ನಟಿ ನಿವೇದಿತಾ ಗೌಡ ತುಂಡುಡುಗೆಯ ರೀಲ್ಸ್‌ಗಳಿಂದ ಶ್ರಾವಣ ಮಾಸದ ಮಡಿವಂತಿಕೆಗೆ ಧಕ್ಕೆ ಆಗುತ್ತಿದ್ದು, ಒಂದು ತಿಂಗಳ ಕಾಲ ನಿಮ್ಮ ಇನ್‌ಸ್ಟಾಗ್ರಾಮ್ ಖಾತೆ ಅನ್‌ಫಾಲೋ ಮಾಡುವುದಾಗಿ ಅಭಿಮಾನಿಗಳು ಹೇಳಿದ್ದಾರೆ.
ಬೆಂಗಳೂರು (ಆ.20): ನಟಿ ನಿವೇದಿತಾ ಗೌಡ ಅವರ ತುಂಡುಡುಗೆಯ ರೀಲ್ಸ್‌ಗಳಿಂದ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಶ್ರಾವಣ ಮಾಸದ ಮಡಿವಂತಿಕೆಗೆ ಧಕ್ಕೆ ಆಗುತ್ತಿದ್ದು, ಒಂದು ತಿಂಗಳ ಕಾಲ ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಅನ್‌ಫಾಲೋ ಮಾಡುವುದಾಗಿ ಹೇಳಿದ್ದಾರೆ.
ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸದ ದಿನಗಳಲ್ಲಿ ಹೆಚ್ಚು ಮಡಿವಂತಿಕೆಗೆ ಮಹತ್ವವನ್ನು ನೀಡಲಾಗುತ್ತದೆ. ಮಾಂಸಾಹಾರ ಸೇವೆ, ಮದ್ಯಪಾನ, ದೂಮಪಾನದಿಂದಲೂ ಕೆಲವರು ದೂರವಿರುತ್ತಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ನಟಿ ನಿವೇದಿತಾ ಗೌಡ ಅಭಿಮಾನಿಗಳು ನಾವು ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ನಿವೇದಿತಾ ಗೌಡ ಅವರ ಇನ್‌ಸ್ಟ್ರಾಗ್ರಾಮ್ ಖಾತೆಯನ್ನು ಅನ್‌ಫಾಲೋ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಮುಖ್ಯವಾದ ಕಾರಣವೇನು ಗೊತ್ತಾ.? ಇಲ್ಲಿದೆ ನೋಡಿ ಮಾಹಿತಿ..
ನನ್ನ ಲೈಫ್ ನನ್ನಿಷ್ಟ, ನಾನು ಬೆಂಗಳೂರು ಪಾರ್ಟಿಗೆ ಹೋಗಿದ್ದೆ ಏನಿವಾಗ? ನಟಿ ಹೇಮಾ
ನಟಿ ನಿವೇದಿತಾ ಗೌಡ ಅವರು ಟಿಕ್‌ಟಾಕ್ ಹಾಗೂ ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದಲೇ ಪ್ರಸಿದ್ಧಿಗೆ ಬಂದಿದ್ದಾರೆ. ಟಿಕ್‌ಟಾಕ್ ಸ್ಟಾರ್ ನಿವೇದಿತಾಗೆ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ಸಿಕ್ಕಿದ್ದೇ ತಡ ಜೀವನವೇ ಬದಲಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ರ್ಯಾಪರ್ ಚಂದನ್ ಶೆಟ್ಟಿ ಅವರನ್ನು ಲವ್ ಮಾಡಿದ್ದಾರೆ. ನಂತರ, ಮದುವೆ ಮಾಡಿಕೊಂಡು ಒಂದಷ್ಟು ವರ್ಷ ಸಂಸಾರವನ್ನೂ ಮಾಡಿ ಈಗ ಡಿವೋರ್ಸ್ ಪಡೆದು ದೂರವಾಗಿದ್ದಾರೆ. ಇದೀಗ ಪುನಃ ರೀಲ್ಸ್ ಮಾಡುತ್ತಿರುವ ನಿವೇದಿತಾ ಗೌಡ ತುಂಡು ಬಟ್ಟೆ ಧರಿಸಿ ಹಲವು ರೀಲ್ಸ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇನ್ನು ನಿವೇದಿತಾ ಗೌಡ ಅವರ ತುಂಡುಡುಗೆಯ ರೀಲ್ಸ್ ನೋಡಿದ ಅಭಿಮಾನಿಗಳು ಈಗ ಶ್ರಾವಣ ಮಾಸವಿದೆ. ಎಷ್ಟು ಮಡಿವಂತಿಕೆಯಿಂದ ಇರುತ್ತೇವೆಯೋ ಅಷ್ಟು ನಮಗೆ ಒಳ್ಳೆಯದು. ಈಗ ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೂ ಒಂದಲ್ಲಾ ಒಂದು ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು, ದೇವಸ್ಥಾನಗಳಿಗೆ ಭೇಟಿ ನೀಡುವುದು ಇದ್ದೇ ಇರುತ್ತದೆ. ಹೀಗಾಗಿ, ಮಡಿವಂತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಆದ್ದರಿಂದ ನಾವು ನಿವೇದಿತಾ ಗೌಡ ಅವರ ತುಂಡುಡುಗೆಯ ರೀಲ್ಸ್ ನೋಡಿದರೆ ನಮ್ಮ ಮಡಿವಂತಿಕೆ ಹಾಳಾಗುತ್ತದೆ ಎಂಬ ಅರ್ಥದಲ್ಲಿ ಶ್ರಾವಣ ಮಾಸದಲ್ಲಿ ನಿವೇದಿತಾ ಅಕೌಂಟ್ ಅನ್‌ಫಾಲೋ ಮಾಡುವುದಾಗಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಜೈಲಿನಲ್ಲಿದ್ದರೂ ನಟಿ ಪವಿತ್ರಾ ಗೌಡ ಧಿಮಾಕು ಕಮ್ಮಿಯಾಗಿಲ್ಲ!
ಕೆಟ್ಟದಾಗಿ ಕಾಮೆಂಟ್ ಬಂದರೂ ಕ್ಯಾರೇ ಎನ್ನದ ನಿವೇದಿತಾ: ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಆಗಿರುವ ನಟಿ ನಿವೇದಿತಾ ಗೌಡ ವಾರಕ್ಕೆ ಮೂರ್ನಾಲ್ಕು ವಿಡಿಯೋ ರೀಲ್ಸ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಒಳ್ಳೆಯ ಕಾಮೆಂಟ್‌ಗಳಿಗಿಂದ ಕೆಟ್ಟ ಕಾಮೆಂಟ್‌ಗಳೇ ಹೆಚ್ಚಾಗಿ ಬರುತ್ತಿವೆ. ನೀವು ಚಂದನ್ ಶೆಟ್ಟಿಯನ್ನು ಮದುವೆಯಾಗಿ ಸಂಸಾರ ಮಾಡಿಕೊಂಡಿರದೇ ಡಿವೋರ್ಸ್ ಕೊಟ್ಟಿದ್ದು ತಪ್ಪು. ನೀವು ಒಂದು ಮಗುವನ್ನೂ ಮಾಡಿಕೊಳ್ಳದೇ ಅವರಿಂದ ದೂರವಾಗಬಾರದಿತ್ತು ಎಂದೆಲ್ಲಾ ಕಾಮೆಂಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಜೊತೆಗೆ ಹಲವು ಕೆಟ್ಟ ಕಾಮೆಂಟ್‌ಗಳನ್ನು ಮಾಡುತ್ತಿದ್ದರೂ ನಿವೇದಿತಾ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಪಾಡಿಗೆ ರೀಲ್ಸ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.