ಮಲ್ಲಿಗೆ ಗಂಡನ ಹೃದಯದಲ್ಲಿ ಅಲ್ಲದಿದ್ರೂ ಪಕ್ಕದಲ್ಲಿಯೇ ಜಾಗ ಮಾಡಿಕೊಟ್ಟ ಭೂಮಿಕಾ! ಅತ್ತೆ ಕಿಡಿಕಿಡಿ

Published : Feb 29, 2024, 02:15 PM IST
ಮಲ್ಲಿಗೆ ಗಂಡನ ಹೃದಯದಲ್ಲಿ ಅಲ್ಲದಿದ್ರೂ ಪಕ್ಕದಲ್ಲಿಯೇ ಜಾಗ ಮಾಡಿಕೊಟ್ಟ ಭೂಮಿಕಾ! ಅತ್ತೆ ಕಿಡಿಕಿಡಿ

ಸಾರಾಂಶ

ಮಲ್ಲಿಗೆ ಗಂಡನ ಹೃದಯದಲ್ಲಿ ಅಲ್ಲದಿದ್ರೂ ಪಕ್ಕದಲ್ಲಿಯೇ ಜಾಗ ಮಾಡಿಕೊಟ್ಟಿದ್ದಾಳೆ ಭೂಮಿಕಾ! ಅತ್ತೆ ಕಿಡಿಕಿಡಿಯಾಗಿದ್ದಾಳೆ. ಮುಂದೇನು?   

ಹೇಳಿಕೇಳಿ ಮಲ್ಲಿ ಮನೆಯ ಕೆಲಸದಾಕೆ. ಅವಳು ಎಲ್ಲರ ಜೊತೆ ಮೇಲೆ ಕುಳಿತು ಊಟ ಮಾಡಲು ಮನಸ್ಸು ಮಾಡುತ್ತಾಳಾ? ಇಲ್ಲವೇ ಇಲ್ಲ. ಮನೆಯ ಸೊಸೆಯಾದರೂ ಆಕೆಗೆ ಕುತಂತ್ರಿ ಗಂಡ ಜಯದೇವನ ಹೃದಯಲ್ಲಿ  ಸ್ಥಾನ ಸಿಗುವುದು ಸದ್ಯ ಅಂತೂ ಸಾಧ್ಯವೇ ಇಲ್ಲ. ಮನೆಯ ಕೆಲಸದಾಕೆಯ ಜೀವನದ ಜೊತೆ ಚೆಲ್ಲಾಟವಾಡಿದ್ದ ಜಯದೇವಗೆ ತಕ್ಕ ಶಾಸ್ತಿಯಾಗಿದೆ. ಹೆಣ್ಣುಮಕ್ಕಳನ್ನು ಕಾಮತೃಷೆ ತೀರಿಸಿಕೊಳ್ಳುವ ವಸ್ತು ಎಂದು ತಿಳಿದುಕೊಂಡಿದ್ದ ಜಯದೇವನಿಗೆ ತಕ್ಕ ಬುದ್ಧಿ ಕಲಿಸಿದ್ದಾಳೆ ಭೂಮಿಕಾ. ಇದೇ ಕಾರಣಕ್ಕೆ ಜಯದೇವನ ಅಮ್ಮ ಅರ್ಥಾತ್​ ಅತ್ತೆಯ ದ್ವೇಷಕ್ಕೂ ಕಾರಣಳಾಗಿದ್ದಾಳೆ. ಮದುವೆಯೇನೋ ಆಗಿದೆ, ಆದರೆ ಜಯದೇವ ಆಕೆಯನ್ನು ತನ್ನ ಪತ್ನಿ ಎಂದು ಒಪ್ಪಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. 

ಇದರ ಹೊರತಾಗಿಯೂ ಮಲ್ಲಿಗೆ ನ್ಯಾಯ ಒದಗಿಸಲು ಭೂಮಿಕಾ ಸಾಕಷ್ಟು ಶ್ರಮ ಪಡುತ್ತಿದ್ದಾಳೆ. ಊಟ ಮಾಡುವ ಸಂದರ್ಭದಲ್ಲಿ ತಾನು ಕೆಲಸದಾಕೆ ಎನ್ನುವ ಮನಸ್ಥಿತಿಯಿಂದಲೇ ಮಲ್ಲಿ ಕೆಳಕ್ಕೆ ಕುಳಿತಿದ್ದಾಳೆ. ಆದರೆ ಭೂಮಿಕಾ ಆಕೆಯ ಸ್ಥಾನ ಏನು ಎಂದು ಹೇಳುವ ಮೂಲಕ ಜಯದೇವನ ಪಕ್ಕದಲ್ಲಿ ಕುಳ್ಳರಿಸಿದ್ದಾಳೆ. ಪಾರ್ಥ ಅಪೇಕ್ಷಾಳನ್ನು ಪ್ರೀತಿ ಮಾಡುವ ವಿಷಯ ತಿಳಿದಿದ್ದರೂ, ಆತನಿಂದ ಅಪೇಕ್ಷಾಳನ್ನು ಕಿತ್ತುಕೊಂಡು, ಆತನ ಬಾಯಲ್ಲಿ ಅತ್ತಿಗೆ ಎಂದು ಹೇಳಿಸಿದ್ದ ಜಯದೇವ. ಈಗ ಪಾರ್ಥ ಬಿಡುತ್ತಾನೆಯೆ? ನಾನು ಮಲ್ಲಿಯನ್ನು ಅತ್ತಿಗೆ ಎಂದು ಕರೆಯಲೇ ಎಂದು ಕೇಳಿದ್ದಾನೆ. ಮೊದಲೇ ಉರಿಯುತ್ತಿರುವ ಜಯದೇವಗೆ ಈಗ ಮತ್ತೆ ಚುಚ್ಚಿದ ಅನುಭವ. ಆದರೆ ಯಾವುದೇ ಕಾರಣಕ್ಕೂ ಭೂಮಿಕಾ ಮಲ್ಲಿಗೆ ದೊರಕಿಸಬೇಕಾದ ಸ್ಥಾನ ಕೊಟ್ಟೇ ತೀರುವವಳು. 

