ಮಗನ ಸಾವು ನೆನೆದು ಭಾವುಕರಾದ ಪ್ರಭುದೇವ; ಈ ಬಗ್ಗೆ ಮಾತಾಡಲು ನಿರಾಕರಿಸಿದ ಡಾನ್ಸರ್

Published : Apr 03, 2023, 04:22 PM IST
ಮಗನ ಸಾವು ನೆನೆದು ಭಾವುಕರಾದ ಪ್ರಭುದೇವ; ಈ ಬಗ್ಗೆ ಮಾತಾಡಲು ನಿರಾಕರಿಸಿದ ಡಾನ್ಸರ್

ಸಾರಾಂಶ

ಮಗನ ಸಾವು ನೆನೆದು ಪ್ರಭುದೇವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾವುಕರಾಗಿದ್ದಾರೆ. ಈ ಬಗ್ಗೆ ಮಾತಾಡಲು ನಿರಾಕರಿಸಿದರು. 

ವೀಕೆಂಡ್ ವಿತ್ ರಮೇಶ್ ಸೀಸನ್-5ನ 2ನೇ ಸಾಧಕರಾಗಿ ಭಾರತದ ಮೈಕೆಲ್ ಜಾಕ್ಸನ್ ಎಂದೇ ಖ್ಯಾತಿಗಳಿಸಿರುವ ನಟ, ನಿರ್ದೇಶಕ, ಡಾನ್ಸರ್ ಪ್ರಭುದೇವ ಕಾಣಿಸಿಕೊಂಡಿದ್ದರು. ವೀಕೆಂಡ್ ಕುರ್ಚಿ ಏರಿದ್ದ ಪ್ರಭುದೇವ ಅವರ ಬಗ್ಗೆ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳು ಬಹಿರಂಗವಾಗಿವೆ. ಕರ್ನಾಟಕ ಮೂಲದ ಪ್ರಭುದೇವ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಡಾನ್ಸರ್, ನೃತ್ಯ ನಿರ್ದೇಶಕರಾಗಿ ಮಾತ್ರವಲ್ಲದೇ ನಿರ್ದೇಶಕ ಮತ್ತು ನಟರಾಗಿರೂ ಪ್ರಭುದೇವ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭಾರತೀಯ ಸಿನಿಮಾರಂಗದ ದೊಡ್ಡ ದೊಡ್ಡ ಸ್ಟಾರ್‌ಗಳ ಫೇವರಿಟ್ ಡಾನ್ಸರ್, ಕೊರಿಯೋಗ್ರಾಫರ್ ಆಗಿರುವ ಪ್ರಭುದೇವ ಕನ್ನಡಿಗರು ಎನ್ನುವುದೇ ಹೆಮ್ಮೆ. 

ಪ್ರಭುದೇವ ಅವರು ತಮ್ಮ ಜೀವನದ ಸಾಕಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಬಾಲ್ಯ, ಕುಟುಂಬ, ಸ್ನೇಹಿತರ ಬಗ್ಗೆ ಮನಬಿಚ್ಚಿ ಮಾತನಾಡಿದ ಪ್ರಭುದೇವ ತನ್ನ ಮಗನ ವಿಚಾರ ಬಂದಾಗ ಭಾವುಕರಾದರು. ಕಳೆದುಕೊಂಡ ಮಗನ ಜೊತೆಗಿನ ಫೋಟೋ ನೋಡಿ ಸೈಲೆಂಟ್ ಆದರು, ಆದರೆ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು. ಪ್ರಭುದೇವ ಅವರ ಬಗ್ಗೆ ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಮಾತನಾಡಿದರು. ಪ್ರಕಾಶ್ ಮತ್ತು ಪ್ರಭುದೇವ ಇಬ್ಬರೂ ಸ್ನೇಹಿತರು. ಮಗನನ್ನು ಕಳೆದುಕೊಂಡಾದ ಜೊತೆಯಲ್ಲೇ ಇದ್ದೆ ಎಂದು ಪ್ರಕಾಶ್ ರಾಜ್ ಹೇಳಿದರು. 

