
ಇಷ್ಟವೋ, ಕಷ್ಟವೋ ಅಣ್ಣಯ್ಯ ಸೀರಿಯಲ್‌ನಲ್ಲಿ ಜಿಮ್ ಸೀನ ಮತ್ತು ಗುಂಡಮ್ಮ ರಶ್ಮಿಯ ಮದುವೆಯಾಗಿದೆ. ಮತ್ತೊಂದೆಡೆ ಗಂಡ ಮಾದಪ್ಪನ ಬಲವಂತಕ್ಕೆ ಸೊಸೆಯನ್ನು ಲೀಲಾ ಮನೆ ತುಂಬಿಸಿಕೊಂಡಿದ್ದಾಳೆ. ಗುಂಡಮ್ಮನ ಜೊತೆಯಲ್ಲಿ ಶಿವು ಕುಟುಂಬಸ್ಥರು ಮಾದಪ್ಪನ ಮನೆಗೆ ಬಂದಿದ್ದಾರೆ. ಮದುವೆ ನಂತರದ ಎಲ್ಲಾ ಶಾಸ್ತ್ರಗಳನ್ನು ಪಾರು ಮುಂದೆ ನಿಂತು ಮಾಡಿಸುತ್ತಿದ್ದಾಳೆ. ಪಾರು ಈ ಕೆಲಸಕ್ಕೆ ಶಿವು ಮೂವರು ಸೋದರಿಯರು ಮತ್ತು ಮಂಜಿ ಸಹಾಯ ಮಾಡಿದ್ದಾರೆ. ಉಂಗುರು ಹುಡುಕುವ ಶಾಸ್ತ್ರದಲ್ಲಿಂತೂ ಗುಂಡಮ್ಮ-ಸೀನ ಮಡಿಕೆಯನ್ನು ಒಡೆದು ಹಾಕಿದ್ದರು. ಇದೀಗ ಫಸ್ಟ್ ನೈಟ್‌ನಲ್ಲಿ ಜಗಳವಾಡುತ್ತಲೇ ಜಿಮ್ ಸೀನ ಮತ್ತು ಗುಂಡಮ್ಮ ಮಂಚವನ್ನೇ ಮುರಿದು ಹಾಕಿದ್ದಾರೆ.
ಪಿಂಕಿಯನ್ನು ಮದುವೆಯಾಗಬೇಕು ಎಂದು ಜಿಮ್ ಸೀನ್ ಮತ್ತು ಆತನ ತಾಯಿ ಕನಸು ಕಂಡಿದ್ದರು. ಇದಕ್ಕಾಗಿ ಎಲ್ಲಾ ಸಿದ್ದತೆಯನ್ನು ತಾಯಿ ಮತ್ತು ಮಗ ಪ್ಲಾನ್ ಮಾಡಿಕೊಂಡಿದ್ದಾರೆ. ಆದ್ರೆ ವಿಧಿಯಾಟ ಸೀನ ಮತ್ತು ರಶ್ಮಿಯನ್ನು ಒಂದು ಮಾಡಿತ್ತು. ಅಣ್ಣಯ್ಯ ಧಾರಾವಾಹಿ ಆರಂಭವಾದ ದಿನದಿಂದಲೂ ಗುಂಡಮ್ಮ ಮತ್ತು ಸೀನನನ್ನು ಬದ್ಧವೈರಿಗಳಂತೆ ತೋರಿಸಲಾಗಿತ್ತು. ಜಿಮ್ ಮಾಡಿ ದೇಹವನ್ನು ಹುರಿಯಾಗಿಸಿಕೊಂಡಿರುವ ಸೀನ ಮತ್ತು ಯಾವುದೇ ಡಯಟ್ ಮಾಡದೇ ತನಗೆ ಇಷ್ಟವಾದ ಆಹಾರವನ್ನು ಸಾಕಾಗುವರೆಗೂ ತಿನ್ನುವ ರಶ್ಮಿ. ಇಬ್ಬರ ಗುಣಗಳು ತದ್ವಿರುದ್ಧ. ಇದೀಗ ಇವರಿಬ್ಬರು ಮದುವೆಯಾಗಿದ್ದು, ಮುಂದೆ ಇವರ ಜೀವನ ಹೇಗಿರುತ್ತೆ ಎಂಬುದರ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಜಿಮ್ ಸೀನ್- ಗುಂಡಮ್ಮ ರಶ್ಮಿ ಫಸ್ಟ್ ನೈಟ್
ಇದೀಗ ಜಿಮ್ ಸೀನ ಮತ್ತು ಗುಂಡಮ್ಮ ರಶ್ಮಿ ಫಸ್ಟ್‌ನೈಟ್ ತಮಾಷೆಯಾಗಿ ತೋರಿಸಲಾಗಿದೆ. ರಶ್ಮಿ ನಾಚುತ್ತಾ ಕೈಯಲ್ಲಿ ಹಾಲು ಹಿಡಿದುಕೊಂಡು ಜಿಮ್ ಸೀನ ಇರೋ ಕೋಣೆಯೊಳಗೆ ಬಂದಿದ್ದಾಳೆ. ರಶ್ಮಿ ಹಾಲು ಕುಡಿಯಲು ಹೇಳುತ್ತಿದ್ದಂತೆ ಸೀನ ಉಗ್ರ ಪ್ರತಾಪಿಯಾಗಿದ್ದಾನೆ. ಜೀವನಕ್ಕೆ ಹಾಲು-ತುಪ್ಪ ಬಿಟ್ಟ ಮೇಲೆ ಇನ್ನೇನು ಕುಡಿಯೋದು ರಾಕ್ಷಸಿ ಎಂದು ಬೈದಿದ್ದಾನೆ. ತನಗೆ ರಾಕ್ಷಸಿ ಎಂದು ಹೇಳುತ್ತಲೇ ಗುಂಡಮ್ಮ ಸಹ ಕೋಪಗೊಂಡಿದ್ದಾಳೆ. ಓತಿಕೋತಾ ಎಂದು ತಿಂಡಿ ಇರೋ ಪ್ಲೇಟ್ ಗೋಡೆಗೆ ಎಸೆದಿದ್ದಾಳೆ. ತಟ್ಟೆ ಸೌಂಡ್‌ಗೆ ಮಾದಪ್ಪ-ಲೀಲಾಗೂ ನಿದ್ದೆಯಿಂದ ಎಚ್ಚರವಾಗಿದ್ದಾರೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಜೋರಾಗಿ ರಶ್ಮಿಯನ್ನು ಮಂಚದ ಮೇಲೆ ತಳ್ಳಿದ್ದಾನೆ. ಸೀನ ತಳ್ಳಿದ ರಭಸಕ್ಕೆ ರಶ್ಮಿ ಬೀಳುತ್ತಿದ್ದಂತೆ ಮಂಚ ಮುರಿದಿದೆ. ಅಂತು ಇಂತೂ ಫಸ್ಟ್ ನೈಟ್‌ನಲ್ಲಿ ಮಂಚ ಮುರಿದ ಕೀರ್ತಿಗೆ ಜಿಮ್ ಸೀನ ಪಾತ್ರವಾಗಿದ್ದಾನೆ.
ಇದನ್ನೂ ಓದಿ: ತ್ರಿಕಾಲಜ್ಞಾನಿಗಳ ಭವಿಷ್ಯ: ಜಯಂತ್, ಸಿದ್ದೇಗೌಡ್ರಿಗೆ ಶುರುವಾಯ್ತು ನಡುಕ; ಇತ್ತ ಭಾವನಾ, ವೀಣಾ ಫುಲ್ ಹ್ಯಾಪಿ ಹ್ಯಾಪಿ!