ಹೆಣ್ಣುಮಕ್ಕಳ ಜೊತೆ ಚೆಲ್ಲಾಟವಾಡಿ ತಪ್ಪಿಸಿಕೊಳ್ಳೋದು ದೊಡ್ಡವರಿಗೆ ಇಷ್ಟು ಸುಲಭನಾ? ಯುವತಿಯರಿಗೆ 'ಅಮೃತಧಾರೆ' ಎಚ್ಚರಿಕೆ!

ಆಕೆಗೆ ಗಂಡ ಗೌತಮ್​ ಮತ್ತು ಮನೆಯ ಇತರರ ಬೆಂಬಲವೂ ಇದೆ. ಆದರೆ ಅತ್ತೆ ಶಕುಂತಲಾದೇವಿ ಮತ್ತು ಜಯದೇವ ಮಾತ್ರ ಕತ್ತಿ ಮಸೆಯುತ್ತಿದ್ದಾರೆ. ಹೇಗಾದರೂ ಮಾಡಿ ಭೂಮಿಕಾ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ. ಮಲ್ಲಿ ಹಾಗೂ ತನ್ನ ತಂಗಿ ಅಪೇಕ್ಷಾಗೆ ನ್ಯಾಯ ಒದಗಿಸಿಕೊಡಲು ಸಾಕಷ್ಟು ಶ್ರಮ ಪಟ್ಟಿರುವ ಭೂಮಿಕಾ ಭವಿಷ್ಯ ಏನು ಎನ್ನುವುದು ಈಗಿರುವ ಕುತೂಹಲ. ಗೌತಮ್​ ತನ್ನ ಚಿಕ್ಕಮ್ಮ ಶಕುಂತಲಾದೇವಿಯನ್ನು ಅಮ್ಮನಂತೆ ಪ್ರೀತಿಸುತ್ತಿದ್ದಾನೆ.  ಆಕೆಯ ಕಂತ್ರಿ ಬುದ್ಧಿ ಈತನಿಗೆ ತಿಳಿದಿಲ್ಲ. ಇದು ಗೊತ್ತಿದ್ದರೂ ಭೂಮಿಕಾಗೆ ಹೇಳುವ ಹಾಗಿಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲಿದ್ದಾಳೆ ಭೂಮಿಕಾ.

ಅಂದಹಾಗೆ ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ  ಆಗ್ತಿರೋ ಅಮೃತಧಾರೆ ಸೀರಿಯಲ್​ ಕಥೆ. ಭೂಮಿಕಾ ತಂಗಿಯ ಜೊತೆ ಜಯದೇವನ ಮದುವೆ ತಯಾರಿ ನಡೆದಿತ್ತು. ಕೆಲಸದ ಹುಡುಗಿಗೆ ಗರ್ಭಿಣಿ ಮಾಡಿರುವ ಜಯದೇವ  ರಾಜಾರೋಷವಾಗಿ ಮದುವೆಗೆ ರೆಡಿಯಾಗಿದ್ದ.   ಕೆಲಸದಾಕೆ ಗರ್ಭಿಣಿಯಾಗಿರುವ ವಿಷಯ ಭೂಮಿಕಾಗೆ ತಿಳಿದಿದ್ದರೂ ಅದಕ್ಕೆ ಕಾರಣ ಜಯದೇವ ಎಂದು ಗೊತ್ತಿದ್ದರೂ ಸಾಕ್ಷಿ ಇಲ್ಲದೇ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸಾಲದು ಎಂಬುದಕ್ಕೆ ಅತ್ತೆ ಶಕುಂತಲಾದೇವಿ ಮಲ್ಲಿಯನ್ನೇ ಕಾಣೆ ಮಾಡಿಬಿಟ್ಟಿದ್ದಳು. ಆದರೆ ಆಕೆಯನ್ನು ಹುಡುಕಿ, ಜಯದೇವನ ಜೊತೆ ಮದ್ವೆ ಮಾಡಿಸುವಲ್ಲಿ ಭೂಮಿಕಾ ಸಕ್ಸಸ್​ ಆಗಿದ್ದಾಳೆ. ಇದರ ಜೊತೆ ಮಲ್ಲಿಯ ಭವಿಷ್ಯ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾಳೆ.  

ಮಗನಿಗೆ ತಾಂಡವ್​ ಮಾಡಿದ ಪ್ರಾಮಿಸ್​: ಶ್ರೇಷ್ಠಾ ಕಕ್ಕಾಬಿಕ್ಕಿ! ಕಟ್ಟಿಕೊಂಡವಳಾ? ಇಟ್ಟುಕೊಂಡವಳಾ?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಗಿಲ್ಲಿ ನಟ ನನ್ನ ಪಾಲಿಗೆ ಹಾವು- ಕಿಚ್ಚ ಸುದೀಪ್‌ ಮುಂದೆಯೇ ತಿರುಗಿ ಬಿದ್ದ ಕಾವ್ಯ ಶೈವ
Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