Puttakkana Makkalu: ಬಡ್ಡಿ ಬಂಗಾರಮ್ಮ ಸತ್ತಿದ್ದಕ್ಕೆ ಅಲ್ಲ, ವೀಕ್ಷಕರಿಗೆ ಬೇಸರವಾಗಿದ್ದು ಈ ವಿಷ್ಯಕ್ಕೆ!

Published : Nov 08, 2025, 01:42 PM IST
Puttakkana Makkalu

ಸಾರಾಂಶ

Puttakkana Makkalu viewers reaction: ಕಂಠಿಗೆ ಅಮ್ಮ-ಹೆಂಡತಿ ಎರಡು ಕಣ್ಣು ಇದ್ದ ಹಾಗೆ. ಇತ್ತೀಚೆಗಷ್ಟೇ ಕಂಠಿ ಮೊದಲನೇಯ ಹೆಂಡತಿ ಸ್ನೇಹ ಕಳೆದುಕೊಂಡ ನೋವಿನಿಂದ ಹೊರಬರುತ್ತಿದ್ದ. ಆದರೀಗ ಅಮ್ಮನನ್ನು ಕಳೆದುಕೊಂಡಿದ್ದಾನೆ. 

ಈ ಹಿಂದೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಕಂಠಿ ಮೊದಲನೇಯ ಹೆಂಡತಿ ಸ್ನೇಹ ಸತ್ತಾಗ "ಇನ್ಮೇಲೆ ನಾವು ಧಾರಾವಾಹಿನೇ ನೋಡಲ್ಲ" ಅಂತ ವೀಕ್ಷಕರು ಬೇಸರ ವ್ಯಕ್ತಪಡಿಸಿದರು. ಸ್ನೇಹ ಪಾತ್ರವನ್ನ ಅಷ್ಟು ಇಷ್ಟಪಟ್ಟು ನೋಡುತ್ತಿದ್ದರು ನಮ್ಮ ಜನರು. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಿಶ್ರ ಪ್ರತಿಕ್ರಿಯೆಗಳು ಬಂದವು.

ಈಗ 'ಪುಟ್ಟಕ್ಕನ ಮಕ್ಕಳು' ಸೀರಿಯಲ್‌ನಲ್ಲಿ ಮತ್ತೊಂದು ಪ್ರಮುಖ ಪಾತ್ರವು ಕೊನೆಯಾಗಿದೆ. ಅದೇ ಬಡ್ಡಿ ಬಂಗಾರಮ್ಮ. ಬಡ್ಡಿ ಬಂಗಾರಮ್ಮ ಯಾರು ಎಂಬುದು ಧಾರಾವಾಹಿ ನೋಡುಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಈಕೆ ಸ್ನೇಹ ಅತ್ತೆ. ಕಂಠಿಯ ಅಮ್ಮ. ಕಂಠಿಗೆ ಅಮ್ಮ-ಹೆಂಡತಿ ಎರಡು ಕಣ್ಣು ಇದ್ದ ಹಾಗೆ. ಇತ್ತೀಚೆಗಷ್ಟೇ ಕಂಠಿ ಮೊದಲನೇಯ ಹೆಂಡತಿ ಸ್ನೇಹ ಕಳೆದುಕೊಂಡ ನೋವಿನಿಂದ ಹೊರಬರುತ್ತಿದ್ದ. ಆದರೀಗ ಅಮ್ಮನನ್ನು ಕಳೆದುಕೊಂಡಿದ್ದಾನೆ.

ಇದೀಗ ವೀಕ್ಷಕರು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಒಂದೊಂದೇ ಪಾತ್ರ ಮುಗಿಯುತ್ತಿರುವುದರಿಂದ ನಮಗೆ ಸೀರಿಯಲ್‌ ನೋಡೋಕೆ ಆಗ್ತಿಲ್ಲ. ಬೇಗ ಮುಗಿಸಿ ಎಂದು ರಿಕ್ವೆಸ್ಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ಧಾರಾವಾಹಿ ಬಗ್ಗೆ ಹಾಗೂ ಪಾತ್ರಧಾರಿಗಳ ಬಗ್ಗೆ ತಮಗೆ ಗೊತ್ತಿರುವಂತಹ ಮಾಹಿತಿಯನ್ನ ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ.

ಧಾರಾವಾಹಿಯಲ್ಲಿ ಏನಾಗುತ್ತಿದೆ?

