ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಮೂಗಿನ ಬಗ್ಗೆ ಚರ್ಚೆಯಾಗಿದ್ದು, ಯಾರ ಮೂಗು ಬೆಸ್ಟ್?
ಬಿಗ್ಬಾಸ್ ಸೀಸನ್ 10ನಲ್ಲಿ ಅಕ್ಕ-ಅಮ್ಮ ಎಂದೇ ಗುರುತಿಸಿಕೊಂಡವರು ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್. ಸಂಗೀತಾ ಅವರನ್ನು ದೀದಿ ದೀದಿ ಎನ್ನುತ್ತಲೇ ಸುತ್ತಾಡುತ್ತಿದ್ದರು ಡ್ರೋನ್. ಬಿಗ್ಬಾಸ್ ಮುಗಿದ ಮೇಲೂ ಇವರಿಬ್ಬರ ಸಂಬಂಧ ಹಾಗೆಯೇ ಉಳಿದುಕೊಂಡಿದೆ. ಆಗಾಗ್ಗೆ ಭೇಟಿಯಾಗುತ್ತಲೂ ಇರುತ್ತಾರೆ. ಕೆಲ ತಿಂಗಳ ಹಿಂದೆ ಸಂಗೀತಾ ಅವರು ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಸಂದರ್ಭದಲ್ಲಿ ಬಿಗ್ಬಾಸ್ ದೀದಿ ಸಂಗೀತಾಗೆ ಡ್ರೋನ್ ವಿಶೇಷ ಗಿಫ್ಟ್ ನೀಡಿದ್ದರು. ಈ ಸಂದರ್ಭದಲ್ಲಿ ಸಂಗೀತಾ ಪ್ರತಾಪ್ ಗೆ ಅರತಿ ಎತ್ತಿ, ಕುಂಕುಮ ಹಚ್ಚಿ ರಾಖಿ ಕೂಡ ಕಟ್ಟಿದ್ದರು. ಬಿಗ್ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾ ಅವರಿಗೆ ಇಷ್ಟ ಆಗಿತ್ತು. ಅದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ʼ‘ನನಗೆ ಪ್ರತಾಪ್ ತುಂಬ ಇಷ್ಟ’ʼ ಎಂದು ಅವರು ಕನ್ಫೆಷನ್ ರೂಮ್ನಲ್ಲಿ ಹೇಳಿದ್ದರು. ದಿನದಿಂದ ದಿನಕ್ಕೆ ಈ ಅಕ್ಕ-ತಮ್ಮ ನಡುವಿನ ನಡುವೆ ಬಾಂಧವ್ಯ ಹೆಚ್ಚಾಗಿತ್ತು. ನೇರ ನಡೆ-ನುಡಿಯಿಂದಲೇ ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆದಿರುವ ಸಂಗೀತಾ ಪ್ರತಾಪ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದು ಹಲವರಿಗೆ ಅಚ್ಚರಿಯನ್ನೂ ತಂದಿತ್ತು.
ಇದೀಗ ಅದೇ ಭಾತೃತ್ವ ಸಂಬಂಧವನ್ನು ಉಳಿಸಿಕೊಂಡಿರುವ ಈ ಜೋಡಿ, ಮೈಸೂರಿಗೆ ಭೇಟಿ ಕೊಟ್ಟಿದೆ. ಇದರ ವಿಡಿಯೋ ಕೂಡ ವೈರಲ್ ಆಗಿದೆ. ಇವರಿಬ್ಬರೂ ಮೈಸೂರಿನ ಸಮೀಪ ಇರುವ ಬಸ್ತಿಪುರದಲ್ಲಿನ ಪ್ಲಾನೆಟ್ ಅರ್ತ್ ಅಕ್ವೇರಿಯಂಗೆ ಭೇಟಿ ನೀಡಿದ್ದಾರೆ. ಈ ಮೊದಲು ಸಂಗೀತ ಅವರು ಇಲ್ಲಿ ಭೇಟಿ ಕೊಟ್ಟಿದ್ದರು. ಅವರು ಈಗ ಡ್ರೋನ್ ಪ್ರತಾಪ್ ಅವರನ್ನು ಕರೆದುಕೊಂಡು ಬಂದಿದ್ದಾರೆ. ಸುಂದರವಾಗಿ ಇರುವ ಈ ಅಕ್ವೇರಿಯಮ್ ಬಗ್ಗೆ ಪರಿಚಯಿಸಿದ್ದಾರೆ. ಇಲ್ಲಿರುವ ಅನಕೊಂಡ, ಇಗ್ವಾನ, ಅಂಬ್ರೆಲಾ ಕೊಕಟೊ ಮುಂತಾದವುಗಳ ಬಳಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅಲ್ಲಿ ಭೇಟಿ ಕೊಟ್ಟವರೆಲ್ಲಾ ಬಿಗ್ಬಾಸ್ನ ಈ ಸೆಲೆಬ್ರಿಟಿಗಳ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
undefined
ಅಲ್ಲಿರುವ ಎರಡು ಹಕ್ಕಿಗಳನ್ನು ಹಿಡಿದುಕೊಂಡು ಸಂಗೀತಾ ಶೃಂಗೇರಿ ನಮ್ಮ ಮೂವರಲ್ಲಿ ಕಾಮನ್ ಏನು ಎಂದು ಪ್ರಶ್ನಿಸಿದ್ದಾರೆ. ಒಂದು ಹಕ್ಕಿಯನ್ನು ಅವರು ಹಿಡಿದುಕೊಂಡಿದ್ದರು, ಇನ್ನೊಂದನ್ನು ಡ್ರೋನ್ ಹಿಡಿದುಕೊಂಡಿದ್ದರು. ಎರಡು ಹಕ್ಕಿ ಮತ್ತು ತಮ್ಮ ನಡುವೆ ಏನು ಸೇಮ್ ಎಂದು ಕೇಳಿದಾಗ, ಡ್ರೋನ್ ಪ್ರತಾಪ್ ತಮ್ಮ ಮೂಗನ್ನು ತೋರಿಸಿದ್ದಾರೆ. ಸಂಗೀತಾ ಅವರ ಮೂಗು ಕೂಡ ಹಕ್ಕಿಯಂತೆ ಇದೆ ಎಂದು ಇಬ್ಬರೂ ತಮಾಷೆ ಮಾಡಿದ್ದಾರೆ. ಆಗ ಸಂಗೀತಾಗಿಂತ ತಮ್ಮ ಮೂಗು ಚೆನ್ನಾಗಿದೆ ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ. ಅಲ್ಲಿಗೆ ಬಂದಿರುವ ಮಹಿಳೆಯೊಬ್ಬರ ಬಳಿ ನಮ್ಮಿಬ್ಬರಲ್ಲಿ ಯಾರ ಮೂಗು ಚೆನ್ನಾಗಿದೆ ಎಂದು ಕೇಳಿದಾಗ, ಆ ಮಹಿಳೆ ಸಂಗೀತಾ ಅವರದ್ದು ಎಂದಿದ್ದಾರೆ. ಇದನ್ನು ಕೇಳಿ ಪ್ರತಾಪ್ ಹುಸಿಕೋಪ ತೋರಿದ್ದಾರೆ.
ಆ ಬಳಿಕ ಮಹಿಳೆ ನೀನೇ ಹ್ಯಾಂಡ್ಸಮ್ ಬಾಯ್ ಕಣೋ ಎಂದು ಡ್ರೋನ್ ಪ್ರತಾಪ್ ಅವರಿಗೆ ಶುಭ ಕೋರಿದ್ದಾರೆ. ಅಂದಹಾಗೆ ಮೈಸೂರಿನ ಭೇಟಿ ಸಮಯದಲ್ಲಿ, ಸಂಗೀತ ಅವರು ಅನಕೊಂಡ, ಇಗ್ವಾನ ಹಿಡಿದು ಫೋಟೋಗೆ ಪೋಸ್ ಕೂಡ ಕೊಟ್ಟಿದ್ದಾರೆ. ಆದರೆ ಡ್ರೋನ್ ಮಾತ್ರ ಯಾಕೋ ಭಯಪಟ್ಟುಕೊಂಡು ದೂರವೇ ನಿಂತಿದ್ದರು. ಸಂಗೀತಾ ಧೈರ್ಯ ಹೇಳಿದರೂ ಪ್ರತಾಪ್ ಹತ್ತಿರ ಹೋಗಲಿಲ್ಲ. ಬಳಿಕ ಹಕ್ಕಿ ಹಿಡಿದು ಪೋಸ್ ಕೊಟ್ಟರು. ಇದಾದ ಬಳಿಕ ಇಬ್ಬರೂ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು. ಈ ವಿಡಿಯೋವನ್ನು ಪ್ರತಾಪ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಗೊತ್ತಿಲ್ದೇ ಇರೋ ಹುಡುಗಿಗೆ ತಾಳಿ ಕಟ್ತೀವಿ, ಆಗ ಪ್ರೀತಿ ಅನ್ನೋದೇ ಇರಲ್ಲ... ಜೀವನದ ಬಗ್ಗೆ ಸುದೀಪ್ ಹೇಳಿದ್ದೇನು?