ಸ್ಕೈ ಡೈವಿಂಗ್ ರೋಚಕ ಅನುಭವ ಬಿಚ್ಚಿಟ್ಟ ಪುಟ್ಟಕ್ಕನ ಮಕ್ಕಳು ನಟಿ ಸಂಜನಾ ಬುರ್ಲಿ

Published : Jan 30, 2025, 11:50 AM ISTUpdated : Jan 30, 2025, 02:51 PM IST
ಸ್ಕೈ ಡೈವಿಂಗ್  ರೋಚಕ ಅನುಭವ ಬಿಚ್ಚಿಟ್ಟ ಪುಟ್ಟಕ್ಕನ ಮಕ್ಕಳು ನಟಿ ಸಂಜನಾ ಬುರ್ಲಿ

ಸಾರಾಂಶ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ದುಬೈನಲ್ಲಿ ಸ್ಕೈಡೈವಿಂಗ್ ಸಾಹಸ ಮಾಡಿದ್ದಾರೆ. ಈ ರೋಚಕ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮುಕ್ತ ಪತನ, ಗಾಳಿಯಲ್ಲಿ ತೇಲುವಿಕೆ ಹಾಗೂ ಪ್ಯಾರಾಚೂಟ್ ನಿಯಂತ್ರಣದ ವಿಶಿಷ್ಟ ಅನುಭವಗಳನ್ನು ವರ್ಣಿಸಿದ್ದಾರೆ.  

ನಟಿ ಸಂಜನಾ ಬುರ್ಲಿ (Sanjana Burli) ಕನ್ನಡ ಕಿರುತೆರೆ ವೀಕ್ಷಕರ ಮೆಚ್ಚಿನ ಸ್ನೇಹಾ ಆಗಿ ಜನಪ್ರಿಯತೆ ಪಡೆದಿದ್ದಾರೆ.  ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯಲ್ಲಿನ ತನ್ನ ಪಾತ್ರವನ್ನೇ ಅಂತ್ಯ ಮಾಡುವ ಮೂಲಕ ಸೀರಿಯಲ್ ನಿಂದ ಹೊರ ಬಂದಿದ್ದಾರೆ ನಟಿ. ಹಾಗಾಗಿ ವೀಕ್ಷಕರು ಇವತ್ತಿಗೂ ಸ್ನೇಹಾಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸದ ಕಾರಣಕ್ಕಾಗಿ ನಟಿ ಸೀರಿಯಲ್ ಬಿಡುತ್ತಿದ್ದಾರೆ ಎನ್ನಲಾಗಿತ್ತು, ಆದರೆ ಸದ್ಯಕ್ಕಂತೂ ಸಂಜನಾ ಬುರ್ಲಿ ದೇಶ, ವಿದೇಶಗಳನ್ನು ಸುತ್ತಿಕೊಂಡು ಎಂಜಾಯ್ ಮಾಡ್ತಿದ್ದಾರೆ. ವರ್ಷದ ಆರಂಭದಲ್ಲಿ ಮನಾಲಿ, ಕಾಶ್ಮೀರದಲ್ಲಿ ಕಾಣಿಸಿಕೊಂಡಿದ್ದ ನಟಿ ಇದೀಗ ದುಬೈನಲ್ಲಿದ್ದಾರೆ. ಜೊತೆಗೆ ದೊಡ್ಡ ಸಾಹಸವನ್ನೇ ಮಾಡಿ ಬಂದಿದ್ದಾರೆ. 

ಸೀರಿಯಲ್​ ಬಿಟ್ಟ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿ ಸಂಜನಾ ತಲೆಗೆ ಏನಾಯ್ತು? ವಿಡಿಯೋ ಫ್ಯಾನ್ಸ್​ ಶಾಕ್​

ಹೌದು ಸದ್ಯ ದುಬೈನಲ್ಲಿ ಎಂಜಾಯ್ ಮಾಡುತ್ತಿರುವ ಸಂಜನಾ, ರೋಚಕ ಸಾಹಸ ಕ್ರೀಡೆಗಳಲ್ಲಿ ಒಂದಾದ ಸ್ಕೈ ಡೈವಿಂಗ್ (Skydiving)  ಮಾಡುವ ಮೂಲಕ ತಮ್ಮ ಧೈರ್ಯ , ಸಾಹಸವನ್ನು ಪ್ರದರ್ಶಿಸಿದ್ದಾರೆ. ಸ್ಕೈ ಡೈವಿಂಗ್ ಮಾಡುತ್ತಿರುವ ವಿಡೀಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಸಂಜನಾ ಬುರ್ಲಿ ಅದರ ಜೊತೆಗೆ ತಮ್ಮ ರೋಚಕ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಮಾತುಗಳಲ್ಲೇ ಅವರ ಅನುಭವ ಹೇಗಿತ್ತು ಕೇಳಿ. 

ನಮ್ಮ ಡಿಸಿ ಸ್ನೇಹಾ ಮೇಡಂ ಸೀರಿಯಲ್ ಬಿಟ್ಮೇಲೆ ಸಖತ್ ಬೋಲ್ಡ್ ಆಗ್ಬಿಟ್ರಲ್ಲ!

