TEDxTalksನಲ್ಲಿ ತಮ್ಮ ಜೀವನ ಜರ್ನಿಯನ್ನು ಹಂಚಿಕೊಂಡ ಕನ್ನಡತಿ ರಂಜನಿ. ವೃತ್ತಿ ಬದುಕು ಕಟ್ಟಿಕೊಂಡ ಸ್ಪೂರ್ತಿ ಕತೆ ಎಂದ ನೆಟ್ಟಿಗರು....
ಪುಟ್ಟಗೌರಿ ಮದುವೆ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾದ ರಂಜನಿ ರಾಘವನ್ ಕನ್ನಡತಿ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. TEDxTalks ನಲ್ಲಿ ನಮ್ಮ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ.
'8 ವರ್ಷವಿದ್ದಾಗ ನಾನು ಶಾಸ್ತ್ರೀಯ ಸಂಗೀತ ಕಲಿಯುವುದಕ್ಕೆ ಆರಂಭಿಸಿದೆ. ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ ಶಾಲೆಯನ್ನು ವಿವಿಧ ಕ್ಷೇತ್ರಗಳಲ್ಲಿ ಪ್ರತಿನಿಧಿಸುತ್ತಿದ್ದೆ. ಅನೇಕರು ನಾನು ಹಾಡುವ ಶೈಲಿಯನ್ನು ಮೆಚ್ಚಿದ್ದರು ಅಲ್ಲಿಂದ ನಾನು ಪ್ಲೇ ಬ್ಲ್ಯಾಕ್ ಸಿಂಗರ್ ಆಗಬೇಕು ಎನ್ನುವ ಆಸೆಯನ್ನು ವ್ಯಕ್ತ ಪಡಿಸುತ್ತಿದ್ದೆ. ಗಾಯಕಿ ಆಗಬೇಕು ಅನ್ನೋದು ನನ್ನ ಮೊದಲ ಗುರಿ ಆಗಿತ್ತು. ಕಾಲೇಜ್‌ಗೆ ಕಾಲಿಟ್ಟ ಮೇಲೆ ನನ್ನ ವೃತ್ತಿ ಬದುಕು ಕಟ್ಟಿಕೊಳ್ಳಬೇಕಿತ್ತು. ಗಾಯಕಿ ಆಗುವುದಕ್ಕೆ ನಾನು ಸರಿಯಾದ ಶ್ರಮ ಹಾಕಿಲ್ವೋ ಅಥವಾ ಸರಿಯಾದ ಸಂಪರ್ಕ ಇರಲಿಲ್ವೋ ಗೊತ್ತಿಲ್ಲ ಆದರೆ ಹಾಡುವುದು ನನ್ನ ಹವ್ಯಾಸವಾಗಿ ಉಳಿಯಿತ್ತು. ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಟ್ಟ ಚೆನ್ನಾಗಿ ಅಂಕಗಳನ್ನು ಪಡೆಯುತ್ತಿದ್ದೆ.ಹೆಚ್‌ಆರ್ ಮ್ಯಾನೇಜ್‌ಮೆಂಟ್ ಸಬ್ಜೆಕ್ಟ್ ನನಗೆ ತುಂಬಾ ಇಷ್ಟವಾಗಲು ಆರಂಭಿಸಿತ್ತು. ಕಂಪ್ಯೂಟರ್ ಮತ್ತು ನಂಬರ್‌ಗಳಿಗಿಂತ ನನಗೆ ಜನರ ಜೊತೆ ಕೆಲಸ ಮಾಡಬೇಕು ಅನಿಸಿತ್ತು. ಹೀಗಾಗಿ ಹೆಚ್‌ಆರ್ ಮ್ಯಾನೇಜರ್ ಆಗಬೇಕು ಎಂದು ಮತ್ತೊಮ್ಮೆ ಕನಸು ಬದಲಾಯಿಸಿಕೊಂಡೆ ಇದಕ್ಕೆ ಫ್ಯಾಮಿಲಿ ಮತ್ತು ಸ್ನೇಹಿತರು ಸಪೋರ್ಟ್ ಮಾಡಿದ್ದರು' ಎಂದು ರಂಜನಿ ಮಾತನಾಡಿದ್ದಾರೆ.
