ಗುಡ್​ನ್ಯೂಸ್​ ಕೊಟ್ಟ ಚಂದನ್​ ಶೆಟ್ಟಿ-ಸುಷ್ಮಾಗೆ ಎದುರಾಯ್ತು ಸಂಕಷ್ಟ: ಕೇಸ್​ನ​ ಭಯದಲ್ಲಿದ್ರೂ ಭರ್ಜರಿ ಡಾನ್ಸ್​

By Suchethana D  |  First Published Jan 10, 2025, 12:05 PM IST

ಚಂದನ್​ ಶೆಟ್ಟಿ ಮತ್ತು ಸುಷ್ಮಾ ಗೋಪಿನಾಥ್​ ಅವರ 'ಕಾಟನ್ ಕ್ಯಾಂಡಿ'ಗೆ ಸದ್ಯ ಸಂಕಷ್ಟ ಎದುರಾಗಿದೆ. ಇದರ ನಡುವೆಯೇ ಜೋಡಿ ಭರ್ಜರಿ ರೀಲ್ಸ್ ಮಾಡಿದೆ. ಏನಿದು ವಿಷಯ?
 


ಕನ್ನಡದ ರ್‍ಯಾಪರ್​ ಚಂದನ್​ ಶೆಟ್ಟಿ ಅವರು ಇದೀಗ 'ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ಸಕತ್​ ಬಿಜಿಯಾಗಿದ್ದಾರೆ. ನಿವೇದಿತಾ ಗೌಡ ಅವರ ಜೊತೆಗೆ ದಾಂಪತ್ಯ ಜೀವನವನ್ನು ಕೊನೆಗಾಣಿಸಿದ ಬಳಿಕ ಮತ್ತೆ ಕಮ್​ಬ್ಯಾಕ್​ ಆಗಿದ್ದು ನೋಡಿ ಫ್ಯಾನ್ಸ್​ಗೆ ಸಕತ್​ ಖುಷಿಯಾಗಿದೆ. ಚಂದನ್​ ಮತ್ತು ಸುಷ್ಮಾ ಗೋಪಿನಾಥ್ ಜೋಡಿಯ ಈ ಹಾಡು ಸೋಷಿಯಲ್​ ಮೀಡಿಯಾಗಳಲ್ಲಿ ಸಕತ್​ ಸೌಂಡ್​ ಮಾಡುತ್ತಿರುವ ನಡುವೆಯೇ, ಯುವರಾಜ್ ವೈಬುಲ್ ಎನ್ನುವವರು ತಮ್ಮ ಹಾಡಿನ ಚರಣ ಕದಿಯಲಾಗಿದೆ ಎಂದು ಆರೋಪ ಮಾಡುವ ಮೂಲಕ ಚಂದನ್​ ಅವರನ್ನು ಪೇಚಿಗೆ ಸಿಲುಕಿಸಿದ್ದಾರೆ. ತಾವು 2018 ರಲ್ಲಿ Y bul ಪಾರ್ಟಿ ಎಂಬ ಹಾಡು ರಚಿಸಿದ್ದು, ಆ ಹಾಡಿನ  ಚರಣವನ್ನು ಚಂದನ್ ಕಾಪಿ ಮಾಡಿರುವುದಾಗಿ ಯುವರಾಜ್​ ವೈಬುಲ್​ ಆರೋಪಿಸಿದ್ದು, ಸದ್ಯ ಹಾಡು ವಿವಾದದಲ್ಲಿದೆ.  ನಾನು ಕಷ್ಟ ಪಟ್ಟು ಹಾಡು ರಚನೆ ಮಾಡಿದ್ದೇನೆ. ನನಗೆ ನ್ಯಾಯ ಬೇಕು ಎಂದಿದ್ದಾರೆ ಯುವರಾಜ್​. ತಮ್ಮ ಆಡಿಯೋ ಸಂಸ್ಥೆಯವರು ಕಾಪಿ ರೈಟ್ಸ್ ಹಾಕೋಣ ಅಂದಿದ್ದರೂ ನಾನೇ ಬೇಡ ಎಂದಿದ್ದೆ. ಆದರೆ ಈಗ ಕೈ ಮೀರಿದೆ ಎಂದಿದ್ದಾರೆ.
 
