
ಕಿರುತೆರೆ ಲೋಕದ ಸೆಲೆಬ್ರಿಟಿ ಕಪಲ್ ರಾಧಿಕಾ ಮತ್ತು ಶ್ರವಂತ್ ತಮ್ಮ ಪುತ್ರಿ ಜಾಹ್ನವಿಗೆ ಅಕ್ಷಯತೃತೀಯ ಹಬ್ಬದಂದು ಅನ್ನಪ್ರಾಶನ ಮಾಡಿದ್ದಾರೆ. ಈ ಸಾಂಪ್ರದಾಯಿಕ ಆಚರಣೆ ಹೇಗಿರುತ್ತದೆ ಎಂದು ಅಭಿಮಾನಿಗಳ ಜೊತೆ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಕಿರುತೆರೆ ಜೋಡಿ ರಾಧಿಕಾ- ಶ್ರವಂತ್ ಪುತ್ರಿಗೆ ಸರಳ ನಾಮಕರಣ; ಹೆಸರೇನು ಗೊತ್ತಾ?
'ಅಕ್ಷಯ ತೃತಿಯ ಶುಭ ದಿನದಂದು ನಮ್ಮ ಪುತ್ರಿ ಜಾನ್ಹವಿಗೆ ಅನ್ನಪ್ರಾಶನ ಮಾಡಿದೆವು. ನನ್ನ ಮಗಳಿಗೆ ಮೊದಲ ಬಾರಿ ಅನ್ನ ತಿನ್ನಿಸಿದ ಸಂಭ್ರಮವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ. ಆಕೆಯ ರಿಯಾಕ್ಷನ್ ನೋಡಲು ನಾವು ತುಂಬಾ excit ಆಗಿದ್ವಿ' ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ತಂದೆಯ ಮಡಿಲಿನಲ್ಲಿ ಜಾಹ್ನವಿ ಕುಳಿತುಕೊಂಡು ಅನ್ನ ತಿನ್ನುತ್ತಿರುವ ವಿಡಿಯೋ ತುಂಬಾನೇ ಮುದ್ದಾಗಿದೆ. ಅಲ್ಲದೆ ಜಾಹ್ನವಿ ಹೆಸರಿನಲ್ಲಿ ಪೋಷಕರು ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. 24 ಪೋಸ್ಟ್ ಇರುವ ಈ ಖಾತೆಯಲ್ಲಿ ಸುಮಾರು 1500 ಕ್ಕೂ ಫಾಲೋವರ್ಸ್ ಹೊಂದಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.