
ಜೀ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ ಆಣ್ಣಯ್ಯ ಧಾರಾವಾಹಿಯು ಗ್ರಾಮೀಣ ಹಿನ್ನೆಲೆಯಲ್ಲಿ ಹೊಂದಿದೆ. ಹೀಗಾಗಿ, ಈ ಧಾರಾವಾಹಿಯನ್ನು ಸಂಪೂರ್ಣವಾಗಿ ಹಳ್ಳಿಯಲ್ಲಿಯೇ ಶೂಟಿಂಗ್ ಮಾಡಲಾಗುತ್ತಿದೆ. ಆದರೆ, ಯಾವ ಹಳ್ಳಿಯಲ್ಲಿ ಶೂಟಿಂಗ್ ಮಾಡಲಾಗುತ್ತಿದೆ ಎಂಬುದನ್ನು ಸ್ವತಃ ನಟಿ ನಿಶಾ ಅವರೇ ರಿವೀಲ್ ಮಾಡಿದ್ದಾರೆ. ಜೊತೆಗೆ, ನಟಿ ನಿಶಾ ರಾಮಕೃಷ್ಣ ಅವರು ಶೂಟಿಂಗ್ ವೇಳೆ ತಮ್ಮ ಪಾತ್ರಾಭಿನಯ ಇಲ್ಲದಿದ್ದಾಗ ನಿದ್ದೆ ಬಂದರೆ ಅಭಿಮಾನಿಗಳ ಮನೆಗೆ ಹೋಗಿ ನಿದ್ದೆ ಮಾಡುತ್ತಾರೆ ಎಂಬುದನ್ನೂ ಹೇಳಿಕೊಂಡಿದ್ದಾರೆ.
ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ನಿಶಾ ಅವರ ವಿಡಿಯೋ ಇದೀಗ ವೈರಲ್ ಆಗಿದೆ. ಅದರಲ್ಲಿ ನಟಿ ನಿಶಾ ಅವರಿಗೆ ಅಭಿಮಾನಿಗಳೊಂದಿಗೆ ತುಂಬಾ ಮರೆಯಲಾಗದ ಘಟನೆಗಳು ನಡೆಯುತ್ತವೆ? ಎಂದು ಪ್ರಶ್ನೆ ಕೇಳಿಲಾಗುದ್ದು, ಇದಕ್ಕೆ ಮುಕ್ತವಾಗಿ ಉತ್ತರವನ್ನು ಕೊಟ್ಟಿದ್ದಾರೆ.
'ನನಗೆ ಅಭಿಮಾನಿಗಳೊಂದಿಗೆ ತುಂಬಾ ಆತ್ಮೀಯವಾಗಿರುವ ಘಟನೆಗಳು ನಡೆದಿವೆ. ಚನ್ನಪಟ್ಟಣ ತಗಚಗೆರೆ ಗ್ರಾಮದಲ್ಲಿ ಧಾರಾವಾಹಿ ಶೂಟಿಂಗ್ ನಡೆಯುತ್ತಿದೆ. ಈ ಗ್ರಾಮದ ಎಲ್ಲ ಮನೆಯವರೂ ಕೂಡ ತಮಗೆ ಗೊತ್ತು. ನಾವು ಕೂಡ ಗ್ರಾಮದ ಎಲ್ಲರಿಗೂ ಗೊತ್ತು. ಶೂಟಿಂಗ್ ನಡೆಯುವ ಮನೆಯಲ್ಲಿ ವಿಶ್ರಾಂತಿಗೆ ಜಾಗ ಇಲ್ಲದಿದ್ದರೆ ಎದುರುಗಡೆ ಮನೆಗೆ ಹೋಗಿ ಮಲಗುತ್ತೇವೆ. ಇನ್ಯಾರದ್ದೋ ಮನೆಯಲ್ಲಿ ಟಿವಿ ನೋಡುವುದಕ್ಕೆ ಹೋಗಿ ಕುಳಿತುಕೊಳ್ಳುತ್ತೇವೆ. ಅವರು ಇವತ್ತು ನಮ್ಮ ಮನೆಯಲ್ಲಿ ಊಟಕ್ಕೆ ಬಾರಮ್ಮಾ, ನಮ್ಮನೆಗೆ ಬಾರಮ್ಮಾ ಎಂದು ಕರೆಯುತ್ತಾರೆ. ಮತ್ತೊಬ್ಬರು ನಮ್ಮನೆಗೆ ಟೀ ಕುಡಿಯಲಿ ಬಾ, ಕಾಫಿ ಕುಡಿಯಲು ಬಾ ಎಂದು ಕರೆಯುತ್ತಾರೆ. ಇನ್ಯಾರದ್ದೋ ಮನೆಯಲ್ಲಿ ತಿಂಡಿ, ಕಾಫಿ, ಉಟ ಕೂಡ ಮಾಡಿಕೊಂಡು ಬರುತ್ತೇವೆ' ಎಂದು ನಿಶಾ ಹೇಳಿದ್ದಾರೆ.
