
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ (Dancing Champion) ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಪುಟ್ಟಗೌರಿ ಮದುವೆ (Puttagowri Maduve) ಖ್ಯಾತಿಯ ಸಾನ್ಯಾ ಅಯ್ಯರ್ (Sanya Iyer) ಸ್ಪರ್ಧಿಸಲಿದ್ದಾರೆ. 8 ವರ್ಷಗಳ ನಂತರ ಕಿರುತೆರೆಗೆ ಕಮ್‌ಬ್ಯಾಕ್ ಮಾಡುತ್ತಿರುವುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಈ ವರ್ಷ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ.
'ಇದು ದೊಡ್ಡ ಕಮ್‌ಬ್ಯಾಕ್ ಏಕೆಂದರೆ 8 ವರ್ಷ ನಂತರ ಮತ್ತೆ ಸ್ಕ್ರೀನ್ ಮುಂದೆ ಬಂದಿರುವೆ. ಮತ್ತೆ ಕೆಲಸ ಮಾಡಬೇಕು ಎಂದು ಕಾಯುತ್ತಿದ್ದೆ. ಹೇಗೆ ಅಂದ್ರೆ ಈ ಆರ್ಟಿಸ್ಟ್‌ಗಳಿಗೆ (Artist) ಆರ್ಟ್ ಟಚ್ ಇಲ್ಲ ಅಂದ್ರೆ ಏನೋ ಮೈ ಎಲ್ಲಾ ಚುಮ ಚುಮ ಅನಿಸುತ್ತದೆ. ನನಗೂ ಹಾಗೆ ಅನಿಸುತ್ತಿದೆ. ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್ ಮೂಲಕ ಕಮ್‌ಬ್ಯಾಕ್ ಮಾಡುತ್ತಿರುವುದಕ್ಕೆ ಸಂತೋಷವಿದೆ,' ಎಂದು ಸಾನ್ಯಾ ಅಯ್ಯರ್ ಮಾತನಾಡಿದ್ದಾರೆ.
'ಪುಟ್ಟಗೌರಿ ಧಾರಾವಾಹಿ ನಂತರ ನನಗೆ ತುಂಬಾ ಸಿನಿಮಾ ಆಫರ್‌ಗಳು ಬಂದವು. ಆದರೆ ಆಗ ನಾನು ತುಂಬಾ ಚಿಕ್ಕವಳು. ನನಗೆ ಕಾನ್ಫಿಡೆನ್ಸ್ (Confidence) ಇರಲಿಲ್ಲ ಮುಂದೆ ಪಾತ್ರಗಳನ್ನು ಮತ್ತೆ ಮಾಡಬಹುದು ಅಂತ. ಬಹಳಷ್ಟು ಸೀರಿಯಲ್‌ಗಳು ಬಂದವು. ಆದರೆ ಹೀರೋಯಿನ್ ಆಗಿ ಅಥವಾ ಲೀಡ್ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಲಾಂಚ್ ಆಗಬೇಕು ಅಂತ ದೊಡ್ಡ ಬ್ರೇಕ್ ತೆಗೆದುಕೊಂಡೆ. ಈಗ ಯಾಕೆ ಅಂದ್ರೆ ಡ್ಯಾನ್ಸಿಂಗ್ ನನ್ನ ಪ್ಯಾಶನ್ (Passion), ಎಲ್ಲೋ ಒಂದು ಕಡೆ ರಕ್ತದಲ್ಲಿದೆ ಅಂತ ಹೇಳಬಹುದು. ತುಂಬಾ ಜನ ನನ್ನ ಕೇಳುತ್ತಿದ್ದರು ಯಾವಾಗ ಕಮ್‌ಬ್ಯಾಕ್ ಮಾಡ್ತೀರಾ ಯಾವ ಸಿನಿಮಾ ಮಾಡ್ತೀರಾ ಎಂದು. ಸೋ ಯಾರನ್ನು ಕಾಯಿಸುವುದು ಬೇಡ ಎಂದು ಬಂದು ಬಿಟ್ಟೆ,' ಎಂದು ಸಾನ್ಯಾ ಹೇಳಿದ್ದಾರೆ.
