ಆಸ್ಪತ್ರೇಲಿ ಭಾಗ್ಯಳ ಕೂಗು ಕೇಳಿಸಿಕೊಂಡ ಗಣೇಶ, ಬಂದಿದ್ದು ವೈಷ್ಣವ್ ರೂಪದಲ್ಲಿ!

By Shriram BhatFirst Published Jan 10, 2024, 3:55 PM IST
Highlights

ತನ್ವಿಯ ಜೀವ ಉಳಿಸುವ ದಾರಿ ಕಾಣದೇ ಭಾಗ್ಯಾ ಸೇರಿದಂತೆ ಎಲ್ಲರೂ ಆಸ್ಪತ್ರೆಯಲ್ಲಿ ಕಂಗಾಲಾಗಿ ಕುಳಿತಿದ್ದಾರೆ. ಅಷ್ಟರಲ್ಲಿ ಭಾಗ್ಯಾಗೆ ಏನೋ ಯೋಚನೆ ಆದಂತಾಗಿ ಎದ್ದು ಸೀದಾ ಆಸ್ಪತ್ರೆಯಲ್ಲಿರುವ ಗಣೇಶನ ವಿಗ್ರಹದ ಮುಂದೆ ನಿಂತು ಮಗಳನ್ನು ಕಾಪಾಡು ಎಂದು ಬೇಡಿಕೊಳ್ಳುತ್ತಾಳೆ. 

ತನ್ವಿಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿ ಮಲಗಿದ್ದಾಳೆ. ಅವಳಿಗೆ ಅರ್ಜೆಂಟ್ ಸೇಮ್ ಗುಂಪಿನ ಬ್ಲಡ್ ಅಗತ್ಯವಿದೆ. ಆದರೆ, ಎಲ್ಲಿಯೂ ಸಿಕ್ಕಿಲ್ಲ. ಅವಳ ಅಪ್ಪ ತಾಂಡವ್‌ದು ಅದೇ ಗ್ರೂಫ್ ಬ್ಲಡ್, ಆದರೆ ಆತ ಫೋನ್‌ ಕಾಲ್‌ಗೆ ಕೂಡ ಸಿಕ್ಕಿಲ್ಲ. ಅದೇ ಆತಂಕದಲ್ಲಿ ಭಾಗ್ಯಾ ಸೇರಿದಂತೆ ಮನೆ ಮುಂದಿಯೆಲ್ಲ ಆಸ್ಪತ್ರೆಯಲ್ಲಿ ಕುಳಿತು ಕಣ್ಣೀರು ಹಾಕುತ್ತಿದ್ದಾರೆ. ಆದರೆ, ತಾಂಡವ್ ಬರುತ್ತಿಲ್ಲ, ಬೇರೆಲ್ಲೂ ರಕ್ತದ ಅರೇಂಜ್‌ಮೆಂಟ್ ಆಗಿಲ್ಲ. ಸೇಮ್ ಗ್ರೂಫ್ ಬ್ಲಡ್ ಸಿಕ್ಕಿಲ್ಲ ಅಂದ್ರೆ ತನ್ವಿಯ ಜೀವ ಉಳಿಯಲ್ಲ ಎಂದಿದ್ದಾರೆ ಡಾಕ್ಟರ್. 

ಈಗ ತನ್ವಿಯ ಜೀವ ಉಳಿಸುವ ದಾರಿ ಕಾಣದೇ ಭಾಗ್ಯಾ ಸೇರಿದಂತೆ ಎಲ್ಲರೂ ಆಸ್ಪತ್ರೆಯಲ್ಲಿ ಕಂಗಾಲಾಗಿ ಕುಳಿತಿದ್ದಾರೆ. ಅಷ್ಟರಲ್ಲಿ ಭಾಗ್ಯಾಗೆ ಏನೋ ಯೋಚನೆ ಆದಂತಾಗಿ ಎದ್ದು ಸೀದಾ ಆಸ್ಪತ್ರೆಯಲ್ಲಿರುವ ಗಣೇಶನ ವಿಗ್ರಹದ ಮುಂದೆ ನಿಂತು ಮಗಳನ್ನು ಕಾಪಾಡು ಎಂದು ಬೇಡಿಕೊಳ್ಳುತ್ತಾಳೆ. ಅವಳನ್ನು ನೋಡಿ ಹಿಂಬಾಲಿಸಿಕೊಂಡು ಹೋದ ಕುಸುಮಾ, ಪೂಜಾ, ಗುಂಡಣ್ಣ ಹಾಗೂ ಭಾಗ್ಯಾಳ ತಾಯಿ ಕೂಡ ಗಣೇಶನ ವಿಗ್ರಹದ ಮುಂದೆ ಬಂದು ನಿಂತು ಕಣ್ಣೀರಾಗಿ ಬೇಡಿಕೊಳ್ಳುತ್ತಾರೆ. 

