ಮಿಡಲ್ ಫಿಂಗರ್ ತೋರಿಸಿದ ಪೂನಂ ಪಾಂಡೆ; ನಿನಗೆ ಅದು ಬೇಕಾ ಎಂದ ನಟ!

By Suvarna News  |  First Published Mar 29, 2022, 10:45 AM IST

ಹೇರ್‌ ಡ್ರೈಯರ್ ಸಿಕ್ಕಿಲ್ಲ ಎಂದು ಇಡೀ ಮನೆಯವರನ್ನು ಚೀಪ್ ಎಂದು ಕರೆದ ಪೂನಂ ಮತ್ತು ಅಂಜಲಿ. ಗರಂ ಆದ ಆಲಿ..... 


ಬಾಲಿವುಡ್ ಬೋಲ್ಡ್‌ ನಟಿ ಕಂಗನಾ ರಣಾವತ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಲಾಕಪ್ ಶೋ  ದಿನಕ್ಕೊಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ಸಾರಾ ಖಾನ್, ಆಲಿ ಮರ್ಚೆಂಟ್ ಮತ್ತು ಪೂನಂ ಪಾಂಡೆ ಈ ಶೋನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವವರು. ಇಲ್ಲಿ ನಡೆಯುವುದು ಅಂತಿಂತ ಜಗಳವಲ್ಲ ದೊಡ್ಡ ಯುದ್ಧವೇ. ಮಾತಿಗೆ ಮಾತು ಬೆಳೆದರೆ ಇಡೀ ವಂಶವನ್ನು ಎಳೆದು ಮಾನ ಮರ್ಯಾದೆ ತೆಗೆಯುತ್ತಾರೆ. ಈಗಲೂ ಕೂಡ ಸಣ್ಣ ವಿಚಾರಕ್ಕೆ ದೊಡ್ಡ ಜಗಳ ಆಗಿದೆ....

ಬಾಲಿವುಡ್ ಮಾದಕ ನಟಿ ಪೂನಂ ಪಾಂಡೆ ಮತ್ತು ಅಂಜಲಿ ಅರೋರಾ ಬ್ಯೂಟಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ದೇಶವೇ ಮುಳುಗುತ್ತಿದ್ದರೂ ಅವರು ಮಾತ್ರ ಸ್ನಾನ ಮಾಡಿ ಮೇಕಪ್ ಮಾಡಿಕೊಂಡು ಚೆಂದ ಡ್ರೆಸ್ ಧರಿಸಿ ಕ್ಯಾಮೆರಾ ಮುಂದೆ ಓಡಾಡುತ್ತಿರುತ್ತಾರೆ. ನಿನ್ನೆ ಪ್ರಸಾರವಾದ ಎಪಿಸೋಡ್‌ನಲ್ಲಿ ಯಾರೋ ಪೂನಂ ಮತ್ತು ಅಂಜಲಿ ಅವರ ಹೇರ್‌ ಡ್ರೈಯರ್‌ನ ಬಚ್ಚಿಟ್ಟಿದ್ದಾರೆ. ಆರಂಭದಲ್ಲಿ ತಾಳ್ಮೆಯಿಂದ ಪ್ರತಿಯೊಬ್ಬರನ್ನು ಕೇಳಿದ್ದಾರೆ ಯಾರೂ ಉತ್ತರ ಕೊಡದ ಕಾರಣ ಇಡಿ ಮನೆಯವರನ್ನು ಬೈಯಲು ಶುರು ಮಾಡಿದ್ದಾರೆ.

Tap to resize

Latest Videos

ಲೀವಿಂಗ್ ಏರಿಯಾದಲ್ಲಿ ಎಲ್ಲರು ಕುಳಿತಿರುವಾಗ ಪೂನಂ ಬಂದು a**H*** ಎಂದು ಬೈಯುತ್ತಾರೆ. ಆಲಿ ಮೇಲೆ ಅನುಮಾನದಿಂದ ನೇರವಾಗಿ ನನ್ನ ಡ್ರೈಯರ್ ಎಲ್ಲಿ ಎಂದು ಕೇಳುತ್ತಾರೆ. 'ನಾನು ತೆಗೆದುಕೊಂಡಿಲ್ಲ ಹಾಗೇ ಅದನ್ನು ಇವತ್ತು ನೋಡಿಲ್ಲ' ಎಂದು ಆಲಿ ಹೇಳುತ್ತಾನೆ. ಕೋಪಗೊಂಡ ಪೂನಂ 'ಈ ಮನೆಯಲ್ಲಿರುವವರು ಎಲ್ಲರೂ ಕಳ್ಳರು' ಎನ್ನುತ್ತಾರೆ. ಒಬ್ಬರು ಮಾಡಿರುವ ತಪ್ಪಿಗೆ ಎಲ್ಲರಿಗೂ ಈ ರೀತಿ ಹೇಳಬೇಡ ಎಂದು ಆಲಿ ತಾಳ್ಮೆಯಿಂದ ಉತ್ತರ ಕೊಟ್ಟರೂ ಪೂನಂ ಪಾಂಡೆ ಮಿಡಲ್ ಫಿಂಗರ್ ತೋರಿಸಿ ಹೊರ ನಡೆಯುತ್ತಾಳೆ. ತಕ್ಷಣವೇ ಆಲಿ ' ನನಗೆ ನೀನು ಮಿಡಲ್ ಫಿಂಗರ್ ತೋರಿಸಬೇಡ. ನಿನಗೆ ಹಸಿವಾಗುತ್ತಿರಬೇಕು ನಿನಗೆ ಅದು ಬೇಕು ಅದಿಕ್ಕೆ ಮಿಡಲ್ ಫಿಂಗರ್‌ನ ನನಗೆ ತೋರಿಸುತ್ತಿರುವುದು. ಈ ರೀತಿ ನನ್ನನ್ನು ನಿಂದಿಸಬೇಡ. ಯಾರು ಮಾಡಿದ್ದಾರೆ ಅವರಿಗೆ ತೋರಿಸು. ಎಲ್ಲರೂ ಕಳ್ಳರು ಎಂದು ಹೇಳಿ ನನಗೆ ಬಂದು ಫಿಂಗರ್ ತೋರಿಸಬೇಡ.' ಎಂದು ಹೇಳುತ್ತಾರೆ. 

