ಸೀರಿಯಲ್ ಮಾತ್ರವಲ್ಲ, ಸಿನಿಮಾದಲ್ಲೂ ಮಿಂಚಿದ ಮನೆಮಕ್ಕಳು: ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಭಾವುಕರಾದ ಶ್ರೀರಾಮ್-ರಮಿಕಾ ಶಿವು

Published : Oct 31, 2026, 04:02 PM ISTUpdated : Oct 31, 2026, 04:04 PM IST
zee kannada kutumba awards

ಸಾರಾಂಶ

Zee kannada kutumba awards: 'ಪ್ರೇಮದ ಊರಲಿ' ಸಿನಿಮಾ ತಂಡ ಜೀ ಕುಟುಂಬ ಅವಾರ್ಡ್ಸ್ ವೇದಿಕೆಗೆ ಬರುತ್ತಿದ್ದಂತೆ ಇಡೀ ಸಭಾಂಗಣವೇ ಗೌರವಿಸಿತು. ಆ ಅಪರೂಪದ ಕ್ಷಣದಲ್ಲಿ ನಟ ಶ್ರೀರಾಮ್ ಮತ್ತು ನಟಿ ರಮಿಕಾ ಶಿವು ಭಾವುಕರಾಗಿ ಮಾತನಾಡಿದ್ದಾರೆ.

ಕನ್ನಡ ಕಿರುತೆರೆಯ ಅತ್ಯಂತ ವೈಭವೋಪೇತ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್’ ವೇದಿಕೆ ಕೇವಲ ಪ್ರಶಸ್ತಿ ಪ್ರದಾನಕ್ಕೆ ಮಾತ್ರ ಸೀಮಿತವಾಗದೆ, ಇಡೀ ಕರುನಾಡೇ ಬೆರಗಾಗುವಂತಹ ಅತ್ಯಂತ ರೋಮಾಂಚಕ ಮತ್ತು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ! ಅಂದಹಾಗೆ ಬೆಳ್ಳಿತೆರೆಯಲ್ಲಿ ಸಂಚಲನ ಸೃಷ್ಟಿಸಿದ ಪ್ರೇಮದ ಊರಲಿ ಚಿತ್ರತಂಡ ವೇದಿಕೆಗೆ ಕಾಲಿಡುತ್ತಿದ್ದಂತೆ ಇಡೀ ಸಭಾಂಗಣವೇ ಎದ್ದುನಿಂತು ಸಂಭ್ರಮಿಸಿದೆ.

ವೇದಿಕೆಯಲ್ಲಿ ‘ಪ್ರೇಮದ ಊರಲಿ’ ಮಾಯಾಲೋಕ

ವೇದಿಕೆ ಮೇಲೆ ಮುದ್ದು ಮಕ್ಕಳು ಸುಮಧುರವಾಗಿ "ಪ್ರೇಮದ ಊರಲಿ..." ಹಾಡನ್ನು ಹಾಡುತ್ತಾ ಪ್ರವೇಶಿಸುತ್ತಿದ್ದಂತೆ ಇಡೀ ಆಡಿಟೋರಿಯಂ ಮಂತ್ರಮುಗ್ಧವಾಯಿತು. ಅವರ ಬೆನ್ನಲ್ಲೇ ಚಿತ್ರದ ನಾಯಕ, ನಾಯಕಿ ಹಾಗೂ ನಿರ್ದೇಶಕರು ಗ್ರ್ಯಾಂಡ್ ಎಂಟ್ರಿ ಕೊಟ್ಟರು. ಈ ಸಂಭ್ರಮವನ್ನು ಕಣ್ತುಂಬಿಕೊಂಡ ನಿರೂಪಕ ಅಕುಲ್ ಬಾಲಾಜಿ ಎದೆಯುಬ್ಬಿಸಿ ಹೆಮ್ಮೆಯಿಂದ ಅಬ್ಬರಿಸಿದರು.. "ಈ ಸಿನಿಮಾದ ನಾಯಕ ಆಗಿರ್ಲಿ, ನಾಯಕಿ ಆಗಿರ್ಲಿ, ಎಲ್ಲರೂ ನಮ್ಮ ಜೀ ಕುಟುಂಬದವರೇ!" ಎಂದು ಘೋಷಿಸಿದಾಗ ಚಪ್ಪಾಳೆಯ ಸುರಿಮಳೆಯೇ ಆಯಿತು.

