5 ಗಂಟೆ ಮದುವೆ ಶಾಸ್ತ್ರ, ರಜಪೂತರ ಹುಡುಗ; ಡಿವೋರ್ಸ್‌ ಪಡೆದ 'ರಾಧಾ ರಮಣ ಧಾರಾವಾಹಿ' ನಟಿ ಅನುಷಾ ಹೆಗಡೆ

Published : Jan 25, 2026, 10:41 AM IST
radha ramana serial anusha hegde divorce

ಸಾರಾಂಶ

radha ramana serial anusha hegde divorce: ಕಲರ್ಸ್‌ ಕನ್ನಡ ವಾಹಿನಿಯ ‘ರಾಧಾ ರಮಣ’ ಧಾರಾವಾಹಿಯಲ್ಲಿ ದೀಪಿಕಾ ಪಾತ್ರದಲ್ಲಿ ನಟಿಸುತ್ತಿದ್ದ ಅನುಷಾ ಹೆಗಡೆ ಅವರ ಮೂರು ವರ್ಷದ ಮದುವೆ ಜೀವನ ಮುಗಿದಿದೆ. ಈ ಬಗ್ಗೆ ಅವರೇ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ರಾಧಾ ರಮಣ ಧಾರಾವಾಹಿಯಲ್ಲಿ ದೀಪಿಕಾ ಪಾತ್ರದಲ್ಲಿ ನಟಿಸಿದ್ದ ಅನುಷಾ ಹೆಗಡೆ ಅವರು ( Radha Ramana Serial Anusha Hegde Divorce ) ಡಿವೋರ್ಸ್‌ ತಗೊಂಡಿರೋದಾಗಿ ಹೇಳಿದ್ದಾರೆ. ಹೌದು, ಸೋಶಿಯಲ್‌ ಮೀಡಿಯಾ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ರಾಧಾ ರಮಣ ಎನ್ನುವ ಧಾರಾವಾಹಿ ಪ್ರಸಾರ ಆಗುತ್ತಿತ್ತು. ಈ ಧಾರಾವಾಹಿಯಲ್ಲಿ ವಿಲನ್‌ ದೀಪಿಕಾ ಪಾತ್ರದಲ್ಲಿ ಅನುಷಾ ಹೆಗಡೆ ನಟಿಸುತ್ತಿದ್ದರು. ಸ್ಕಂದ ಅಶೋಕ್‌, ಶ್ವೇತಾ ಆರ್‌ ಪ್ರಸಾದ್‌ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.

ಅನುಷಾ ಹೆಗಡೆ ಹೇಳಿದ್ದೇನು?

“ನಿಮಗೆ ಈಗಾಗಲೇ ತಿಳಿದಿರುವಂತೆ, 2023 ರಿಂದ ನನ್ನ ಮದುವೆ, ದಾಂಪತ್ಯ ಜೀವನದಲ್ಲಿ ಬದಲಾವಣೆಗಳು ನಡೆಯುತ್ತಿದ್ದವು. 2025 ರಲ್ಲಿ ನಾವು ಕಾನೂನುಬದ್ಧವಾಗಿ ಬೇರೆಯಾಗಿದ್ದೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ಈ ಬಗ್ಗೆ ಹೆಚ್ಚಿನ ಚರ್ಚೆ ಅಥವಾ ಪ್ರಶ್ನೆಗಳನ್ನು ಮಾಡಬೇಡಿ ಎಂದು ವಿನಂತಿಸುತ್ತೇನೆ” ಎಂದು ಅನುಷಾ ಹೆಗಡೆ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

“ನನ್ನ ಜೀವನದ ಈ ಅಧ್ಯಾಯವು ಪರಸ್ಪರ ಗೌರವ, ಸಾಮರಸ್ಯದೊಂದಿಗೆ ಮುಕ್ತಾಯಗೊಂಡಿದೆ. ನಾನು ಈಗ ಶಾಂತಿ ಮತ್ತು ಸ್ಪಷ್ಟತೆಯೊಂದಿಗೆ ನನ್ನ ವೃತ್ತಿಜೀವನ, ನನ್ನ ಕುಟುಂಬ ಮತ್ತು ವೈಯಕ್ತಿಕ ಬೆಳವಣಿಗೆಯ ಕಡೆಗೆ ಗಮನ ಹರಿಸಲು ನಿರ್ಧರಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.

