Olavina Nildana: ತಾರಿಣಿಗೆ ಬಣ್ಣದ ಕೊಡೆ ಕೊಟ್ಟ ಸಿದ್ಧಾಂತ್, ಭಾವಕ್ಕೂ, ಅನುಬಂಧಕ್ಕೂ ಇದೆ ಕೊಡೆಯ ನಂಟು

Published : Mar 18, 2023, 01:21 PM ISTUpdated : Mar 18, 2023, 01:22 PM IST
Olavina Nildana: ತಾರಿಣಿಗೆ ಬಣ್ಣದ ಕೊಡೆ ಕೊಟ್ಟ ಸಿದ್ಧಾಂತ್, ಭಾವಕ್ಕೂ, ಅನುಬಂಧಕ್ಕೂ ಇದೆ ಕೊಡೆಯ ನಂಟು

ಸಾರಾಂಶ

ತಾರಿಣಿ ಸಿದ್ಧಾಂತ್ ಒಲವಿನ ನಿಲ್ದಾಣ ಸೀರಿಯಲ್‌ನ ಮುದ್ದಾದ ಜೋಡಿ. ಈ ಜೋಡಿ ನಡುವೆ ಒಂದು ಚೆಂದದ ಡೈಲಾಗ್‌ ನಡೆದಿದೆ. ಸಿದ್ಧಾಂತ್ ತಾರಿಣಿಗೆ ಕೊಟ್ಟಿರೋ ಬಣ್ಣದ ಕೊಡೆಯಲ್ಲಿ ಇಷ್ಟೆಲ್ಲ ವಿಶೇಷತೆ ಇದ್ಯಾ?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಲವ್ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಸೀರಿಯಲ್ ಒಲವಿನ ನಿಲ್ದಾಣ. ಇದು ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಇದರಲ್ಲಿ ನಾಯಕ ಸಿದ್ಧಾಂತ್ ಗುರಿ ಒಂದೊಳ್ಳೆ ಕೆಲಸ ಹಿಡಿದು, ಮನೆಯವರನ್ನು ನೋಡ್ಕೊಳ್ಳೋದು. ಇದಕ್ಕೆ ಕಾರಣ ಇದೆ. ಸಿದ್ದಾಂತ್ ಅಪ್ಪ ಕೆಲಸ ತೊರೆದು ಸಾಲ ಮಾಡಿ, ಕಷ್ಟದ ಸ್ಥಿತಿಯಲ್ಲಿದ್ದಾರೆ. ಸಿದ್ದು ಅಮ್ಮ ಕೆಲಸ ಮಾಡಿ, ಮನೆ ನೋಡಿಕೊಳ್ತಾ ಇದ್ದಾರೆ. ಅದಕ್ಕೆ ಸಿದ್ದು ಚೆನ್ನಾಗಿ ಓದಿ ಕೆಲಸ ತೆಗೆದುಕೊಂಡು ಮನೆ ನೋಡಿಕೊಳ್ಳಬೇಕಿದೆ. ಅಂತೆಯೇ ಆತ ಚೆನ್ನಾಗಿ ಓದಿ, ಜಾಬ್ ತೆಗೆದುಕೊಂಡಿದ್ದಾನೆ. ಮನೆಯ ಸಂಪೂರ್ಣ ಜವಾಬ್ದಾರಿ ಹೊರಬೇಕಿದೆ. ಅದಕ್ಕೆ ಅವನು ಸಿದ್ಧವಾಗಿದ್ದಾನೆ. ಸಿದ್ಧಾಂತ್‍ಗೆ ಆಸ್ಟ್ರೇಲಿಯಾದಲ್ಲಿ ಜಾಬ್ ಸಿಕ್ಕಿದೆ. 4 ಲಕ್ಷ ಸಂಬಳ. ಅದಕ್ಕೆ ತುಂಬಾ ಖುಷಿಯಾಗಿದ್ದಾನೆ. ಮನೆಯವರು ಅಷ್ಟೇ ಖುಷಿಯಾಗಿದ್ದಾರೆ. ಇನ್ಮುಂದೆ ನಮ್ಮ ಕಷ್ಟ ಎಲ್ಲಾ ತೀರಿತು. ನಾವು ಖುಷಿಯಾಗಿರಬಹುದು ಎಂದುಕೊಂಡಿದ್ದಾರೆ. ಈ ಸಂತೋಷದ ವಿಚಾರವನ್ನು ಸಿದ್ದು ತಾರಿಗೆ ಹೇಳಬೇಕು ಎಂದು ಕಾಲ್ ಮಾಡಿದ್ದಾನೆ. ಇತ್ತ ತಾರಿಣಿಗೆ ಸಿದ್ಧಾಂತ್ ಬಳಿ ತನ್ನ ಪ್ರೀತಿ ಹೇಳ್ಕೊಳ್ಳಬೇಕು ಅಂತಿದೆ.

