ಹೊಸ ವರ್ಷಕ್ಕೆ ಸೀತಾ-ರಾಮ ಫ್ಲ್ಯಾಷ್​ಬ್ಯಾಕ್​: ವಿಡಿಯೋ ನೋಡಿ ಲವ್​ ಮಾಡಬೇಕೆನಿಸ್ತಿದೆ ಎಂದ ಫ್ಯಾನ್ಸ್​!

By Suvarna News  |  First Published Jan 8, 2024, 1:02 PM IST

ಹೊಸ ವರ್ಷದಂದು ಸೀತಾರಾಮ ಸೀರಿಯಲ್​ ಫ್ಲ್ಯಾಷ್​ಬ್ಯಾಕ್​ ವಿಡಿಯೋ ವೈರಲ್​ ಆಗಿದ್ದು, ಫ್ಯಾನ್ಸ್​ ಥಹರೇವಾರಿ ಕಮೆಂಟ್​ ಮಾಡುತ್ತಿದ್ದಾರೆ.
 


ಸೀತಾ-ರಾಮ ಸೀರಿಯಲ್​ ಇದೀಗ ಇಂಟರೆಸ್ಟಿಂಗ್​ ಘಟ್ಟ ತಲುಪಿದೆ.  ರುದ್ರಪ್ರತಾಪನ ಜೊತೆ ಸೀತಾಳ ಮದ್ವೆ ನಡೆದೇ ಹೋಗುತ್ತೆ ಎನ್ನುವಷ್ಟರಲ್ಲಿ ಸಿನಿಮಾದಲ್ಲಿ ಆಗುವಂತೆ ನಾಯಕ ರಾಮ್​  ಎಂಟ್ರಿಯಾಗಿ, ಮದುವೆ ನಿಂತುಹೋಗಿದೆ.  ಸೀತಾ ಹಾಗೂ ಆಕೆಯ ಮಗಳು ಸಿಹಿಯ ಮೇಲೆ ಜೀವವನ್ನೇ ಇಟ್ಟಿರುವ ರಾಮ್, ಸೀತಾಳಿಗೂ ಪ್ರೀತಿಯನ್ನು ತಿಳಿಸದೇ, ಮನಸ್ಸಿನಲ್ಲಿಯೇ ಪ್ರೀತಿಯನ್ನು ಅದುಮಿಟ್ಟುಕೊಂಡು ಸೀತಾಳ ಮದುವೆಯನ್ನೂ ನೋಡಲು ಮನಸ್ಸು ಮಾಡದೇ ಭಾರವಾರ ಮನಸ್ಸಿನಿಂದ ವಿದೇಶಕ್ಕೆ ತೆರಳಿದ್ದ. ಕೊನೆ ಕ್ಷಣದಲ್ಲಿ ಏನಾದರೂ ಮ್ಯಾಜಿಕ್‌ ಆಗಿ ಸೀತಾ-ರಾಮ ಒಂದಾಗಬಹುದು ಎಂದುಕೊಂಡ ಫ್ಯಾನ್ಸ್​ ಇಚ್ಛೆಯಂತೆ ರುದ್ರಪ್ರತಾಪನ ಮೋಸ ಅರಿತ ರಾಮ್​ ಕೊನೆ ಕ್ಷಣದಲ್ಲಿ ಬಂದು ಸೀತಾಳನ್ನು ಕಾಪಾಡಿದ್ದಾನೆ. ಸೀತಾಳ ಮಗಳು ಸಿಹಿ ಅನಾಥಾಶ್ರಮದ ಪಾಲಾಗುವುದನ್ನು ತಪ್ಪಿಸಿದ್ದಾರೆ.  

ಅದೇ ಇನ್ನೊಂದೆಡೆ, ತಾನು ಸೀತಾಳನ್ನು ಲವ್​ ಮಾಡುತ್ತಿರುವುದು ನಿಜ ಎಂದು ಕೊನೆಗೂ ಗೆಳೆಯ ಅಶೋಕ್​ ಬಳಿ ಬಾಯಿಬಿಟ್ಟು ಹೇಳಿದ್ದ. ಈ ಸೀರಿಯಲ್​ ನೋಡುಗರಿಗೆ ತಿಳಿದಿರುವಂತೆ, ಇಲ್ಲಿಯವರೆಗೆ ರಾಮ್​ ತನ್ನ ಅಸಲಿತನವನ್ನು ಸೀತಾಳಿಂದ ಬಚ್ಚಿಟ್ಟಿದ್ದಾನೆ.  ತಾನು  ಬಿಲೇನಿಯರ್​ ಎನ್ನುವ ಸತ್ಯ ಸೀತಾಳಗೆ ಹೇಳಲಿಲ್ಲ. ತಾನು ದೊಡ್ಡ ಕಂಪೆನಿಯ ಮಾಲಿಕನಾಗಿದ್ದರೂ ಅದನ್ನು ಇದುವರೆಗೆ ಹೇಳಲಿಲ್ಲ. ಭಾರತಕ್ಕೆ ಬಂದಿರುವ ರಾಮ್​,  ತನ್ನದೇ  ಕಂಪೆನಿ ಬಗ್ಗೆ ತಿಳಿದುಕೊಳ್ಳಲು ತಾನೂ ಅದೇ ಕಂಪೆನಿಯಲ್ಲಿ ನೌಕರನ ಹಾಗೆ ಸೇರಿಕೊಳ್ಳುತ್ತಾನೆ. ಸೀತಾ ಅಲ್ಲಿಯೇ ಕೆಲಸ ಮಾಡುವ ಉದ್ಯೋಗಿ. ಇಬ್ಬರ ನಡುವೆ ಸ್ನೇಹ ಬೆಳೆದು, ಸೀತಾ ರಾಮನ ನೆರವನ್ನು ಕೋರುತ್ತಿದ್ದಾಳೆ. ಅಶೋಕ್​ಗೆ ಬಿಟ್ಟು ಯಾರಿಗೂ ಈ ಸತ್ಯ ಗೊತ್ತಿಲ್ಲ.