ಇತ್ತ ಶಿವು-ಪಾರು ರೊಮ್ಯಾನ್ಸ್
ಇತ್ತ ಮಾವ ಶಿವು ಮೇಲೆ ಪಾರುಗೆ ಪ್ರೀತಿ ಶುರುವಾಗಿದೆ. ರಶ್ಮಿ-ಸೀನನ ಜೊತೆಯಲ್ಲಿಯೇ ಪಾರು-ಶಿವು ಮತ್ತೊಮ್ಮೆ ಮದುವೆ ನಂತರದ ಆಟಗಳನ್ನು ಆಡಿದ್ದಾರೆ. ಈ ವೇಳೆ ಪಾರು ಗಂಡ ಶಿವುಗೆ ಪ್ರೀತಿಯ ಕಚಗುಳಿಯನ್ನ ಇಟ್ಟಿದ್ದಾಳೆ. ಮತ್ತೊಂದೆಡೆ ಫೋನ್‌ನಲ್ಲಿ ಮಾತನಾಡುತ್ತಾ ಹಾವಿನ ಕಡಿತಕ್ಕೊಳಗಾಗಿದ್ದ ಗಂಡನನ್ನು ಪಾರು ಕಾಪಾಡಿದ್ದಾಳೆ. ಇದೀಗ ಪಾರು ಸಹ ಕೈಯಲ್ಲಿ ಬಾದಾಮ್ ಹಾಲು ಹಿಡಿದುಕೊಂಡು ಕೋಣೆಗೆ ಎಂಟ್ರಿ ಕೊಟ್ಟಿದ್ದಾಳೆ. ಒಂದೇ ಗ್ಲಾಸ್ ಯಾಕೆ? ಇನ್ನೊಂದು ಗ್ಲಾಸ್ ತೆಗೆದುಕೊಂಡು ಬರುವೆ ಅಂತ ಹೊರಟಿರುವ ಶಿವುಗೆ ಪ್ರೇಮದ ಗೆರೆ ಎಳೆದಿದ್ದಾಳೆ ಪಾರು. ಇದೀಗ ಶಿವು ತನ್ನ ಮನನದಲ್ಲಿ ಬಚ್ಚಿಟ್ಟುಕೊಂಡಿರುವ ಪ್ರೀತಿಯನ್ನು ಹೇಳಿಕೊಳ್ಳಬೇಕಿದೆ.
ಮದುವೆಗೆ ಸಿದ್ಧವಾದ ಪಿಂಕಿ
ಜಿಮ್ ಸೀನ ಮತ್ತು ತಾಯಿ ಲೀಲಾ ಮಾತು ನಂಬಿ ಪಿಂಕಿ ಮದುವೆಗೆ ಸಿದ್ಧವಾಗಿದ್ದಾಳೆ. ಮನೆ ಹತ್ತಿರ ಬಂದರೂ ಪಿಂಕಿ ಮತ್ತು ಆಕೆಯ ತಂದೆಗೆ ಸೀನ ಮದುವೆಯಾಗಿರೋ ವಿಷಯ ಗೊತ್ತಾಗಿಲ್ಲ. ನೇರವಾಗಿ ದೇವಸ್ಥಾನದಲ್ಲಿ ಭೇಟಿಯಾಗೋಣ ಎಂದು ಪಿಂಕಿ ಹೇಳಿದ್ದಾಳೆ. ಪಿಂಕಿ ಕಾಲ್ ಮಾಡಿದರೂ ಅದನ್ನು ರಿಸೀವ್ ಮಾಡುವ ಧೈರ್ಯವನ್ನ ಸೀನ ಮಾಡುತ್ತಿಲ್ಲ. ಕಾಲ್ ರಿಸೀವ್ ಮಾಡದಂತೆ ಸೀನನಿಗೆ ತಾಯಿ ಹೇಳಿದ್ದಾಳೆ.
ಇದನ್ನೂ ಓದಿ: ತಮಿಳಿನ ಧಾರಾವಾಹಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಚೆಲುವಿ; ಲಕ್ಷ್ಮೀ ನಿವಾಸಕ್ಕೆ ಹೇಳಿದ್ರಾ ಟಾಟಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.