ನೀತು ಬದಲಾವಣೆ ಬಗ್ಗೆ ಕೇಳಿ ಕಣ್ಣೀರಿಟ್ಟಿದ್ದೆ. ಸಪೋರ್ಟ್ ಮಾಡಲು ಶುರು ಮಾಡಿದರೆ ಸಾಧನೆ ಮಾಡೇ ಮಾಡುತ್ತಾರೆ.....
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರಲ್ಲಿ ತೃತೀಯಲಿಂಗಿ ನೀತು ವನಜಾಕ್ಷಿ ಸ್ಪರ್ಧಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನೀತು ಹಳೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬದಲಾವಣೆಗೂ ಮುನ್ನ ನೀವು ನೋಡಲು ಸಖತ್ ಹ್ಯಾಂಡ್ಸಮ್ ಆಗಿದ್ದೀರಿ ಎಂದು ಕಾಮೆಂಟ್‌ಗಳು ಬಂದಿತ್ತು.. ಈ ಬದಲಾವಣೆ ಅವಧಿಯಲ್ಲಿ ಫ್ಯಾಮಿಲಿ ರಿಯಾಕ್ಷನ್ ಹೇಗಿತ್ತು ಎಂದು ನೀತು ಸಹೋದರಿ ಶೀಲಾ ಮಾತನಾಡಿದ್ದಾರೆ.
'ನೀತು ಬದಲಾವಣೆಯನ್ನು ಒಪ್ಪಿಕೊಳ್ಳಲು ಬಹಳ ಕಷ್ಟ ಆಯ್ತು. ನೀತು ಕ್ಯಾಟಗರಿ ಇರುವ ಪಾರ್ಟಿ ಒಂದಕ್ಕೆ ಕರೆದುಕೊಂಡು ಹೋಗಿದ್ದರು ನನಗೆ ಎಲ್ಲವೂ ವಿಚಿತ್ರ ಅನಿಸುತ್ತಿತ್ತು. ಹೇಗೆ ಅನಿಸಿತ್ತು ಎಂದು ಕೇಳಿದರು ಏನೋ ವಿಚಿತ್ರವಾಗಿ ಬೇರೆ ಪ್ರಪಂಚಕ್ಕೆ ಬಂದಿದ್ದೀನಿ ಅನಿಸುತ್ತಿದೆ ಎಂದು ಹೇಳಿದೆ. ಅದಿಕ್ಕೆ ಹೌದು ನಾನು ಇದೇ ಪ್ರಪಂಚಕ್ಕೆ ಸೇರಿದವಳು ಎಂದು ನೀತು ಹೇಳಿದ್ದರು. ಆಗ ಚೂರು ಗೊಂದಲ ಆಯ್ತು. ಆ ಮಾತುಗಳನ್ನು ಕಡೆದುಕೊಳ್ಳಲು ಆಗಲಿಲ್ಲ ತುಂಬಾ ಅತ್ತು ಅತ್ತು ಬೇಸರ ಆಯ್ತು. ಒಂದು ವಾರಗಳ ನಂತರ ತಾಯಿಗೆ ತಿಳಿಸೋಣ ಎಂದು ಹೇಳಿದೆ. ನೀತು ಫ್ಯಾಷನ್ ಶೋನಲ್ಲಿ ಭಾಗಿಯಾಗಿ ಅವಾರ್ಡ್ ಪಡೆದರು. ಅದನ್ನು ನೋಡಿ ನಾನು ಅಮ್ಮನಿಗೆ ತೋರಿಸಿದೆ ಆಗ ಅವರು ವಾವ್ ಮಸ್ತ್ ಅಗಿದ್ಯಾ ಅಂದ್ರು. ಆಗ ನೀತು ನನ್ನ ನಿಜ ರೂಪ ಇದೇ ಎಂದು ತಾಯಿಗೆ ತಿಳಿಸಿದರು. ಅರ್ಥ ಮಾಡಿಸಿದ ಮೇಲೆ ತಾಯಿ ಅರ್ಥ ಮಾಡಿಕೊಂಡರು ಅನಂತ ನಾವು ಸಪೋರ್ಟ್ ಮಾಡಲು ಶುರು ಮಾಡಿದೆ. ನೀತು 24 ವರ್ಷಕ್ಕೆ ಕಾಲಿಟ್ಟ ಮೇಲೆ ಈ ವಿಚಾರ ನಮಗೆ ತಿಳಿಸಿದರು' ಎಂದು ಶೀಲಾ ಖಾಸಗಿ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.
undefined
ಆಗ್ಲೇ ಚೆನ್ನಾಗಿದ್ರಿ ಹುಡ್ಗಿ ಯಾಕಾದ್ರಿ : ಬಿಗ್‌ಬಾಸ್ ನೀತು ವನಜಾಕ್ಷಿ ಹಳೇ ಫೋಟೋ ಸಖತ್ ವೈರಲ್
ನೀತುಗೆ ಸಪೋರ್ಟ್ ಮಾಡಿ ಕೈ ಹಿಡಿಯಬೇಕು ಆಕೆ ಸಾಧನೆ ಮಾಡಿದಲು. ಇವಾಗ ಅ ವರ್ಗದ ಜನರು ಭಿಕ್ಷೆ ಎಲ್ಲಾ ಇರುತ್ತದೆ ಆದರೆ ನಮ್ಮ ಮನೆ ಮಗಳು ಒಳ್ಳೆ ದಾರಿ ಹಿಡಿಯಬೇಕು ಎಂದು ನಾವು ಸಪೋರ್ಟ್ ಮಾಡಲು ಶುರು ಮಾಡಿದೆವು. ಯಾರನ್ನೂ ಹೀಯಾಳಿಸಬೇಡಿ ಪ್ರತಿಯೊಬ್ಬರಿಗೂ ಒಂದೊಂದು ಟ್ಯಾಲೆಂಟ್ ಇರುತ್ತದೆ ಅವರನ್ನು ಸಪೋರ್ಟ್ ಮಾಡಿ ನಮ್ಮಂತೆ ಬೆಳೆಸಿ ಎಂದಿದ್ದಾರೆ ಶೀಲಾ.