ಸಹನಾ ಪ್ಲೀಸ್​ ಅವ್ವಂಗೆ ಕಾಲ್​ ಮಾಡು... ಪುಟ್ಟಕ್ಕನ ನೋಡಿ ಕಣ್ಣೀರು ಹಾಕ್ತಿರೋ ಅಭಿಮಾನಿಗಳು...

Published : May 28, 2024, 11:41 AM IST
ಸಹನಾ ಪ್ಲೀಸ್​ ಅವ್ವಂಗೆ ಕಾಲ್​ ಮಾಡು... ಪುಟ್ಟಕ್ಕನ ನೋಡಿ ಕಣ್ಣೀರು ಹಾಕ್ತಿರೋ ಅಭಿಮಾನಿಗಳು...

ಸಾರಾಂಶ

ಮಗಳನ್ನು ಕಳೆದುಕೊಂಡ ಪುಟ್ಟಕ್ಕನಿಗೆ ದಿಕ್ಕೇ ತೋಚದಾಗಿದೆ. ಇದರಿಂದ ಕಣ್ಣೀರು ಹಾಕುತ್ತಿರುವ ಅಭಿಮಾನಿಗಳು ಕಾಲ್​ ಮಾಡುವಂತೆ ಸಹನಾಗೆ ತಾಕೀತು ಮಾಡುತ್ತಿದ್ದಾರೆ.  

 ತಾವು ನೋಡುತ್ತಿರುವುದು ಕೇವಲ ಸೀರಿಯಲ್​, ಇದು ಕೇವಲ ಕಥೆ... ಇಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದು ಸೀರಿಯಲ್​ ನೋಡುವ ಎಲ್ಲಾ ವೀಕ್ಷಕರಿಗೂ ತಿಳಿದೇ ಇರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಸೀರಿಯಲ್​ ನಟರ ನಟನೆ ಯಾವ ಪರಿ ನೈಜವಾಗಿರುತ್ತದೆ ಎಂದರೆ ತಾವು ನೋಡುತ್ತಿರುವುದು ಕಥೆಯಷ್ಟೇ ಎನ್ನುವುದನ್ನೂ ಮರೆತು ಸೀರಿಯಲ್​ ಪ್ರೇಮಿಗಳು ವರ್ತಿಸುವುದು ಉಂಟು. ಅಲ್ಲಿ  ಏನಾದರೂ ಕೆಟ್ಟದ್ದಾದರೆ ಹಿಡಿಶಾಪ ಹಾಕುವುದೂ ಉಂಟು. ಹಲವು ಸಂದರ್ಭಗಳಲ್ಲಿ ಇದು ಹೀಗೆಯೇ  ಆಗಬೇಕು ಎಂದು ತಾಕೀತು ಮಾಡುವುದೂ ಉಂಟು. ಇನ್ನು ಪುಟ್ಟಕ್ಕ ಪಾತ್ರಧಾರಿ ಉಮಾಶ್ರೀ ಅವರ ಅಭಿನಯ ಎಂದ ಮೇಲೆ ಕೇಳಬೇಕೆ? 

ಸಹನಾ ಬದುಕಿದ್ದಾಳೆ.  ಆದರೆ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಆಕೆ ಸತ್ತೇ ಹೋಗಿದ್ದಾಳೆ ಎಂದುಕೊಂಡಿದ್ದಾರೆ. ಆದರೆ ಸಹನಾ ದೇವಸ್ಥಾನ ಒಂದರಲ್ಲಿ ಕೆಲಸಕ್ಕಿದ್ದುಕೊಂಡು ಅಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ಸತ್ತಿದ್ದು ಸಹನಾ ಅಲ್ಲ, ಆದರೆ ಅವಳ ಬ್ಯಾಗ್​ ಕದ್ದುಕೊಂಡು ಹೋಗಿದ್ದ ಕಳ್ಳಿ. ಮನೆ ಬಿಟ್ಟ ಸಹನಾ ಬಸ್​ನಲ್ಲಿ ಹೋಗುವಾಗ ಪಕ್ಕದಲ್ಲಿಯೇ ಇದ್ದಳು ಈ ಕಳ್ಳಿ. ಸಹನಾ ನಿದ್ದೆಗೆ ಜಾರಿದಾಗ ಅವಳ ಎಲ್ಲಾ ಬ್ಯಾಗ್​ ಸೇರಿದಂತೆ ಎಲ್ಲಾ ಸಾಮಾನು ತೆಗೆದುಕೊಂಡು ಓಡಿ ಹೋಗಿದ್ದಾಳೆ. ಓಡಿ ಹೋಗುವ ಸಮಯದಲ್ಲಿ ಅಪಘಾತವಾಗಿ ಅವಳು ಸತ್ತುಹೋಗಿದ್ದಾಳೆ. ಮುಖ ಚಚ್ಚಿದ್ದರಿಂದ ಅವಳ ಗುರುತು ಹಿಡಿಯಲು ಯಾರಿಗೂ ಸಾಧ್ಯವಾಗಲಿಲ್ಲ. ಅವಳ ಬಳಿ ಸಹನಾಗೆ ಸೇರಿದ ಎಲ್ಲಾ ವಸ್ತುಗಳು ಇದ್ದುದರಿಂದ ಪೊಲೀಸರು ಇದು ಸಹನಾ ಇರಬಹುದು ಎಂದಾಗ, ಖುದ್ದು ಪುಟ್ಟಕ್ಕನೇ ಸಹನಾ ಎಂದು ಗುರುತಿಸಿ, ಅಂತ್ಯಕ್ರಿಯೆ ಮಾಡಲಾಗಿದೆ.

