ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ವಿಷಯಗಳನ್ನು ಮಾತಾಡಿಲ್ಲ, ಅದಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಕಳೆದ ವಾರ ಕೂಡ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು. ಹಾಗಿದ್ರೆ ಈ ವಾರ ಮಾತನಾಡಲೇಬೇಕಾದ ವಿಷಯಗಳಿವು
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನ ಆರನೇ ವಾರದ ವೀಕೆಂಡ್ ಎಪಿಸೋಡ್‌ನಲ್ಲಿ ಈ ವಿಷಯಗಳು ಚರ್ಚೆ ಆಗಬೇಕು, ಕಿಚ್ಚ ಸುದೀಪ್ ಅವರು ಮಾತನಾಡಬೇಕು, ಇಲ್ಲದಿದ್ರೆ ವೀಕ್ಷಕರಿಗೆ ಬೇಸರ ಆಗೋದಂತೂ ಪಕ್ಕಾ.
ಹಾಗಿದ್ದರೆ ಆ ವಿಷಯಗಳಿವು
ಗಿಲ್ಲಿಗೆ ರಿಷಾ ಹೊಡೆದಿದ್ದು ಸರಿಯೇ? ಇದು ಬಿಗ್ ಬಾಸ್ ನಿಯಮದ ಉಲ್ಲಂಘನೆ ಅಲ್ಲವೇ?
ಗಿಲ್ಲಿ ನಟನನ್ನು ಹೊಡೆಯಬೇಕು ಎಂದರೆ ಕಾವ್ಯ ಶೈವನನ್ನು ಟ್ರಿಗರ್ ಮಾಡಬೇಕು, ಕಾವ್ಯಳನ್ನು ನೋಯಿಸಬೇಕು ಎಂದು ರಿಷಾ ಗೌಡ ಹೇಳಿದ್ದರು.
ಕಾಕ್ರೋಚ್ ಸುಧಿಗೆ ಕಳಪೆ ಸಿಗಲು ಬಹುಮತ ಬರುತ್ತಿದೆ ಎಂದಾದಾಗ, ಅಶ್ವಿನಿ ಗೌಡ, ಧ್ರುವಂತ್ ಟೀಂ ಸೇರಿಕೊಂಡು ಗಿಲ್ಲಿ ನಟನಿಗೆ ಕಳಪೆ ಕೊಟ್ಟರು.
ರಕ್ಷಿತಾ ಶೆಟ್ಟಿ ಕ್ಯಾರೆಕ್ಟರ್ ಬಗ್ಗೆ ಅಶ್ವಿನಿ ಗೌಡ ಕೆಟ್ಟದಾಗಿ ಮಾತನಾಡಿದ್ದಾರೆ
ಈ ಮನೆಯಲ್ಲಿ ಒಂದು ಗುಂಪು, ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಇಬ್ಬರನ್ನು ಟಾರ್ಗೆಟ್ ಮಾಡ್ತಿದ್ದಾರೆ.
ರಕ್ಷಿತಾ ಶೆಟ್ಟಿಗೆ ಕನ್ನಡ ಬರುತ್ತದೆ, ಭಾಷೆ ಬರೋದಿಲ್ಲ ಎಂದು ನಾಟಕ ಮಾಡಿದ್ದರ ಬಗ್ಗೆ ಧ್ರುವಂತ್ ಮಾತನಾಡಿದ್ದಾರೆ.
ಈ ಮನೆಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ
ರಕ್ಷಿತಾ ಶೆಟ್ಟಿ ಮೂರನೇ ವಾರ ಕ್ಷಮೆ ಕೇಳಿ ಮತ್ತೆ ನನ್ನ ವ್ಯಕ್ತಿತ್ವ ಹಾಳು ಮಾಡಿದಳು ಎಂದು ಅಶ್ವಿನಿ ಗೌಡ ಹೇಳಿದ್ದಾರೆ
ರಾಶಿಕಾ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಲೆಟರ್ ಟಾಸ್ಕ್ ಇದ್ದಾಗ, ಒಂದು ಗುಂಪಿಗೆ ರಕ್ಷಿತಾಗೆ ಲೆಟರ್ ಸಿಗಬಾರದು ಎನ್ನೋದಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.