ಪಂಜಾಬಿ ಗಾಯಕ ಜಸ್ಕರಣ್ ಸಿಂಗ್ ದ್ವಾಪರ ಹಾಡನ್ನು ಹಾಡುವ ಮೂಲಕ ಮೋಡಿ ಮಾಡಿದ್ದಾರೆ. ಇವರ ಹಾಡನ್ನು ಮತ್ತೊಮ್ಮೆ ಕೇಳುವ ಅವಕಾಶ ಸಿಕ್ಕಿದೆ.
ಈಗ ಎಲ್ಲೆಲ್ಲೂ ಜೇನ ದನಿಯೋಳೆ, ಮೀನ ಕಣ್ಣೋಳೆ ಹಾಡಿನದ್ದೇ ಗುಣಗಾನ. ನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಈಗಾಗಲೇ ಈ ಹಾಡು 1.2 ಕೋಟಿ ವೀಕ್ಷಣೆ ಪಡೆದಿರುವುದು ಈ ಹಾಡು ಮೋಡಿ ಮಾಡಿರುವುದನ್ನು ನೋಡಬಹುದು. ಈ ಹಾಡು ಎಷ್ಟರಮಟ್ಟಿಗೆ ಮೋಡಿ ಮಾಡಿದೆ ಎಂದರೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮಾಳವಿಕಾ ನಾಯರ್ ಅಭಿನಯದ ಶ್ರೀನಿವಾಸ್ ರಾಜು ನಿರ್ದೇಶನದ ಕನ್ನಡ ರೋಮ್ಯಾಂಟಿಕ್ ಚಿತ್ರದ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಈ ಹಾಡೇ ಸಿನಿಮಾದ ಪ್ರಚಾರಕ್ಕೆ ಆಹ್ವಾನ ಪತ್ರಿಕೆಯಂತೆ ಕಾರ್ಯ ನಿರ್ವಹಿಸಿದೆ. ಚಿತ್ರದ ಯಾವುದೇ ಟೀಸರ್, ಟ್ರೇಲರ್ ಬಿಡುಗಡೆಯಾಗದೇ ಈ ಹಾಡಿನಿಂದಲೇ ಚಿತ್ರ ಓಡುತ್ತಿದೆ.
ಇಷ್ಟು ಸುಂದರವಾಗಿ ಹಾಡಿದ ಗಾಯಕ ಕನ್ನಡವೇ ಬರದ ಗಾಯಕ ಪಂಜಾಬ್ ಮೂಲದ ಜಸ್ಕರಣ್ ಸಿಂಗ್. ಸಾಮಾನ್ಯವಾಗಿ ಯಾವುದೇ ಭಾಷೆಯ ಗಾಯಕರು ತಮಗೆ ಮಾತನಾಡಲು ಬಾರದ ಭಾಷೆಗಳ ಹಾಡುಗಳನ್ನೂ ಹಾಡುತ್ತಾರೆ ಎನ್ನುವುದು ಹೊಸ ವಿಷಯವೇನಲ್ಲ. ಆದರೆ ಈ ರೀತಿ ಹಿಟ್ ಆಗುವ ಹಾಡುಗಳು ಕಡಿಮೆಯೇ. ಆದರೆ ದ್ವಾಪರ ಹಾಡಿನ ಮೋಡಿ ಮಾಡಿದ್ದಾರೆ ಜಸ್ಕರಣ್ ಸಿಂಗ್. ಇವರ ಈ ಹಾಡನ್ನು ಮತ್ತೊಮ್ಮೆ ಕೇಳುವ ಅವಕಾಶ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಸಿಕ್ಕಿದೆ. ಬರುವ ವಾರಾಂತ್ಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ನಡೆಯುವ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಖುದ್ದು ಜಸ್ಕರಣ್ ಸಿಂಗ್ ಈ ಹಾಡು ಹಾಡಿದ್ದಾರೆ. ಹಾಡಿನ ಸ್ಕ್ರಿಪ್ಟ್ ಇಲ್ಲದೆಯೇ ಇವರು ನಿರರ್ಗಳವಾಗಿ ಹಾಡಿ ಮೋಡಿ ಮಾಡಿದ್ದಾರೆ. ಈ ಹಾಡಿಗೆ ತೀರ್ಪುಗಾರರಾಗಿರುವ ಶಿವರಾಜ್ ಕುಮಾರ್, ರಕ್ಷಿತಾ ಸೇರಿದಂತೆ ಎಲ್ಲರೂ ತಲೆದೂಗಿದ್ದಾರೆ.
