ಟಾಸ್ಕ್ ಹೆಸರಿನಲ್ಲಿ ಬಿಗ್ಬಾಸ್ ಮನೆಯಲ್ಲಿ ನಡೆಯುತ್ತಿರುವ ಆಟಗಳ ವಿರುದ್ಧ ಪ್ರೇಕ್ಷಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಹೆಣ್ಣೇ ಏಕೆ ಟಾರ್ಗೆಟ್ ಎಂದು ಕೇಳುತ್ತಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ಹುಚ್ಚಾಟ ಜೋರಾಗಿಯೇ ನಡೆಯುತ್ತಿದೆ. ಬಿಗ್ಬಾಸ್ ಶುರುವಾಗಿ ಒಂದೂವರೆ ತಿಂಗಳಾದ ಮೇಲೆ ಈ ಟಾಸ್ಕ್ನಿಂದಾಗಿ ಪರಸ್ಪರ ಸ್ಪರ್ಧಿಗಳು ಕೈಕೈ ಮಿಲಾಯಿಸುವ ಸ್ಥಿತಿಗೆ ಬಂದಿದೆ. ಎರಡು ತಂಡಗಳಾಗಿರುವ ಗಜಕೇಸರಿ ತಂಡ ಹಾಗೂ ಸಂಪತ್ತಿಗೆ ಸವಾಲ್ ತಂಡಗಳ ನಡುವೆ ಫೈಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಗಜಕೇಸರಿ ತಂಡದಲ್ಲಿ ಡ್ರೋನ್ ಪ್ರತಾಪ್, ಸಿರಿ, ಸಂಗೀತಾ, ವಿನಯ್, ಸ್ನೇಹಿತ್ ಹಾಗೂ ನಮ್ರತಾ ಇದ್ದರೆ, ಇನ್ನೊಂದು ತಂಡವಾಗಿರುವ ಸಂಪತ್ತಿಗೆ ಸವಾಲ್ನಲ್ಲಿ ವರ್ತೂರು ಸಂತೋಷ್, ಮೈಕಲ್, ತನಿಷಾ, ತುಕಾಲಿ ಸಂತೋಷ್, ಕಾರ್ತಿಕ್ ಹಾಗೂ ನೀತು ಇದ್ದಾರೆ. ಇದಾಗಲೇ ಬ್ರಹ್ಮಾಂಡ ಗುರೂಜಿ ಆಗಮನ ಕೂಡ ಆಗಿದೆ. ಇಷ್ಟು ದಿನ ಫ್ರೆಂಡು ಫ್ರೆಂಡು ಅಂದುಕೊಂಡೆ ಕಾರ್ತಿಕ್ ಹಾಗೂ ತನಿಷಾ ಜೊತೆಯಲ್ಲಿದ್ದ ಸಂಗೀತ ಈಗ ವಿನಯ್ ಟೀಂ ಸೇರಿಕೊಂಡಿದ್ದಾರೆ.
ತಂಡವು ತಮ್ಮ ಪ್ರತಿ ತಂಡಕ್ಕೆ ಒಂದಾದ ಮೇಲೊಂದರಂತೆ ಸವಾಲು ನೀಡಬೇಕು ಎಂದು ಬಿಗ್ಬಾಸ್ ಟಾಸ್ಕ್ ನೀಡಿದೆ. ಬ್ರಹ್ಮಾಂಡ ಗುರೂಜಿ ಅವರ ನೇತೃತ್ವದಲ್ಲಿ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನಡೆಯುತ್ತಿದೆ. ಸಂಗೀತ ಹಾಗೂ ವಿನಯ್ ಬೇರೆ ಬೇರೆ ತಂಡಗಳಾಗಿ ಆಟ ಆಡುತ್ತಿದ್ದರು. ಆದರೆ ಈಗ ಸಂಗೀತ ವಿನಯ್ ಟೀಮ್ಗೆ ಸೇರಿಕೊಂಡಿದ್ದಾರೆ. ಇದರಿಂದಾಗಿ ಸವಾಲಿನ ಟಾಸ್ಕ್ ಜೋರಾಗಿ ನಡೆಯುತ್ತಿದೆ. ಸವಾಲು ನೀಡುವಂತೆ ಬಿಗ್ಬಾಸ್ ಹೇಳುತ್ತಿದ್ದಂತೆಯೇ, ಸಂಗೀತಾ ಮೊದಲಿಗೆ ಕಾರ್ತಿಕ್ ಹಾಗೂ ತುಕಾಲಿಯನ್ನೇ ಟಾರ್ಗೆಟ್ ಮಾಡಿದರು. ತುಕಾಲಿ ಸಂತೋಷ್ ಹಾಗೂ ಕಾರ್ತಿಕ್ ಅವರು ತಲೆ ಬೋಳಿಸಿಕೊಳ್ಳಬೇಕು ಎಂದು ಸಂಗೀತಾ ಹೇಳಿದರು. ಇದರಿಂದಾಗಿ ಎರಡೂ ಬಣಗಳ ನಡುವೆ ಸಕತ್ ಮಾತಿನ ಚಕಮಕಿ ನಡೆಯಿತು.
