ಡ್ರಾಮಾ ಜೂನಿಯರ್‌ನಲ್ಲಿ ಚಿಣ್ಣರು ಹಲವು ಬಾರಿ ಡೈಲಾಗ್‌ಗಳ ಮೂಲಕ, ತಮ್ಮ ವರ್ತನೆ ಮೂಲಕ ದೊಡ್ಡವರಿಗೆ ಪಾಠ ಮಾಡಿದ್ದೂ ಉಂಟು. ಈ ಬಾರಿ ಆನೇಕಲ್‌ನ ಪರೀಕ್ಷಿತ್ ಭಗವದ್ಗೀತೆ ಪಾಠ ಮಾಡಿದ್ದಾನೆ. ಕೇಳಲು ಅದೆಷ್ಟು ಸೊಗಸಾಗಿದೆ ಅಂತೀರಾ?
ಝೀ ಕನ್ನಡದಲ್ಲಿ ಬರುವ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮ ಪುಟ್ಟ ಪುಟ್ಟ ಮಕ್ಕಳ ದೈತ್ಯ ಪ್ರತಿಭೆಗೆ ದೊಡ್ಡ ವೇದಿಕೆಯಾಗಿದೆ. ಇಲ್ಲಿ ಬರುವ ಚಿಣ್ಣರು ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುವ ಜೊತೆಗೆ, ಹಲವಾರು ಪೌರಾಣಿಕ ಕತೆಗಳನ್ನು ಜನರಿಗೆ ತಲುಪಿಸಿದ್ದಾರೆ, ಕಷ್ಟದ ಬದುಕಿನ ಬವಣೆಗಳನ್ನು ತೋರಿಸಿಕೊಟ್ಟಿದ್ದಾರೆ. ಜೊತೆಗೆ, ಹಲವು ಬಾರಿ ಡೈಲಾಗ್‌ಗಳ ಮೂಲಕ, ತಮ್ಮ ವರ್ತನೆ ಮೂಲಕ ದೊಡ್ಡವರಿಗೆ ಪಾಠ ಮಾಡಿದ್ದೂ ಉಂಟು. ಈ ಕಾರ್ಯಕ್ರಮದ ಸೀಸನ 4ರಲ್ಲಿ ಕಾಣಿಸಿಕೊಂಡ ಅದ್ಭುತ ಪ್ರತಿಭೆ ಆನೇಕಲ್‌ನ ಪರೀಕ್ಷಿತ್. ಆತ ಸ್ಪರ್ಧೆಗೆ ಆಯ್ಕೆಯಾದಾಗ ವಯಸ್ಸಿನ್ನೂ 4.
ಈ ಪುಟ್ಟ ಬಾಲಕ ಸೀಸನ್ 5ರ ನಡುವೆ ಬಂದು ಜನರಿಗೆ ಭಗವದ್ಗೀತೆ ಕೆಲ ನೀತಿಗಳನ್ನು ಹೇಳಿದ್ದಾನೆ. ಪುಟ್ಟ ಬಾಲಕನ ಬಾಯಲ್ಲಿ ಬಂದ ನೀತಿ ಮಾತುಗಳನ್ನು ಕೇಳಿ ಜನ ಭಾವುಕರಾಗಿದ್ದಾರೆ. ಪುಟ್ಟ ಬಾಲಕನಿಗೆ ಕೊಟ್ಟ ಸಂಸ್ಕಾರ ಮಾದರಿಯಾಗಿದೆ, ಮನೆಯೊಂದು ಶಾಲೆಯಾದಾಗ ಮಗು ಹೀಗಾಗಲು ಸಾಧ್ಯ ಎನ್ನುತ್ತಿದ್ದಾರೆ ಜನ. ಪರೀಕ್ಷಿತ್ ಹೇಳಿದ ಭಗವದ್ಗೀತೆಯ ಪಾಠ ಬದುಕಿಗೆ ಭರವಸೆ ನೀಡುತ್ತದೆ, ಸಮಾಧಾನ ತರುತ್ತದೆ ಹಾಗೂ ನಾವು ಕಷ್ಟ ಪಟ್ಟಾಗಲೇ ಬೆಳೆಯಲು ಸಾಧ್ಯ ಎಂಬುದನ್ನು ತಿಳಿಸುತ್ತದೆ. ಆತ ಏನು ಹೇಳಿದ ಕೇಳೋಣ.
