Actress Leelavathi ಪತಿ ಯಾರು? ವಿನೋದ್‌ ರಾಜ್‌ ತಂದೆ ಯಾರು? ದಾಖಲೆ ಸಮೇತ ಬಿಚ್ಚಿಟ್ಟ NR Ramesh

Published : Mar 05, 2025, 09:47 AM ISTUpdated : Mar 05, 2025, 10:26 AM IST
Actress Leelavathi ಪತಿ ಯಾರು? ವಿನೋದ್‌ ರಾಜ್‌ ತಂದೆ ಯಾರು? ದಾಖಲೆ ಸಮೇತ ಬಿಚ್ಚಿಟ್ಟ NR Ramesh

ಸಾರಾಂಶ

ದಶಕಗಳ ಕಾಲ ನಟಿ ಲೀಲಾವತಿ ಅವರು ನಟಿಯಾಗಿ, ನಾಯಕಿಯಾಗಿ ಮೆರೆದಿದ್ದಾರೆ. ಲೀಲಾವತಿ ಅವರ ಪತಿ ಯಾರು? ವಿನೋದ್‌ ರಾಜ್‌ ಅವರ ಅಪ್ಪ ಯಾರು ಎನ್ನುವ ಪ್ರಶ್ನೆ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಈ ವಿಷಯದ ತಾಯಿ-ಮಗ ಸ್ಪಷ್ಟ ಉತ್ತರ ಕೊಟ್ಟಿಲ್ಲ. ಇದರ ಜೊತೆಗೆ ಈ ವಿಚಾರಕ್ಕೂ ಡಾ ರಾಜ್‌ಕುಮಾರ್‌ ಅವರಿಗೆ ಕೆಲವರು ಸಂಬಂಧ ಕಲ್ಪಿಸಿ ಮಾತನಾಡಿದ್ದರು. ಈ ವಿಚಾರವಾಗಿ ನಿರ್ಮಾಪಕ ಎನ್‌ಆರ್‌ ರಮೇಶ್‌ ಅವರು ಮಾತನಾಡಿದ್ದಾರೆ.   

ನಟಿ ಲೀಲಾವತಿ ಅವರ ಗಂಡ ಯಾರು? ವಿನೋದ್‌ ರಾಜ್‌ ಅವರ ತಂದೆ ಯಾರು? ಎನ್ನುವ ಪ್ರಶ್ನೆ ಅನೇಕರಿಗೆ ಇರಬಹುದು. ಇನ್ನೊಂದು ಈ ಕಡೆ ಈ ವಿಚಾರವಾಗಿ ಡಾ ರಾಜ್‌ಕುಮಾರ್‌ ಅವರ ಹೆಸರು ಥಳುಕು ಹಾಕಿಕೊಂಡಿತ್ತು. ಈಗ ಈ ವಿಚಾರವಾಗಿ ನಿರ್ಮಾಪಕ ಎನ್‌ಆರ್‌ ರಮೇಶ್‌ ಅವರು ಬಿ ಗಣಪತಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ದಾಖಲೆಗಳ ಸಮೇತ ಮಾತನಾಡಿದ್ದಾರೆ. 

ವಿನೋದ್‌ ರಾಜ್‌ ಮದುವೆ ವಿಷಯ ರಿವೀಲ್‌ ಆಯ್ತು! 
“ನಾವೆಲ್ಲ ವಿನೋದ್‌ ರಾಜ್‌ ಅವರಿಗೆ ಮದುವೆ ಆಗಿಲ್ಲ ಅಂತ ಅಂದುಕೊಂಡಿದ್ದೆವು. ಆಗ ಪ್ರಕಾಶ್‌ ರಾಜ್‌ ಮೆಹು ಅವರು ವಿನೋದ್‌ ರಾಜ್‌ ಪತ್ನಿ, ಮಗನ ಪರಿಚಯ ಮಾಡಿಕೊಟ್ಟರು. ಈ ಮೂಲಕ ಅಮ್ಮ-ಮಗನ ನಿಜವಾದ ಮುಖದ ಪರಿಚಯ ಮಾಡಿಕೊಟ್ಟರು” ಎಂದು ಎನ್‌ಆರ್‌ ರಮೇಶ್‌ ಅವರು ಹೇಳಿದ್ದಾರೆ. 

ಅವ್ರ ಹೆಸರನ್ನೇನಾದ್ರೂ ಹೇಳಿದ್ದಿದ್ರೆ, ಕಟ್ಕೊಂಡಾಕೆ ಜೀವ ಕಳ್ಕೋತಿದ್ರು: ಲೀಲಾವತಿ ಹಳೇ ವಿಡಿಯೋ ವೈರಲ್‌

ಆಸ್ತಿಪತ್ರದಲ್ಲಿ ಏನು ಹೆಸರಿತ್ತು? 
“ಮಹಾಲಿಂಗ ಭಾಗವತರು ಹೆಸರಾಂತ ರಂಗಭೂಮಿ ಕಲಾವಿದರು. ಇವರ ಕಂಪೆನಿಯಲ್ಲಿ ಲೀಲಾವತಿ ಕೆಲಸ ಮಾಡಿದ್ದರು. ತಮಿಳುನಾಡು ಸರ್ಕಾರದ ಚೆಂಗಲಪಟ್ಟು ಜಿಲ್ಲೆಯ ತಿರುಪುರು ತಾಲೂಕಿನಲ್ಲಿ ಮಹಾಲಿಂಗ ಭಾಗವತರ ಜಮೀನು ಲೀಲಾವತಿಯವರಿಗೆ ಸಿಕ್ಕಿದೆ. ಲೀಲಾವತಿ ಅವರು ಸಾಯುವ ಒಂದು ವರ್ಷದ ಮುಂಚೆ ಒಂದು ತಿರುವಳಿ ಪತ್ರ ಮಾಡುತ್ತಾರೆ. ಆಗ ವಿನೋದ್‌ ರಾಜ್‌ ಕೂಡ ತಂದೆ ಮಹಾಲಿಂಗ ಭಾಗವತ ಎಂದು ಬರೆದಿರುತ್ತಾರೆ. 4 ಕೋಟಿ ರೂಪಾಯಿ ಆರು ಲಕ್ಷಕ್ಕೆ ಈ ಜಮೀನು ಸೆಟಲ್‌ ಆಗತ್ತೆ” ಎನ್‌ಆರ್‌ ರಮೇಶ್‌ ಅವರು ಹೇಳಿದ್ದಾರೆ.  