ಸಂಗೀತಾ ಸೇಡಿಗೆ ಕಾರ್ತಿಕ್ ತಲೆಗೂದಲು ಬಲಿ! ಎರಡು ತಲೆ ಹಾವು ಅಂತಿದ್ದಾರೆ ಬಿಗ್ಬಾಸ್ ಫ್ಯಾನ್ಸ್
ಸಂಗೀತಾ ಟಾಸ್ಕ್ ಇಲ್ಲಿಗೇ ನಿಲ್ಲಲಿಲ್ಲ. ಈಗ ಅವರ ದೃಷ್ಟಿ ನೆಟ್ಟಿರುವುದು ತನಿಷಾ ಮೇಲೆ. ಅದೂ ಸಾಮಾನ್ಯ ಟಾಸ್ಕ್ ಅಲ್ಲ. ತನಿಷಾ ಮತ್ತು ವರ್ತೂರು ಸಂತೋಷ್ ಅವರಿಗೆ ಒಬ್ಬೊಬ್ಬರು ಒಂದೊಂದು ಬಟ್ಟಲು ಹಸಿಮೆಣಸು ತಿನ್ನಬೇಕು ಎನ್ನುವ ಟಾಸ್ಕ್ ನೀಡಿದರು. ಇದರಿಂದ ಇತರ ಸ್ಪರ್ಧಿಗಳು ಶಾಕ್ ಆದರು. ಇಬ್ಬರ ಮುಂದೆಯೂ ತಲಾ ಒಂದೊಂದು ಬಟ್ಟಲು ಹಸಿಮೆಣಸು ಬಂದಿತು. ವರ್ತೂರು ಸಂತೋಷ್ ಒಂದೆರಡು ಮೆಣಸು ತಿನ್ನುತ್ತಿದ್ದಂತೆಯೇ ಖಾರದ ಉರಿ ತಡೆಯಲು ಆಗದೇ ಸುಸ್ತಾಗಿ ಹೋದರು. ಇದನ್ನು ನೋಡಿ ಬ್ರಹ್ಮಾಂಡ ಗುರೂಜಿನೂ ಅಯ್ಯಪ್ಪಾ ಎಂದು ಉದ್ಗರಿಸಿದರು. ಆದರೆ ಟಾಸ್ಕ್ ಗೆದ್ದೇ ಗೆಲ್ಲುವ ಛಲ ಬಿಡದ ತನಿಷಾ ಮಾತ್ರ ಎಷ್ಟೇ ಕಷ್ಟವಾದರೂ ಹಸಿಮೆಣಸನ್ನು ತಿಂದರು. ಬೇವು ಬೆಲ್ಲದ ರೀತಿಯಲ್ಲಿ ಹಸಿ ಮೆಣಸು ತಿಂದು ಮಧ್ಯೆ ನೀರು ಕುಡಿಯುತ್ತಾ, ಸಕ್ಕರೆ ತಿನ್ನುತ್ತಾ ಟಾಸ್ಕ್ ಮುಂದುವರೆಸಿದರು.