ಈ ಹಂತದಲ್ಲಿ ಇವರಿಬ್ಬರ ನಡುವೆ ಚೆಂದದ ಡೈಲಾಗ್ ನಡೆದಿದೆ. ಸಿದ್ಧಾಂತ್ ತಾರಿಣಿಗೆ ಬಣ್ಣದ ಕೊಡೆ ಗಿಫ್ಟ್ ಮಾಡಿದ್ದಾನೆ. ತಾರಿಣಿಗೆ ಆಶ್ಚರ್ಯ, ಖುಷಿ. ಈ ಕಲರ್ ಕೊಡೆಯನ್ನೇ ಯಾಕೆ ಗಿಫ್ಟ್ ಮಾಡಿದ ಅನ್ನೋ ಪ್ರಶ್ನೆ. ಅದಕ್ಕೆ ಸಿದ್ಧಾಂತ್ ಚೆಂದದ ಉತ್ತರ ಕೊಟ್ಟಿದ್ದಾನೆ. 'ನಿನಗೇನೋ ಕೊಡಬೇಕು ಅನಿಸಿತ್ತು, ಆದರೆ ಅದು ನನ್ನ ಫೀಲಿಂಗ್ಸ್‌ನ ಸಿಂಬಲೈಸ್ ಮಾಡೋ ಥರ ಇರಬೇಕು ಅಂತಿತ್ತು. ಸೋ ಬಣ್ಣದ ಕೊಡೆ ಅನ್ನೋ ಹೆಸರೇ ಬ್ಯೂಟಿಫುಲ್. ಈ ಬಣ್ಣದಲ್ಲಿ ಒಳ್ಳೆ ಬಣ್ಣ ಕೆಟ್ಟ ಬಣ್ಣ ಅಂತೆಲ್ಲ ಇಲ್ಲ. ಎಲ್ಲ ಬಣ್ಣಗಳೂ ನನಗಿಷ್ಟ. ನಿನ್ನ ಬದುಕೂ ಹೀಗೆ ಕಲರ್‌ಫುಲ್ ಆಗಿರಲಿ ಅಂತ ಈ ಕೊಡೆ ತಂದೆ' ಅಂತಾನೆ. ಇದರ ಜೊತೆಗೆ ಕೊಡೆ ಹಿಂದಿನ ಕೆಲವು ಕ್ಯೂಟ್ ವಿಚಾರ ಹೇಳ್ತಾನೆ. ಅದು ಅರ್ಥಪೂರ್ಣವಾಗಿದೆ. ಭಾವನಾತ್ಮಕವಾಗಿಯೂ ಇದೆ.

Lakshana Serial: ಟ್ಯೂಬ್‌ಲೈಟ್‌ ಭೂಪತಿಗೆ ಮೌರ್ಯ ಕೊಟ್ಟ ನೋಡಿ ಚಮಕ್!