ಕಿರುತೆರೆಯಿಂದ ಬೆಳ್ಳಿತೆರೆಗೆ

ಅಕುಲ್ ಮಾತಿಗೆ ದನಿಗೂಡಿಸಿದ ‘ಪ್ರೇಮದ ಊರಲಿ’ ನಟ ಶ್ರೀರಾಮ್, ತಮ್ಮ ಹಳೆಯ ದಿನಗಳನ್ನು (ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟನೆ) ನೆನೆದು ಕಣ್ಣಂಚು ತೇವ ಮಾಡಿಕೊಂಡರು. ಇತ್ತ ಸುಂದರ ನಟಿ ರಮಿಕಾ ಶಿವು ಕೂಡ ತಮ್ಮ ಕೃತಜ್ಞತೆ ಸಲ್ಲಿಸುತ್ತಾ, "ನನ್ನ ನಟನಾ ಬದುಕಿನ ಮೊದಲ ಹೆಜ್ಜೆಯೇ ಈ ವಾಹಿನಿಯ ಸೂಪರ್ ಹಿಟ್ 'ಪಾರು' ಧಾರಾವಾಹಿ. ಅಂದು ಕಿರುತೆರೆಯ ಮನೆಮಗಳಾಗಿದ್ದ ನಾನು, ಇಂದು ಇಷ್ಟು ದೊಡ್ಡ ಯಶಸ್ಸು ಕಾಣಲು ನಿಮ್ಮ ಪ್ರೀತಿಯೇ ಕಾರಣ" ಎಂದು ವೇದಿಕೆಗೆ ತಲೆಬಾಗಿದರು.

ಟೈಟಲ್ ಟ್ರ್ಯಾಕ್ ಮಾಂತ್ರಿಕನಿಗೆ ಪ್ರಶಂಸೆ

ಕೇವಲ ನಟ-ನಟಿಯರಷ್ಟೇ ಅಲ್ಲ, ಜೀ ಕುಟುಂಬದ ಮನೆಮಾತಾದ ಧಾರಾವಾಹಿಗಳಿಗೆ ಅದ್ಭುತ ಟೈಟಲ್ ಟ್ರ್ಯಾಕ್ ನೀಡಿ ಕರುನಾಡನ್ನು ತೂಗಿದ್ದ ಸಂಗೀತ ಮಾಂತ್ರಿಕ ಸುನಾಥ್ ಗೌತಮ್ ಈ ಚಿತ್ರಕ್ಕೆ ಶಕ್ತಿಯಾಗಿ ನಿಂತಿರುವುದನ್ನು ಅಕುಲ್ ಬಾಲಾಜಿ ಅತ್ಯಂತ ಗೌರವದಿಂದ ಸ್ಮರಿಸಿದರು.

"ಇದು ನಿಮ್ಮ ಗೆಲುವು..." - ನಿರ್ದೇಶಕರ ನಮ್ರತೆ

ಆ ನಂತರ ‘ಪ್ರೇಮದ ಊರಲಿ’ ಚಿತ್ರದ ನಿರ್ದೇಶಕರು, ಪ್ರೇಕ್ಷಕರನ್ನುದ್ದೇಶಿಸಿ "ಸೋ, ಈ ಸಿನಿಮಾದ ಗೆಲುವು ಕೇವಲ ನಮ್ಮದಲ್ಲ... ಇದು ಕಿರುತೆರೆ ಮತ್ತು ಕರುನಾಡಿನ ಪ್ರತಿಯೊಬ್ಬರ ಗೆಲುವು, ಇದು ನಿಮ್ಮದೇ ಗೆಲುವು!" ಎಂದಾಗ ಇಡೀ ವೇದಿಕೆಯಲ್ಲಿ ಭಾವುಕತೆ ಮಡುಗಟ್ಟಿತ್ತು.

ಈ ಸಂಭ್ರಮದ ಪರಾಕಾಷ್ಠೆಯಲ್ಲಿ ಅಕುಲ್ ಬಾಲಾಜಿ "ಕನ್ನಡ ಚಿತ್ರರಂಗದ ಗೋಲ್ಡನ್ ಎರಾ (ಸುವರ್ಣ ಯುಗ) ಶುರುವಾಗಿದೆ!" ಎಂದರು.