ಪ್ರಭುದೇವ ನೆಚ್ಚಿನ ಕನ್ನಡ ಹೀರೋ ಇವರೆ: ವೀಕೆಂಡ್ ಕಾರ್ಯಕ್ರಮದಲ್ಲಿ ಇಂಟ್ರಸ್ಟಿಂಗ್ ವಿಚಾರ ಬಹಿರಂಗ

ಪ್ರಕಾಶ್ ರಾಜ್ ಮಾತಿನ ಬಳಿಕ ನಟ ರಮೇಶ್ ಅರವಿಂದ್ ಪುತ್ರನನ್ನು ಕಳೆದುಕೊಂಡ ದುರುಂತ ಘಟನೆ ಬಗ್ಗೆ ಕೇಳಿದರು. ಆದರೆ ಪ್ರಭುದೇವ ಆ ಬಗ್ಗೆ ಮಾತನಾಡಲು ನಿರಾಕರಿಸಿದರು. ಒಂದು ಕ್ಷಣ ಸೈಲೆಂಟ್ ಆದ ಪ್ರಭುದೇವ ಭಾವುಕರಾದರು, ಆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅರ್ಥವಾಗುತ್ತೆ ಎಂದು ರಮೇಶ್ ಅರವಿಂದ್ ಸಮಾಧಾನ ಮಾಡಿ ಕಾರ್ಯಕ್ರಮ ಮುಂದುವರೆಸಿದರು. 

ಪ್ರಭುದೇವ ಮಾತನಾಡಿದ್ದು ತಮಿಳು ಮಿಶ್ರಿತ ಕನ್ನಡ ಅಲ್ಲ ಚಾಮರಾಜನಗರ ಭಾಷೆ; ರಮ್ಯಾಗಿಂತ ನೀವೇ ಬೆಸ್ಟ್‌ ಎಂದ ಕನ್ನಡಿಗರು

ಪ್ರಭುದೇವ ಮಗನಿಗೆ ಏನಾಗಿತ್ತು? ನಿಧನಹೊಂದಿದ್ದು ಯಾವಾಗ?

ಪ್ರಭುದೇವ 1995ರಲ್ಲಿ ರಾಮಲತಾ ಜೊತೆ ಮದುವೆಯಾದರು. ಪ್ರಭುದೇವ ಮತ್ತು ರಾಮಲತಾ ದಂಪತಿಗೆ ಮೂವರು ಮಕ್ಕಳು. ಮೊದಲ ಮಗ ವಿಶಾಲ್, 2ನೇ ಮಗ ರಿಷಿ ರಾಘವೇಂದ್ರ ದೇವ ಮತ್ತು ಅದಿತ್ ದೇವ. ಆದರೆ ಮೊದಲ ದುರದೃಷ್ಟವಶಾತ್ ವಿಶಾಲ್‌ನನ್ನು ಕಳೆದುಕೊಳ್ಳಬೇಕಾಗುತ್ತೆ. ಪುಟ್ಟ ಬಾಲಕ ವಿಶಾಲ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ನಿಧನವೊಂದುವ 6 ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸಿ 2008ರಲ್ಲಿ ವಿಶಾಲ್ ಕೊನೆಯುಸಿರೆಳೆದರು. ಮಗನ ಸಾವು ಪ್ರಭುದೇವ ಅವರಿಗೆ ದೊಡ್ಡ ಅಘಾತ ನೀಡಿತು. ದೊಡ್ಡ ದೊಡ್ಡ ಸ್ಟಾರ್ ಕಲಾವಿದರು ಪ್ರಭುದೇವ ಅವರಿಗೆ ಸಾಂತ್ವನ ಹೇಳಿದ್ದರು. ಮಗನನ್ನು ಕಳೆದುಕೊಂಡು ಅನೇಕ ವರ್ಷಗಳಾಗಿದ್ದರೂ ಇಂದಿಗೂ ನೆನೆದು ಪ್ರಭುದೇವ ಭಾವುಕರಾಗುತ್ತಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!