ಇದರಿಂದಾಗಿ ಚಂದನ್​ ಶೆಟ್ಟಿ ಸದ್ಯ ಕೇಸ್​ ಭಯದಲ್ಲಿದ್ದಾರೆ. ಯುವರಾಜ್​ ವೈಬುಲ್​ ಮಾಡಿರುವ ಆರೋಪದಲ್ಲಿ ಹುರುಳು ಇದೆಯೋ, ಇಲ್ಲವೋ ಎನ್ನುವುದು ಇನ್ನಷ್ಟೇ ಕಾದು ನೋಡಬೇಕಿದೆ. ಅದೇನೇ ಇದ್ದರೂ, ಚಂದನ್​ ಮತ್ತು ಸುಷ್ಮಾ ಜೋಡಿ ಸಕತ್​ ಸ್ಟೆಪ್​ ಹಾಕಿದೆ. ಭರ್ಜರಿ ರೀಲ್ಸ್​ ಮಾಡಿದ್ದಾರೆ. ಕನ್ನಡದ ರ್‍ಯಾಪ್ ಸಾಂಗ್ಸ್‌ಗಳ ಹೊಸ ಹೊಸ ಪ್ರಯೋಗ ಮಾಡುವಲ್ಲಿ ಫೇಮಸ್​ ಆಗಿರೋ ಚಂದನ್​ ಅವರು ಇದಾಗಲೇ ಹಲವಾರು ಹಿಟ್​ ಹಾಡುಗಳನ್ನು ನೀಡಿದ್ದಾರೆ.  '3 ಪೆಗ್', 'ಟಕಿಲಾ', 'ಪಕ್ಕಾ ಚಾಕೋಲೆಟ್ ಗರ್ಲ್' ಹೀಗೆ ಹಲವು ಹಾಡುಗಳು ಇಂದಿಗೂ ಹಲವರ ಬಾಯಲ್ಲಿ ನಲಿದಾಡುತ್ತಿರುತ್ತವೆ. ಅದರಲ್ಲಿಯೂ ಪಬ್​, ರೆಸಾರ್ಟ್​ ಪಾರ್ಟಿಗಳಲ್ಲಿ ಕನ್ನಡದ ಹಾಡು ಎಂದರೆ ಇವರ ಹಾಡೇ ಕೇಳಿಬರುವಷ್ಟರ ಮಟ್ಟಿಗೆ ಇವರ ಹಾಡು ಫೇಮಸ್​ ಆಗಿವೆ.  ಇದೀಗ ಅವರ  ಮ್ಯೂಸಿಕ್ ವಿಡಿಯೋ 'ಕಾಟನ್ ಕ್ಯಾಂಡಿ' ಸಕತ್​ ಸೌಂಡ್​ ಮಾಡುತ್ತಿದೆ.  ಸದ್ಯ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ ಈ ವಿಡಿಯೋ.

ಫ್ಯಾನ್ಸ್​ಗೆ ಗುಡ್​ ನ್ಯೂಸ್​ ಕೊಟ್ಟ ಚಂದನ್​ ಶೆಟ್ಟಿ- ಸುಷ್ಮಿತಾ ಜೋಡಿ! ಅವರ ಬಾಯಲ್ಲೇ ಸಿಹಿ ಸುದ್ದಿ ಕೇಳಿಬಿಡಿ....

