ಸುದೀಪ್​ ಜೊತೆ ಮೊದಲ ಭೇಟಿಯ ರಹಸ್ಯ ಬಿಗ್​ಬಾಸ್​ನಲ್ಲೇ ರಟ್ಟು ಮಾಡ್ತೇನೆ ಎಂದ ಗೌತಮಿ! ಅಷ್ಟಕ್ಕೂ ಮೀಟ್​ ಆಗಿದ್ದೆಲ್ಲಿ?

Published : Nov 05, 2024, 12:29 PM IST
ಸುದೀಪ್​ ಜೊತೆ ಮೊದಲ ಭೇಟಿಯ ರಹಸ್ಯ ಬಿಗ್​ಬಾಸ್​ನಲ್ಲೇ ರಟ್ಟು ಮಾಡ್ತೇನೆ ಎಂದ ಗೌತಮಿ! ಅಷ್ಟಕ್ಕೂ ಮೀಟ್​ ಆಗಿದ್ದೆಲ್ಲಿ?

ಸಾರಾಂಶ

ಸುದೀಪ್​ ಜೊತೆ ಬಿಗ್​ಬಾಸ್​ ಗೌತಮಿ ಜಾಧವ್​ ಮೊದಲ ಭೇಟಿಯಾಗಿದ್ದು ಎಲ್ಲಿ? ಆ ದಿನದ ಬಗ್ಗೆ ನಟಿ ಹೇಳಿದ್ದೇನು ಕೇಳಿ...  

ಕೆಲ ದಿನಗಳ ಹಿಂದಷ್ಟೇ ಸತ್ಯಾ ಸೀರಿಯಲ್​ ಸತ್ಯ ಎಂದಾಕ್ಷಣ ಎಲ್ಲರ ಗಮನ ಧಾರಾವಾಹಿಯ ರಗಡ್​ ಪಾತ್ರಧಾರಿಯ ನೆನಪಾಗುತ್ತಿತ್ತು. ಗಂಡುಬೀರಿಯಿಂದ ಶುರುವಾದ ಸತ್ಯಳ ಪಯಣ, ಎಲ್ಲರಿಂದ ಛೀಮಾರಿ ಹಾಕಿಸಿಕೊಳ್ಳುವ ಸೊಸೆಯಾಗಿ ನಂತರ ಎಲ್ಲರಿಂದಲೂ ಇದ್ದರೆ ಇಂಥ ಸೊಸೆ ಇರಬೇಕು ಎಂದು ಹೊಗಳಿಸಿಕೊಳ್ಳುವ ಹೆಣ್ಣಾದವಳದ್ದೇ ನೆನಪಾಗುತ್ತಿತ್ತು. ಆದರೆ ಇಂದು ಸತ್ಯಾ ಹೆಸರು ಬಿಗ್​ಬಾಸ್​ನಲ್ಲಿ ಕೇಳಿಬರುತ್ತಿದೆ. ಆದರೆ ಇಲ್ಲಿ ಸತ್ಯಾ ತಮ್ಮ ನಿಜ ರೂಪದ ಗೌತಮಿ ಜಾಧವ್​ ಆಗಿ ರೂಪು ಪಡೆದು ಆಟವಾಡುತ್ತಿದ್ದಾರೆ. ರಗಡ್​ ಗಂಡುಬೀರಿಯ ಲುಕ್ಕಿನಿಂದ ಸುರಸುಂದರಿ ಉದ್ದ ಕೂದಲ ಬೆಡಗಿ ಎಂದು ಹಲವರ ಕ್ರಷ್​ ಕೂಡ ಆಗಿದ್ದಾರೆ.   ಇದೀಗ ಬಿಗ್​ಬಾಸ್​ಗೂ ಹೋಗುವ ಮುನ್ನ ಸುದೀಪ್​ ಅವರ ಬಗ್ಗೆ ಗೌತಮಿ ಅವರು ಮಾತನಾಡಿರುವ ವಿಡಿಯೋ ಒಂದು ವೈರಲ್​  ಆಗುತ್ತಿದೆ. ಈ ವಿಡಿಯೋ ಅನ್ನು ಖುದ್ದು ಗೌತಮಿ ಅವರೇ ತಮ್ಮ ಯುಟ್ಯೂಬ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಬಿಗ್​ಬಾಸ್​ಗೆ ಹೋಗುವ ಸ್ಪರ್ಧಿಗಳು ತಮ್ಮ ಸೋಷಿಯಲ್​ ಮೀಡಿಯಾ ಹ್ಯಾಂಡಲ್​ ಮಾಡಲು ಯಾರಿಗಾದರೂ ಹೇಳಿರುತ್ತಾರೆ. ಇದರಿಂದಾಗಿ ತಮಗೆ ವೋಟ್​ ಮಾಡುವಂತೆ ಹಾಗೂ ಇತ್ಯಾದಿ ವಿಷಯಗಳನ್ನು ಅವರ ಸೋಷಿಯಲ್​  ಮೀಡಿಯಾದಲ್ಲಿ ಅವರ ಮನೆಯವರು, ಸ್ನೇಹಿತರು ಪೋಸ್ಟ್​ ಮಾಡುತ್ತಿರುತ್ತಾರೆ. ಅದೇ ರೀತಿ ಈಗ ಸತ್ಯ ಸೀರಿಯಲ್​ ಗೌತಮಿ ಅವರ ಯೂಟ್ಯೂಬ್​ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.

ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವ ಕೆಲ ದಿನಗಳ ಮೊದಲು  ಈ ವಿಡಿಯೋ ಶೂಟ್​ ಮಾಡಲಾಗಿದೆ.  ಇದರಲ್ಲಿ ಗೌತಮಿ ಅವರಿಗೆ ಬಿಗ್​ಬಾಸ್​ಗೆ ಹೋಗುವ ಅವಕಾಶ ಸಿಕ್ಕಾಗ ಹೇಗೆ ಅನ್ನಿಸ್ತು ಎನ್ನುವ ಪ್ರಶ್ನೆ ಕೇಳಿದ್ದಾರೆ. ಅದರಲ್ಲಿ ಅವರು, ನನ್ನ ಕುಟುಂಬದವರು ಈ ಬಗ್ಗೆ ಪಾಸಿಟಿವ್​ ಆಗಿದ್ದಾರೆ. ಹೋಗಿ ಗೆದ್ದು ಬಾ ಎನ್ನುತ್ತಿದ್ದಾರೆ. ಮನೆಯವರು ಎಲ್ಲರೂ ಸಪೋರ್ಟ್​ ಮಾಡುತ್ತಿದ್ದಾರೆ. ಇನ್ನು ಫ್ರೆಂಡ್ಸ್​ ವಿಷಯಕ್ಕೆ ಬರುವುದಾದರೆ, ತುಂಬಾ ಕಡಿಮೆ ಜನರಿಗೆ ಈ ಬಗ್ಗೆ ಗೊತ್ತು. ಅವರು ಕೂಡ ತುಂಬಾ ಖುಷಿಯಾಗಿದ್ದಾರೆ ಎಂದಿದ್ದಾರೆ. ಇದೇ ವೇಳೆ ಸುದೀಪ್​ ಅವರನ್ನು ಮೊದಲು ಭೇಟಿಯಾಗಿದ್ರಾ ಎನ್ನುವ ಪ್ರಶ್ನೆಗೆ ಗೌತಮಿ ಅವರು ಹೌದು, ಸುದೀಪ್​ ಅವರು ನನ್ನ ಮದುವೆಗೆ ಬಂದಿದ್ದರು. ಗೆಟ್​ ಟುಗೆದರ್​ ಇದ್ದಾಗ ಬಂದಿದ್ದರು. ಆ ಕ್ಷಣವನ್ನು ಇದುವರೆಗೂ ನೆನಪಿಸಿಕೊಳ್ಳುತ್ತಿರುತ್ತೇವೆ ಎಂದಿದ್ದಾರೆ.

