ಗೃಹಪ್ರವೇಶ ಆಗುತ್ತಿದ್ದಂತೆ ಏಕಾಂಗಿಯಾಗಿ ‘ಕೇದರಾನಾಥ’ನ ದರ್ಶನ ಪಡೆದ ನಟಿ ಕೃತಿಕಾ

Published : May 15, 2026, 09:56 PM IST
kruttika ravindra

ಸಾರಾಂಶ

Kruttika Ravindra: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಹೊಸ ಮನೆ ಗೃಹಪ್ರವೇಶ ಮಾಡಿದ್ದ ಕಿರುತೆರೆ ನಟಿ ಕೃತಿಕಾ ರವೀಂದ್ರ ಇದೀಗ ಏಕಾಂಗಿಯಾಗಿ ಕೇದರನಾಥ ದರ್ಶನ ಮಾಡಿ ಬಂದಿದ್ದಾರೆ. ಹೆಚ್ಚಾಗಿ ಧಾರ್ಮಿಕ ಯಾತ್ರೆ ಮಾಡುವ ಕೃತಿಕಾ ಇದು ಎರಡನೇ ಬಾರಿ ಕೇದರನಾಥಕ್ಕೆ ಭೇಟಿ ನೀಡುತ್ತಿದ್ದಾರೆ. 

‘ಕೇದರಾನಾಥ’ನ ದರ್ಶನ ಪಡೆದ ನಟಿ ಕೃತಿಕಾ ರವೀಂದ್ರ

‘ರಾಧಾ ಕಲ್ಯಾಣ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಕೃತಿಕಾ ರವೀಂದ್ರ, ಬಳಿಕ ‘ಮನೆಮಗಳು’, ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಗಳಲ್ಲೂ ನಟಿಸಿದ್ದರು. ಒಂದಷ್ಟು ಸಿನಿಮಾಗಳಲ್ಲೂ ನಟಿ ಬಣ್ಣ ಹಚ್ಚಿದ್ದರು. ‘ಆಟೋ,’ ಲಿಫ್ಟ್ ಕೊಡ್ಲಾ,’ ‘ಕೆಂಗುಲಾಬಿ,’ ‘ಯಾರಿಗೆ ಯಾರುಂಟು’, ‘ಶಾರ್ದೂಲ’, ‘ರಾಜನಿವಾಸ’, ‘ಮಾರೀಚ’ ಕೃತಿಕಾ ಅಭಿನಯದ ಸಿನಿಮಾಗಳು. ಸದ್ಯ ಸೀರಿಯಲ್ ಹಾಗೂ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿರುವ ನಟಿ ವರ್ಷಗಳಿಗೆ ಧಾರ್ಮಿಕ ಯಾತ್ರೆ ನಡೆಸುತ್ತಾ, 12 ಜ್ಯೋತಿರ್ಲಿಂಗ ದರ್ಶನ ಪಡೆದಿದ್ದರು. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸಿ, ಗೃಹಪ್ರವೇಶ ಮಾಡಿದ್ದ ಕೃತಿಕಾ, ಇದೀಗ ಏಕಾಂಗಿಯಾಗಿ ಕೇದರನಾಥನ ದರ್ಶನ ಪಡೆದು ಬಂದಿದ್ದಾರೆ. ಈ ಹಿಂದೆಯೂ ನಟಿ ಕೇದಾರನಾಥಕ್ಕೆ ಭೇಟಿ ನೀಡಿದ್ದರು. ಕೇದಾರನಾಥನ ಫೋಟೊಗಳನ್ನು ಹಂಚಿಕೊಂಡಿರುವ ನಟಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