Tap to resize

Latest Videos


 'ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ  ಸುಷ್ಮಿತಾ ಗೋಪಿನಾಥ್ ಚಂದನ್​ಗೆ ಜೊತೆಯಾಗಿದ್ದಾರೆ.  ಈ ಹಾಡಿನಲ್ಲಿ ಚಂದನ್-ಸುಷ್ಮಿತಾ ಜೋಡಿ ಸಕತ್ ಮೋಡಿ ಮಾಡಿದ್ದಾರೆ, ಮೇಡ್ ಫಾರ್ ಈಚ್ ಅದರ್' ಎಂಬಂತೆ ಚಿಂದಿ ಮಾಡಿದ್ದಾರೆ.   ಕಳೆದ ಡಿಸೆಂಬರ್ 27ರಂದು  ಈ ಮ್ಯೂಸಿಕ್​ ವಿಡಿಯೋ ರಿಲೀಸ್​ ಆಗಿದೆ.  ಇದನ್ನು  ಅದ್ದೂರಿಯಾಗಿ ಶೂಟ್ ಮಾಡಲಾಗಿದ್ದು, ಇದನ್ನು ಖುದ್ದು ಚಂದನ್ ಶೆಟ್ಟಿಯವರೇ ನಿರ್ದೇಶನ ಮಾಡಿರುವುದು ಕೂಡ ವಿಶೇಷವಾಗಿದೆ. ಇದಾಗಲೇ ಈ ಮ್ಯೂಸಿಕ್​ ವಿಡಿಯೋ ಬಗ್ಗೆ  ಚಂದನ್ ಶೆಟ್ಟಿ ಮಾತನಾಡಿದ್ದರು.  'ನನಗೆ ಈ ಕಾಟನ್ ಕ್ಯಾಂಡಿ ತುಂಬಾ ಮುಖ್ಯವಾದ ಪ್ರಾಜೆಕ್ಟ್ ಆಗಿದೆ. ಏಕೆಂದರೆ, ಇತ್ತೀಚೆಗೆ ನನ್ನ ಯಾವುದೇ ಹೊಸ ಸಾಂಗ್ ಬಿಡುಗಡೆ ಆಗಿಲ್ಲ. ನನ್ನ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು, ಆದರೆ ನನಗೆ ನನ್ನ ಬೇರೆಬೇರೆ ಕೆಲಸಗಳ ಕಾರಣಕ್ಕೆ ಕೊಡಲು ಅಸಾಧ್ಯವಾಗಿತ್ತು. ಇದೀಗ ಎಲ್ಲವೂ ಅಂದುಕೊಂಡಂತೆ ಮೂಡಿ ಬಂದಿದ್ದು, ವಿಡಿಯೋ ಸಾಂಗ್ ಲಾಂಚ್ ಬಳಿಕ ನನ್ನ ಫ್ಯಾನ್ಸ್ ಹಾಗೂ ಮ್ಯೂಸಿಕ್ ಲವರ್ ರಿಯಾಕ್ಷನ್ ಹೇಗಿರಬಹುದು ಎಂಬ ಬಗ್ಗೆ ನನಗೆ ಕುತೂಹಲವಿದೆ. ಇದು ನ್ಯೂ ಈಯರ್‌ಗೆ ಗಿಫ್ಟ್' ಎಂದಿದ್ದರು. 

ಕೆಲ ದಿನಗಳ ಹಿಂದೆ, ಚಂದನ್​ ಶೆಟ್ಟಿಯವರು, ನಟಿ ಸುಷ್ಮಿತಾ ಜೊತೆ ಗುಡ್​ ನ್ಯೂಸ್​ ನೀಡಿದ್ದರು. ಅದೇನೆಂದರೆ, ಕಾಟನ್​ ಕ್ಯಾಂಡಿ ಟೀಮ್​ನಿಂದ ಅಭಿಮಾನಿಗಳನ್ನು ಭೇಟಿಯಾಗಲು ನಿರ್ಧರಿಸಲಾಗಿದೆ. ಯಾರ್ಯಾರು ಕಾಟನ್​ ಕ್ಯಾಂಡಿ ಫ್ಯಾನ್ಸ್​ ಇದ್ದೀರಾ, ನಿಮ್ಮ ಊರಿಗೆ ಬರಬೇಕು ಎಂದು ಅನ್ನಿಸಿದರೆ, ನಿಮ್ಮ ಊರಿನ ಹೆಸರನ್ನು ಕಮೆಂಟ್​ ಮಾಡಿ. ಯಾರ ಕಮೆಂಟಿಗೆ ಅತಿ ಹೆಚ್ಚು ಲೈಕ್​ ಬರುತ್ತದೆಯೋ, ಆ ಊರಿಗೆ ನಮ್ಮ ತಂಡ ಬರುತ್ತದೆ ಎಂದಿದ್ದಾರೆ. ಇದಾಗಲೇ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೋಗೆ ಲೈಕ್​ ಮಾಡಿದ್ದಾರೆ. ಇದರಿಂದ ನಟ ಚಂದನ್​ ಶೆಟ್ಟಿ ಮತ್ತು ಸುಷ್ಮಿತಾ ಜೋಡಿಯನ್ನು ನೋಡಲು ಅಭಿಮಾನಿಗಳು ಎಷ್ಟು ಕಾತರರಾಗಿದ್ದಾರೆ ಎನ್ನುವುದು ತಿಳಿದುಬರುತ್ತದೆ. ಎಲ್ಲಾ ಕಮೆಂಟ್ಸ್​ ನೋಡಿದ ಮೇಲೆ ಈ ಟೀಮ್​ ಯಾವ ಊರಿಗೆ ಹೋಗಬೇಕು ಎನ್ನುವುದನ್ನು ಡಿಸೈಡ್​  ಮಾಡಲಿದೆ. 

ಪಾರದರ್ಶಕ ಡ್ರೆಸ್​ ತೊಟ್ಟು ಸೂರ್ಯನ ಬೆಳಕಲ್ಲಿ ನಿವೇದಿತಾ ರೀಲ್ಸ್​: ನೆಟ್ಟಿಗರು ಸುಮ್ನೆ ಇರ್ತಾರಾ?

click me!