
ಬಿಗ್ ಬಾಸ್ ಸೀಸನ್ 11 ಮುಗಿದ ಮೇಲೂ ಸುದ್ದಿಯಲ್ಲಿ ಇರುವ ಸ್ಪರ್ಧಿಗಳು ಅಂದ್ರೆ ಶಿಶಿರ್ ಶಾಸ್ತ್ರ, ಐಶ್ವರ್ಯ ಶಿಂಧೋಗಿ, ಮೋಕ್ಷಿತಾ ಪೈ, ರಜತ್ ಕಿಶನ್, ಧನರಾಜ್ ಮತ್ತು ಚೈತ್ರಾ ಕುಂದಾಪುರ. ಯಾವುದೇ ಸಿನಿಮಾ ಪ್ರೀಮಿಯರ್ ಶೋ ಇರಲಿ, ಖಾಸಗಿ ಕಾರ್ಯಕ್ರಮಗಳು ಇರಲಿ ಇಷ್ಟರಲ್ಲಿ ಇಬ್ಬರಾದರೂ ಅಟೆನ್ಡೆನ್ಸ್ ಹಾಕುತ್ತಾರೆ. ಅಲ್ಲದೆ ಪದೇ ಪದೇ ಕ್ಯಾಮೆರಾ ಕಣ್ಣಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ.ಇವರು ಸ್ನೇಹಿತರಾ ಅಥವಾ ಲವರ್ಸ್ಸಾ ಅನ್ನೋ ಡೌಟ್‌ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ ಆದರೂ ಜೊತೆಯಲ್ಲಿ ನೋಡುವುದಕ್ಕೆ ಜನರು ಇಷ್ಟ ಪಡುತ್ತಾರೆ.
ಇತ್ತೀಚಿಗೆ ಯಾವುದೇ ಖಾಸಗಿ ಕಾರ್ಯಕ್ರಮ ನಡೆದಿದೆ. ಅಲ್ಲಿದೆ ಐಶ್ವರ್ಯ ಮತ್ತು ಶಿಶಿರ್ ಆಗಮಿಸಿದ್ದಾರೆ. ಅದೇ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಸ್ಪರ್ಧಿ ಹಾಗೂ ವಿನ್ನರ್ ಆಗಿದ್ದಂತ ಒಳ್ಳೆ ಹುಡುಗ ಪ್ರಥಮ್ ಆಗಮಿಸಿದ್ದಾರೆ. ಪ್ರಥಮ್ ಮತ್ತು ಐಶ್ವರ್ಯ ಬಹಳ ಚೆನ್ನಾಗಿ ಪರಿಚಯವಿರುವವರು. ನಿಮ್ಮ ಮುಂದೆ ಐಶ್ವರ್ಯ ಜೊತೆ ಸಿನಿಮಾ ಮಾಡುತ್ತೀನಿ ಎಂದು ಪ್ರಥಮ್ ಕ್ಯಾಮೆರಾಗಳಿಗೆ ಹೇಳಿದ್ದಾರೆ. ಅಯ್ಯೋ ನೀವು ಇದನ್ನು ಹೇಳುತ್ತಲೇ ಇದ್ದೀರಿ ಯಾವಾಗ ಅಂತ ಗೊತ್ತಿಲ್ಲ..ಒಂದು ನನಗೆ ಮಗು ಆದ್ಮೇಲೆ ಇಲ್ಲ ನಿಮಗೆ ಮಕ್ಕಳು ಆದ್ಮೇಲೆನೇ ಸಿನಿಮಾ ಆಗೋದು ಎಂದು ಐಶು ಹೇಳಿದ್ದಾರೆ. ಪ್ರಥಮ್ ಈ ಮಾತನ್ನು ಇಲ್ಲಿಗೆ ಬಿಟ್ಟಿಲ್ಲ ಅಲ್ಲಿದ್ದ ಶಿಶಿರ್ ಕಾಲು ಕೂಡ ಎಳೆದಿದ್ದಾರೆ. ನಾವಿಬ್ಬರೂ ಕೂಡ ಒಟ್ಟಿಗೆ ಕೆಲಸ ಮಾಡುತ್ತೀವಿ ಆ ಚಿತ್ರಕ್ಕೆ ಶಿಶಿರ್ ವಿಲನ್ ಆಗಿ ಮಾಡಬೇಕು. ನಡುವೆಯಲ್ಲಿ ಬಂದು ಕಾಫಿ ಏನಾದರೂ ಕುಡಿಸಲು ಬಂದ್ರೆ ಮುಖಕ್ಕೆ ಹೊಡೀತಿನಿ. ಶಿಶಿರ್ ಇದನ್ನು ನೆನಪಿನಲ್ಲಿ ಇಟ್ಟಿಕೋ ನಾನು ಐಶ್ವರ್ಯ ಸಿನಿಮಾ ಮಾಡ್ತಾ ಇದ್ದೀವಿ ನಮಗೆ ತೊಂದರೆ ಕೊಡೋದೆಲ್ಲ ಇಲ್ಲ ಇದು ನಿನಗೆ ಕೊಡುತ್ತಿರುವ ವಾರ್ನಿಂಗ್ ಎಂದು ಪ್ರಥಮ್ ತಮಾಷೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ ಎನ್ನಲಾಗಿದೆ.
ಅಪ್ಪು ಕೊನೆಯ ದಿನ ಈ ವಿಚಾರದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು; ಸತ್ಯ ಬಿಚ್ಚಿಟ್ಟ ರಾಘವೇಂದ್ರ ರಾಜ್‌ಕುಮಾರ್ ಸೊಸೆ
ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದ ಶಿಶಿರ್ ಮತ್ತು ಐಶ್ವರ್ಯ ಒಳ್ಳೆಯ ಸ್ನೇಹಿತರು. ಇವರು ಗುಂಪಿಗೆ ಹಲವು ಬಂದು ಹೂದರು ಅದರೆ ಇಬರು ಮಾತ್ರ ಫಿಕ್ಸ್. ಫ್ಯಾಮಿಲಿ ವಿಚಾರದಲ್ಲಿ ಐಶ್ವರ್ಯ ಹಲವು ಸಲ ಕುಗ್ಗಿದ್ದಾರೆ ಕಣ್ಣೀರಿಟ್ಟಿದ್ದಾರೆ. ಆದರೆ ಶಿಶಿರ್ ಬಿಗ್ ಸಪೋರ್ಟ್ ಆಗಿ ನಿಂತುಕೊಂಡಿದ್ದಾರೆ. ಐಶ್ವರ್ಯಗೆ ಫ್ಯಾಮಿಲಿ ಇಲ್ಲ ಅನ್ನೋ ನೋವನ್ನು ಮರೆಸಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಐಶ್ವರ್ಯರನ್ನು ಮನೆ ಮಗಳಂತೆ ನೋಡಿಕೊಂಡಿದ್ದಾರೆ. ಈಗಲೂ ಬಿಗ್ ಬಾಸ್ ಮಗಳು ಎಂದು ಕರ್ನಾಟಕದ ಜನರು ಪ್ರೀತಿ ಕೊಡುತ್ತಾರೆ.
ಟೆಂಟ್‌ನಲ್ಲಿ ಜಾಕಿ ಚಿತ್ರ ನೋಡುವಾಗ ನಟ ಕಿಶೋರ್ ಜೇಬಿನಲ್ಲಿದ್ದ ಹಣವನ್ನು ಎಸೆದು ಕುಣಿದು ಕುಪ್ಪಳಿಸಿದ ಅನುಶ್ರೀ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.