ಪತಿ ಮೊಬೈಲ್ ಚೆಕ್ ಮಾಡಿದಕ್ಕೆ ಪತ್ನಿ ಮೊಬೈಲ್ ಚೆಕ್ ಮಾಡಿದ ಮುರುಗಾ. ನಿಜ್ವಾಗ್ಲೂ ಇಶಿತಾಗೆ ಹುಡುಗರು ಫ್ರೆಂಡ್ಸ್ ಇಲ್ವಾ?
ಅಗ್ನಿಸಾಕ್ಷಿ (Agnishakshi) ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡ ನಟಿ ಇಶಿತಾ (Ishitha) ಹಾಗೂ ಡ್ಯಾನ್ಸ್ ಮಾಸ್ಟರ್ ಮುರುಗಾನಂದ್ (Murugananda) 'ರಾಜಾ ರಾಣಿ' (Raja Rani) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಅಲ್ಲಿ ಎರಡನೇ ಸ್ಥಾನ ಪಡೆದುಕೊಂಡ ನಂತರ ಇಬ್ಬರಿಗೂ ಫ್ಯಾನ್ಸ್ ಹೆಚ್ಚಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಆಗಿರುವ ಈ ಜೋಡಿ ಕೆಲವು ತಿಂಗಳ ಹಿಂದೆ ಯುಟ್ಯೂಬ್ ಚಾನೆಲ್ (Youtube Channel) ಆರಂಭಿಸಿದ್ದಾರೆ. ಕಪಲ್ ಯೋಗ (Couple Yoga), ಲವ್ ಸ್ಟೋರಿ, ಬ್ಯಾಗಲ್ಲಿ ಏನಿದೆ (What's in my bag) ಎಂದೆಲ್ಲಾ ಶೇರ್ ಮಾಡಿಕೊಂಡಿರುವ ಈ ಕಪಲ್ ಸೆಲೆಬ್ರಿಟಿ, ಇದೀಗ ಮತ್ತೊಬ್ಬರ ಫೋನ್ ಚೆಕ್ ಮಾಡಿದ್ದಾರೆ. ಈಗಿನ ಜನರೇಷನ್‌ನಲ್ಲಿ ನಿನ್ನ ಫೋನ್ ನಾನು ಮುಟ್ಟೋಲ್ಲ. ನನ್ನ ಫೋನ್ ನೀನು ಮುಟ್ಟಬೇಡ, ಎನ್ನುವ ಪಾಲಿಸಿ ಫಾಲೋ ಮಾಡುತ್ತಾರೆ, ಈ ಕಪಲ್ ಕೂಡ ಅದೇ ಫಾಲೋ ಮಾಡುತ್ತಿದ್ದು, ಈಗ ಆ ರೂಲ್ ಬ್ರೇಕ್ ಮಾಡಿದ್ದಾರಂತೆ.
ಹೌದು! ಕೆಲವು ದಿನಗಳ ಹಿಂದೆ ಇಶಿತಾ ಇದ್ದಕ್ಕಿದ್ದಂತೆ ಪತಿ ಡ್ಯಾನ್ಸ್ ಸ್ಟುಡಿಯೋಗೆ (Dance Studio) ಭೇಟಿ ಕೊಟ್ಟು, ಅವರ ಮೊಬೈಲ್ ತೆಗೆದುಕೊಂಡು ಅದರಲ್ಲಿ ಏನೆಲ್ಲಾ ಇದೆ ಎಂದು ವಿಡಿಯೋ ಮೂಲಕ ರಿವೀಲ್ ಮಾಡಿಬಿಟ್ಟರು. ಯಾರೆಲ್ಲಾ ಮೆಸೇಜ್ ಮಾಡುತ್ತಾರೆ, ಎಷ್ಟು ಫಾಲೋವರ್ಸ್ ಇದ್ದಾರೆ, ಯಾರಿಗೂ ಹೇಳದೇ ಇರುವ ಹುಡುಗರ ಗುಂಪಲ್ಲಿ ಏನೆಲ್ಲಾ ಶೇರ್ ಮಾಡಿಕೊಳ್ಳುತ್ತಾರೆಂದು ನೋಡಿಬಿಟ್ಟಿದ್ದಾರೆ. ಹೀಗಾಗಿ ಈಗ ಮುರಗಾ ಅವರು ಮಡದಿಯ ಫೋನ್ ಚೆಕ್ ಮಾಡಿರುವುದು ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ.
