cute video : ನೇಹಾ ಹೊಟ್ಟೆಗೆ ಮುತ್ತಿಟ್ಟು ಬರ್ತ್ ಡೇ ವಿಶ್ ಮಾಡಿದ ಅನುಪಮಾ ಗೌಡ

By Roopa Hegde  |  First Published Aug 20, 2024, 3:19 PM IST

ಕನ್ನಡ ಕಿರುತೆರೆ ನಟಿಯರಾದ ಅನುಪಮಾ ಗೌಡ ಹಾಗೂ ನೇಹಾ ಗೌಡ ಬೆಸ್ಟ್ ಫ್ರೆಂಡ್ಸ್. ಆಗಾಗ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುತ್ತದೆ. ಈಗ ನೇಹಾ ಗೌಡ ಬೇಬಿ ಬಂಪ್ ಗೆ ಮುತ್ತಿಟ್ಟು ಅನುಪಮಾ ಸುದ್ದಿಯಾಗಿದ್ದಾರೆ.
 


ಲಕ್ಷ್ಮಿ ಬಾರಮ್ಮ ಗೊಂಬೆ (Lakshmi Baramma), ಬಿಗ್ ಬಾಸ್ ನಟಿ ನೇಹಾ ಗೌಡ (actress Neha Gowda )ಅಮ್ಮನಾಗ್ತಿದ್ದಾರೆ. ಮದುವೆಯಾದ ಆರು ವರ್ಷಗಳ ನಂತ್ರ ಅಭಿಮಾ ನಿಗಳಿಗೆ ನೇಹಾ ಹಾಗೂ ಚಂದನ್ ಗೌಡ ಖುಷಿ ಸುದ್ದಿ ನೀಡಿದ್ದರು. ನೇಹಾ ಆಗಸ್ಟ್ 18ರಂದು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಮಯದಲ್ಲಿ ನಟಿ ನೇಹಾ ಹಾಗೂ ನಿರೂಪಕಿ ಅನುಪಮಾ ಗೌಡ (Anchor Anupama Gowda) ವಿಡಿಯೋ ಒಂದು ವೈರಲ್ ಆಗಿದೆ. ಅನುಪಮಾ ಗೌಡ, ನೇಹಾ ಗೌಡಗೆ ಹುಟ್ಟುಹಬ್ಬದ ವಿಶ್ ಮಾಡಿ, ಕ್ಯೂಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದ್ರ ಜೊತೆ ಭಾವನಾತ್ಮಕ ಶೀರ್ಷಿಕೆ ಹಾಕಿದ್ದಾರೆ.

ಅನುಪಮಾ ಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಡ್ರೆಸ್ ನಲ್ಲಿ ಇಬ್ಬರು ಮುದ್ದಾಗಿ ಕಾಣ್ತಿದ್ದಾರೆ. ನೇಹಾ ಗೌಡ ಬೇಬಿ ಬಂಪ್ ಗೆ ಅನುಪಮಾ ಮುತ್ತಿಟ್ಟಿದ್ದಾರೆ. ಹಾಗೆ ಗೊಂಬೆ ಹೊಟ್ಟೆಯನ್ನು ಹಿಡಿದು ಅನುಪಮಾ ಖುಷಿಪಟ್ಟಿರೋದನ್ನು ವಿಡಿಯೋದಲ್ಲಿ ನೋಡ್ಬಹುದು. ಈ ವಿಡಿಯೋ ಹಂಚಿಕೊಂಡಿರುವ ಅನುಪಮಾ, ಆತ್ಮೀಯ ಬೆಸ್ಟ್ ಫ್ರೆಂಡ್, 14 ವರ್ಷಗಳಿಂದ ನಿನ್ನನ್ನು ಅರಿತಿದ್ದೇನೆ. ನನ್ನ ಜೀವನದಲ್ಲಿ ನಿನ್ನನ್ನು ಪಡೆದಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನೀನು ನನಗೆ ಎಷ್ಟು ಅರ್ಥವಾಗಿದ್ದೀಯಾ ಎಂಬುದನ್ನು ವ್ಯಕ್ತಪಡಿಸಲು ಪದಗಳು ಕಡಿಮೆ. ನಿನ್ನ   ದಯೆ, ಪ್ರಾಮಾಣಿಕತೆ, ಪ್ರೀತಿ, ಕಾಳಜಿಗೆ ಧನ್ಯವಾದಗಳು. ನೀನು ಅದ್ಭುತ ವ್ಯಕ್ತಿ ಮತ್ತು ನನ್ನ ಮೆಚ್ಚಿನ ವ್ಯಕ್ತಿ ಮತ್ತು ನಾನು ಯಾವಾಗಲೂ ನಿನ್ನನ್ನು ನನ್ನ ಬೆಸ್ಟ್ ಫ್ರೆಂಡ್ ಆಗಿ ಆಯ್ಕೆ ಮಾಡ್ತೇನೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಹ್ಯಾಪಿ ಬರ್ತ್ ಡೇ ಎಂದು ಅನುಪಮಾ ಗೌಡ ಶೀರ್ಷಿಕೆ ಹಾಕಿದ್ದಾರೆ.

