'ಬಿಗ್ ಬಾಸ್ 9'ಗೆ ಭರ್ಜರಿ ಸಿದ್ಧತೆ; ಈ ಬಾರಿ ಹೇಗಿದೆ ಬಿಗ್ ಹೌಸ್? ಇಲ್ಲಿದೆ ಅಪ್‌ಡೇಟ್

Published : Jul 12, 2022, 12:21 PM ISTUpdated : Jul 13, 2022, 02:34 PM IST
'ಬಿಗ್ ಬಾಸ್ 9'ಗೆ ಭರ್ಜರಿ ಸಿದ್ಧತೆ; ಈ ಬಾರಿ ಹೇಗಿದೆ ಬಿಗ್ ಹೌಸ್? ಇಲ್ಲಿದೆ ಅಪ್‌ಡೇಟ್

ಸಾರಾಂಶ

ಗ್ ಬಾಸ್ ಸೀಸನ್ 9ಗಾಗಿ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚಿಗಷ್ಟೆ ಬಿಗ್ ಬಾಸ್ ಸೀಸನ್ 9 ಬಗ್ಗೆ ಹೊಸ ಅಪ್ ಡೇಟ್ ಬಹಿರಂಗವಾಗುವ ಮೂಲಕ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದ್ದರು. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 9 ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಆಗಿದೆ. ಬಿಗ್ ಬಾಸ್ ಸೀಸನ್ 9ಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಗ್ಗೆ ಬಿಗ್ ಬಾಸ್ ಆಯೋಜಕ ಪರಮೇಶ್ವರ್ ಗುಂಡ್ಕಲ್ ಅಪ್ ಡೇಟ್ ನೀಡಿದ್ದಾರೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಿರೂಪಣೆಯಲ್ಲಿ ಮೂಡಿಬರುವ ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್‌’. ಬಿಗ್ ಬಾಸ್ ಸೀಸನ್ 9ಗಾಗಿ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚಿಗಷ್ಟೆ ಬಿಗ್ ಬಾಸ್ ಸೀಸನ್ 9 ಬಗ್ಗೆ ಹೊಸ ಅಪ್ ಡೇಟ್ ಬಹಿರಂಗವಾಗುವ ಮೂಲಕ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದ್ದರು. ಹೌದು ಬಹುನಿರೀಕ್ಷೆಯ ಬಿಗ್ ಬಾಸ್ ಆಗಸ್ಟ್‌ ಮೊದಲ ವಾರದಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ರಿವೀಲ್ ಆಗಿತ್ತು. ಈ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಮಾಹಿತಿ ನೀಡಿದ್ದರು. ಕಿಚ್ಚನ ಈ ಹೇಳಿಕೆ ಕಿರುತೆರೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿತ್ತು. ಅಂದಹಾಗೆ ಈ ಬಾರಿಯ ಬಿಗ್ ಬಾಸ್ ಮತ್ತಷ್ಟು ವಿಶೇಷವಾಗಿ ಮೂಡಿಬರಲಿದೆಯಂದೆ. ಈ ಬಾರಿ ಎರೆಡೆರಡು ಬಿಗ್ ಬಾಸ್ ಮೂಡಿ ಬರಲಿದೆ ಎನ್ನಲಾಗುತ್ತಿದೆ.  ಒಟಿಟಿಯಲ್ಲಿ ಮಿನಿ ಬಿಗ್ ಬಾಸ್ ಮತ್ತು ಕಲರ್ಸ್‌ ವಾಹಿನಿಯ ಬಿಗ್ ಬಾಸ್ ಎರೆಡು ಬಿಗ್ ಬಾಸ್ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಕಲರ್ಸ್ ಸಂಸ್ಥೆ ಸಜ್ಜಾಗಿದೆ ಎನ್ನುವ ಮಾಹಿತಿ ಈಗಾಗಲೇ ಬಹಿಂಗವಾಗಿದೆ.  

ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 9 (BBK9) ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಆಗಿದೆ. ಬಿಗ್ ಬಾಸ್ ಸೀಸನ್ 9ಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಗ್ಗೆ ಬಿಗ್ ಬಾಸ್ (Bigg Boss) ಆಯೋಜಕ ಪರಮೇಶ್ವರ್ ಗುಂಡ್ಕಲ್ ಅಪ್ ಡೇಟ್ ನೀಡಿದ್ದಾರೆ. ಈಗಾಗಲೇ ಬಿಗ್ ಮನೆಯ ಕೆಲಸ ಪ್ರಾರಂಭವಾಗಿದೆ. ಬಿಗ್ ಬಾಸ್‌ನ ಹೈಲೆಟ್ ಗಳಲ್ಲಿ ಬಿಗ್ ಹೌಸ್ ಕೂಡ ಒಂದು. ಆಕರ್ಷಕವಾಗಿ ಬಿಗ್ ಬಾಸ್ ಮನೆಯನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಬಿಗ್ ಬಾಸ್ ಮನೆಯ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.