“ಹಾಗೆ ಸುಮ್ಮನೆ ನಾನು ಫ್ಲೈಟ್ ನಿಂದ ಜಂಪ್ ಮಾಡಿದೆ, ಫ್ರೀ ಫಾಲ್ (free fall) ಹೇಗಿರುತ್ತೆ ಅನ್ನೋದನ್ನು ಎಕ್ಸ್’ಪೀರಿಯನ್ಸ್ ಮಾಡಿದೆ. ತೊಂದರೆ ಮುಕ್ತ ಅನುಭವಕ್ಕಾಗಿ ಧನ್ಯವಾದಗಳು ಸ್ಕೈ ಡೈವ್ ದುಬೈ. ಬೆಸ್ಟ್ ಎಕ್ಸ್ ಪೀರಿಯನ್ಸ್ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ. ಸದ್ಯದಲ್ಲೇ ಪೂರ್ತಿ ವಿಡಿಯೋ ಬರಲಿದೆ. ನನ್ನ ವಿಚಿತ್ರ ಮುಖವನ್ನು ಇಗ್ನೋರ್ ಮಾಡಿ, ಸ್ಪೀಡ್ ಆಗಿ ಗಾಳಿ ಬರುತ್ತಿರೋದರಿಂದ ಈ ರೀತಿಯಾಗಿದೆ.  ನಾನು ಒಂದು ರೀತಿಯ ಅಡ್ರಿನಾಲಿನ್ ಜಂಕಿ, #skydivedubai ಒಟ್ಟಾರೆ ಅನುಭವವು ನಾನು ಊಹಿಸಿದ್ದಕ್ಕಿಂತ ಉತ್ತಮವಾಗಿತ್ತು. ನನ್ನ ಕಿವಿಗಳು ಸಾಕಷ್ಟು ಸೂಕ್ಷ್ಮವಾಗಿರುವುದರಿಂದ ಒತ್ತಡವನ್ನು ಹೇಗೆ ನಿಭಾಯಿಸುತ್ತವೆ ಎಂದು ನಾನು ಹೆದರಿದ್ದೆ. ಯಾಕಂದ್ರೆ ನಾನು ಮಾಲ್ಡೀವ್ಸ್ ನಲ್ಲಿ ಆಳವಾದ ಸ್ಕೂಬಾ ಡೈವಿಂಗ್ (scuba diving in Maldives) ಗೆ ಹೋದಾಗ ನನಗೆ ಸ್ವಲ್ಪ ನೋವು ಆಗಿತ್ತು. ಹಾಗಾಗಿ ಕಿವಿಯ ಬಗ್ಗೆ ಹೆದರಿಕೊಂಡಿದ್ದೆ. ಆದರೆ ನಂತರ ಸ್ಕೈ ಡೈವ್ ಸುಗಮವಾಗಿ ನಡೆಯಿತು. ಗಾಳಿಯ ವೇಗವು ನನ್ನ ಮುಖವನ್ನು ವಿರೂಪಗೊಳಿಸಿತು,ಅದನ್ನು  ನೀವೆಲ್ಲರೂ ವೀಡಿಯೊದಲ್ಲಿ ನೋಡಬಹುದು. 

ಸಂಜನಾ ಇದ್ದೋಳು ಸ್ನೇಹಾ ಆಗಿ ಬದಲಾಗಿದ್ದು ಹೇಗೆ? ವಿಡಿಯೋ ಶೇರ್ ಮಾಡಿ ಮಾಹಿತಿ ನೀಡಿದ ನಟಿ...

ಆದರೆ ನಾನು ಸ್ಕೈ ಡೈವ್ ಮಾಡುತ್ತಿರುವಾಗ  ಮೇಲಿನಿಂದ ಕಾಣುವ ನೋಟ, ಗುರುತ್ವಾಕರ್ಷಣೆಯನ್ನು ನೀವೇ ಅನುಭವಿಸುತ್ತಿರುವಾಗ,  ಗಾಳಿಯಲ್ಲಿ ತೇಲಾಡುವ ಅನುಭವ ಹೃದಯ ಸ್ಪರ್ಶಿಸಿದ್ದಂತೂ ನಿಜಾ.  ನಾನು ರೆಕ್ಕೆಗಳಿಲ್ಲದ ಹಕ್ಕಿಯಂತೆ ಹಾರಿದ ಅನುಭವವನ್ನು ಪಡೆದ. ಪ್ಯಾರಾಚೂಟ್ (parachute)  ಅನ್ನು ಟೆಕ್ನಿಕ್ ಆಗಿ ಕಂಟ್ರೋಲ್ ಮಾಡಿದಾಗಲೆಲ್ಲಾ ನನ್ನ ಪೆಲ್ವಿಕ್ ಪ್ರದೇಶದ ಮೇಲೆ ಹಗ್ಗದ ಒತ್ತಡದಿಂದಾಗಿ ನೋವಾಗಿದ್ದೂ ಕೂಡ ನಿಜಾ. ಆದರೆ ಆಫ್ಟರ್ ಆಲ್, ಇಂತಹ ಅದ್ಭುತ ಅನುಭವವನ್ನು ಪಡೆಯುವಾಗ ಸಣ್ಣ ನೋವನ್ನು ಸಹಿಸದೇ ಇದ್ದರೆ ಹೇಗೆ ಅಲ್ವಾ? ಈ ನಿರ್ದಿಷ್ಟ ದಿನವು ನನ್ನ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದಾಗಿದೆ ಎಂದು ನಾನು ಹೇಳಬಲ್ಲೆ. ಯಾವುದೇ ರಿಗ್ರೆಟ್ ಇಲ್ಲ, ಸ್ಕೈಡೈವ್ ಮಾಡಲು, ಪ್ರಿ ಬುಕ್ ಮಾಡಿ, ಈ ಸಾಹಸ(adventure) ಮಾಡಿರೋದಕ್ಕೆ ನನ್ನ ಬಗ್ಗೆಯೇ ನನಗೆ ಹೆಮ್ಮೆ ಇದೆ ಎಂದು ಸಂಜನಾ ಬುರ್ಲಿ ಬರೆದುಕೊಂಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್