Tap to resize

Latest Videos

rashmika mandanna : ರಕ್ಷಾಬಂಧನದ ದಿನ ಪುಟ್ಟ ತಂಗಿ ಫೋಟೋ ಹಾಕಿ ರಕ್ಷಣೆ ಪ್ರಮಾಣ ಮಾಡಿದ ರಶ್ಮಿಕಾ‌

ಅನುಪಮಾ ಗೌಡ ಈ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗಿದೆ. ಇಬ್ಬರು ತುಂಬಾ ಸುಂದರವಾಗಿ ಕಾಣ್ತಿದ್ದೀರಿ, ನಿಮ್ಮಿಬ್ಬರ ಸ್ನೇಹ ಸದಾ ಹೀಗೆ ಇರಲಿ ಎಂದು ಅಭಿಮಾನಿಗಳು ಹರಸಿದ್ದಾರೆ. ಯಾರ ದೃಷ್ಟಿಯೂ ನಿಮ್ಮ ಮೇಲೆ ಬೀಳದೆ ಇರಲಿ ಅಂತ ಒಬ್ಬ ಅಭಿಮಾನಿ ಹೇಳಿದ್ರೆ, ನಿಮ್ಮ ದೃಷ್ಟಿ ನಾನು ತೆಗೆದಿದ್ದೇನೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಚಿರಕಾಲ ನಿಮ್ಮ ಸ್ನೇಹ ಹೀಗೆ ಇರಲಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಒಬ್ಬರು ನೇಹಾಗೆ ಗಂಡು ಮಗು ಅಂದ್ರೆ ಇನ್ನೊಬ್ಬರು ಹೆಣ್ಮಗು ಅಂತ ಭವಿಷ್ಯ ನುಡಿದಿದ್ದಾರೆ.

ನೇಹಾ ಗೌಡ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜೂನ್ ಒಂದರಂದು ನೇಹಾ ಹಾಗೂ ಅವರ ಪತಿ, ನಟ ಚಂದನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. 2018ರಲ್ಲಿ ನೇಹಾ ಹಾಗೂ ಚಂದನ್ ಮದುವೆ ನಡೆದಿದೆ. ಚೊಚ್ಚಲ ಮಗುವಿಗೆ ಜನ್ಮ ನೀಡಲಿರುವ ನೇಹಾ ತುಂಬು ಗರ್ಭಿಣಿ. ನೇಹಾ ಗೌಡ ಬೇಬಿ ಬಂಪ್ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಬಾರಿ ವೈರಲ್ ಆಗಿದೆ. 

ನೇಹಾ ಗೌಡ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅನುಪಮಾ ಜೊತೆಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬೆಸ್ಟ್ ಫ್ರೆಂಡ್ ಎಂದು ನೇಹಾ ಶೀರ್ಷಿಕೆ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನೇಹಾ ಗೌಡ, ತಮ್ಮ ಪ್ರೆಗ್ನೆನ್ಸಿ ಟೈಂ ಎಂಜಾಯ್ ಮಾಡ್ತಿದ್ದಾರೆ. ಫೋಟೋ, ವಿಡಿಯೋಗಳನ್ನು ಹಂಚಿಕೊಳ್ತಿದ್ದಾರೆ.

chandan shetty : ಚಂದನ್ ಪರಮಾನ್ನ ವೀಡಿಯೋ ಶೇರ್ ಮಾಡಿದ ಕಿರಿಕ್ ಕೀರ್ತಿ, ಹಾರ್ದಿಕ್ ಪಾಂಡ್ಯಾನೂ ಸೇರಿಸಿಕೊಳ್ಳಿ ಎಂದ

ಇತ್ತ ಅನುಪಮಾ ಗೌಡ ಕೂಡ ನಿರೂಪಣೆಯಲ್ಲಿ ಬ್ಯುಸಿಯಿದ್ದಾರೆ. ಕಲರ್ಸ್ ಕನ್ನಡದ ರಾಜಾ ರಾಣಿ ಶೋ ಆಂಕರಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ಅನುಪಮಾ, ಆಗಾಗ ಅಭಿಮಾನಿಗಳಿಗೆ ಬ್ಯೂಟಿ ಟಿಪ್ಸ್ ನೀಡ್ತಿರುತ್ತಾರೆ. ಒಂದು ದಿನದ ಹಿಂದಷ್ಟೆ ಅವರು ತಮಿಳು ಹಾಡಿಗೆ ಫೋಸ್ ನೀಡಿದ್ದು, ಅವರ ಸೌಂದರ್ಯವನ್ನು ಅಭಿಮಾನಿಗಳು ಹಾಡಿಹೊಗಳಿದ್ದಾರೆ. 
 

click me!