ಬಿಗ್ ಬಾಸ್ ಬಿಗ್ ಅಪ್ ಡೇಟ್ 

ಬಿಗ್ ಬಾಸ್ ಮನೆಯ ಕೆಲಸ ಈಗಾಗಲೇ ಆರಂಭವಾಗಿದೆ ಎಂದು ಪರಮೇಶ್ವರ್ ಗುಂಡ್ಕಲ್ ಬಹಿರಂಗ ಪಡಿಸಿದ್ದಾರೆ. ಫೋಟೋ ಶೇರ್ ಮಾಡುವ ಮೂಲಕ ಬಿಗ್ ಬಾಸ್ ಸೀಸನ್ 9 ಕೆಲಸ ಪ್ರಾರಂಭವಾಗಿದೆ ಎಂದಿದ್ದಾರೆ. ಬಿಗ್ ಮನೆಯ ಮುಂದೆ ನಿಂತು ಫೋಟೋ ಶೇರ್ ಮಾಡಿರುವ ಪರಮೇಶ್ವರ್ ನಿರ್ಮಾಣ ಹಂತದಲ್ಲಿದೆ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದ ಕಿಚ್ಚ; ಆಗಸ್ಟ್‌‌ನಲ್ಲಿ ಆರಂಭ, ಈ ಬಾರಿ ಇದೆ ಹಲವು ವಿಶೇಷ

 

ವೂಟ್‌ನಲ್ಲಿ ಮಿನಿ ಬಿಗ್ ಬಾಸ್ 

ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ವೂಟ್ ನಲ್ಲಿ ಪ್ರಸಾರವಾಗುವ ಮಿನಿ ಬಿಗ್ ಬಾಸ್ ಕಲರ್ಸ್‌ ವಾಹಿನಿಯಲ್ಲಿ ಬಿಗ್‌ ಬಾಸ್‌ ಪ್ರಸಾರ ಆರಂಭವಾಗುವ ಮೊದಲೇ ಆರಂಭವಾಗಲಿದೆ. ಈ ಮಿನಿ ಸೀಸನ್‌ 42 ದಿನಗಳ ಕಾಲ ಪ್ರಸಾರವಾಗಲಿದ್ದು, ಇಂಟರ್‌ನೆಟ್‌ ಸ್ಟಾರ್‌ಗಳು, ಇನ್‌ಫ್ಲುಯೆನ್ಸರ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಎಂದಿನಿಂತೆ ಸುದೀಪ್‌ ವಾರದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಮಿನಿ ಸೀಸನ್‌ನಲ್ಲಿ ಆಯ್ಕೆಯಾದ ಒಂದಿಬ್ಬರು ಸ್ಪರ್ಧಿಯಲ್ಲಿ ವಾಹಿನಿಯಲ್ಲಿ ಪ್ರಸಾರವಾಗುವ ಪೂರ್ಣ ಪ್ರಮಾಣದ ಬಿಗ್‌ ಬಾಸ್‌ನಲ್ಲಿ ಭಾಗವಹಿಸುತ್ತಾರೆ. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಬಿಗ್‌ ಬಾಸ್‌ 90 ದಿನಗಳ ಕಾಲ ಪ್ರಸಾರವಾಗಲಿದೆ.

'ಬಿಗ್ ಬಾಸ್' ಹೋಸ್ಟ್ ಮಾಡ್ತಾರಾ ರಣ್ವೀರ್ ಸಿಂಗ್? ಹಾಗಾದ್ರೆ ಸಲ್ಮಾನ್ ಕಥೆ ಏನು?

ಅಂದಹಾಗೆ ಇದೇ ರೀತಿ ಕಳೆದ ಬಾರಿ ಹಿಂದಿಯಲ್ಲಿ ಮೊದಲ ಪ್ರಯತ್ನ ಮಾಡಲಾಗಿತ್ತು. ಹಿಂದಿಯಲ್ಲಿ ಒಟಿಟಿ ಬಿಗ್ ಬಾಸ್ಅನ್ನು ಕರಣ್ ಜೋಹರ್ ನಡೆಸಿಕೊಟ್ಟಿದ್ದರು. ಒಟಿಟಿ ಬಳಿಕ ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರವಾಗಿತ್ತು. ಈ ಬಾರಿ ಕನ್ನಡದಲ್ಲೂ ಅದೇ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಕನ್ನಡದಲ್ಲಿ ಪ್ರಸಾರವಾಗುವ ಒಟಿಟಿ ಬಿಗ್ ಬಾಸ್ ಅನ್ನು ಸಹ ಕಿಚ್ಚ ಸುದೀಪ್ ಅವರೆ ನಡೆಸಿಕೊಡಲಿದ್ದಾರೆ. ಬಳಿಕ ಟಿವಿಯಲ್ಲಿ ಆರಂಭವಾಗುವ ಬಿಗ್ ಬಾಸ್ ಜವಾಬ್ದಾರಿ ಸಹ ಸುದೀಪ್ ಮೇಲಿದೆ. ಈ ಬಾರಿ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಸ್ಪರ್ಧಿಗಳ ಸಮಾಗಮ; ವೀಕ್ಷಕರಿಗೆ ಗಿಲ್ಲಿ ನಟ, ಕಾವ್ಯ ಶೈವ ಶುಭ ಸುದ್ದಿ ಕೊಟ್ಟರಾ?
Sri Raghavendra Mahathme: ರಾಯರ ಪತ್ನಿ ಸರಸ್ವತಿಯಾಗಿ ನಟಿಸುತ್ತಿರುವ ಸುಂದರಿ ಇವರೇ