ಕೆಲಸ ಇರ್ಲಿಲ್ಲ ಅಂತ ಕಾಂಟ್ರೋವರ್ಸಿ ಮಾಡುತ್ತಿದ್ದೆ; ಸತ್ಯ ಒಪ್ಪಿಕೊಂಡ ಪೂನಂ ಪಾಂಡೆ ?

ಆಲಿ ನಾನು ಕದ್ದಿಲ್ಲ ಎಂದು ಹೇಳಿದರೂ ಪೂನಂ ಮತ್ತು ಅಂಜಲಿ ಪದೇ ಪದೇ ಆಲಿ ಮರ್ಚೆಂಟ್‌ ಬಗ್ಗೆ ಮಾತನಾಡುತ್ತಿದ್ದರು. ಅಲ್ಲೇ ಕುಳಿತಿದ್ದ ಮುನಾವರ್ ಮತ್ತು ಕರ್ನ್ವೀರ್ ಬಳಿ ಆಲಿ ಬಂದು 'ಪೂನಂ ನನಗೆ ಮಿಡಲ್ ಫಿಂಗರ್ ತೋರಿಸಿದ್ದಾಳೆ ಅವರಿಗೆ ಸರಿಯಾಗಿ ಬೈದಿರುವೆ. ನಿನಗೆ ಹಸಿವಾಗುತ್ತಿದೆ ಅದಿಕ್ಕೆ ಬೇಕು ಅಲ್ವಾ? ಮತ್ತೆ ತೋರಿಸು ನಿನ್ನ ತುಂಡು ತುಂಡಾಗಿ ಕತ್ತರಿಸುತ್ತೀನಿ' ಎಂದು ಹೇಳುತ್ತಾರೆ.

ಇಡೀ ಮನೆ ಹುಡುಕಲು ಶುರು ಮಾಡಿದಾಗ ಮಂದನಾ ಅದನ್ನು ಕಂಡು ಹಿಡಿಯುತ್ತಾಳೆ ಆನಂತರ ತಿಳಿಯುತ್ತದೆ ಅಜ್ಮಾ ಈ ಕೆಲಸ ಮಾಡಿರುವುದು ಎಂದು. 

Poonam pandey ಬಾತ್‌ರೂಮ್‌ ಸೀಕ್ರೆಟ್‌ ರಿವೀಲ್ ಮಾಡಿ ಬ್ಯಾನ್ ಆದ ನಟಿ

ಕಾಂಟ್ರೋವರ್ಸಿ ಬೇಡವೇ ಬೇಡ:
'ಆದಷ್ಟು ಕಾಂಟ್ರೋವರ್ಸಿಯಿಂದ ದೂರ ಇರಲು ಇಷ್ಟ ಪಡುವೆ. ಆದರೆ ಏನಾದರೂ ಒಂದು ಬಂದು ನನ್ನ ಸುತ್ತಿಕೊಳ್ಳುತ್ತದೆ. ನಾನು ಅಲ್ಲಿಗೆ ಜೀವನ ನಿಲ್ಲಿಸುವುದಿಲ್ಲ. ಪದೇ ಪದೇ ಸಾಧನೆ ಮಾಡಲು ಪ್ರಯತ್ನ ಮಾಡುತ್ತೇನೆ. ಈ ಶೋ ಮೂಲಕ ಜನರಿಗೆ ನಾನೂ ಮನುಷ್ಯೆ ಎಂಬುದನ್ನು ತೋರಿಸಿಕೊಡಬೇಕಾಗಿದೆ. ನಾನು ಜೀವನದಲ್ಲಿ ತಪ್ಪು ಮಾಡಿದ್ದೀನಿ. ಇದರಿಂದ ನನಗೆ ನೋವಾಗಿದೆ. ಆದರೆ ತೀರ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡಿದರೆ ಬೇಸರವಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ನನ್ನ ಜೀವನ ಹೇಗಿದೆ ಎಂದು ನನಗೇ ಮಾತ್ರ ಗೊತ್ತು. ನಾನು ಧ್ವನಿ ಎತ್ತಲು ನನಗೊಂದು ಅವಕಾಶ ಸಿಗುತ್ತಿರುವುದಕ್ಕೆ ಖುಷಿ ಇದೆ. ಈ ರೀತಿ ಬಟ್ಟೆ ಹಾಕಿಕೊಳ್ಳುವುದಕ್ಕೆ ನನಗೆ ಇಷ್ಟ. ನಾನು ಜೀವನ ಇರುವುದು ಹೀಗೆ. ನಾನು ಎಲ್ಲರಂತೆ ನಾರ್ಮಲ್,' ಎಂದು ಪೂನಂ ಹೇಳಿದ್ದಾರೆ. 

click me!