ಅಪ್ಪುನೇ ದೇವ್ರು ಅನ್ನೋದು ಯಾಕೆ ಅಂತ ಅವತ್ತೇ ಗೊತ್ತಾಗೋಯ್ತು.. ಪವಾಡ ಬಿಚ್ಚಿಟ್ಟ ಫುಡ್ ವ್ಲಾಗರ್
ಇನ್ನು ಜಸ್ಕರಣ್ ಸಿಂಗ್ ಕುರಿತು ಹೇಳುವುದಾದರೆ, ಇವರು ಇದಾಗಲೇ ಸರಿಗಮಪ ರಿಯಾಲಿಟಿ ಷೋನಲ್ಲಿ ಮೋಡಿ ಮಾಡಿದವರು. 'ನೀ ಸಿಗೋವರೆಗೂ..', 'ಸರಿಯಾಗಿ ನೆನಪಿದೆ..' ಮುಂತಾದ ಹಾಡುಗಳನ್ನು 'ಸರಿಗಮಪ' ವೇದಿಕೆ ಮೇಲೆ ಅವರು ಹಾಡಿದ್ದರು. ಇವರ ಗಾಯನಕ್ಕೆ ಈ ಷೋನಲ್ಲಿ ತೀರ್ಪುಗಾರರಾಗಿದ್ದ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ಹಂಸಲೇಖ ಅವರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಷೋನಿಂದಲೇ ಪ್ರೇರೇಪಿತರಾಗಿದ್ದ ಅರ್ಜುನ್ ಜನ್ಯ ಈಗ ಇವರಿಗೆ ಹಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ವಿ.ನಾಗೇಂದ್ರಪ್ರಸಾದ್ ಅವರು ಈ ಹಾಡನ್ನು ಬರೆದಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಒಟ್ಟು 'ಕೃಷ್ಣಂ ಪ್ರಣಯ ಸಖಿ' ಸಿನಿಮಾದಲ್ಲಿ 6 ಹಾಡುಗಳಿದ್ದು, ಇದಾಗಲೇ 3 ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ.
ಅಂದಹಾಗೆ, ಕೃಷ್ಣಂ ಪ್ರಣಯ ಸಖಿ ಸಿನಿಮಾ ಇದೇ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಆದರೆ ಈ ಚಿತ್ರದ ದ್ವಾಪರ ಹಾಡಿನ ಜೇನ ದನಿಯೋಳೆ, ಮೀನ ಕಣ್ಣೋಳೆ ಎನ್ನುವ ಚರಣ ಸೋಷಿಯಲ್ ಮೀಡಿಯಾದಲ್ಲಿ ಇದಾಗಲೇ ಹಂಗಾಮ ಸೃಷ್ಟಿಸಿದೆ. ಈ ಹಾಡಿಗೆ ವಿವಿಧ ಕ್ಷೇತ್ರಗಳ ಸೆಲೆಬ್ರೆಟಿಗಳಿಂದ ಹಿಡಿದು ಬಹುತೇಕ ಮಂದಿ ರೀಲ್ಸ್ ಮಾಡಿದ್ದಾರೆ. ಇದರ ಲಿರಿಕ್ಸ್ ಸೇರಿದಂತೆ ಹಿನ್ನೆಲೆ ಗಾಯನ, ಗಾಯಕನ ದನಿ ಎಲ್ಲವೂ ಮೋಡಿ ಮಾಡುತ್ತಿದೆ.
ಮದುವೆ ಆಕಾಂಕ್ಷಿಗಳಿಗೆ ಟಿಪ್ಸ್ ಕೊಟ್ಟ ಅವಿವಾಹಿತೆ ಕಂಗನಾ ಫ್ಯಾನ್ಸ್‌ಗೆ ಕೊಟ್ರು ಗುಡ್ ನ್ಯೂಸ್!