ಕಿರುತೆರೆಯ ನಮ್ಮದೇ ಪ್ರತಿಭೆಗಳು ಒಟ್ಟಾಗಿ ಸೇರಿ ಬೆಳ್ಳಿತೆರೆಯನ್ನು ಆಳುತ್ತಿರುವುದನ್ನು ಕಣ್ತುಂಬಿಕೊಂಡ ಆ ಕ್ಷಣ ನಿಜಕ್ಕೂ ಮೈನವಿರೇಳಿಸುವಂತಿತ್ತು. ಟಿವಿಯಲ್ಲಿ ಈ ಎಪಿಸೋಡ್ ಪ್ರಸಾರವಾಗುವುದನ್ನು ನೋಡಲು ಕರುನಾಡ ವೀಕ್ಷಕರು ಈಗ ತುದಿಗಾಲಿನಲ್ಲಿ ಕಾಯುವಂತಾಗಿದೆ.

ತಮ್ಮದೇ ವಾಹಿನಿಯ ಪ್ರತಿಭೆಗಳು ಬೆಳ್ಳಿತೆರೆಯಲ್ಲಿ ಇಷ್ಟು ದೊಡ್ಡ ಮೈಲಿಗಲ್ಲು ಸ್ಥಾಪಿಸಿದ್ದನ್ನು ಕಂಡು ಮುಂಭಾಗದಲ್ಲಿ ಕುಳಿತಿದ್ದ ಜೀ ವಾಹಿನಿಯ ಘಟಾನುಘಟಿ ತಾರೆಯರು ಭಾವುಕರಾದರು. ಅನೇಕ ಕಲಾವಿದರು ಎದ್ದುನಿಂತು ಗೌರವ ಸಲ್ಲಿಸಿದರೆ, ಇನ್ನು ಕೆಲವರು ಆನಂದಭಾಷ್ಪ ಸುರಿಸಿದ್ದು ವಿಶೇಷವಾಗಿತ್ತು.

ಒಟ್ಟಾರೆಯಾಗಿ ಕಿರುತೆರೆಯಿಂದ ಬಂದವರು ಸಿನಿಮಾದಲ್ಲಿ ಗೆಲ್ಲುವುದು ಕಷ್ಟ ಎನ್ನುವ ಮಾತಿಗೆ ಈ ತಂಡವೇ ದೊಡ್ಡ ಉತ್ತರ.

ಕೇವಲ ವೇದಿಕೆಯ ಮೇಲಷ್ಟೇ ಅಲ್ಲ, ಈಗಾಗಲೇ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ 'ಪ್ರೇಮದ ಊರಲಿ...' ಹಾಡು ಲಕ್ಷಾಂತರ ರೀಲ್ಸ್‌ಗಳ ಮೂಲಕ ಮನೆಮಾತಾಗಿದೆ. ಇಂತಹ ಸೂಪರ್ ಹಿಟ್ ಹಾಡನ್ನು ವೇದಿಕೆಯಲ್ಲಿ ಮುದ್ದು ಮಕ್ಕಳು ಹಾಡಿದ ಕ್ಷಣ, ಸೋಷಿಯಲ್ ಮೀಡಿಯಾ ಪ್ರಿಯರಲ್ಲೂ ಮತ್ತಷ್ಟು ಕ್ರೇಜ್ ಹುಟ್ಟಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಾಸ್ ಮನೆಯಲ್ಲಿ ಪ್ರಸಾರ ಮಾಡಲಾಗದ ಮಾತುಗಳು ಬರ್ತಿವೆ; ಕಿಚ್ಚ ಸುದೀಪ್ ಎಚ್ಚರಿಕೆ ಕೊಟ್ಟಿದ್ಯಾರಿಗೆ?
ಮೈಸೂರಿನಲ್ಲಿ ಯೂಟ್ಯೂಬರ್ ಮಧು ಗೌಡ ಪತಿ ನಿಖಿಲ್ ರವೀಂದ್ರ ವಿರುದ್ಧ 'ಹಿಟ್ ಅಂಡ್ ರನ್' ಆರೋಪ: ದೂರು ದಾಖಲು, ವಿಡಿಯೋ ವೈರಲ್!