
'Sssshhhh kai hai' ಧಾರಾವಾಹಿ ಮೂಲಕ ಹಿಂದಿ ಕಿರುತೆರೆಯಲ್ಲಿ ಜರ್ನಿ ಆರಂಭಿಸಿದ ನಟ ಹೃಷಿಕೇಶ್ ಪಾಂಡೆ ಕಳೆದ ತಿಂಗಳ ಹಿಂದೆ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡು, ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ತಮ್ಮ ಧಾರಾವಾಹಿ ಚಿತ್ರೀಕರಣ ಮುಂದುವರಿಸಿದ್ದರು. ಆದರೆ ಈ ನಡುವೆ ಅವರ ಕೈಯಿಂದ ಎರಡು ಪ್ರಾಜೆಕ್ಟ್ ಕೈ ತಪ್ಪಿವೆ ಎನ್ನಲಾಗಿದೆ.
ಸಿಐಡಿ ನಟ ಎಂದೇ ಹೆಸರು ಪಡೆದುಕೊಂಡಿರುವ ಹೃಷಿಕೇಶ್ ಪಾಂಡೆ ಕೊನೆಯದಾಗಿ ನಟಿಸಿದ ಧಾರಾವಾಹಿ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ'ನಲ್ಲಿ. 'ಜನವರಿ 22ರಿಂದ ನಾನು ನನ್ನ ಕಮರ್ಷಿಯಲ್ ಚಿತ್ರೀಕರಣ ಶುರು ಮಾಡಬೇಕಿತ್ತು. ನಾಗಿಣಿ 6 ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ನನಗೆ ಅವಕಾಶ ಕೂಡ ಬಂದಿತ್ತು. ಧಾರಾವಾಹಿ ಚಿತ್ರೀಕರಣವನ್ನು ಫೆಬ್ರವರಿ 6ನೇ ತಾರೀಖಿನೊಳಗೆ ಮುಗಿಸಬೇಕಿತ್ತು. ಆದರೆ ನನ್ನ ಆರೋಗ್ಯ ಸರಿ ಇಲ್ಲದ ಕಾರಣ ನಾನು ಈ ಎರಡೂ ಪ್ರಾಜೆಕ್ಟ್ ಕೈ ಬಿಡಬೇಕಾಯಿತು. ಇವೆರಡೂ ನನಗೆ ಎರಡು ಒಳ್ಳೆಯ ಕೆಲಸ. ಬೇಸರ ಮಾಡಿಕೊಳ್ಳುವುದಿಲ್ಲ. ಏಕೆಂದರೆ ಏನು ಆಗಬೇಕಿತ್ತೋ ಅದೇ ಆಗುತ್ತದೆ. ನಮ್ಮದೇನಿದೆಯೋ ಅದು ಮಾತ್ರ ನಮಗೆ ಸಿಗುತ್ತದೆ,' ಎಂದು ನಟ ಹೃಷಿಕೇಶ್ ಪಾಂಡೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನನಗ ಕೊರೋನಾ ಸೋಂಕು ಹೇಗೆ ತಗುಲಿತ್ತು ಎಂದು ಈಗಲೂ ನನಗೆ ಗೊತ್ತಿಲ್ಲ. ನಾನು ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡಿದ್ದೆ. ನಾನು ಆರಂಭದಲ್ಲಿ ಇದು flu ಎಂದುಕೊಂಡು, ತಪ್ಪು ಮಾಡಿದೆ. ಆದರೆ ಆರೋಗ್ಯ ಸ್ಥಿತಿ ಗಂಭೀರವಾದ ಮೇಲೆ ಇದು ಕೊರೋನಾ ಎಂಬ ಅನುಮಾನ ಬಂತು. ತುಂಬಾ sneezing ಕಾಡುತ್ತಿತ್ತು, ಗಂಟಲು ಕೆಟ್ಟಿತ್ತು. ಹಾಗೆಯೇ ಉಸಿರಾಡಲು ಕಷ್ಟವಾಗುತ್ತಿತ್ತು. ಕೆಲವು ದಿನ ವಿಶ್ರಾಂತಿಯಲ್ಲಿದ್ದರೆ, ಚೇತರಿಸಿಕೊಳ್ಳಬಹುದು ಎಂದು ಕೊಂಡೆ. ಆದರೆ ವೈದ್ಯರು ಹೇಳಿದ್ದರು, ಬಹುಶಃ ಡೆಲ್ಟಾ ಆಗಿರಬಹುದು,' ಎಂದು ಹೃಷಿಕೇಶ್ ಪಾಂಡೆ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.
'ನನ್ನ ನಡೆಯುವುದುಕ್ಕೂ, ಎದ್ದೇಳುವುದಕ್ಕೂ ಕಷ್ಟವಾಗುತ್ತಿತ್ತು. ನನ್ನ ರೂಮ್‌ನಿಂದ ಬಾಲ್ಕನಿಯವರೆಗೂ ನಡೆಯಲು ಆಗುತ್ತಿರಲಿಲ್ಲ. ಏನೋ ಬೆಟ್ಟ ಹತ್ತುತ್ತಿರುವಂತೆ ಅನಿಸುತ್ತಿತ್ತು. ಈಗಲೂ ನಾನು ವೀಕ್ ಆಗಿರುವೆ. ಜೋರಾಗಿ ಉಸಿರಾಡುತ್ತಿರುವೆ. ಹೆಚ್ಚಿಗೆ ಮಾತನಾಡಿದ್ದರೆ, ಉಸಿರು ಕಟ್ಟಿಕೊಂಡು ಮಾತನಾಡಬೇಕು. ಆಗ ಇನ್ನೂ ಸುಸ್ತು ಹೆಚ್ಚಾಗುತ್ತದೆ,' ಎಂದಿದ್ದಾರೆ ಹೃಷಿಕೇಶ್ ಪಾಂಡೆ.
'ನನ್ನ ಇಡೀ ಕುಟುಂಬ ಜಬ್ಲಾಪುರ್‌ನಲ್ಲಿರುವುದು (ಮಧ್ಯಪ್ರದೇಶದಲ್ಲಿ)ಅ ವರು ಅಲ್ಲಿಂದ ನನ್ನ ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಾನು ಒಬ್ಬನೇ ವಾಸವಿರುವುದು. ನಾನು ಆರೋಗ್ಯದ ಬಗ್ಗೆ ಏನೇ ಅಪ್ಡೇಟ್ ಮಾಡಿದ್ದರೂ, ನನ್ನ ತಾಯಿ ಅಳುತ್ತಾರೆ. ಅದಕ್ಕೆ ಅವರಿಗೆ ಏನೂ ಹೇಳದೇ ಸುಮ್ಮನಾದೆ. ದೇವರ ದಯೆ, ನನ್ನ ಜೊತೆ ಕೆಲಸ ಮಾಡುವವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನನ್ನ ಡಯಟ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಈ ಸೋಂಕು ನನಗೆ ಒಂದು ಪಾಠ ಹೇಳಿಕೊಟ್ಟಿದೆ, ಜೀವನದಲ್ಲಿ ನಾವು ಏನನ್ನೂ ಗ್ರ್ಯಾಂಟೆಡ್ ಆಗಿ ಸ್ವೀಕರಿಸಬಾರದು, ಲೈಫ್ ತುಂಬಾನೇ ಮುಖ್ಯ. ಪ್ರತಿ ಕ್ಷಣವನ್ನೂ ಸಂಭ್ರಮಿಸಬೇಕು,' ಎಂದು ಹೃಷಿಕೇಶ್ ಪಾಂಡೆ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.