'ಈ ಕೊಡೆ ಪ್ರೊಟೆಕ್ಷನ್ ಅನ್ನೋದನ್ನು ಪ್ರತಿನಿಧಿಸುತ್ತೆ. ಮಳೆ ಇರಲಿ, ಬಿಸಿಲು ಇರಲಿ, ನಮಗೆ ಈ ಕೊಡೆ ರಕ್ಷಣೆ ನೀಡುತ್ತೆ. ನೀನ್ಯಾವಾಗಲೂ ಪ್ರೊಟೆಕ್ಟೆಡ್(Protected) ಆಗಿರಬೇಕು. ನಿನ್ನ ಪ್ರೀತಿಯ ದೇವರು ಗಣಪ ನಿನ್ನನ್ನು ಈ ಕೊಡೆಯಂತೆ ಸದಾ ಕಾಪಾಡಲಿ' ಅನ್ನುತ್ತಾನೆ. ಜೊತೆಗೆ ಇನ್ನೊಂದು ವಿಚಾರವನ್ನೂ ಹೇಳ್ತಾನೆ. 'ನಾರ್ಮಲ್(Normal) ಬಿಸಿಲು, ನಾರ್ಮಲ್ ಮಳೆ ಎಲ್ಲವೂ ಚೆಂದ. ಲೈಫಲ್ಲಿ ಸ್ವಲ್ಪ ಕಷ್ಟ, ಸ್ವಲ್ಪ ಸುಖ ಇದೆಲ್ಲ ಕಾಮನ್ನೇ. ಅದನ್ನೆಲ್ಲ ಗೆಲ್ಲೋ ಶಕ್ತಿ ನಿಂಗಿದೆ ತಾರಿಣಿ. ಈ ಮಳೆ ಬಿಸಿಲಿಂದ ಕೊಡೆ ಹೇಗೆ ನಮ್ಮನ್ನು ಕಾಪಾಡುತ್ತೋ ಆ ಗಣಪ ನಿನ್ನನ್ನು ಹಾಗೇ ಕಾಪಾಡಲಿ' ಎಂದಿದ್ದಾನೆ ಸಿದ್ಧಾಂತ್. ಆತನ ಮಾತಿಗೆ ತಾರಿಣಿ ಫುಲ್ ಫಿದಾ ಆಗಿದ್ದಾಳೆ.

ಇದೇ ಟೈಮಲ್ಲಿ ವಿಧಿಯ ಬಗ್ಗೆಯೂ ಪ್ರಶ್ನೆ ಬಂದಿದೆ. 'ವಿಧಿ ನಮ್ಮ ಬದುಕನ್ನು(Life) ಹೀಗೆ ಅಂತ ಮೊದಲೇ ನಿರ್ಧರಿಸಿರುತ್ತೆ. ಆದರೆ ದಾರಿಗಳ ಆಯ್ಕೆಯನ್ನು ನಮಗೆ ಬಿಟ್ಟಿರುತ್ತೆ. ಇಲ್ಲಾಂದ್ರೆ ಒಂದೇ ಕಾಲೇಜಲ್ಲಿದ್ದರೂ ಒಮ್ಮೆಯೂ ಭೇಟಿಯಾಗದ ನಾವಿಬ್ಬರೂ ಬಸ್ ಸ್ಟಾಂಡಲ್ಲಿ ಪರಿಚಿತರಾಗೋದು, ನಮ್ಮೂರಲ್ಲಿ ಸಮಯ ಕಳೆಯೋದು ಇದೆಲ್ಲಾ ಸಾಧ್ಯ ಇತ್ತಾ?' ಅನ್ನೋ ಮಾತನ್ನು ತಾರಿಣಿ ಹೇಳಿದ್ದಾಳೆ.

ಸದ್ಯಕ್ಕೀಗ ಸಿದ್ಧಾಂತ್ ಆಸ್ಟ್ರೇಲಿಯಾಕ್ಕೆ ಹೋಗ್ತಾನಾ, ತಾರಿಣಿ ತನ್ನ ಪ್ರೀತಿ(Love) ಹೇಳ್ಕೊಳ್ತಾಳ? ಅವರಿಬ್ಬರು ಹಳೆದನ್ನು ಮರೆತು ಒಂದಾಗ್ತಾರ ಅನ್ನೋ ಕುತೂಹಲವೂ ಇದೆ.

ರಾಮಾಚಾರಿ, ಸತ್ಯ ಹೇಳಿದ್ರೆ ಸಾಯ್ತೀನಿ ಅಂತಿದ್ದಾಳೆ ಚಾರು, ರಾಮಚಾರಿ ಏನ್ಮಾಡಬೇಕು ನೀವೇ ಹೇಳಿ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?