ಲೀಲಾವತಿ, ಮಹಾಲಿಂಗ ಪರಿಚಯ ಹೇಗಾಯ್ತು? 
“ಲೀಲಾವತಿ ಅವರ ಮೊದಲ ಹೆಸರು ಲೀನಾ ಸಿಕ್ವೇರಾ. ಲೀಲಾವತಿ ಅವರು ಸುಬ್ಬಯ್ಯ ಎನ್ನುವವರ ಮನೆಯಲ್ಲಿ ಬೆಳೆಯುತ್ತಾರೆ. ಲೀಲಾವತಿ ಅವರು ಎಲ್ಲಿಯೂ ತಮ್ಮ ನಿಜವಾದ ತಂದೆಯ ಹೆಸರನ್ನು ರಿವೀಲ್‌ ಮಾಡಿಲ್ಲ. ಅದಕ್ಕೂ ಮುನ್ನ ಮಹಾಲಿಂಗ ಭಾಗವತರಿಗೆ ಲೀಲಾವತಿ ಪರಿಚಯ ಆಗಿರುತ್ತದೆ. ಮಹಾಲಿಂಗ ಅವರ ಶಿಫಾರಿಸ್ಸಿನ ಮೇರೆಗೆ 1958ರಲ್ಲಿ ತೆರೆ ಕಂಡಿದ್ದ ʼಭಕ್ತ ಪ್ರಹ್ಲಾದʼ ನಾಟಕದಲ್ಲಿ ಲೀಲಾವತಿ ನಟಿಸಿದ್ದರು. 1962ರಲ್ಲಿ ಮಹಾಲಿಂಗ ಭಾಗವತ ಹಾಗೂ ಲೀಲಾವತಿ ಮದುವೆ ಆಗುತ್ತದೆ. ಮಹಾಲಿಂಗ ಅವರಿಗೆ ಲೀಲಾವತಿ ಅವರು ಮೂರನೇ ಪತ್ನಿ. 1967ರಲ್ಲಿ ವಿನೋದ್‌ ರಾಜ್‌ ಜನನ ಆಗುತ್ತದೆ. ಸಂಸ್ಕೃತದಲ್ಲಿ ಪಾಂಡಿತ್ಯ ಗಳಿಸಿದ್ದರಿಂದ ಮಹಾಲಿಂಗ ಅವರಿಗೆ ಭಾಗವತ ಎನ್ನುವ ಹೆಸರು ಬಂತು” ಎನ್‌ಆರ್‌ ರಮೇಶ್‌ ಅವರು ಹೇಳಿದ್ದಾರೆ. 

'ಡಾ ರಾಜ್‌ ಸ್ಮಾರಕ ಲೋಕಾರ್ಪಣೆ'ಗೆ ಲೀಲಾವತಿ-ವಿನೋದ್‌ರಾಜ್ ಹೋದಾಗ ಶಿವಣ್ಣ ಮಾಡಿದ್ದೇನು?

ಸಿನಿಮಾಗಳಲ್ಲಿ ನಟನೆ
“ ʼಭಕ್ತ ಪ್ರಹ್ಲಾದʼ, ʼಮಾಂಗಲ್ಯʼ ಎನ್ನುವ ಸಿನಿಮಾಗಳಲ್ಲಿ ಲೀಲಾವತಿ ನಟಿಸುತ್ತಾರೆ. ತಮಿಳುನಾಡಿನ ತೋಟದಮನೆಯಲ್ಲಿ ವಿನೋದ್‌ ರಾಜ್‌ ಜನನ ಆಗುತ್ತದೆ. ಅಲ್ಲಿಯೇ ಮಹಾಲಿಂಗ ಅವರಿಗೆ ಹೃದಯಾಘಾತ ಆಗಿ ನಿಧನರಾಗುತ್ತಾರೆ. ಡಾ ರಾಜ್‌ಕುಮಾರ್‌ ಜೊತೆ ಮಹಾಲಿಂಗ ಅವರು 18ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.  ʼಭೂದಾನʼ, ʼಶ್ರೀಶೈಲʼ, ʼಮಹಾತ್ಮ ಕಬೀರ್ʼ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ. 2021ರಲ್ಲಿ ಮಹಾಲಿಂಗ ಭಾಗವತರು ನನಗೆ ಗಾಡ್‌ಫಾದರ್‌ ಅಂತ ಲೀಲಾವತಿ ಅವರು ಹೇಳಿರುವ ಮಾತು ವೈರಲ್‌ ಆಗುತ್ತಿದೆ. ನಿರ್ದೇಶಕ ಭಾರ್ಗವ ಅವರು ಮಹಾಲಿಂಗ ಭಾಗವತ ಹಾಗೂ ನಾನು ಆತ್ಮೀಯರು. ಅವರೇ ಲೀಲಾವತಿ ಗಂಡ ಅಂತ ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ” ಎನ್‌ಆರ್‌ ರಮೇಶ್‌ ಅವರು ಹೇಳಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!