ಮಾಜಿ ಮುಖ್ಯಮಂತ್ರಿ ಜೊತೆ ನಟಿ ರಚಿತಾ ರಾಮ್ ಒಡನಾಟ, ಲಾಭ ಅಷ್ಟಿಷ್ಟಲ್ಲ: ಲಾಯರ್ ಜಗದೀಶ್ ಹೇಳಿಕೆ ವೈರಲ್

By Vaishnavi Chandrashekar  |  First Published Jan 10, 2025, 3:38 PM IST

ರಚಿತಾ ರಾಮ್‌ ಐಷಾರಾಮಿ ಜೀವನ ಪ್ರಶ್ನಿಸಿದ ಲಾಯರ್ ಜಗದೀಶ್ ಇದೀಗ ರಾಜಕೀಯ ನಂಟು ಇದೆ ಎಂದು ಆರೋಪ ಮಾಡಿದ್ದಾರೆ. ಇದು ಎಷ್ಟು ಸತ್ಯ ಎಷ್ಟು ಸುಳ್ಳು?


ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಡಿಮ್ಯಾಂಡ್‌ನಲ್ಲಿ ಇರುವ ನಟಿ. ಒಂದು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದು, ಲೇಡಿ ಸೂಪರ್ ಸ್ಟಾರ್ ಕಿರೀಟ ಪಡೆದುಕೊಂಡಿದ್ದಾರೆ. ರಚ್ಚು ಮತ್ತು ಶ್ರೀನಗರ ಕಿಟ್ಟಿ ಜೋಡಿಯಾಗಿ ನಟಿಸಿರುವ ಸಂಜು ವೆಡ್ಸ್ ಗೀತಾ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಹೀಗಾಗಿ ರಚ್ಚು ಪ್ರಮೋಷನ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. 

ರಚಿತಾ ರಾಮ್ ಓಡಾಲು ಬಳಸುವ ಕಾರು ಕೋಟಿ ಬೆಲೆ, ರಾಜರಾಜೇಶ್ವರಿ ನಗರದಲ್ಲಿ ಹೊಸ ಮನೆ ಕಟ್ಟಿಸಿದ್ದಾರೆ. ಎಲ್ಲಿಂದ ಹಣ ಬರುತ್ತಿದೆ ಎಂಬ ಪ್ರಶ್ನೆ ಶುರುವಾಗಿತ್ತು. ಅದಕ್ಕೆ ರಚ್ಚು ಖಡಕ್ ಉತ್ತರ ಕೂಡ ನೀಡಿದ್ದರು. ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಹಾಗೂ ನಟಿ ರಚಿತಾ ರಾಮ್ ತಿಕ್ಕಾಟ ಮತ್ತೆ ತಾರಕಕ್ಕೇರಿದ್ದು, ಇದೀಗ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ ಲಾಯರ್. ಇಷ್ಟೊಂದು ದುಡ್ಡು ಎಲ್ಲಿಂದ ಬಂತೆಂದು ಕೇಳಿದ್ದ ಜಗದೀಶ್ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮಾಜಿ ಮುಖ್ಯಮಂತ್ರಿಯೊಂದಿಗೆ ಒಡನಾಟ ಇತ್ತು ಎನ್ನುವ ಮೂಲಕ ಏನು ಹೇಳ ಹೊರಟಿದ್ದಾರೆಂಬ ಗೊಂದಲ ಸೃಷ್ಟಿಸಿದ್ದಾರೆ. ಆದರೆ, ಯಾವ ರಾಜ್ಯದ ಸಿಎಂ, ಹೆಸರೇನು ಎಂಬಿತ್ಯಾದಿ ವಿವರವನ್ನು ಬಹಿರಿಂಗಪಡಿಸಿಲ್ಲ.