ಬಿಗ್​ಬಾಸ್​ ಮನೆಯೊಳಕ್ಕೆ ಗೌತಮಿ ಎಂಟ್ರಿಗೆ ಸತ್ಯ ಸೀರಿಯಲ್​ ತಾರೆಯರು ಏನೆಂದ್ರು? ಖುದ್ದು ನಟಿಯೇ ಹೇಳಿದ್ರು ಕೇಳಿ...

ಅಲ್ಲಿ ಕೆಲವೊಂದು ಘಟನೆಗಳು ನಡೆದವು. ಅದರ ಬಗ್ಗೆ ಈಗಲೇ ಹೇಳುವುದಿಲ್ಲ. ಆ ಸೀಕ್ರೇಟ್​ಗಳನ್ನು ನನಗೆ ಅವಕಾಶ ಸಿಕ್ಕರೆ ಬಿಗ್​ಬಾಸ್​ ಮನೆಯಲ್ಲಿಯೇ ಹೇಳುತ್ತೇನೆ ಎಂದಿದ್ದರು. ಜೊತೆಗೆ, ಆ ಸಮಯದಲ್ಲಿ ಅವರ ಜೊತೆ ಮಾತನಾಡಲು ನನಗೆ ಆಗಲಿಲ್ಲ. ಬಂದಿರುವುದಕ್ಕೆ ತುಂಬಾ ಥ್ಯಾಂಕ್ಸ್​ ಎಂದಷ್ಟೇ ಹೇಳಿದ್ದೆ. ಈಗ ಅವರೇ ನನ್ನನ್ನು ಮಾತನಾಡಿಸುತ್ತಾರೆ, ಇದು ತುಂಬಾ ಖುಷಿಯ ವಿಚಾರ ಎಂದು ಹೇಳಿದ್ದಾರೆ. ಈ ಮೊದಲು ಗೌತಮಿ ಅವರು ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವ ಮುನ್ನ ತಮ್ಮ ಕುಟುಂದವರ ರಿಯಾಕ್ಷನ್​ ಹೇಗಿತ್ತು ಎನ್ನುವ ವಿಡಿಯೋ ಮಾಡಿದ್ದರು. ಈ ವಿಡಿಯೋದಲ್ಲಿ ಸತ್ಯಳ ಅತ್ತೆಯಾಗಿದ್ದ ಸೀತಾ, ಚಿಕ್ಕತ್ತೆ ಸೇರಿದಂತೆ ಇತರ ನಟಿಯರನ್ನು ನೋಡಬಹುದು. ಅದರಲ್ಲಿಯೂ ಸೀತಾ ಪಾತ್ರಧಾರಿಯಾಗಿದ್ದ ಮಾಲತಿ ಸರ್​ದೇಶ್​ಪಾಂಡೆಯವರು ತಮ್ಮ ಸೀರಿಯಲ್​ ಸೊಸೆಯನ್ನು ಹಾಡಿ ಕೊಂಡಾಡಿದ್ದಾರೆ. ನೀನು ಎಲ್ಲಿ ಹೋದರೂ ಸಕ್ಸಸ್​ ಕಾಣುತ್ತೀ ಎನ್ನುವುದು ತಿಳಿದಿದೆ. ಅದೇ ರೀತಿಯ ಸಕ್ಸಸ್​ ಪಡೆದುಕೊಂಡು ವಿಜಯಶಾಲಿಯಾಗಿ ಬಾ ಎಂದು ಹೇಳಿದ್ದಾರೆ. ಸತ್ಯಳ ನಾದಿನಿಯಾಗಿದ್ದ ರಕ್ಷಿತಾ ಭಾಸ್ಕರ್​ ಹಾಗೂ ಚಿಕ್ಕತ್ತೆಯಾಗಿದ್ದ ಊರ್ಮಿಳಾ ಪಾತ್ರಧಾರಿ ಶಾಲಿನಿ ಎಸ್​.ರಾವ್​ ಕೂಡ ಮಾತನಾಡಿದ್ದು, ಗೌತಮಿ ಅವರಿಗೆ ಶುಭ ಕೋರಿದ್ದಾರೆ. ಬಿಗ್​ಬಾಸ್​ಗೆ ಹೋಗುವ ವಿಷಯ ತಿಳಿಯದ ಕಾರಣ, ಯಾವುದೋ ಫಿಲ್ಮ್​ ಆಫರ್​ ಬಂದಿದೆ ಎಂದು ಅಂದುಕೊಂಡ್ವಿ ಎಂದು ರಕ್ಷಿತಾ ಹೇಳಿದರು. 

