Love the Wind ಎನ್ನುತ್ತಾ ಮೈಮುಚ್ಚುವಂತೆ ಮಾಡಿ, ಬಿಕಿನಿಯಲ್ಲೇ ಕಾಣಿಸಿಕೊಂಡ ನಿವೇದಿತಾ

By Pavna Das  |  First Published Jan 10, 2025, 5:41 PM IST

ಗಾಳಿ ಜೊತೆ ಸರಸವಾಡುತ್ತಾ, ಮೈ ಮುಚ್ಚುವಂತೆ ನಾಟಕವಾಡುತ್ತಾ, ಬಿಕಿನಿಯಲ್ಲೇ ಮೈಮಾಟ ಪ್ರದರ್ಶಿಸಿದ ನಿವೇದಿತಾ ಗೌಡ… ಕಾಮೆಂಟ್ ಸೆಕ್ಷನ್ ಪೂರ್ತಿ ಸೋನು ಗೌಡ ಗುಣಗಾನ. 
 


ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಬಾರ್ಬಿ ಡಾಲ್ ನಿವೇದಿತಾ ಗೌಡ (Niveditha Gowda), ತಮ್ಮ ಬೋಲ್ಡ್ ಬಿಂದಾಸ್ ಲುಕ್ ಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಅದರಲ್ಲೂ ಚಂದನ್ ಶೆಟ್ಟಿ ಜೊತೆಗಿನ ಡಿವೋರ್ಸ್ ಬಳಿಕ ನಿವೇದಿತಾ ಮತ್ತಷ್ಟು ಹಾಟ್ ಆಗಿದ್ದಾರೆ ಎನ್ನುತ್ತಿದ್ದಾರೆ ಜನ. ಅದನ್ನು ಸುಳ್ಳು ಎನ್ನುವಂತೆಯೂ ಇಲ್ಲ. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ನಿವೇದಿತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social media) ಶೇರ್ ಮಾಡುತ್ತಿರುವ ಫೋಟೊಗಳನ್ನು ನೋಡಿದ್ರೆ ಹಾಗೆ ಅನಿಸದೇ ಇರದು. 

ಕುಡಿದ ಮತ್ತಲ್ಲಿ ಕಂಬ ಏರಿ ಕುಳಿತ್ರಾ ನಿವೇದಿತಾ ಗೌಡ? ಹೊಸ ವರ್ಷದ ವಿಡಿಯೋಗೆ ಇನ್ನಿಲ್ಲದ ಕಮೆಂಟ್ಸ್​

Tap to resize

Latest Videos

ಇದೀಗ ಕಳೆದ ಕೆಲವು ಸಮಯದಿಂದ ನಿವೇದಿತಾ ಗೌಡ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದಾರೆ. ಅಲ್ಲಿನ ಪಾರ್ಟಿಗಳಲ್ಲಿ, ಬೀಚ್ ಗಳಲ್ಲಿ, ಹೊಸ ಹೊಸ ಸಾಹಸಗಳನ್ನು ಮಾಡುತ್ತಾ, ಆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆವಾಗವಾಗ ಶೇರ್ ಮಾಡುತ್ತಲೇ ಇರುತ್ತಾರೆ. ಜೊತೆಗೆ ತಮ್ಮ ಬೋಲ್ಡ್ ಫೋಟೊಗಳನ್ನು (Bold photos) ಶೇರ್ ಮಾಡೋದನ್ನು ಮರೆಯೋದಿಲ್ಲ ಈಕೆ. ಮೊನ್ನೆ ಮೊನ್ನೆ ನಟಿ ಬೆಂಕಿ ಚೆಂಡಿನೊಂದಿಗೆ ಸರಸವಾಡುತ್ತಿರುವ ವಿಡೀಯೋ ಶೇರ್ ಮಾಡಿದ್ದರು. ಅದನ್ನು ನೋಡಿ ಜನ ಆಕೆಯ ಧೈರ್ಯವನ್ನು ಕೊಂಡಾಡಿದ್ದರು, ಅದಕ್ಕೂ ಮುನ್ನ ನಿವೇದಿತಾ, ಓತಿ ಕ್ಯಾತ ಜಾತಿಯ ದೊಡ್ಡದಾದ ಪ್ರಾಣಿಗಳನ್ನು ಮೈಮೇಲೆ ಬಿಟ್ಟುಕೊಂಡಿರುವ ವಿಡಿಯೋ ಹಂಚಿಕೊಂಡಿದ್ದರು. ಇದರ ಜೊತೆಗೆ ನಟಿ ಇದು ನಾನು ಭೇಟಿ ನೀಡಿದ ಜನರಿಗಿಂತ ಭಯಾನಕ ಅಲ್ಲ ಎಂದು ಬರೆದಿದ್ದಾರೆ. 