'ಡ್ಯಾನ್ಸಿಂಗ್ ಸ್ಟಾರ್ ಸೀಸನ್‌ನಲ್ಲಿ ನಾನು ಪಾಲ್ಗೊಂಡಿದ್ದೆ. ಆಗ ಇನ್ನೂ ಈಟಿವಿ ಇತ್ತು. ಕಲರ್ಸ್ ಆಗಿರಲಿಲ್ಲ. ನಾನು ಡ್ಯಾನ್ಸ್ ಕಲಿತಿದ್ದು ಆಗಲೇ. 8 ವರ್ಷ ಆದ್ಮೇಲೆ ಮಾಡ್ತಿರುವುದಕ್ಕೆ ಅದೂ ಈ ಪಾಟಿ ಡ್ಯಾನ್ಸ್ ಮಾಡ್ತಿರುವುದು ಇವಾಗಲೇ ಮೈ- ಕೈ ಕಾಲು ಎಲ್ಲಾ ನೋವಾಗುತ್ತಿದೆ. ತಾಯಿ (Artist Deepa Iyer) ಮತ್ತು ದೊಡ್ಡಮ್ಮ (Director Roopa Iyer) ಅವರು ನನಗೆ ತುಂಬಾನೇ ಸಪೋರ್ಟ್ ಮಾಡ್ತಿದ್ದಾರೆ. ಇವರಿಂದಲೇ ನಾನು. ಅವರಿಲ್ಲದೆ ನಾನು ನಿಮ್ಮ ಮುಂದೆ ಇರ್ತಾನೇ ಇರಲಿಲ್ಲ. ನನಗೆ ಎಷ್ಟು ಆಶ್ಚರ್ಯ ಆಗುತ್ತೆ ಅಂದ್ರೆ ಇಷ್ಟು ವರ್ಷ ಆದರೂ ಜನ ನನ್ನ ಇನ್ನೂ ಮರ್ತಿಲ್ಲ. ಅವರೇ ಅವರನ್ನು ಫ್ಯಾನ್ ಎಂದು ಕರೆದುಕೊಳ್ಳುತ್ತಾರೆ. ಅದು ಒಂಥರಾ ಹುಚ್ಚು ಪ್ರೀತಿ ಏನೋ ಒಂದು ತರ ಅಭಿಮಾನ ಅರ್ಥನೂ ಮಾಡಿಕೊಳ್ಳುವುದಕ್ಕೆ ಆಗೋಲ್ಲ. ಅವರಿಗೆ ನಾನು ಎಂದೆಂದಿಗೂ ಚಿರ ಋಣಿ,' ಎಂದಿದ್ದಾರೆ ಸಾನ್ಯಾ.
'ನಾನು ಇಷ್ಟು ದೊಡ್ಡ ಗ್ಯಾಪ್ ತೆಗೆದುಕೊಂಡಿದ್ದೇ ಬಿಗ್ ಸ್ಕ್ರೀನ್‌ಗೆ ತಯಾರಿ ಮಾಡಿಕೊಳ್ಳುವುದಕ್ಕೆ. ತುಂಬಾ ಸ್ಕ್ರಿಪ್ಟ್‌ಗಳನ್ನು ಕೇಳ್ತಿದೀನಿ. ಯಾವ ಪಾತ್ರ ಬಂದ್ರೂ ನಾನು ರೆಡಿ. ನೋಡೋಣ ಹೇಗೆ ಅಂತ. 2022ನಲ್ಲಿ ನಾನು ನಿಮ್ಮ ಮುಂದೆ ಬಿಗ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತೀನಿ. ನಮ್ಮ ಅಮ್ಮ ನನ್ನ ಜೊತೆ ಇನ್‌ಸ್ಟಾಗ್ರಾಂ ರೀಲ್ಸ್ (Instagram Reels) ಮಾಡ್ತಾರೆ. ಅಲ್ಲೇ ನಿಮಗೆ ಉತ್ತರ ಸಿಗುತ್ತೆ. ಅವರು ನನಗೆ ಎಷ್ಟು ಸಪೋರ್ಟ್ ಮಾಡ್ತಾರೆ ಅಂತ. ಅವರು ಲೈವ್ಲಿ ಬಬ್ಲಿ go to person. ಅವ್ರು ಸೆಟ್‌ಗೆ ಬಂದ್ರೆ ನನ್ನ ಹವಾ ಏನೂ ಇರೋಲ್ಲ ಎಲ್ಲಾ ಅವ್ರುದ್ದೇ ಹವಾ,' ಎಂದು ಸಾನ್ಯಾ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.