ಸ್ಟಾರ್ ನಟನ ಸಿನೆಮಾ ಸಕ್ಸಸ್ ಎಣ್ಣೆ ಪಾರ್ಟಿ ಪ್ರಕರಣ, ಸ್ಯಾಂಡಲ್‌ವುಡ್ ಹಲವು ತಾರೆಯರಿಗೆ ವಿಚಾರಣೆ ಟೆನ್ಶನ್
'ಆಗೋದೆಲ್ಲ ಒಳ್ಳೇದಕ್ಕೇ ಆಗಿದೆ, ಏನೇನು ಆಗಲ್ವೋ ಅದೂ ಒಳ್ಳೇದಕ್ಕೇನೇ. ಈ ಜಗತ್ತಲ್ಲಿ ಏನೂನು ಶಾಶ್ವತ ಅಲ್ಲ. ಒಬ್ಬ ರಾಜ ಸದಾ ರಾಜ ಆಗಿರೋಲ್ಲ. ಶ್ರೀಮಂತ ಸದಾ ಶ್ರೀಮಂತ ಆಗಿರೋಲ್ಲ, ಬಡವ ಸದಾ ಬಡವ ಆಗಿರೋಲ್ಲ.'
ಈ ಮಾತುಗಳು ಕೃಷ್ಣನದೇ ಆದರೂ ಪುಟ್ಟ ಮಗುವಿನ ಬಾಯಲ್ಲಿ ಕೇಳಿದಾಗ ಹೆಚ್ಚು ಪರಿಣಾಮಕಾರಿಯಾಗಿ ಮಕ್ಕಳೂ ಸೇರಿ ಜನರನ್ನು ತಲುಪಿವೆ. ನಮ್ಮೆಲ್ಲ ಸಮಸ್ಯೆಗಳಿಗೂ ಈ ಮಾತಿನಲ್ಲಿ ಸಮಾಧಾನವಿದೆ.
ಪರೀಕ್ಷಿತ್ ಹೇಳಿದ ಮತ್ತೊಂದು ಗೀತಾ ಪಾಠ ಹೀಗಿದೆ; ಶ್ರೀಕೃಷ್ಣನಿಗೆ ಅರ್ಜುನ ಕೇಳಿದ್ನಂತೆ- ಈ ಗೋಡೆ ಮೇಲೊಂದು ಸಂದೇಶ ಬರಿ- ಅದನ್ನು ದುಃಖದಲ್ಲಿ ಓದಿದ್ರೆ ಸಂತೋಷ ಆಗ್ಭೇಕು, ಸಂತೋಷದಲ್ಲಿದ್ದಾಗ ಓದಿದ್ರೆ ದುಃಖ ಆಗ್ಬೇಕು ಅಂತ. ಅದಕ್ಕೆ ಕೃಷ್ಣ ಬರೆದ- 'ಈ ಸಮಯ ಕಳೆದು ಹೋಗುತ್ತದೆ.'
ಹೌದಲ್ಲವೇ? ಬದುಕಿನಲ್ಲಿ ದುಃಖವಾಗಲೀ, ಸಂತೋಷವಾಗಲೀ, ಕಷ್ಟಕಾರ್ಪಣ್ಯಗಳು, ಸುಖದ ಸುಪ್ಪತ್ತಿಗೆ ಯಾವುದೂ ಶಾಶ್ವತವಲ್ಲ. ಇದು ನಮ್ಮ ಅರಿವಿನಲ್ಲಿ ಜಾಗೃತವಾಗಿದ್ದಾಗ ನಾವು ಕಷ್ಟಕ್ಕೆ ಹೆದರುವುದಿಲ್ಲ, ಸುಖದಲ್ಲಿ ಮೆರೆಯುವುದಿಲ್ಲ.
ಡಿವೋರ್ಸ್ ಬಗ್ಗೆ ಯೋಚಿಸ್ತಿದೀರಾ? ಒಮ್ಮೆ ರವಿಶಂಕರ್ ಗುರೂಜಿಯ ಈ ಮಾತುಗಳನ್ನು ಕೇಳಿ..
ಅಕ್ಕಿ ಅನ್ನಕ್ಕೆ ಕೇಳುತ್ತದೆ. ನೀನು ನಾನೇ ಆಗಿದ್ದೆ, ಅದು ಹೇಗೆ ಅನ್ನವಾದೆ ಎಂದು.
ಅದಕ್ಕೆ ಅನ್ನ ಉತ್ತರಿಸಿತು- ನೀರು ಮತ್ತು ಬೆಂಕಿಗೆ ಒಳಗಾದೆ, ಅದರ ಸಂಸ್ಕೃತದಿಂದ ಮೃದುವಾದೆ ಎಂದು. ಕಷ್ಟಕ್ಕೆ ಒಡ್ಡಿಕೊಂಡಾಗ ಮಾತ್ರ ನಾವು ಉತ್ತಮರಾಗಲು ಸಾಧ್ಯ. ಭಗವದ್ಗೀತೆಯ ಈ ವಿಷಯಗಳನ್ನು ಬದುಕಲ್ಲಿ ಸದಾ ಸ್ಮರಿಸುತ್ತಾ ಮುನ್ನಡೆಯೋಣ. ಏನಂತೀರಾ?