ಸೀರಿಯಲ್​ನಲ್ಲಿ ಮೆಸ್​ ನಡೆಸ್ತಿರೋ ಪುಟ್ಟಕ್ಕನ ಮಕ್ಕಳು ನಿಜವಾಗ್ಲೂ ಹೇಗೆ ಅಡುಗೆ ಮಾಡ್ತಾರೆ ನೋಡಿ...

By Suvarna News  |  First Published Nov 21, 2023, 4:50 PM IST

ಪುಟ್ಟಕ್ಕನ ಮಕ್ಕಳು ಸೀರಿಯಲ್​ನ ಸಹೋದರಿಯರು ರಿಯಲ್​ ಲೈಫ್​ನಲ್ಲಿ ಅಡುಗೆ ಹೇಗೆ ಮಾಡಿದ್ದಾರೆ ನೋಡಿ...
 


ಜೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಪುಟ್ಟಕ್ಕನ ಮಕ್ಕಳು (Puttakkana Makkalu) ಸದಾ ಟಿಆರ್​ಪಿಯಲ್ಲಿ ಟಾಪ್​ಮೋಸ್ಟ್​ ಸ್ಥಾನ ಪಡೆದು ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯನ್ನು ಈ ಧಾರಾವಾಹಿ ಪಡೆದುಕೊಳ್ಳುತ್ತಿದೆ. ಗಂಡ ತನ್ನನ್ನು ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ  ಸಹನಾ,  ಸ್ನೇಹಾ ಮತ್ತು  ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್​ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದೆ.  

ಸೀರಿಯಲ್​ ವಿಷಯಕ್ಕೆ ಬರುವುದಾದರೆ ಕಿಡಿಗೇಡಿಗಳ ಕೃತ್ಯಕ್ಕೆ ಪುಟ್ಟಕ್ಕನ ಮೆಸ್​ ಭಸ್ಮವಾಗಿದೆ. ಗಾಡಿಯ ಮೇಲೆಯೇ ಪುಟ್ಟಕ್ಕ ಊಟ-ತಿಂಡಿ ರೆಡಿ ಮಾಡಿಕೊಂಡು ಮಾರುತ್ತಿದ್ದಾಳೆ. ಹಿರಿಯ ಮಗಳು ಸಹನಾ ಮತ್ತು ಮಧ್ಯಮ ಮಗಳು ಸ್ನೇಹಾ ಮದುವೆಯಾಗಿ ಗಂಡನ ಮನೆ ಸೇರಿದ್ದಾರೆ. ಕಿರಿಯ ಮಗಳು ಸುಮಾ, ಓದಿಗಾಗಿ ದೊಡ್ಡಕ್ಕನ ಮನೆಯಲ್ಲಿ ಇದ್ದಾಳೆ. ಪುಟ್ಟಕ್ಕ ಒಬ್ಬಳೇ ಬದುಕಿನ ಬಂಡಿ ಸಾಗಿಸುತ್ತಿದ್ದಾಳೆ. ಮಕ್ಕಳು ಇರುವಾಗ ಅವರೇ ಅಡುಗೆ ಎಲ್ಲಾ ಮಾಡಿ ಬಡಿಸುತ್ತಿದ್ದರು. ಅದರಲ್ಲಿಯೂ ಹೆಚ್ಚು ಓದಿಲ್ಲದ ಸಹನಾ ಅಡುಗೆಯಲ್ಲಿ ನಿಸ್ಸೀಮಳು. ಹಾಗಿದ್ದರೆ ಇದು ರೀಲ್​ ಲೈಫ್​ಗಷ್ಟೇ ಸೀಮಿತನಾ ಅಥವಾ ನಿಜಕ್ಕೂ ಸಹನಾಗೆ ಅಡುಗೆ ಮಾಡಲು ಬರುತ್ತಾ ಎಂದು ಪ್ರಶ್ನೆ ಮನಸ್ಸಿನಲ್ಲಿ ಇದ್ದರೆ, ಅದಕ್ಕೆ ಜೀ ಟೀ.ವಿಯ ಕಿಚನ್​ ಕಾರ್ಯಕ್ರಮದಲ್ಲಿ ಉತ್ತರ ಸಿಗುತ್ತದೆ.