ಪ್ರತಾಪ್‌ ಸಿಂಗ್‌ ಯಾರು?

ಅನುಷಾ ಹೆಗಡೆ ಅವರು ಆಂಧ್ರ ಪ್ರದೇಶ ಮೂಲದ ಪ್ರತಾಪ್‌ ಸಿಂಗ್‌ ಅವರನ್ನು ಮದುವೆಯಾಗಿದ್ದರು. ಪ್ರತಾಪ್‌ ಸಿಂಗ್‌ ಅವರು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಿದ್ದಾರೆ. ಇವರು ರಜಪೂತ ಸಂಪ್ರದಾಯದವರು.

ಪ್ರತಾಪ್‌ ಸಿಂಗ್‌ ಹಾಗೂ ಅನುಷಾ ಹೆಗಡೆ ಅವರು ‘ನಿನ್ನೆ ಪೆಲ್ಲಾಡ್ತ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದರು. ಈ ಧಾರಾವಾಹಿ ಮೂಲಕವೇ ಇವರಿಬ್ಬರಿಗೂ ಲವ್‌ ಶುರು ಆಗಿತ್ತು. ಆ ಬಳಿಕ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದರು.

ಐದು ಗಂಟೆಯ ಮದುವೆ

ಹೈದರಾಬಾದ್‌ನಲ್ಲಿ 2020ರಲ್ಲಿ ಈ ಮದುವೆ ನಡೆದಿತ್ತು. ಸತತ ಐದು ಗಂಟೆಗಳ ಕಾಲ ಮದುವೆ ಶಾಸ್ತ್ರ ನಡೆದಿತ್ತು. ಹಿಂದು ಸಂಪ್ರದಾಯದಂತೆ ಈ ಮದುವೆ ನಡೆದಿತ್ತು. ಅನುಷಾ ಹೆಗಡೆ ಅವರು ಅಂದು ಮಾಧ್ಯಮದವರ ಜೊತೆ ಮಾತನಾಡಿ, “ಇದು ಲವ್‌ ಅಲ್ಲ, ಮನೆಯವರು ನೋಡಿ ಮಾಡಿರುವ ಮದುವೆ, ಅವರು ಹೈದರಾಬಾದ್‌ನವರಾದರೂ ಕೂಡ ತಿಂಗಳಲ್ಲಿ ಹದಿನೈದು ದಿನ ಕರ್ನಾಟಕದಲ್ಲಿ ಇರುತ್ತಾರೆ, ನಾನು ಹಾಗೆ ಆಂಧ್ರದಲ್ಲಿ ಇರ್ತೀನಿ. ನನಗೆ ಕನ್ನಡ ಚಿತ್ರರಂಗ ಬಿಡುವ ಆಲೋಚನೆಯೇ ಇಲ್ಲ, ಇಬ್ಬರೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗ್ತೀವಿ, ಅವರು ಕೂಡ ಕನ್ನಡವನ್ನು ಕಲಿಯುತ್ತಿದ್ದಾರೆ” ಎಂದು ಹೇಳಿದ್ದರು.

ಈಗ ಅವರು ಅನುಪಲ್ಲವಿ ಧಾರಾವಾಹಿಯ ಖಡಕ್ ಐಎಎಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಾಸ್ ನಟಿ ಕಳವಳ: ಕೇರಳ ಒಬ್ಬ ಹೆಣ್ಣಿಗೆ ಪುರುಷರೆಲ್ಲಾ ಹೆದರಿದರೆ, ನೂರಾರು ಕಾಮುಕರಿಗೆ ಹೆದರುವ ಹೆಂಗಸರ ಪಾಡೇನು?
ಡಾಲಿ ಧನಂಜಯ ಬಿರಿಯಾನಿ ತಿನ್ನೋ ವಿಡಿಯೋ ವೈರಲ್‌ ಆಗ್ತಿರೋದೇಕೆ? ಮಾಂಸ ತಿಂದ್ರೆ ಏನ್‌ ತಪ್ಪು?