ಪಾರದರ್ಶಕ ಡ್ರೆಸ್​ ತೊಟ್ಟು ಸೂರ್ಯನ ಬೆಳಕಲ್ಲಿ ನಿವೇದಿತಾ ರೀಲ್ಸ್​: ನೆಟ್ಟಿಗರು ಸುಮ್ನೆ ಇರ್ತಾರಾ?

ನಿನ್ನೆಯಷ್ಟೇ ನಟಿ ಸೋಶಿಯಲ್ ಮೀಡಿಯಾದಲ್ಲಿ ಒಳ ಉಡುಪುಗಳು ಕಾಣುವಂತೆ, ಪಾರದರ್ಶಕ ಡ್ರೆಸ್ (transparent dress) ಧರಿಸಿ ಪೋಸ್ ಕೊಡುವ ವಿಡೀಯೋ ಶೇರ್ ಮಾಡಿದ್ದರು. ಇದೀಗ ಬಿಕಿನಿ ಧರಿಸಿ, ಅದರ ಮೇಲೊಂದು ಪಾರದರ್ಶಕ ಬಟ್ಟೆ ಧರಿಸಿ, ಗಾಳಿ ಜೊತೆ ಸರಸವಾಡುತ್ತಾ, ಒಂದು ಕಡೆ ಮೈ ಮುಚ್ಚಿಕೊಳ್ಳುವಂತೆ ಮಾಡುತ್ತಾ, ಮತ್ತೊಂದು ಕಡೆಯಿಂದ ತಮ್ಮ ಒಳ ಉಡುಪನ್ನು ಪೂರ್ತಿಯಾಗಿ ಪ್ರದರ್ಶನ ಮಾಡಿದ್ದಾರೆ. ಇದನ್ನು ನೋಡಿ ಜನ ಅಂತೂ ಸುಮ್ನೆ ಇರೋದೇ ಇಲ್ಲ. ಕಾಮೆಂಟ್ ಸೆಕ್ಷನ್ ತುಂಬಾ ಸೋನು ಗೌಡ (Sonu Gowda) ಗುಣಗಾನ ಮಾಡಿದ್ದಾರೆ. ನಿವೇದಿತಾ ಗೌಡ, ಸೋನು ಗೌಡರನ್ನೇ ಮೀರಿಸುತ್ತಾರೆ. ಸೋನು ಗೌಡರನ್ನೇ ಫಾಲೋ ಮಾಡ್ತಿದ್ದಾರೆ ಎಂದಿದ್ದಾರೆ. ಇನ್ನೂ ಕೆಲವರು, ಇನ್ನು ಏನೇನು ನೋಡೋದು ಬಾಕಿ ಇದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ನಿವೇದಿತಾ ಗೌಡರಿಗೆ ಕೆಟ್ಟ ಕಾಮೆಂಟ್ ಬರೋದು ಹೊಸದೇನಲ್ಲ, ಆದರೆ ಅವರು ಕೆಟ್ಟ ಕಾಮೆಂಟ್ ಗಳಿಗೆ ಕ್ಯಾರೆ ಎನ್ನದೇ, ತಮ್ಮನ್ನು ಇಷ್ಟಪಡುವ ಅಭಿಮಾನಿಗಳಿಗಾಗಿ ವಿಡೀಯೋ, ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. 

ಬೆಂಕಿ ಜೊತೆ ನಿವೇದಿತಾ ಗೌಡ ಸರಸ: ಪಕ್ಕದ ಯುವಕನ ಮೇಲೆ ನೆಟ್ಟಿಗರ ಕಣ್ಣು! ಯಾರೀತ?

 

click me!