Tap to resize

Latest Videos

ಪ್ರತಾಪ್ ನಿಜಕ್ಕೂ ಆತ್ಮಹತ್ಯೆಗೆ ಯತ್ನಿಸಿದ್ರಾ? ಅಂದು ಏನಾಗಿತ್ತೆಂದು ಸಂಪೂರ್ಣ ಮಾಹಿತಿ ನೀಡಿದ ಡ್ರೋನ್​

ಆದರೆ ಇದೀಗ ಸತ್ಯ ಗೊತ್ತಾಗಿಬಿಟ್ಟಿದೆ.  ಕಂಪೆನಿಯ  ಕೆಲಸದ ಮೇಲೆ ರಾಮ್‌, ತಾತನ ಜತೆ ಹೈದರಾಬಾದ್​ಗೆ ತೆರಳಿದ್ದ. ಅಲ್ಲಿಂದ  ಬರುತ್ತಿದ್ದಂತೆ, ಎಲ್ಲ  ಸತ್ಯ ಹೇಳಿ ಬಿಡುಗ ಮನಸ್ಸು ಮಾಡಿದ್ದ. ಇದನ್ನು ಅಶೋಕ್​ಗೂ ತಿಳಿಸಿದ್ದ.  ಹೈದರಾಬಾದ್‌ನಿಂದ ನೀನು ಬರುವಷ್ಟರಲ್ಲಿಯೇ ನಾನು ಬಾಸ್‌ ಪಟ್ಟ ಕಳಚಿಡಬಹುದಲ್ಲವೇ ಎಂದಿದ್ದ ಅಶೋಕ. ಅದಕ್ಕೆ ಖಂಡಿತ ಮಗ ಎಂದಿದ್ದ ರಾಮ.  ಆದರೆ ರಾಮ್​ ಕಂಪೆನಿಗೆ ಅವಾರ್ಡ್​ ಬಂದ ಹಿನ್ನೆಲೆಯಲ್ಲಿ ಅದರ ಮಾಲೀಕನಾಗಿರುವ ರಾಮ್​ ಬಹುಮಾನ ಪಡೆದುಕೊಂಡು ಬಂದಿರುವುದನ್ನು ಟಿವಿಯಲ್ಲಿ ನೋಡಿದ ಸೀತಾಳಿಗೆ ಅಸಲಿಯತ್ತು ಗೊತ್ತಾಗಿ ಬಿಟ್ಟಿದೆ. ರಾಮ್​ ಸುಳ್ಳು ಹೇಳಿದ್ದರಿಂದ ವಿಪರೀತ ನೋವು ಉಂಟಾಗಿದೆ. 

ಈ ಸೀರಿಯಲ್​ ಮುಂದೇನಾಗುತ್ತದೆ ಎನ್ನುವುದೇ ಈಗಿರುವ ಪ್ರಶ್ನೆ. ಹೊಸ ವರ್ಷದಲ್ಲಿ ಹೊಸ ಟ್ವಿಸ್ಟ್​ ಸೀರಿಯಲ್​ಗೆ ಇದೆ ಎಂದಿರುವ ಸೀತಾರಾಮ ತಂಡ, ಇಲ್ಲಿಯವರೆಗೆ ಸೀತಾ ಮತ್ತು ರಾಮ್​ ಹಾಗೂ ಅವರ ನಡುವೆ ಸ್ನೇಹದ ಕೊಂಡಿಯಾಗಿರುವ ಸಿಹಿಯ ಫ್ಲ್ಯಾಷ್​ಬ್ಯಾಕ್​ ತೋರಿಸಿರುವ ವಿಡಿಯೋ ರಿಲೀಸ್​ ಮಾಡಿದೆ. ಇದನ್ನು ನೋಡಿ ನೆಟ್ಟಿಗರು ಪ್ಲೀಸ್​ ಇಬ್ಬರನ್ನೂ ಬೇರೆ ಮಾಡಬೇಡಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಈ ವಿಡಿಯೋ ನೋಡಿದ ಮೇಲೆ ನನಗೂ ಯಾರನ್ನಾದರೂ ಲವ್​ ಮಾಡಬೇಕು ಎನ್ನಿಸುತ್ತಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಹೊಸ ವರ್ಷದಲ್ಲಿ ಏನು ಟ್ವಿಸ್ಟ್​ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. 
 

ಶ್ರೀರಾಮನ ಅವಹೇಳನ, ಲವ್​ ಜಿಹಾದ್​ಗೆ ಪ್ರೇರಣೆ: ಅನ್ನಪೂರ್ಣಿ, ನಯನತಾರಾ ವಿರುದ್ಧ ಎಫ್​ಐಆರ್ ದಾಖಲು

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!