ಅಶೋಕ್​ ಶ್ರೀಮಂತನಲ್ಲನೆಂಬ ಟೆನ್ಷನ್​ನಲ್ಲಿ ಸಿಕ್ಕಾಪಟ್ಟೆ ಪಾನಿಪುರಿ ತಿನ್ನೋದಾ ಪ್ರಿಯಾ? ಇವಳ ಪಾಡು ಯಾರಿಗೂ ಬೇಡ...

Published : Jan 10, 2024, 07:11 PM IST
ಅಶೋಕ್​ ಶ್ರೀಮಂತನಲ್ಲನೆಂಬ ಟೆನ್ಷನ್​ನಲ್ಲಿ ಸಿಕ್ಕಾಪಟ್ಟೆ ಪಾನಿಪುರಿ ತಿನ್ನೋದಾ ಪ್ರಿಯಾ? ಇವಳ ಪಾಡು ಯಾರಿಗೂ ಬೇಡ...

ಸಾರಾಂಶ

 ಅಶೋಕ್​ ಶ್ರೀಮಂತನಲ್ಲ ಎಂದು ಅರಿವಾಗುತ್ತಿದ್ದಂತೆಯೇ ಪ್ರಿಯಾಳಿಗೆ ಟೆನ್ಷನ್​ ಶುರುವಾಗಿ ಸಿಕ್ಕಾಪಟ್ಟೆ ಪಾನಿಪುರಿ ತಿನ್ನುತ್ತಿದ್ದಾಳೆ. ಇಂಥ ಸ್ಥಿತಿಯಲ್ಲಿ ನೀವೇನು ಮಾಡ್ತೀರಿ?  

ಸೀತಾ-ರಾಮ ಸೀರಿಯಲ್​ ಇದೀಗ ಇಂಟರೆಸ್ಟಿಂಗ್​ ಘಟ್ಟ ತಲುಪಿದೆ.  ಸತ್ಯ ಗೊತ್ತಾಗಿಬಿಟ್ಟಿದೆ.  ಕಂಪೆನಿಯ  ಕೆಲಸದ ಮೇಲೆ ರಾಮ್‌, ತಾತನ ಜತೆ ಹೈದರಾಬಾದ್​ಗೆ ತೆರಳಿದ್ದ. ಅಲ್ಲಿಂದ  ಬರುತ್ತಿದ್ದಂತೆ, ಎಲ್ಲ  ಸತ್ಯ ಹೇಳಿ ಬಿಡುಗ ಮನಸ್ಸು ಮಾಡಿದ್ದ. ಇದನ್ನು ಅಶೋಕ್​ಗೂ ತಿಳಿಸಿದ್ದ.  ಹೈದರಾಬಾದ್‌ನಿಂದ ನೀನು ಬರುವಷ್ಟರಲ್ಲಿಯೇ ನಾನು ಬಾಸ್‌ ಪಟ್ಟ ಕಳಚಿಡಬಹುದಲ್ಲವೇ ಎಂದಿದ್ದ ಅಶೋಕ. ಅದಕ್ಕೆ ಖಂಡಿತ ಮಗ ಎಂದಿದ್ದ ರಾಮ.  ಆದರೆ ರಾಮ್​ ಕಂಪೆನಿಗೆ ಅವಾರ್ಡ್​ ಬಂದ ಹಿನ್ನೆಲೆಯಲ್ಲಿ ಅದರ ಮಾಲೀಕನಾಗಿರುವ ರಾಮ್​ ಬಹುಮಾನ ಪಡೆದುಕೊಂಡು ಬಂದಿರುವುದನ್ನು ಟಿವಿಯಲ್ಲಿ ನೋಡಿದ ಸೀತಾಳಿಗೆ ಅಸಲಿಯತ್ತು ಗೊತ್ತಾಗಿ ಬಿಟ್ಟಿದೆ. ರಾಮ್​ ಸುಳ್ಳು ಹೇಳಿದ್ದರಿಂದ ವಿಪರೀತ ನೋವು ಉಂಟಾಗಿದೆ. ರಾಮನನ್ನು ಸರ್​ ಸರ್​ ಎಂದು ಕರೆಯುತ್ತಿದ್ದಾಳೆ. ನಾನು ನಿಮ್ಮ ಅದೇ ಹಳೆಯ ರಾಮ್​ ಎಂದು ರಾಮ್​ ಸೀತಾಳ ಮುಂದೆ ಗೋಳಾಡುತ್ತಿದ್ದರೂ ಸುಳ್ಳು ಹೇಳಿದ ಸಿಟ್ಟಿನಿಂದ ಸೀತಾ ಕುದಿಯುತ್ತಿದ್ದಾಳೆ.

ಇದು ಸೀತಾಳ ಕಥೆಯಾದರೆ ಶ್ರೀಮಂತೆಯಾಗುವ ಕನಸು ಕಾಣುತ್ತಿದ್ದ ಪ್ರಿಯಾಳದ್ದು ಇನ್ನೊಂದು ಕಥೆ. ಎಲ್ಲರೂ ಸೀತಾಳ ಮೇಲಿನ ಚಿಂತೆಯಲ್ಲೇ ಮುಳುಗಿದ್ದರೆ, ಸೀತಾ ಮತ್ತು ರಾಮನನ್ನು ಒಂದು ಮಾಡುವ ಕನಸು ಕಾಣುತ್ತಿದ್ದರೆ ಇತ್ತ ಪ್ರಿಯಾಳ ಗೋಳು ಮಾತ್ರ ಯಾರಿಗೂ ಬೇಡ. ಕಂಪೆನಿಯ ಓನರ್​ ಎಂದು ಅಶೋಕನನ್ನು ಹಿಗ್ಗಾಮುಗ್ಗ ಪ್ರೀತಿಸ್ತಿದ್ದಾಳೆ ಪ್ರಿಯಾ. ಶ್ರೀಮಂತ ಎನ್ನುವ ಕಾರಣಕ್ಕಾಗಿಯೇ ಪ್ರೀತಿ ಮಾಡುವ ಹೆಣ್ಣುಮಕ್ಕಳಿಗೂ ನೋವು ಉಂಟಾಗುವ ಪರಿಸ್ಥಿತಿ ಪ್ರಿಯಾಳದ್ದು. ಇದೀಗ ಕಂಪೆನಿಯ ಮಾಲೀಕ ರಾಮ್​ ಎನ್ನುವ ಸತ್ಯ ಅವಳಿಗೂ ತಿಳಿದಿದೆ.

ಹೊಸ ವರ್ಷಕ್ಕೆ ಸೀತಾ-ರಾಮ ಫ್ಲ್ಯಾಷ್​ಬ್ಯಾಕ್​: ವಿಡಿಯೋ ನೋಡಿ ಲವ್​ ಮಾಡಬೇಕೆನಿಸ್ತಿದೆ ಎಂದ ಫ್ಯಾನ್ಸ್​!

ಅದರೆ ರಾಮ್​, ಸೀತಾಳನ್ನು ಪ್ರೀತಿಸೋ ವಿಷ್ಯ ಗೊತ್ತಿರೋ ಪ್ರಿಯಾ ಅಂತೂ ಪಾಪ ಅವನ ಹಿಂದೆ ಹೋಗುವ ಹಾಗಿಲ್ಲ, ಇತ್ತ ಅಶೋಕ್​ ಮಾಮೂಲಿ ಕೆಲಸಗಾರ ಎಂದುಕೊಂಡರೂ ಅವನನ್ನು ಬಿಡುವ ಹಾಗಿಲ್ಲ. ಅಶೋಕ್​ಗೂ ರಾಮ್​ ಕುಟುಂಬವಾಗಿರುವ ದೇಸಾಯಿ ಕುಟುಂಬದ ಜೊತೆಗೆ ಕೊನೆಯ ಪಕ್ಷ ಲಿಂಕ್​ ಇದ್ದರೆ, ಆತ ಶ್ರೀಮಂತ ಎಂದುಕೊಂಡು ಖುಷಿ ಪಡಬಹುದಿತ್ತು ಎಂದು ಫೋಟೋಗಳನ್ನು ಸರ್ಚ್​ ಮಾಡುತ್ತಿದ್ದಾಳೆ ಪ್ರಿಯಾ. ಆದರೆ ರಾಮ್​ ಕುಟುಂಬದ ಫೋಟೋದಲ್ಲಿ ಅಶೋಕ್​ ಬರುವುದಾದರೂ ಹೇಗೆ?

ಸಿಕ್ಕಾಪಟ್ಟೆ ಕೋಪ, ಟೆನ್ಷನ್​, ವರಿ ಆದಾಗ ಕೆಲವರು ಒಂದೊಂದು ರೀತಿ ವರ್ತಿಸುತ್ತಾರೆ. ಇದೀಗ ಪ್ರಿಯಾ ಖಾರವಾಗಿರುವ ಪಾನಿಪುರಿ ತಿನ್ನುವ ಮೂಲಕ ಟೆನ್ಷನ್​ ಹೊರಹಾಕುತ್ತಿದ್ದಾಳೆ. ದೇಸಾಯಿ ಕುಟುಂಬಕ್ಕೂ ಅಶೋಕ್​ಗೂ ಏನಾದರೂ ಸಂಬಂಧ ಇದೆಯಾ ಎಂದು ನೋಡಿ ನೋಡಿ ಸಾಕಾಗಿ ಹೋಗಿದೆ. ಏನೂ ಸಂಬಂಧವಿಲ್ಲ ಎಂದು ಗೊತ್ತಾದಾಗ ಪಾನೀಪುರಿ ತಿನ್ನುತ್ತಿದ್ದಾಳೆ. ನೀವೂ ಏನು ಮಾಡುತ್ತೀರಿ ಇಂಥ ಸ್ಥಿತಿಯಲ್ಲಿ ಎಂದು ಜೀ ಕನ್ನಡ ವಾಹಿನಿ ಪ್ರೇಕ್ಷಕರನ್ನು ಪ್ರಶ್ನಿಸಿ ಪ್ರೊಮೋ ರಿಲೀಸ್​ ಮಾಡಿದೆ. ಹಾಗಿದ್ದರೆ ನೀವು ಮಾಡೋದೇನು?   
 ಪ್ರತಾಪ್ ನಿಜಕ್ಕೂ ಆತ್ಮಹತ್ಯೆಗೆ ಯತ್ನಿಸಿದ್ರಾ? ಅಂದು ಏನಾಗಿತ್ತೆಂದು ಸಂಪೂರ್ಣ ಮಾಹಿತಿ ನೀಡಿದ ಡ್ರೋನ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!
ಮಂತ್ರಾಲಯದ ರಾಯರ ಪವಾಡದಿಂದಲೇ ಮದುವೆಯಾಯ್ತು: Suhana Syed ಎಂದೂ ಹೇಳಿರದ ರಿಯಲ್ ಕಥೆ