿ ಪ್ರಕಾರ ಹೆಸರು ಇಟ್ಟಿರಲಿಲ್ಲವಂತೆ. ಹೀಗಾಗಿ ಅವರಿಗೆ ನ್ಯುಮರಾಲಜಿ ಪ್ರಕಾರ ಮೋಕ್ಷಿತಾ ಪೈ ಎಂದು ಹೆಸರಿಟ್ಟಿದ್ದರು. ಅಷ್ಟೇ ಅಲ್ಲದೆ ಮರುನಾಮಕರಣ ಮಾಡಿದ್ದರು. ʼಪಾರುʼ ಧಾರಾವಾಹಿಯಲ್ಲಿ ನಟಿಸಬೇಕು, ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಅಂತಲೇ ಮೋಕ್ಷಿತಾ ಪೈ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಈ ಬಗ್ಗೆ ಅವರೇ ಖಾಸಗಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ನಿರಪರಾಧಿ ಅಂತ ಲೆಟರ್‌ ಇದೆ ಜನರಿಗೆ ತಲೆ ಕೆಡಿಸಿಕೊಳ್ಳಲ್ಲ; ಕಿಡ್ನಾಪ್ ಕೇಸ್‌ ಬಗ್ಗೆ ಮೌನ ಮುರಿದ ಮೋಕ್ಷಿತಾ

ʼಬಿಗ್‌ ಬಾಸ್ʼ‌ ಆಟ ಹೇಗಿತ್ತು?
ಮೋಕ್ಷಿತಾ ಪೈ ಅವರು ಉಗ್ರಂ ಮಂಜು, ಗೌತಮಿ ಜಾಧವ್‌, ಶಿಶಿರ್‌ ಶಾಸ್ತ್ರೀ ಜೊತೆ ಜೊತೆ ಸ್ನೇಹದಿಂದ ಇದ್ದರು. ಆಮೇಲೆ ಮಂಜು, ಗೌತಮ್‌ರಿಂದ ಮೋಕ್ಷಿತಾ ಪೈ ದೂರ ಆಗುವ ಹಾಗೆ ಆಯ್ತು. ಇನ್ನೊಂದು ಕಡೆ ಮೋಕ್ಷಿತಾ ಪೈ ಹಾಗೂ ತ್ರಿವಿಕ್ರಮ್‌ ಜೊತೆ ಮನಸ್ತಾಪ ಆಗಿತ್ತು, ಇವರಿಬ್ಬರು ಜಗಳ ಆಡಿಕೊಂಡಿದ್ದರು. ತ್ರಿವಿಕ್ರಮ್‌ಗೆ ಗೋಮುಖ ವ್ಯಾಘ್ರ ಎಂದು ಮೋಕ್ಷಿತಾ ಎಂದು ಕರೆದಿದ್ದರು. ಇದಕ್ಕೆ ತ್ರಿವಿಕ್ರಮ್‌ ತುಂಬ ಸಿಟ್ಟಾಗಿದ್ದರು. ಇನ್ನು ತ್ರಿವಿಕ್ರಮ್‌, ಮೋಕ್ಷಿತಾ ಪೈ ಅವರು ಒಳಗಡೆ ಸಿಕ್ಕಾಪಟ್ಟೆ ಜಗಳ ಆಡುತ್ತಿದ್ದರು, ಹೊರಗಡೆ ಇವರಿಬ್ಬರು ಚೆನ್ನಾಗಿದ್ದಾರೆ, ಜೋಡಿ ಚೆನ್ನಾಗಿದೆ ಎಂದು ವೀಕ್ಷಕರು ಹೇಳುತ್ತಿದ್ದರು. ಅಷ್ಟೇ ಅಲ್ಲದೆ ಇವರಿಬ್ಬರಿಗೆ ʼತ್ರಿಮೋಕ್ಷಿʼ ಎಂದು ಹೆಸರಿಟ್ಟು ಹ್ಯಾಶ್‌ಟ್ಯಾಗ್‌ ಕ್ರಿಯೇಟ್‌ ಮಾಡಿದ್ದರು. 

ಮೋಕ್ಷಿತಾ ಪೈ ಅವರು “ನಾನು ತ್ರಿವಿಕ್ರಮ್‌ ಅವರಿಂದ ತುಂಬ ದೂರ ಇದ್ದೆ. ನನಗೆ ಯಾರ ಮೇಲೂ ದ್ವೇಷ ಇಲ್ಲ” ಎಂದು ಹೇಳಿದ್ದಾರೆ. ಅಂದಹಾಗೆ ಮೋಕ್ಷಿತಾ ಅವರ ನಟನೆಯ ಸಿನಿಮಾವೊಂದು ರಿಲೀಸ್‌ ಆಗಬೇಕಿದೆಯಂತೆ. 
 

vuukle one pixel image
click me!
vuukle one pixel image vuukle one pixel image