ವೀಕ್ಷಕರ ಕಾಮೆಂಟ್ ನೋಡುವ ಮುನ್ನ ಧಾರಾವಾಹಿಯಲ್ಲಿ ಏನಾಗುತ್ತಿದೆ ಎಂದು ನೋಡುವುದಾದರೆ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರಮುಖ ಪಾತ್ರಧಾರಿ ಬಡ್ಡಿ ಬಂಗಾರಮ್ಮನನ್ನು ಶೂಟ್ ಮಾಡಿ ಸಾಯಿಸಲಾಗಿದೆ. ಇಷ್ಟು ದಿನ ಬಂಗಾರಮ್ಮ ಸಾವಿಗೆ ಕಾರಣ ರಾಜಾಹುಲಿ ಎಂದೇ ಭಾವಿಸಲಾಗಿತ್ತು. ಆದರೀಗ ಬಂಗಾರಮ್ಮನ ಅಳಿಯನೇ ಆಕೆಯ ಸಾವಿಗೆ ಕಾರಣ ಎನ್ನಲಾಗಿದೆ.

ಸ್ನೇಹನನ್ನು ಮದುವೆಯಾಗುವವರೆಗೂ ತಮ್ಮವರಿಗೆ ಏನಾದರೂ ಆದರೆ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದ ಕಂಠಿ, ಇನ್ನು ಅಮ್ಮನನ್ನು ಸಾಯಿಸಿದವರನ್ನು ಬಿಡುವನೇ ಎಂಬುದನ್ನ ಕಾದು ನೋಡಬೇಕಿದೆ. ಇತ್ತ ಕಡೆ ಪುಟ್ಟಕ್ಕ-ಬಂಗಾರಮ್ಮ ಇಬ್ಬರೂ ಆತ್ಮೀಯ ಸ್ನೇಹಿತೆಯರು. ಯಾವುದೇ ತೀರ್ಮಾನ ಕೈಗೊಳ್ಳುವಲ್ಲಿ ಪ್ರಬುದ್ಧರು. ಹಾಗಾಗಿ ಪುಟ್ಟಕ್ಕ ಸಹ ಬಂಗಾರಮ್ಮನ ಸಾವಿಗೆ ಕಾಕರ್ಣಕರ್ತರಾದವರನ್ನು ಕ್ಷಮಿಸುವಳೇ ಅಥವಾ ತಕ್ಕ ಪಾಠ ಕಲಿಸುವಳೇ ಅಂತಲೂ ನೋಡಬೇಕಿದೆ.

ಇದನ್ನೆಲ್ಲಾ ನೋಡಿದ ವೀಕ್ಷಕರಿಗೆ ಧಾರಾವಾಹಿ ಒಂದು ರೀತಿ ಬೋರ್‌ ತರಿಸಿರುವುದಂತೂ ಸುಳ್ಳಲ್ಲ. ಹಾಗಾದರೆ 'ಪುಟ್ಟಕ್ಕನ ಮಕ್ಕಳು' ಬಗ್ಗೆ ವೀಕ್ಷಕರಿಗಿರುವ ಅಭಿಪ್ರಾಯವೇನು..ಇಲ್ಲಿದೆ ನೋಡಿ ಕಾಮೆಂಟ್ಸ್...