ಇಶಿತಾ ಮೊಬೈಲ್ ವಾಲ್‌ಪೇಪರ್‌ನಲ್ಲಿ (Wallpaper) 'ಏನೋ ವಿಶೇಷವಾಗಿರುವುದು ನನ್ನ ದಾರಿಯಲ್ಲಿದೆ. ಒಳ್ಳೆಯ ನ್ಯೂಸ್, ಹಣ, ಆರೋಗ್ಯ ಮತ್ತು ನಿಮ್ಮ ಆಶೀರ್ವಾದ,' ಎಂದು ಹಾಕಿಕೊಂಡಿದ್ದಾರಂತೆ. ನಾನೊಬ್ಬ ಗ್ರೇಟ್ ವ್ಯಕ್ತಿ, ನಿಮ್ಮ ಜೀವನಕ್ಕೆ ಆಗಲೇ ಬಂದಿದ್ದೀನಿ. ಆದರೂ ಇದೇ ಯಾಕೆ ಹಾಕಿಕೊಂಡಿದ್ದೀರಾ? ಎಂದು ಮುರುಗಾ ತಮಾಷೆ ಮಾಡಿದ್ದಾರೆ. ಮೊಬೈಲ್ ನಂಬರ್‌ಗಳನ್ನು ಚೆಕ್ ಮಾಡುತ್ತಿದ್ದ ಮುರುಗಾ ತಮ್ಮ ನಂಬರ್ ಅನ್ನು ಪತ್ನಿ ಏನೆಂದು ಸೇವ್ ಮಾಡಿಕೊಂಡಿದ್ದಾರೆಂದು ಚೆಕ್ ಮಾಡಿದಾಗ ಮಿಸ್ಟರ್ ಸ್ಮೈಲ್ (Mr Smile) ಎಂದು ಸೇವ್ ಅಗಿರುವುದನ್ನು ನೋಡಿ ಸಖತ್ blush ಆಗಿದ್ದಾರೆ.
RajaRani Jodi: ನಟಿ ಇಶಿತಾ ಬ್ಯಾಗಲ್ಲೇನಿದೆ ಎಂದು ರಿವೀಲ್ ಮಾಡಿದ ಪತಿ!ಹುಡುಗಿಯರು ಇರುವ ಗುಂಪಿನಲ್ಲಿ ಸಖತ್ ಕಾಮಿಡಿ ಮತ್ತು ನಾನ್‌ವೆಜ್ ಜೋಕ್‌ಗಳನ್ನು (Nonveg Jokes) ಜನರು ಹಂಚಿಕೊಳ್ಳುತ್ತಾರೆಂದು, ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಹೀಗಾಗಿ ಮುರುಗಾ ಅವರು ಪತ್ನಿಯ ಮೊಬೈಲ್‌ನಲ್ಲಿ ಗ್ರೂಪ್ ಹುಡುಕಿದ್ದಾರೆ. ಯಾವ ಗ್ರೂಪ್ ಕೂಡ ಕಣ್ಣಿಗೆ ಬಿದ್ದಿಲ್ಲ. ನೀವು ನಂಬುವುದಿಲ್ಲ ಇಶಿತಾ ಅವರಿಗೆ ಹುಡುಗಿಯರು ಫ್ರೆಂಡ್ಸ್ ಇಲ್ವಂತೆ. ಇರುವುದು ಮೂವರು ಮಾತ್ರ. ಹೀಗಾಗಿ ಯಾವ ಗ್ರೂಪ್ ಅನ್ನೂ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. ಸರಿ ಹುಡುಗಿಯರು ಇಲ್ಲ. ಹಾಗಾದ್ರೆ ಹುಡುಗರು ಯಾರೆಂದು ನೋಡಿದ್ದಾರೆ. ಮೊಬೈಲ್ ನೋಡಿ ಮುರುಗಾ ಶಾಕ್ ಆಗಲಿಲ್ಲ. ಕಾರಣ ಇಬ್ಬರಿಗೂ ಗೊತ್ತಿರುವ ಹುಡುಗರೇ ಇಶಿತಾಗೆ ಮೆಸೇಜ್ (Message) ಮಾಡಿರುವುದು, ಎಂದಿದ್ದಾರೆ.
ಪತಿ ಎಲ್ಲೋದ್ರೂ ತೊಂದರೆ ಇಲ್ಲ ರಾತ್ರಿ ಮನೆಗೆ ಬಂದ್ರೆ ಸಾಕು: ನಟಿ ಇಶಿತಾ ವರ್ಷಮೊಬೈಲ್ನಲ್ಲಿ ಒಟ್ಟು 5 ಸಾವಿರ ಫೋಟೋ ಇಟ್ಟುಕೊಂಡಿರುವ ಇಶಿತಾ ಒಂದು ಸೀಕ್ರೆಟ್ ಗ್ಯಾಲರಿ (Secret Gallery) ಮಾಡಿಕೊಂಡಿದ್ದಾರೆ. ಯಾರೂ ಆ ಫೋಟೋಗಳನ್ನು ನೋಡಬಾರದು ಎಂದು ಇಶಿತಾ ಲಾಕ್ ಮಾಡಿದ್ದಾರೆ. ಮುರುಗಾ ನೋಡಲು ಎಷ್ಟೇ ಪ್ರಯತ್ನಿಸಿದರೂ ಇಶಿತಾ ಬಿಟ್ಟು ಕೊಡುತ್ತಿರಲಿಲ್ಲ. ಹುಡುಗರು ಎಷ್ಟು ಓಪನ್ ಆಗಿದ್ದೀವಿ. ಹುಡುಗಿಯರು ನೋಡಿ ಏನೋ ಸೀಕ್ರೆಟ್ ಇಟ್ಕೊಂಡಿದ್ದಾರೆ, ರಿವೀಲ್ ಮಾಡುತ್ತಿಲ್ಲ ಎಂದು ಮುರುಗಾ ಹೇಳಿ ಮಾತು ಮುಗಿಸಿದ್ದಾರೆ.