Latest Videos

undefined

ಹೆಣ್ಣಿನ ಮೇಲೆರಗಲು ಬಂದವನಿಗೆ ಒದ್ದು ಬುದ್ಧಿ ಕಲಿಸಿದ ಸಹನಾ, ಅತ್ತೆಗೂ ಹಿಂಗೆ ಬುದ್ಧಿ ಕಲಿಸೆಂದ ನೆಟ್ಟಿಗರು!

ಸಹನಾ ಅವರ ಅಸಲಿ ಹೆಸರು ಅಕ್ಷರಾ. ಫೈನಾನ್ಸ್​ ವಿಷಯದಲ್ಲಿ ಎಂಬಿಎ ಓದುತ್ತಿದ್ದಾರೆ ಅಕ್ಷರಾ. ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಅಕ್ಷರ ಬರದ ಹೆಣ್ಣಾಗಿದ್ದರೂ ಈಕೆಯ ನಿಜವಾದ ಕಲಿಕೆ ಇದು. ಇನ್ನು ನಾಯಕಿ ಸ್ನೇಹಾ ಅವರ ನಿಜವಾದ ಹೆಸರು, ಸಂಜನಾ ಬುರ್ಲಿ. ಇವರು ಮೆಡಿಕಲ್​ ಎಲೆಕ್ಟ್ರಾನಿಕ್​ ಎಂಜಿನಿಯರಿಂಗ್​ ಓದುತ್ತಿದ್ದರೆ, ಇನ್ನೋರ್ವ ತಂಗಿ ಸುಮಾ ಅವರ ನಿಜವಾದ ಹೆಸರು ಶಿಲ್ಪಾ. ಇವರು ಫ್ಯಾಷನ್​ ಡಿಸೈನರ್​. ಈ ಮೂವರೂ ಸೇರಿ ಕಿಚನ್​ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇದರಲ್ಲಿ ಸಹನಾ ಅರ್ಥಾತ್​ ಅಕ್ಷರಾ ಅವರು ಪೈನಾಪ್ಪಲ್​ ರೈಸ್​ ಮಾಡುವುದನ್ನು ತೋರಿಸಿಕೊಟ್ಟಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಲಕ್ಷ್ಮಿ ನಾಗರಾಜ ಹಾಗೂ ನಟರಾಜ ಅವರೂ ಬಂದಿದ್ದಾರೆ. ಇಲ್ಲಿ ಅವರು ಕೋಕೋನಟ್​ ಲಡ್ಡು ಮಾಡಿದ್ದಾರೆ. ಇದೇ ವೇಳೆ ತಮ್ಮ ಮದುವೆಯ ಕುರಿತು ಮಾತನಾಡಿದ ಅವರು, ತಾವು ನೋಡಿರುವ ಮೊದಲ ಹುಡುಗ ಇವರೇ. ಆಗಲೇ ಎನ್ನಿಸಿತು, ಹ್ಯಾಂಡ್​ಸಮ್​ ಆಗಿದ್ದಾರೆ ಎಂದು ನೆನಪು ಮೆಲುಕು ಹಾಕಿದ್ದಾರೆ. ಅಂದಹಾಗೆ ಕಿಚನ್​ ಕಾರ್ಯಕ್ರಮವು ಶನಿವಾರ ಮತ್ತು ಭಾನುವಾರ  ಮಧ್ಯಾಹ್ನ 12 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. 

ಹಸಿರಿನಲ್ಲಿ ಕಂಗೊಳಿಸಿದ ಪುಟ್ಟಕ್ಕನ ಮಕ್ಕಳು ಸ್ನೇಹಾ: ಕಂಠಿಯನ್ನೇ ಮದ್ವೆಯಾಗಿ ಮೆಸ್ಸು ಅಂತಿದ್ದಾರೆ ಫ್ಯಾನ್ಸ್‌!

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!