*ಬಹುಶಃ ಒಂದೊಂದಾಗಿ ಎಲ್ಲಾ ಪಾತ್ರಗಳು ಸತ್ತು ಸೀರಿಯಲ್ ಮುಗಿಬಹುದು. ಆಗ ಕಿರುತೆರೆಯಲ್ಲಿ ಒಂದು ಹೊಸ ದಾಖಲೆ ಬರೆಯಬಹುದು... ಎಲ್ಲಾ ಪ್ರಮುಖ ಪಾತ್ರಗಳು ಸತ್ತ ಸೀರಿಯಲ್ ಅಂತ.
*ಚಾನೆಲ್ ಅವ್ರು ಈ ತರ ಎಲ್ಲಾ ಸೇಡು ತೀರಿಸ್ಕೊಬಾರ್ದು.
*ಬಂಗಾರಮ್ಮನ ಸಾಯಿಸೋ ಅವಶ್ಯಕತೆ ಏನಿತ್ತು?. ಕಥೆ ಮತ್ತೆ ಹೇಗೆ ಎಳಿತಾರೋ ಡೈರೆಕ್ಟರ್?. ಬಂಗಾರಮ್ಮನ ಅಳಿಯನ ಲವ್ ವಿಷಯ ಯಾಕೆ ಬೇಕಿತ್ತು. ಒಳ್ಳೆಯ ಪಾತ್ರಗಳನ್ನು ರೂಪಿಸಿ ಜನರಿಗೆ ಆದರ್ಶ ಬಗ್ಗೆ ತಿಳಿಸಿ. ಬರೀ ಖಳನಾಯಕರ,ಖಳನಾಯಕಿಯರ ಪಾತ್ರ ಬೇಡವಾಗಿದೆ.
*ಯಾರು ಬೇಜಾರ್ ಮಾಡ್ಕೋಬೇಡಿ. ಸದ್ಯದಲ್ಲೇ ಸೀರಿಯಲ್ ಮುಗಿಯುತ್ತೆ ಅಂತ ಮಂಜು ಭಾಷಿಣಿ ಅವ್ರೆ ಈಗ biggboss ಇಂದ ಆಚೆ ಬಂದ್ಮೇಲೆ ಹೇಳಿದ್ದಾರೆ. ಹೆಚ್ಚು ಕಮ್ಮಿ ಸಂಕ್ರಾಂತಿ ಹಬ್ಬದ ಅಷ್ಟ್ರಲ್ಲಿ ಮುಗಿಯೋದು ಖಂಡಿತ. ಬೇಕಿದ್ದರೆ ರೀಸೆಂಟ್ ಇಂಟರ್‌ವ್ಯೂ ನೋಡಿ ಮಂಜು ಭಾಷಿಣಿ ಅವ್ರುದ್ದು.
*ನಿರ್ದೇಶಕನ ಆಲೋಚನೆ ಸಾಯುವರೆಗೂ ಈ ಸೀರಿಯಲ್ ಮುಗಿಯಲ್ಲ.
*ಈ ಸೀರಿಯಲ್ ನಲ್ಲಿ ಒಂಥರ ಕಾಮಿಡಿ. ಯಾರು?, ಯಾವಾಗ? ಯಾರಿಗೆ? ಸಾಯಿಸ್ತಾರೋ ಆ ಡೈರೆಕ್ಟ್ ರೆ ಬಲ್ಲ.. ಈಗ ಅಳಿಯ ಅತ್ತೇನೆ ಶೂಟ್ ಮಾಡಿದ. ಪುಟ್ಟಕ್ಕ ಗೋಳು ನೋಡಕ್ ಆಗಲ್ಲ. ಒಟ್ಟಿನಲ್ಲಿ ಈ ಡೈರೆಕ್ಟ್ ಎಲ್ಲರನ್ನ ಸಾಯಿಸಿ ಸೀರಿಯಲ್ ಎಂಡ್ ಮಾಡ್ತಾನೆ ಅನಿಸುತ್ತೆ.
*ನಮ್ DC ಸ್ನೇಹ ನ ಸಾಯ್ಸಿದ್ರು. ಈವಾಗ ಬಂಗಾರಮ್ಮನ ಸಾಯ್ಸಿದ್ರು. ಬಾಕಿ ಉಳಿರೋದು ಪುಟ್ಟಕ್ಕ, ಕಂಠಿ ಅಣ್ಣ ಇವರನ್ನು ಬೇಗಾ ಸಾಯ್ಸಿ ಸೀರಿಯಲ್ ಮುಗುಸ್ರೋ ಕರ್ಮ.
* ಯಾಕೆ ಈ ತರಹ ಕಥೆ ಬರೆದಿದ್ದೀರಾ?. ಅವರು ಬಿಗ್ ಬಾಸ್ ಮನೆಗೆ ಹೋಗಿ ಮತ್ತೆ ವಾಪಾಸ್ಸು ಬಂದಿದ್ದಾರೆ ತಾನೇ. ಮತ್ತೆ ಯಾಕೆ ಅವರ ಕಥೆ ಮುಗಿಸಿದ್ದಿರಾ? ನೋಡೋಕೆ ಇಷ್ಟ ಆಗ್ತಾ ಇಲ್ಲ...ಅಂತೆಲ್ಲಾ ಬೇಸರ ಹೊರಹಾಕಿದ್ದರೆ ಜನರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!