800 ಸಂಚಿಕೆಗಳ ನಂತರ ಕನ್ನಡತಿ ಧಾರಾವಾಹಿಗೆ ಸುಖಾಂತ್ಯ; ಕನ್ನಡ ಕ್ಲಾಸ್ ಮುಗಿಸಿದ ಟೀಚರ್
'2012ರಲ್ಲಿ ನಾನು ಮೊದಲ ಆಕ್ಟಿಂಗ್ ಆಡಿಷನ್ ಕೊಟ್ಟೆ ಅದಲ್ಲಿಂದ ನಾನು ಏನು ನನ್ನ ಬದುಕು ಏನು ಅನ್ನೋ ದೃಷ್ಠಿ ಬದಲಾಯಿಸಿತ್ತು. ಸ್ಟೇಜ್ ಫಿಯರ್ ಇಲ್ಲದ ಕಾರಣ ನಾನು ಧೈರ್ಯವಾಗಿ ಆಡಿಷನ್ ಕೊಟ್ಟು ಸೆಲೆಕ್ಟ್ ಆದೆ. ನನ್ನ ಮಾತೃ ಭಾಷೆ ಕನ್ನಡ ಆಗಿದ್ದ ಕಾರಣ ಟಿವಿಯಲ್ಲಿ ನಟಿಸಲು ಅವಕಾಶ ಪಡೆದುಕೊಂಡೆ. ಅಲ್ಲಿಂದ ಮನೋರಂಜನೆ ಕ್ಷೇತ್ರ ನನ್ನ ಮನಸ್ಸಿಗೆ ಹತ್ತಿರವಾಯ್ತು. ಕಥೆ ಹೇಳುವುದು, ಪಾತ್ರದಲ್ಲಿ ಮುಳುಗುವುದು, ಮೇಕಪ್ ಮಾಡಿಕೊಳ್ಳುವುದು ಪ್ರತಿಯೊಂದನ್ನು ಇಷ್ಟ ಪಡಲು ಆರಂಭಿಸಿದೆ. ಈ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಒಂದು ದಿನ ನಾಟಕ ನೋಡಲು ಹೋಗಿದ್ದೆ, ನಾಟಕ ಮುಗಿದ ತಕ್ಷಣ ನಿರ್ದೇಶಕರ ಬಳಿ ಓದಿ ಹೋಗಿ ತಂಡ ಸೇರಿಕೊಳ್ಳಲು ಮನವಿ ಮಾಡಿದೆ. ಕರ್ನಾಟಕದಿಂದ ಹೊರಗೂ ನಾಟಕ ಶೋಗಳನ್ನು ಕೊಟ್ಟಿರುವೆ. ಮಗಳು ಈ ರೀತಿ ನಿರ್ಧಾರ ತೆಗೆದುಕೊಂಡಿದಕ್ಕೆ ನನ್ನ ತಂದೆ ತಾಯಿ ಆತಂಕದಲ್ಲಿ ಇದ್ದರು. ಅಷ್ಟಾಗಿ ಹೆಸರು ಸಿಗದ ಕಾರಣ ವಿದ್ಯಾಭ್ಯಾದ ಕಡೆಗೂ ಗಮನ ಕೊಡುತ್ತಿದ್ದೆ' ಎಂದು ರಂಜನಿ ಹೇಳಿದ್ದಾರೆ.
Kannadathi: ರಂಜಿನಿ ರಾಘವನ್ ಒಗಟು ಚಾಲೆಂಜ್, ನೀವಿದ್ದೀರಾ?
'ಒಂದು ವರ್ಷಕ್ಕೆ ಸರಿಯಾಗಿ ಪ್ರಮುಖ ಧಾರಾವಾಹಿಯಲ್ಲಿ ಅವಕಾಶ ಪಡೆದುಕೊಂಡೆ. ನಾನು ಏನೆಂದು ಸಾಧನೆ ಮಾಡಿ ತೋರಿಸಬೇಕಿತ್ತು ಆದರೆ ಅಭದ್ರತೆ ನನ್ನನ್ನು ಕಾಡುತ್ತಿತ್ತು. ನನಗೆ ನಾನೇ ನೋಡಲು ಚೆನ್ನಾಗಿಲ್ಲ ನಾಯಕಿ ಆಗಲು ಗ್ಲಾಮರ್ ಇಲ್ಲ ಅಂದುಕೊಳ್ಳುತ್ತಿದ್ದೆ. ವರ್ಷ ಕಳೆಯುತ್ತಿದ್ದಂತೆ ಜನರು ನನ್ನನ್ನು ಗುರುತಿಸಲು ಆರಂಭಿಸಿದು ಅಲ್ಲಿಂದ ನನಗೆ ಸಿನಿಮಾ ಆಫರ್‌ಗಳು ಬಂತ್ತು. ನಟನೆ ಜೊತೆ ನಾನು MBA ಪದವಿ ಪಡೆದಿದ್ದೆ. ಧಾರಾವಾಹಿಗಳಲ್ಲಿ ಹ್ಯಾಪಿ ಅಂತ್ಯ ಕೊಡುವ ರೀತಿ ನಮ್ಮ ಬದುಕು ಇರುವುದಿಲ್ಲ ಏಕೆಂದರೆ ನಮಗೆ ಸಿಗುವ ಕೆಲಸ ಶಾರ್ಟ್ ಟರ್ಮ್ ಮತ್ತು ಅನಿರೀಕ್ಷಿತ. 2018ರಲ್ಲಿ ನಾನಿದ್ದ ಶೋನಲ್ಲಿ ಕೆಲವೊಂದು ಬದಲಾವಣೆ ಮಾಡಿದ ಕಾರಣ ನಾನು ಹೊರ ನಡೆದೆ. ಮತ್ತೊಬ್ಬರು ನನ್ನ ಸ್ಥಾನಕ್ಕೆ ಬಂದಿದ್ದು ಸ್ವೀಕರಿಸಲು ಆಗಲಿಲ್ಲ ಮನಸ್ಸಿಗೆ ನೋವಾಯ್ತು. 24 ವರ್ಷದ ಹುಡುಗಿ ಆಗಿ ನನಗೆ ಬೇಸರವಿತ್ತು ಸರಿಯಾದ ಅವಕಾಶ ಸಿಗಲಿಲ್ಲ. ನನ್ನ ಸ್ನೇಹಿತರು ಒಳ್ಳೆ ಕೆಲಸ ಪಡೆದುಕೊಂಡರು ಚೆನ್ನಾಗಿ ದುಡಿಯುತ್ತಿದ್ದರು. ನಾನು ನಟನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡ ಕಾರಣ ನಾನು ಅವಕಾಶಕ್ಕೆ ಕಾಯುತ್ತಿದ್ದೆ ಕಾಯಬೇಕಿತ್ತು.' ಎಂದಿದ್ದಾರೆ ರಜನಿ.
'ನನ್ನ ಹಾದಿ ಸರಿ ತಪ್ಪುಗಳನ್ನು ಹುಡುಕಲು ಶುರು ಮಾಡಿದೆ. ಆಗ ನಾನು ಕಥೆಯನ್ನು ಚೆನ್ನಾಗಿ ಹೇಳಬಹುದು ಹೀಗಾಗಿ ನಾನು ಕಥೆ ಬರೆಯಬೇಕು ಅನ್ನೋ ಆಸೆ ವ್ಯಕ್ತ ಪಡಿಸಿದೆ. ಕಥೆ ಬರೆಯುವೆ ಎಂದಾಗ ಅನೇಕರು ಕೆಟ್ಟದಾಗಿ ಮಾತನಾಡಿದ್ದರು. ಯಾರೂ ನನ್ನ ಕರೆ ಸ್ವೀಕರಿಸಲಿಲ್ಲ ಆದರೆ ಆ ಸಮಯದಲ್ಲಿ ಒಂದು ಧಾರಾವಾಹಿಗೆ ಕಥೆ ಬರೆಯಲು ಅವಕಾಶ ಪಡೆದುಕೊಂಡೆ. ಅಲ್ಲೂ ಕೂಡ ನಾನು ತುಂಬಾ ನೆಗೆಟಿವಿಟಿ ಎದುರಿಸಿದೆ. ನನ್ನ ಮನಸ್ಸಿನ ಮಾತು ಕೇಳುವುದಕ್ಕೆ ಶುರು ಮಾಡಿದೆ ಅಲ್ಲಿ ಧೈರ್ಯ ಬಂತು. ನನ್ನ ಭಾಷೆಯಿಂದ ಮತ್ತೆ ಆಕ್ಟಿಂಗ್ ಕಿಕ್ ಸ್ಟಾರ್ಟ್ ಆಯ್ತು. ಕನ್ನಡ ವೆಬ್ ಸೈಟ್‌ಗಳಿಗೆ ನಾನು ಸಣ್ಣ ಸ್ಟೋರಿಗಳನ್ನು ಬರೆಯುವುದಕ್ಕೆ ಶುರು ಮಾಡಿದೆ. ಆ ಆರ್ಟಿಕಲ್‌ಗಳನ್ನು ಜನರು ಇಷ್ಟ ಪಟ್ಟರು ಹೀಗಾಗಿ ಕಥೆ ಡಬ್ಬಿ ಎನ್ನುವ ಪುಸ್ತಕ ಬರೆದೆ. 6 ತಿಂಗಳಿನಲ್ಲಿ 15 ಸಾವಿರ ಪುಸ್ತಕವನ್ನು ಜನರು ಖರೀದಿ ಮಾಡಿದ್ದಾರೆ. ಜನರು ಈಗ ನನ್ನನ್ನು ಕಲಾವಿದೆ, ರೈಟರ್ ಹಾಗೂ ಗಾಯಕಿಯಾಗಿ ಗುರುತಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.