ಪುಟ್ಟಕ್ಕನ ಮಕ್ಕಳಿಗೂ ಎಂಟ್ರಿ ಕೊಟ್ಟೇ ಬಿಟ್ಟಳು ಕೊರವಂಜಿ: ನಿಜಕ್ಕೂ ಇವರು ತ್ರಿಕಾಲ ಜ್ಞಾನಿಗಳಾ?

ಇದೀಗ ಮನೆಯಲ್ಲಿ ಸಹನಾಳ ಶ್ರಾದ್ಧಕಾರ್ಯ ನಡೆಯುತ್ತಿದೆ. ಆದರೆ ಎಷ್ಟೆಂದರೂ ಅಮ್ಮನ ಕರುಳಲ್ಲವೆ? ಸಹನಾ ಬದುಕಿದ್ದಾಳೆ ಎಂದೇ ಆಕೆಗೆ ಅನ್ನಿಸುತ್ತಿದೆ. ಅದೇ ಇನ್ನೊಂದೆಡೆ ಕೊರವಂಜಿ ಬಂದು ಸಹನಾ ಬದುಕಿರುವ ಬಗ್ಗೆ ಹಿಂಟ್​ ಕೊಟ್ಟು ಹೋಗಿದ್ದೂ ಆಗಿದೆ. ಇನ್ನೊಂದೆಡೆ ಸಹನಾ ಚಿತ್ರಕಾರರೊಬ್ಬ ಬಳಿಯಿಂದ ತನ್ನ ಅಮ್ಮನ ಚಿತ್ರ ಬಿಡಿಸಿಕೊಂಡಿದ್ದಾಳೆ. ಅವ್ವನೇ ಅವಳಿಗೆ ಸರ್ವಸ್ವ. ಆದರೆ ಗಂಡನ ಮನೆಬಿಟ್ಟು ಬಂದ ತಾವು ಅವ್ವಮ ಮನೆಯಲ್ಲಿ ಇರುವುದು ಬೇಡ ಎಂದು ಮನೆ ಬಿಟ್ಟು ಬಂದಿದ್ದಾಳೆ. ಆದರೆ ಇದರಿಂದ ಮನೆಯವರಿಗೆ ಆಗುತ್ತಿರುವ ಸಂಕಟ ಆಕೆಗೆ ಗೊತ್ತಿಲ್ಲ.

ಇಲ್ಲಿ ಪುಟ್ಟಕ್ಕನಿಗೆ ಸಹನಾ ಅವ್ವ ಅವ್ವ ಎಂದು ಕರೆದಂತೆ ಕೇಳಿಸುತ್ತಿದೆ. ಹೆತ್ತ ಕರುಳು ಮಗಳಿಗಾಗಿ ಮಿಡಿಯುತ್ತಿದೆ. ಶ್ರಾದ್ಧಾ ಕಾರ್ಯ ನಡೆಯುತ್ತಿರುವಾಗಲೇ ಸಹನಾ ಸಹನಾ ಎನ್ನುತ್ತಾ ಕುಸಿದು ಬಿದ್ದಿದ್ದಾಳೆ ಪುಟ್ಟಕ್ಕ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡುತ್ತಿದ್ದಂತೆಯೇ ಸಹನಾಗೆ ನೆಟ್ಟಿಗರು ಕ್ಲಾಸ್​ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಪ್ಲೀಸ್​ ಅವ್ವನಿಗೆ ಕಾಲ್​ ಮಾಡು ಸಹನಾ. ನಿನ್ನ ಅವ್ವನ ಕಣ್ಣೀರು ನೋಡಲು ಆಗ್ತಿಲ್ಲ ಎನ್ನುತ್ತಿದ್ದಾರೆ. ಅದಕ್ಕೆ ಮತ್ತೆ ಕೆಲವರು ಡೈರೆಕ್ಟರ್​ ಹೇಳಿದ ಹಾಗೆ ಸಹನಾ ಕೇಳ್ತಾಳೆ ಬಿಡಪ್ಪ, ನೀನ್ಯಾಕೆ ತಲೆ ಕೆಡಿಸಿಕೊಳ್ಳುತ್ತಿ ಎಂದು ಕಾಳೆಯುತ್ತಿದ್ದಾರೆ. ಒಟ್ಟಿನಲ್ಲಿ ಪುಟ್ಟಕ್ಕನ ಪಾತ್ರಧಾರಿ ಉಮಾಶ್ರೀ ಅವರ ಅಭಿನಯಕ್ಕೆ ದಿನದಿಂದ ದಿನಕ್ಕೆ ಅಭಿಮಾನಿಗಳು ಮನಸೋಲುತ್ತಲೇ ಇದ್ದಾರೆ. 

ಪುಟ್ಟಕ್ಕನಿಗಿಂದು ಹುಟ್ಟುಹಬ್ಬದ ಸಂಭ್ರಮ: ರಾಷ್ಟ್ರೀಯ ಕಲಾವಿದೆಯಾಗಿ ಮಿಂಚಬೇಕಿದ್ದ ನಟಿಗೆ ಸಿಕ್ಕಿಲ್ಲವೇ ಅವಕಾಶ?


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial: ತೇಜಸ್‌ ತಪ್ಪಿಸ್ಕೊಂಡು ಹೊರಬಂದಾಯ್ತು; ಈಗ ಸಮಸ್ಯೆ ಬಗೆಹರಿಯೋದಿಲ್ಲ, ಅಸಲಿಗೆ ಶುರುವಾಗತ್ತೆ
ಪತ್ನಿ, ಮಗಳ ಜೊತೆ ಹೋಗಿ ಮನೆಗೆ ಹೊಸ ಕಾರ್‌ ತಂದ Amruthadhaare Serial ನಟ ರಾಜೇಶ್‌ ನಟರಂಗ!