ಅಂದಹಾಗೆ ಬಿಗ್​ಬಾಸ್​ನಲ್ಲಿ ಗೌತಮಿ ಅವರ ಪರವಾಗಿ ವೀಕ್ಷಕರು ನಿಂತಿದ್ದು, ಅವರ ಗುಣಕ್ಕೆ  ಮನಸೋತಿದ್ದಾರೆ. ಇನ್ನು  ಸತ್ಯ ಉರ್ಫ್​ ಗೌತಮಿ ಅವರ ರಿಯಲ್​ ಲೈಫ್​ ಕುರಿತು ಹೇಳುವುದಾದರೆ, ಇವರ ಪತಿ ಅಭಿಷೇಕ್​ ಕಾಸರಗೋಡು ಕ್ಯಾಮರಾಮನ್​ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾನು ನಟಿಯಾಗಿದ್ದೆ, ಅವರು ಕ್ಯಾಮೆರಾಮನ್​ ಆಗಿದ್ರು... ಅಲ್ಲಿಂದಲೇ ಶುರುವಾಯ್ತು ನಮ್ಮ ಲವ್​ ಪಯಣ ಎಂದು ಗೌತಮಿ ಜೋರಾಗಿ ನಗುತ್ತಾರೆ.  ಅಂದಹಾಗೆ, ಇವರ ಲವ್​ ಶುರುವಾಗಿದ್ದು ಕಿನಾರೆ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ.  ಗೌತಮಿ ಅವರಿಗೆ ಕಿರುತೆರೆಯಂತೆಯೇ ಸಿನಿಮಾ ಕೂಡ ಹೊಸತಲ್ಲ. 2021 ರ ಫೇಮಸ್ ಸೀರಿಯಲ್ 'ನಾಗರ ಪಂಚಮಿ'ಯಲ್ಲಿ ಈಕೆ ನಟಿಸಿದ್ರು. ಆ ಬಳಿಕ ಸಿನಿಮಾ ಫೀಲ್ಡ್ ಗೆ ಹೋದ ಗೌತಮಿ 'ಲೂಟಿ', 'ಆದ್ಯಾ', 'ಕಿನಾರೆ' ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇನ್ನೊಂದು ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಸಹಜ ನಟನೆಗೆ ಹೆಸರಾದ ಈಕೆಗೆ ಸಿನಿಮಾ ಯಾಕೋ ಕೈ ಹಿಡೀಲಿಲ್ಲ. ಸೀರಿಯಲ್ ಜಗತ್ತು ಕೈ ಬಿಡಲಿಲ್ಲ.  ಸತ್ಯಾ ಮೂಲಕ ಸಕತ್​ ಮಿಂಚಿದರು.  

ಬಿಗ್​ಬಾಸ್​ ಸಂಗೀತಾ ಶೃಂಗೇರಿ- ಡ್ರೋನ್​ ಮೂಗಿನ ಚರ್ಚೆ: ಆಂಟಿ ಮಾತಿಗೆ ಪ್ರತಾಪ್​ ಕೋಪ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!