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ನಟ-ರಾಜಕಾರಣಿ ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ

ಅಚ್ಚರಿ ಎಂಬಂತೆ, ಯಾರೋ ಅತ್ತಿಗೇ ಅತ್ತಿಗೇ ಎಂದು ಕೂಗಿದಂತೆ ಕೇಳಿಸುತ್ತದೆ. ಅತ್ತ ತಿರುಗಿ ನೋಡಿದರೆ, ಅದು ವೈಷ್ಣವ್. ಸೀದಾ ಭಾಗ್ಯಾ ಸಮೀಪಕ್ಕೆ ಬಂದ ವೈಷ್ಣವ್, 'ಅತ್ತಿಗೇ ನಾನು ಇದೀನಿ ಅಂತ ಮರೆತೇ ಬಿಟ್ರಾ? ಪೂಜಾಳ ಸ್ಟೇಟಸ್ ನೋಡಿ ನಂಗೆ ವಿಷ್ಯ ಗೊತ್ತಾಯ್ತು. ಅದಕ್ಕೇ ಸೀದಾ ಆಸ್ಪತ್ರೆಗೇ ಬಂದೆ' ಎನ್ನುತ್ತಾನೆ. ಭಾಗ್ಯಾಳಿಗೆ ತಲೆಯೇ ಓಡುತ್ತಿಲ್ಲ. ಅಷ್ಟರಲ್ಲಿ ಮುಂದುವರೆದ ವೈಷ್ಣವ್ 'ನಂದೂ ಸೇಮ್ ಬ್ಲಡ್ ಗ್ರೂಫ್ ಎಂಬುದನ್ನು ಮರೆತೇಬಿಟ್ರಾ?' ಎನ್ನುತ್ತಾನೆ. ತಕ್ಷಣ ಭಾಗ್ಯಾಳಿಗೆ ಯಾವುದೋ ಹಳೆಯ ಘಟನೆ ನೆನಪಾಗುತ್ತೆ. 

ಅಡುಗೆ ಭಟ್ಟರಾದ್ರಾ ಪೃಥ್ವಿ ಅಂಬಾರ್, ದಿಯಾ ಗೆದ್ಮೆಲೂ ಯಾಕೆ ತಡ; ಗರಂ ಆಗಿದಾರಾ ಪ್ರೇಕ್ಷಕರು?!

'ಡಾಕ್ಟರ್ ಎಲ್ಲಿದ್ದಾರೆ? ನಾನು ಈಗಲೇ ರಕ್ತ ಕೊಡ್ತೀನಿ' ಎನ್ನುವ ವೈಷ್ಣವ್ ನೋಡಿ ಭಾಗ್ಯಾ ಹಾಗೂ ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯ ಆಗುತ್ತದೆ. ಭಾಗ್ಯಾ-ತಾಂಡವ್ ಮಗಳು ತನ್ವಿ ಬದುಕುತ್ತಾಳೆ ಎಂಬ ಆಶಾಭಾವವನ್ನು ಈಗ ಬಿಡುಗಡೆ ಆಗಿರುವ ಪ್ರೋಮೋ ಕೊಡುತ್ತಿದೆ. ಒಟ್ಟಿನಲ್ಲಿ, ತನ್ವಿಗೆ ರಕ್ತ ಕೊಡಲು ತಾಂಡವ್ ಬರದಿದ್ದರೂ ವೈಷ್ಣವ್ ಕರೆಸುವ ಮೂಲಕ ಗಣೇಶನ ಅನುಗ್ರಹ ಆಗಿದೆ. ತನ್ವಿ ಬದುಕುತ್ತಾಳೆ. ಆದರೆ, ತಾಂಡವ್-ಭಾಗ್ಯಾ ಕತೆ ಮುಂದೇನು ಎಂಬುದನ್ನು ಕಾದು ನೋಡಬೇಕಿದೆ. 

 

 

click me!