ಇದನ್ನೂ ಓದಿ: ಗುಂಡಮ್ಮ ಮಾಡಿದ ತಪ್ಪಾದ್ರೂ ಏನು? ಶುರುವಾಯ್ತು ಆಯ್ತು ಅತ್ತೆ ಕಾಟ, ಏನ್ ಮಾಡ್ತಾಳೆ ಪಾರು?
ಇನ್ನು ಗ್ರಾಮದ ಮಹಿಳೆಯರು ಎರಡು ಮೂರು ದಿನ ಮನೆಗೆ ಹೋಗಿ ವಾಪಸ್ ಬಂದರೆ, 'ಏನೇ ಪಾರು ಚೆನ್ನಾಗಿದ್ದೀಯಾ? ಏನೇ ರೌಡಿ ಬೇಬಿ ಎಂದೆಲ್ಲಾ ಕರೆದು ನನ್ನನ್ನು ಮಾತನಾಡಿಸುತ್ತಾರೆ. ಜೊತೆಗೆ, ನನ್ನ ಜೊತೆಗೆ ಕುಳಿತುಕೊಂಡು ಏನೇ ನಿನ್ನೆ ಹಂಗೆ ಮಾಡಿಬಿಟ್ಟೆ, ಹಿಂದೆ ಮಾಡಿಬಿಟ್ಟೆ ಎಂದು ಅಲ್ಲಿಯೇ ಪ್ರಶ್ನೆ ಕೇಳುತ್ತಾರೆ. ಇನ್ನು ನಾನೇನಾದರೂ ಧಾರಾವಾಹಿಯಲ್ಲಿ ತಪ್ಪು ಮಾಡಿಬಿಟ್ಟಿದ್ದರೆ ಅಲ್ಲಿಯೇ ನನಗೆ ಬೈಯುತ್ತಾರೆ. ಆ ಒಂದು ಅನಿಯಮಿತ ಪ್ರೀತಿ ಮಾತ್ರ ನನಗೆ ಸಿಗುತ್ತಿದೆ. ಅಭಿಮಾನಿಗಳ ಇಂತಹ ಪ್ರೀತಿ ಪಡೆಯುವುದಕ್ಕೆ ಪುಣ್ಯ ಮಾಡಿರಬೇಕು' ಎಂದು ನಟಿ ನಿಶಾ ಅವರು ಹೇಳಿಕೊಂಡಿದ್ದಾರೆ.
ಅಣ್ಣಯ್ಯ ಧಾರಾವಾಹಿ ಪ್ರಸ್ತುತ ಸ್ಥಿತಿಗತಿ: ಅಣ್ಣಯ್ಯ ಧಾರಾವಾಹಿಯಲ್ಲಿ ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಹೆಚ್ಚು ವಿದ್ಯಾಭ್ಯಾಸ ಮಾಡದ ಅಣ್ಣಯ್ಯನನ್ನು ಸಂದರ್ಭಕ್ಕೆ ಕಟ್ಟುಬಿದ್ದು ಮದುವೆ ಮಾಡಿಕೊಳ್ಳುತ್ತಾಳೆ. ಇದೀಗ ತನಗೆ ಈಗ ಮದುವೆ ಮಾಡಿಕೊಂಡಿರುವ ಮಾವನೇ ಸರಿಯಾದ ಜೋಡಿ ಎಂದು ಪ್ರೀತಿಸಲು ಶುರು ಮಾಡಿದ್ದಾಳೆ. ಜೊತೆಗೆ, ತನ್ನ ನಾದಿನಿ ಗುಂಡಮ್ಮಗೆ ಮದುವೆ ಮಾಡಲಾಗಿದ್ದು, ಮನೆಯಲ್ಲಿ ಸಂತೋಷದ ವಾತಾವರಣ ತುಂಬಿದೆ. ಹೀಗಿರುವಾಗ ಶಿವು ಅವರ ಮಾವ ಅಣ್ಣಯ್ಯನ ಮನೆಯನ್ನು ಸಾಲಕ್ಕೆ ವಜಾ ಮಾಡಿಕೊಂಡು ಇಡೀ ಕುಟುಂಬದವನ್ನು ಬೀದಿಗೆ ತಳ್ಳುವ ಹುನ್ನಾರ ಮಾಡಿದ್ದಾನೆ.
ಇದನ್ನೂ ಓದಿ: ರಿಯಲ್ ಲೈಫ್ ಲವ್ ಬಗ್ಗೆ ಕೊನೆಗೂ ಗುಟ್ಟು ಬಿಚ್ಚಿಟ್ಟ ಅಣ್ಣಯ್ಯ: ಲವರ್ ವಿಷ್ಯ ಕೇಳಿ ಅಭಿಮಾನಿಗಳಿಗೆ ಶಾಕ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.