
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ( Bigg Boss Kannada Season 12 ) ಜಾಹ್ನವಿ ಹಾಗೂ ಅಶ್ವಿನಿ ಗೌಡ ಅವರು, “ನಾವಿಬ್ಬರು ಒಂದೇ ದೋಣಿಯಲ್ಲಿದ್ದೇವೆ” ಎಂದು ಹೇಳಿ ಮೂರು ವಾರಗಳ ಕಾಲ ಭಾರೀ ಆತ್ಮೀಯತೆಯಿಂದ ಇದ್ದರು. ಅದಾದ ಮೇಲೆ ಕಾಲೇಜು ಟಾಸ್ಕ್ ಬಂದಾಗ ಜಗಳ ಆಗಿ ಇವರಿಬ್ಬರು ದೂರ ಆದರು. ಈಗ ಮತ್ತೆ ಜಾಹ್ನವಿ ಅವರು ಅಶ್ವಿನಿ ಗೌಡರತ್ತ ವಾಲಿದ್ದಾರೆ. ಇದಕ್ಕೆ ಗಿಲ್ಲಿ ನಟ ತಿರುಗೇಟು ಕೊಟ್ಟಿದ್ದಾರೆ.
ಅಶ್ವಿನಿ ಗೌಡ, ಜಾಹ್ನವಿ ಅವರು ಪರಸ್ಪರ ಬಿಗ್ ಬಾಸ್ ಮನೆಯಲ್ಲಿ ಇರಲು ಯಾಕೆ ಅರ್ಹತೆ ಇದೆ ಎನ್ನುವ ಅರ್ಥದಲ್ಲಿ ವಾದ ಮಾಡಬೇಕಿತ್ತು. ನನ್ನ ಸ್ನೇಹವನ್ನು ಬಳಸಿಕೊಂಡರು ಎಂಬ ವಿಚಾರಕ್ಕೆ ಇವರಿಬ್ಬರ ಮಧ್ಯೆ ಜಗಳ ಶುರುವಾಗಿದೆ. ಆಮೇಲೆ ಇವರು ಮಾತನಾಡಲೇ ಇಲ್ಲ.
ಹೀಗಿದ್ದರೂ ಕೂಡ ಜಾಹ್ನವಿ, ಅಶ್ವಿನಿ ಗೌಡ ಅವರು ಮಾತನಾಡುತ್ತಿದ್ದಾರೆ, ಬೇರೆ ಆಗಿರುವ ಥರ ನಾಟಕ ಮಾಡುತ್ತಿದ್ದಾರೆ, ಕರ್ನಾಟಕ ಜನತೆಯನ್ನು ಯಾಮಾರಿಸುತ್ತಿದ್ದಾರೆ ಎಂದು ಗಿಲ್ಲಿ ನಟ ಹೇಳಿದ್ದರು.
ಈಗ ಮನೆಯಿಂದ ಲೆಟರ್ ಬರುವ ಟಾಸ್ಕ್ ಇತ್ತು. ಆಗ ಅಶ್ವಿನಿ ಹಾಗೂ ಜಾಹ್ನವಿ ಮಧ್ಯೆ ಒಬ್ಬರು ಪತ್ರ ತಗೋಬೇಕಿತ್ತು. ಆಗ ಅಶ್ವಿನಿ ಅವರೇ ಜಾಹ್ನವಿಗೆ ಪತ್ರ ಬಿಟ್ಟುಕೊಟ್ಟರು. ಇದು ಜಾಹ್ನವಿ ಮನಸ್ಸು ಕರಗಿಸಿತು, ಇಬ್ಬರೂ ಪರಸ್ಪರ ತಬ್ಬಿಕೊಂಡು ಅತ್ತರು, ಆಮೇಲೆ ಮಾತನಾಡಲು ಆರಂಭಿಸಿದರು.
“ನನಗೆ ಏನು ಇದೆಯೋ ಅದೇ ನಾನು, ಜನರಿಗೆ ಹೇಗೆ ಬೇಕಿದ್ರೂ ಕಾಣಿಸಲಿ. ಅವರು ಒಳಗಡೆಯಿಂದ ಪಾರದರ್ಶಕವಾಗಿದ್ದಾರೆ. ಹೊರಗಡೆ ಕೆಟ್ಟದಾಗಿ ಕಾಣತ್ತೋ ಏನೋ. ಅವರು ನಾಟಕವಂತೂ ಮಾಡ್ತಿಲ್ಲ. ನಾನು ಮಾತನಾಡುತ್ತೇನೆ, ಆದರೆ ಮುಂಚಿನ ಥರ ಕಳೆದು ಹೋಗೋ ಥರ ನಾನು ಇಲ್ಲ” ಎಂದು ಜಾಹ್ನವಿ ಹೇಳಿದ್ದಾರೆ.
“ಸ್ವಾಭಿಮಾನ ಮುಖ್ಯ. ಸ್ನೇಹವನ್ನು ಬಳಸಿಕೊಂಡರು ಎಂದು ಹೇಳಿದೆ. ಬಿಗ್ ಬಾಸ್ ಮನೆಯಲ್ಲಿರುವಷ್ಟು ದಿನ ನಾನು ಫ್ರೆಂಡ್ ಆಗಿರೋದಿಲ್ಲ, ಹೊರಗಡೆ ಹೋದಮೇಲೆ ಕಾಂಟ್ಯಾಕ್ಟ್ ಮಾಡ್ತೀನಿ, ಅದನ್ನು ನಾನು ಕಾಂಟ್ಯಾಕ್ಟ್ ಮಾಡ್ತೀನಿ ಅಂತ ಹೇಳಿದೆ. ಈಗ ನೀವು ಬಂದು ಅವರು ಕೆಟ್ಟವರಲ್ಲ, ಒಳ್ಳೆಯವರು, ನನಗೆ ಸಮಸ್ಯೆ ಇಲ್ಲ, ಫ್ರೆಂಡ್ ಆಗಿದೀನಿ ಅಂತ ಹೇಳ್ತಿದೀಯಾ, ಹೇಗೆ ನಂಬೋದು?” ಎಂದು ಗಿಲ್ಲಿ ನಟ ಹೇಳಿದ್ದಾರೆ. ಇದು ಜಾಹ್ನವಿಗೆ ನಗು ತರಿಸಿದೆ. ಆಮೇಲೆ ಅವರು ಏನೂ ಮಾತನಾಡಿಲ್ಲ.
ಅಂದಹಾಗೆ ಈ ವಿಚಾರದ ಬಗ್ಗೆ ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡ್‌ನಲ್ಲಿ ಮಾತನಾಡುತ್ತಾರಾ ಎಂದು ಕಾದು ನೋಡಬೇಕಿದೆ. ಅಂದಹಾಗೆ ಈ ವಾರ ಯಾರು ಮನೆಯಿಂದ ಹೊರಗಡೆ ಬರುತ್ತಾರೆ ಎಂಬ ಕುತೂಹಲ ಕೂಡ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.