Tap to resize

Latest Videos

ಏನ್ ಫ್ರೀ ಅಗಿ ಕೆಲಸ ಮಾಡ್ತಿದ್ದೀನಾ ಹಣ ಎಲ್ಲಿಂದ ಬರುತ್ತೆ ಅಂತ ಕೇಳೋಕೆ? ರಚಿತಾ ರಾಮ್ ಫುಲ್ ಗರಂ

'ಸಾಮಾನ್ಯ ಮನೆಯಿಂದ ಬಂದವಳು ರಚಿತಾ ರಾಮ್. ಆಕೆಯ ಬ್ಯೂಟಿ ಮತ್ತು ನಟನೆಗೆ ನಾನು ಕೂಡ ಫ್ಯಾನ್ ಆಗಿದ್ದೀನಿ. ಆದರೆ ಇತ್ತೀಚಿನ ದಿನಗಳಲ್ಲಿ ಪೊಲಿಟಿಕಲ್ ಕನೆಕ್ಟಿವಿಟಿ ಇದೆ ಎಂದು ಒಂದಿಷ್ಟು ಆರೋಪಗಳು ಶುರುವಾಗಿದೆ. ರಾಜಕಾರಣಿಗಳ ಜೊತೆ ಒಡನಾಟವಿದೆ, ರಾಜಕಾರಣಿಗಳ ಜೊತೆ ವ್ಯವಹಾರ ಮಾಡಲು ಶುರು ಮಾಡಿದ್ದಾರಂತೆ, ರಾಜಕಾರಣಿಗಳ ಕೃಪಾಕಟಾಕ್ಷದಿಂದ ಬೆಳೆಯುತ್ತಿದ್ದಾರೆ ಅನ್ನೋ ಆರೋಪವಿದೆ. ಅವರ ಜೊತೆ ಓಡನಾಟ ಹೆಚ್ಚಾಗಿದೆ ಅಂತಿದ್ದಾರೆ. ಇದೆಲ್ಲಾ ಎಷ್ಟರ ಮಟ್ಟಕ್ಕೆ ನಿಜನೋ ಸುಳ್ಳೋ ನನಗೆ ಗೊತ್ತಿಲ್ಲ. ಆರೋಪಗಳು ಹೆಚ್ಚಾಗುತ್ತಿದ್ದಂತೆ ರಚಿತಾ ರಾಮ್ ಟೆಂಪಲ್ ರನ್ ಶುರು ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ್ದರೆ ಆರೋಪಗಳು ನಿಜ ಅನಿಸುತ್ತದೆ. ಜೀವನದಲ್ಲಿ ಚೆನ್ನಾಗಿ ಬದುಕಬೇಕು ಅನ್ನೋ ಆಸೆ ಇಟ್ಟುಕೊಂಡಿರುವವರು. ಎಲ್ಲಾ ಓಕೆ ಈ ಆರೋಪಗಳು ಯಾಕೆ ಅನ್ನೋ ಪ್ರಶ್ನೆ ನನಗಿದೆ. ಕಲೆಗೆ ಬೆಲೆ ಇದೆ ಅಲ್ಲದೆ ಬ್ಯೂಟಿ ಇದೆ ಹೀಗಾಗಿ ನನಗೆ ಇಷ್ಟವಾಗಿದ್ದಾಳೆ ಫ್ಯಾನ್ ಆಗಿದ್ದೀನಿ. ರಾಜಕಾರಣಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳ ಜೊತೆ ಒಟನಾಡ ಇಟ್ಟುಕೊಂಡಿದ್ದಾರೆ. ಅವರಿಂದ ಸಾಕಷ್ಟು ಲಾಭ ಪಡೆಯುತ್ತಿದ್ದಾರೆ ಅನ್ನೋ ಆರೋಪಗಳು ಇದೆ' ಎಂದು ಲಾಯರ್ ಜಗದೀಶ್ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಯಾರ ಜೊತೆಗೋ ಹೋಗಿ ಇರುವವಳು ನಾನಲ್ಲ; ಲಾಯರ್ ಜಗದೀಶ್ ಕೊಂಕು ಮಾತಿಗೆ ಖಡಕ್ ಉತ್ತರ ಕೊಟ್ಟ ರಚಿತಾ ರಾಮ್

click me!