ಇದನ್ನು ನೋಡಿ ಇತರ ಸ್ಪರ್ಧಿಗಳು ಶಾಕ್ನಿಂದ ನೋಡುತ್ತಿದ್ದರು. ಮೈಯೆಲ್ಲಾ, ಕಣ್ಣೆಲ್ಲಾ ಉರಿಯಾದರೂ ತನಿಷಾ ಮೆಣಸನ್ನು ತಿನ್ನುವುದನ್ನು ಮುಂದುವರೆಸಿದರು. ಇದರಿಂದ ಸಂಗೀತಾ ಮೇಲೆ ಬಿಗ್ಬಾಸ್ ಫ್ಯಾನ್ಸ್ ಸಕತ್ ಕೋಪ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಇಂಥ ಟಾಸ್ಕ್ಗೆ ಅವಕಾಶ ಕೊಟ್ಟ ಬಿಗ್ಬಾಸ್ಗೇ ಬೈಯುತ್ತಿದ್ದಾರೆ. ಸಂಗೀತಾಗೇ ಮನುಷ್ಯತ್ವವೇ ಇಲ್ವಾ ಎಂದು ಹಲವರು ಪ್ರಶ್ನಿಸಿದರೆ, ಪ್ರತಿ ಸಲವೂ ಹೆಣ್ಣು ಮಕ್ಕಳನ್ನೇ ಏಕೆ ಟಾರ್ಗೆಟ್ ಮಾಡುವುದು ಎಂದು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. ಸುದೀಪ್ ಅವರು ಯಾವಾಗಲೂ ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಾರೆ. ಇಲ್ಯಾಕೆ ಇಷ್ಟು ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಸಾಗರ್ ಎನ್ನುವವರು, ಇದರಲ್ಲಿ ಸಂಗೀತ ಅಥವಾ ವಿನಯ್ ತಪ್ಪಲ್ಲ. ಈ ರೀತಿ ಟಾಸ್ಕ್ ಕೊಟ್ಟಿರೋ ಬಿಗ್ ಬಾಸ್ ಆಯೋಜಕರ ತಪ್ಪು. ಟೀಂ ಮಾಡಿ ಟಾಸ್ಕ್ ಕೊಟ್ಟು ಗೆದ್ದವರು ಸೋತವರಿಗೆ ಕೊಡಬೇಕಿರೋ ಶಿಕ್ಷೆ. ಅದು ಕೂಡ ಬಿಗ್ ಬಾಸ್ ಪ್ರಕಾರವೇ. ಇಲ್ಲಿ ಸಂಗೀತ ಟೀಂ ಸೋತಿದ್ರೆ ಅವರು ಕೂಡ ಇದೇ ಶಿಕ್ಷೆ ಅನುಭವಿಸಬೇಕಿತ್ತು. ಗೊತ್ತಿಲ್ವಾ? ಎರಡನೇ ವಾರದಲ್ಲಿ ಸಂಗೀತಾಗೆ ಸಗಣಿ ಸ್ನಾನ ಮಾಡ್ಸಿದ್ದು. ಅದಕ್ಕೆ ಹೋಲಿಸ್ಕೊಂಡ್ರೆ ಇದೆಲ್ಲಾ ಏನಿಲ್ಲ ಬಿಡಿ. ಒಟ್ಟಿನಲ್ಲಿ ಈ ಬಿಗ್ ಬಾಸ್ ಷೋ. ಫೇಕ್ ಷೋ. ಅಲ್ಲಿಗೆ ಹೋದವರನ್ನು ಟಾಸ್ಕ್ ಎಂದು ಕೆಟ್ಟದಾಗಿ ತೋರಿಸಿ ಜನರನ್ನು ಷೋ ನೋಡುವ ಮೂಲಕ ನಂಬರ್ ಒನ್ ನಲ್ಲಿ ಇರೋಕೆ ಮಾಡ್ತಿರೋದು ಬರೀ ದುಡ್ಡಿಗೋಸ್ಕರ ಅಷ್ಟೇ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಗ್ಬಾಸ್ ಮನೆಯಲ್ಲೇ ಗರ್ಭಿಣಿಯಾದೆಯೆಂದ ನಟಿ ಅಂಕಿತಾ, ಮಾಜಿ ಪ್ರೇಮಿ ಸುಶಾಂತ್ ಸಿಂಗ್ ಕುರಿತು ಹೇಳಿದ್ದೇನು?