“ಕೇದಾರನಾಥ” 7.05.2026

ಕೇದಾರನಾಥಕ್ಕೆ ಸೋಲೋ ಟ್ರೆಕ್ಕಿಂಗ್ ಮಾಡಬೇಕು ಎನ್ನುವುದು ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ಆದರೆ ನನಗೆ ಅಷ್ಟು ಆತ್ಮವಿಶ್ವಾಸವಿರಲಿಲ್ಲ. ಒಂದು ತಿಂಗಳ ಹಿಂದೆ ನಾನು ಈ ಯಾತ್ರೆಯನ್ನು ಪ್ಲ್ಯಾನ್ ಮಾಡಿದಾಗ, ನಾನು ನಿಜವಾಗಿಯೂ ಹೆದರಿದ್ದೆ. ಆದರೆ ನನಗೆ ಅವನ ಮೇಲೆ ತುಂಬಾ ನಂಬಿಕೆ ಇತ್ತು, ಹೇಗೋ ಅವನು ನನಗೆ ವಿಷಯಗಳನ್ನು ಸುಲಭಗೊಳಿಸುತ್ತಾನೆ ಎನ್ನುವ ನಂಬಿಕೆ ಇತ್ತು. ಅವನು ಮಾಡಿದ್ದು ಅದನ್ನೇ. ನಾನು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಚಾರಣವನ್ನು ಪ್ರಾರಂಭಿಸಿ ಬೆಳಿಗ್ಗೆ 11.45 ರ ಸುಮಾರಿಗೆ ದೇವಸ್ಥಾನವನ್ನು ತಲುಪಿದೆ. ನಿಧಾನವಾಗಿ, ಸ್ಥಿರವಾಗಿ, ಪ್ರತಿ 45 ನಿಮಿಷದಿಂದ ಒಂದು ಗಂಟೆಯ ನಂತರ 5 ನಿಮಿಷಗಳ ಕಾಲ ವಿರಾಮ ತೆಗೆದುಕೊಂಡು, ನಿರಂತರವಾಗಿ ಓಂ ನಮಃ ಶಿವಾಯ ಜಪಿಸುವುದರಿಂದ ಈ ಯಾತ್ರೆ ಸುಲಭ ಮತ್ತು ಹೆಚ್ಚು ಶಾಂತಿಯುತವಾಯಿತು.

"ಜೈ ಶ್ರೀ ಕೇದಾರ" ಎಂಬ ಫಲಕ ನೋಡಿದ ಕ್ಷಣ ನಾನು ಎಲ್ಲವನ್ನೂ ಮರೆತೆ. ಈ ಬಾರಿ ಕೇದಾರನಾಥ ಯಾತ್ರೆ ವೈಯಕ್ತಿಕವಾಗಿತ್ತು. ನಾನು ಒಬ್ಬಂಟಿಯಾಗಿದ್ದೆ ಆದರೆ ಒಂಟಿಯಾಗಿರಲಿಲ್ಲ. ಯಾಕಂದ್ರೆ ಈ ಪ್ರಯಾಣದುದ್ದಕ್ಕೂ ಶಿವ ನನ್ನೊಂದಿಗಿದ್ದರು. ನನ್ನ ಇಡೀ ಜೀವನದಲ್ಲಿ ನಾನು ಎಂದಿಗೂ ಹಿಮಪಾತವನ್ನು ನೋಡಿರಲಿಲ್ಲ ಮತ್ತು ಅವರು ತಮ್ಮ ಕ್ಷೇತ್ರದಲ್ಲಿ ಅದನ್ನು ಸಾಧ್ಯವಾಗಿಸಿದರು. ಶಿವ ಸ್ವತಃ ನನ್ನನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಇನ್ನೇನು ಕೇಳಲು ಸಾಧ್ಯ? ನಾನು ಖಂಡಿತ ಹೇಳಬಲ್ಲೆ, ನಾನು ಶಿವನ ಪ್ರೀತಿಯ ಮಗು. ಧನ್ಯವಾದಗಳು ನನ್ನ ಶಿವ ಮತ್ತು ಶಕ್ತಿ. ನೀವಿಬ್ಬರೂ ಇಲ್ಲದೆ ಈ ಪ್ರಯಾಣ ಸಾಧ್ಯವಾಗುತ್ತಿರಲಿಲ್ಲ. ಧನ್ಯೋಸ್ಮಿ ಎಂದು ಕೃತಿಕಾ ರವೀಂದ್ರ ಬರೆದುಕೊಂಡಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಲು ಬರುತ್ತಿವೆ ಸಾಲು ಸಾಲು ಹೊಸ ಧಾರಾವಾಹಿಗಳು
RCB ಕ್ರಿಕೆಟರ್‌, ಬೆಂಗಳೂರಿನ ಹುಡುಗನನ್ನು ಪ್ರೀತಿಸ್ತಿದ್ದಾರಾ ಈ Bigg Boss ಸ್ಪರ್ಧಿ; ಮ್ಯಾಚ್‌ ದಿನ ಏನಾಯ್ತು?